ಚಿರು ಕಣ್ಣೆದುರೇ ತನ್ನ ಸೊಂಟ ಗಿಂಡಿದವನನ್ನು ಹಿಡ್ಕೊಂಡು ಹಿಗ್ಗಾಮುಗ್ಗಾ ತದಕಿದ್ದ ಡಿಸ್ಕೋ ಶಾಂತಿ!
ಸಿನಿರಸಿಕರಿಗೆ ಚಿರಪರಿಚಿತ ಹೆಸರು ಡಿಸ್ಕೋ ಶಾಂತಿ. ಕಳೆದ 25 ವರ್ಷಗಳಿಂದ ಆಕೆ ಚಿತ್ರರಂಗದಿಂದ ದೂರ ಉಳಿಸಿದ್ದಾರೆ. 80, 90 ದಶಕದಲ್ಲಿ ಆಕೆಯನ್ನು ನೋಡಲು ಪಡ್ಡೆಹುಡುಗರು ಥಿಯೇಟರ್‌ಗೆ ಹೋಗ್ತಿದ್ರು ಅಂದ್ರೆ ತಪ್ಪಗಲ್ಲ. ತೆರೆಮೇಲೆ ಸಿಕ್ಕಾಪಟ್ಟೆ ಬೋಲ್ಡ್ ಆಗಿ ನಟಿಸುತ್ತಿದ್ದ ಶಾಂತಿ ಸಿಕ್ಕಾಪಟ್ಟೆ ನಿಜಜೀವನದಲ್ಲೂ ಅಷ್ಟೇ ಬೋಲ್ಡ್. ತಮ್ಮ ಬಳಿ ಕೆಟ್ಟದಾಗಿ ನಡೆದುಕೊಂಡವರನ್ನು ಹಿಡಿದು ತದಕಿಬಿಡುತ್ತಿದ್ದರು.
ನಟಿ- ನಟಿಯರನ್ನು ಅಭಿಮಾನಿಗಳು ಆರಾಧಿಸುತ್ತಾರೆ. ಆದರೆ ಕೆಲವರು ಅದೇ ನಟ, ನಟಿಯರನ್ನು ನೋಡಿದರೆ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ. ನಟಿ ಡಿಸ್ಕೋ ಶಾಂತಿ ತಮ್ಮ ಬಳಿ ಕೆಟ್ಟದಾಗಿ ನಡೆಸುಕೊಂಡವರಿಗೆ ಸರಿಯಾಗಿ ಗೂಸಾ ಕೊಟ್ಟಿದ್ದರು. ಈ ವಿಚಾರವನ್ನು ಸಾಕಷ್ಟು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. 'ಘರಾನ ಮೊಗುಡು' ಚಿತ್ರದ 'ಬಂಗಾರು ಕೋಡಿ ಪೆಟ್ಟ' ಸಾಂಗ್ ಯಾವ ಮಟ್ಟಿಗೆ ಹಿಟ್ ಆಗಿತ್ತು ಅನ್ನೋದು ಗೊತ್ತೇಯಿದೆ. ಎಂ. ಎಂ ಕೀರವಾಣಿ ಸಂಗೀತದ ಈ ಹಾಡಿಗೆ ಚಿರಂಜೀವಿ, ಡಿಸ್ಕೋ ಶಾಂತಿ ಬಿಂದಾಸ್ ಸ್ಟೆಪ್ಸ್ ಹಾಕಿದ್ದರು.

ರಾಜಮೌಳಿ 'ಮಗಧೀರ' ಚಿತ್ರದಲ್ಲಿ 'ಬಂಗಾರು ಕೋಡಿ ಪೆಟ್ಟ' ಸಾಂಗ್ ರೀ ಕ್ರಿಯೇಟ್ ಮಾಡಿದ್ದರು. ಮುಮೈತ್ ಖಾನ್ ಜೊತೆ ರಾಮ್‌ಚರಣ್ ಕುಣಿದು ಕುಪ್ಪಳಿಸಿದ್ದರು. ಸಾಂಗ್ ಮತ್ತೊಮ್ಮೆ ಸೂಪರ್ ಹಿಟ್ ಆಗಿತ್ತು. ಆದರೆ 31 ವರ್ಷಗಳ ಹಿಂದೆ ಈ ಸಾಂಗ್ ಶೂಟಿಂಗ್ ವೇಳೆ ಘಟನೆಯನ್ನು ಡಿಸ್ಕೋ ಶಾಂತಿ ಮತ್ತೆ ನೆನಪಿಸಿಕೊಂಡಿದ್ದಾರೆ. ಆ ದಿನ ತಮ್ಮೊಟ್ಟಿಗೆ ಅಸಭ್ಯವಾಗಿ ವರ್ತಿಸಿದವನನ್ನು ಹಿಡಿದು ಥಳಿಸಿದ್ದಾಗಿ ಹೇಳಿದ್ದಾರೆ.
ಡ್ಯಾನ್ಸರ್‌ಗಳಿಗೆ ತುಂಡು ಬಟ್ಟೆ ಕೊಡ್ತಿದ್ರು
ಇಂಡಿಯಾಗ್ಲಿಟ್ಸ್ ತಮಿಳು ಯೂಟ್ಯೂಬ್ ಚಾನಲ್ ಸಂದರ್ಶನಲ್ಲಿ ಕುಟ್ಟಿ ಪದ್ಮಿಣಿ ಪ್ರಶ್ನೆಗಳಿಗೆ ಡಿಸ್ಕೋ ಶಾಂತಿ ಉತ್ತರಿಸಿದ್ದಾರೆ. "ಆಗ ಸ್ಪೆಷಲ್ ಸಾಂಗ್‌ನಲ್ಲಿ ಕುಣಿಯುವ ನಮ್ಮಂತ ನಟಿಯರಿಗೆ ತುಂಡು ಬಟ್ಟೆ ಕೊಡುತ್ತಿದ್ದರು. ವೈಜಾಗ್ ಬಂದರಿನಲ್ಲಿ 'ಬಂಗಾರು ಕೋಡಿ ಪೆಟ್ಟ' ಸಾಂಗ್ ಶೂಟಿಂಗ್ ನಡೀತಿತ್ತು. ಎಂತಹವಿರೂ ಈಗೋ ಇರುತ್ತಲ್ಲ. ಬಂದರಿನ ತುಂಬಾ ಸಾವಿರಾರು ಜನ ಸೇರಿದ್ದರು. ಚಿರಂಜೀವಿ ಸುತ್ತಾಮುತ್ತಾ 20, 30 ಜನ ಇರುತ್ತಿದ್ದರು. ಶಾಟ್ ಮುಗಿತ್ತಿದ್ದಂತೆ ಅವರನ್ನು ಕ್ಷೇಮವಾಗಿ ಕರೆದುಕೊಂಡು ಹೋಗುತ್ತಿದ್ದರು. ನಮ್ಮೊಟ್ಟಿಗೆ ನಾಲ್ಕೈದು ಜನ ಇರುತ್ತಿದ್ದರು. ಶಾಟ್ ಮುಗೀತು ಅಂತ ಅವ್ರು ಹೋದ್ರು"

ಒಬ್ಬ ನನ್ನ ಸೊಂಟ ಗಿಂಡಿದ್ದ
"ಶಾಟ್ ಮುಗಿದ ಮೇಲೆ ನಾನು ಕೋಟ್ ರೀತಿ ಬಟ್ಟೆ ಧರಿಸಿ ಹೋಗೋಣ ಎಂದು ಹೋದೆ. ಅಷ್ಟರಲ್ಲಿ ಚಿರಂಜೀವಿ, ನಾನು ಇದ್ದೀನಿ ಅಲ್ವಾ ಪರವಾಗಿಲ್ಲ ಅಂದ್ರು. ಅಷ್ಟರಲ್ಲಿ ಜನ ನೂಕಿಕೊಂಡು ಮೇಲೆ ಬಂದರು. ಅದರಲ್ಲಿ ಒಬ್ಬ ಕಿಡಿಗೇಡಿ ನನ್ನ ಸೊಂಟ ಹಿಡಿದು ಗಿಂಡಿಬಿಟ್ಟ. ನನಗೆ ದಿಢೀರನೇ ಕೋಪ ಬಂತು. ಕೂಡಲೇ ಅವನ ಕೈ ಹಿಡಿದು ಮುಂದಕ್ಕೆ ಎಳೆದುಕೊಂಡು ಸರಿಯಾಗಿ ತದಕಿದೆ. ಎಲ್ಲೆಲ್ಲಿ, ಹೇಗೆ ಹೊಡಿತ್ತಿದ್ದೀನಿ ಅಂತ ಕೂಡ ನೋಡದೇ ಥಳಿಸಿದೆ. ಗಟ್ಟಿಯಾದ ಶೂ ಹಾಕಿದ್ದೆ, ಅದರಲ್ಲೇ ಸರಿಯಾಗಿ ತುಳಿದೆ"
10 ಜನರನ್ನು ರಕ್ಷಣೆಗೆ ಕೊಟ್ಟರು
"ಕೂಡಲೇ ಚಿರಂಜೀವಿ ಓಡೋಡಿ ಬಂದರು. ಯಾಕಮ್ಮಾ ಆ ರೀತಿ ಹೊಡೆಯುತ್ತಿದೀಯಾ? ಆತನಿಗೆ ಏನಾದರೂ ಆದ್ರೆ ಏನ್ ಕಥೆ? ಅಂದ್ರು. ನಾನು ಹೇಳ್ದೆ ಅಲ್ಲಾ ಸರ್, ನೀವು ಮುಂದೆ ಹೋಗಿಬಿಟ್ರಿ, ನನಗೆ ಏನಾದರೂ ಆಗಿದ್ದರೆ ಏನು ಮಾಡೋದು ಅಂದೆ. ಆ ನಂತರ ನನ್ನ ಹಿಂದೆ ಒಂದು 10 ಜನರನ್ನು ರಕ್ಷಣೆಗೆ ಇಟ್ಟರು. ಶಾಟ್ ಮುಗಿದ ಕೂಡಲೇ ಅವರೊಟ್ಟಿಗೆ ಹೋಗುತ್ತಿದ್ದೆ." ಎಂದು ನೆನಪಿಸಿಕೊಂಡಿದ್ದಾರೆ.
ಸಖತ್ ಬೋಲ್ಡ್ ಡಿಸ್ಕೋ ಶಾಂತಿ
'ಘರಾನಾ ಮೊಗುಡು' ಬಿಡುಗಡೆಯಾದ ಅದೇ ವರ್ಷ ಡಿಸ್ಕೋ ಶಾಂತಿ ಹೆಜ್ಜೆ ಹಾಕಿದ್ದ 'ಕಾಲೇಜಿ ಬುಲ್ಲೋಡು' ಸಿನಿಮಾ ಕೂಡ ತೆರೆಗೆ ಬಂದಿತ್ತು. ಈ ಚಿತ್ರದಲ್ಲಿ ಅಕ್ಕಿನೇನಿ ನಾಗೇಶ್ವರರಾವು ಲೀಡ್ ರೋಲ್‌ನಲ್ಲಿ ನಟಿಸಿದ್ದರು. ಈ ಚಿತ್ರದ ಸ್ಪೆಷಲ್ ಸಾಂಗ್‌ನಲ್ಲೂ ಡಿಸ್ಕೋ ಶಾಂತಿ ಕುಣಿದಿದ್ದರು. ಈ ಸಾಂಗ್ ಶೂಟಿಂಗ್ ವೇಳೆ ವ್ಯಕ್ತಿ ಇದೇ ರೀತಿ ಪದೇ ಪದೇ ಕೆಟ್ಟದಾಗಿ ಸನ್ನಿ ಮಾಡುತ್ತಾ ಆಕೆಯನ್ನು ಕೆಣಕಿದ್ದನಂತೆ. ಕೆಲಹೊತ್ತು ಸಹಿಸಿಕೊಂಡಿದ್ದ ಶಾಂತಿ ಕೊನೆಗೆ ಆತನನ್ನು ಹಿಡಿದು ಥಳಿಸಿದ್ದರಂತೆ. ಈ ವಿಚಾರವನ್ನು ಕೂಡ ಹಿಂದೆ ಸಂದರ್ಶನವೊಂದರಲ್ಲಿ ಆಕೆ ಹೇಳಿಕೊಂಡಿದ್ದರು.


Click it and Unblock the Notifications











