ಯಶ್, ಐಶ್ ಒಬ್ಬರನ್ನು ಮಾತ್ರ ಫಾಲೋ ಮಾಡ್ತಿದ್ದಾರೆ ಎನ್ನುವ ಸಂಗತಿ ನಿಮಗೆ ಗೊತ್ತಾ?
ಒಬ್ಬರು ರಾಕಿಂಗ್ ಸ್ಟಾರ್ ಯಶ್. ಮತ್ತೊಬ್ಬರು ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ. ಅದೊಂದು ವಿಚಾರದಲ್ಲಿ ಇಬ್ಬರ ನಡುವೆ ಸಾಮ್ಯತೆ ಇದೆ. 'ಟಾಕ್ಸಿಕ್' ಚಿತ್ರದಲ್ಲಿ ಐಶ್ ನಟಿಸುತ್ತಾರೆ ಎಂದು ಗುಲ್ಲಾಗಿತ್ತು. ಕೊನೆಗೆ ಆ ಪಾತ್ರವನ್ನು ನಯನತಾರ ಮಾಡುತ್ತಿದ್ದಾರೆ.
ನಟ ಯಶ್ ಈಗ ನಿರ್ಮಾಪಕರೂ ಆಗಿದ್ದಾರೆ. ಮಾನ್‌ಸ್ಟರ್ ಮೈಂಡ್ಸ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ 'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಅತ್ತ ಐಶ್ವರ್ಯ ರೈ ಸಿನಿಮಾಗಳಿಂದ ದೂರ ಉಳಿದಿದ್ದಾರೆ. ಮಗಳ ಜೊತೆ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಅಭಿಷೇಕ್ ಹಾಗೂ ಐಶ್ ಡಿವೋರ್ಸ್ ವದಂತಿ ಕೂಡ ಭಾರೀ ಸದ್ದು ಮಾಡ್ತಿದೆ.

ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಯಶ್ ಬಣ್ಣ ಹಚ್ಚಲಿದ್ದಾರೆ. ಈ ವಿಚಾರವನ್ನು ಇತ್ತೀಚೆಗೆ ಯಶ್ ಬಹಿರಂಗಪಡಿಸಿದ್ದಾರೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ನಟಿಸುವುದು ಪಕ್ಕಾ ಆಗಿದೆ. ಆದರೆ ಅಧಿಕೃತವಾಗಿ ಸಿನಿಮಾ ಘೋಷಣೆ ಮಾತ್ರ ಆಗಿಲ್ಲ. ಸದ್ದಿಲ್ಲದೇ ಒಂದಷ್ಟು ಚಿತ್ರೀಕರಣ ಕೂಡ ನಡೆದಿದೆ ಎನ್ನಲಾಗ್ತಿದೆ.
ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಕೂಡ ಭಾರೀ ನಿರೀಕ್ಷೆ ಮೂಡಿಸಿದೆ. ಯಶ್ ಮತ್ತೆ ಗ್ಯಾಂಗ್‌ಸ್ಟರ್ ಅವತಾರದಲ್ಲಿ ನಟಿಸುತ್ತಿದ್ದಾರೆ. ಈ ಅದ್ಧೂರಿ ಚಿತ್ರ ನಿರ್ಮಾಣಕ್ಕೆ ಯಶ್ ಜೊತೆ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಕೈ ಜೋಡಿಸಿದೆ. ಈಗಾಗಲೇ ಫಸ್ಟ್ ಶೆಡ್ಯೂಲ್ ಚಿತ್ರೀಕರಣ ಮುಗಿದಿದ್ದು ಶೀಘ್ರದಲ್ಲೇ ಮುಂಬೈನಲ್ಲಿ ಹೊಸ ಶೆಡ್ಯೂಲ್ ಆರಂಭವಾಗಬೇಕಿದೆ.

ಕಳೆದ ವರ್ಷ ಬಂದ 'ಪೊನ್ನಿಯಿನ್ ಸೆಲ್ವನ್'-2 ಐಶ್ವರ್ಯ ರೈ ನಟಿಸಿದ ಕೊನೆಯ ಸಿನಿಮಾ. ಬಳಿಕ ಹೊಸ ಸಿನಿಮಾ ಆಕೆ ಒಪ್ಪಿಕೊಳ್ಳಲಿಲ್ಲ. ಇನ್ನು ಪದೇ ಪದೆ ಆಕೆ ಪತಿಯಿಂದ ದೂರಾಗುವ ಬಗ್ಗೆ ಅಂತೆಕಂತೆ ಸುದ್ದಿ ಹರಿದಾಡುತ್ತಲೇ ಇದೆ. ಈ ಬಗ್ಗೆ ಇಬ್ಬರೂ ಮೌನವಾಗಿರುವುದರಿಂದ ಅದೇ ನಿಜ ಎಂದು ಕೆಲವರು ಹೇಳುತ್ತಿದ್ದಾರೆ.
ಸಿನಿಮಾ ವಿಚಾರಗಳನ್ನು ಪಕ್ಕಕ್ಕಿಟ್ಟರೆ ಯಶ್ ಹಾಗೂ ಐಶ್ವರ್ಯ ರೈ ಇಬ್ಬರೂ ಒಬ್ಬೊರನ್ನು ಮಾತ್ರ ಫಾಲೋ ಮಾಡ್ತಿದ್ದಾರೆ. ಅದು ಇನ್‌ಸ್ಟಾಗ್ರಾಮ್‌ನಲ್ಲಿ. ಹೌದು. ಯಶ್ ಹಾಗೂ ಐಶ್ ಇಬ್ಬರೂ ಇನ್‌ಸ್ಟಾಗ್ರಾಮ್ ಖಾತೆ ಹೊಂದಿದ್ದಾರೆ. ಆಗೊಮ್ಮೆ ಈಗೊಮ್ಮೆ ಇಬ್ಬರೂ ಪೋಸ್ಟ್ ಮಾಡುತ್ತಾರೆ. ತಮಗೆ ಮಿಲಿಯನ್‌ಗಟ್ಟಲೆ ಫಾಲೋವರ್ಸ್ ಇದ್ದರೂ ಅವರಿಬ್ಬರು ಮಾತ್ರ ಒಬ್ಬೊಬ್ಬರನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ.
ನಟ ಯಶ್ ಇನ್‌ಸ್ಟಾಗ್ರಾಮ್‌ನಲ್ಲಿ 1.3 ಕೋಟಿ ಫಾಲೋವರ್ಸ್ ಹೊಂದಿದ್ದಾರೆ. ಪತ್ನಿ ರಾಧಿಕಾ ಪಂಡಿತ್ ಇನ್‌ಸ್ಟಾ ಪೇಜ್ ಅನ್ನು ಮಾತ್ರ ಅವರು ಫಾಲೋ ಮಾಡ್ತಿದ್ದಾರೆ. ಇನ್ನು ಐಶ್ವರ್ಯ ರೈಗೆ 1.4 ಕೋಟಿ ಫಾಲೋವರ್ಸ್ ಇದ್ದು ಆಕೆ ಪತಿ ಅಭಿಷೇಕ್ ಬಚ್ಚನ್ ಇನ್‌ಸ್ಟಾ ಪೇಜ್ ಅಷ್ಟೇ ಫಾಲೋ ಮಾಡುತ್ತಿರುವುದು.
ಇತ್ತೀಚೆಗೆ ಹಾಲಿವುಡ್ ರಿಪೋರ್ಟರ್ ಸಂದರ್ಶನದಲ್ಲಿ ಮಾತನಾಡಿದ್ದ ಯಶ್, ನಾನು ಹೆಚ್ಚು ಸೋಶಿಯಲ್ ಮೀಡಿಯಾ ನೋಡಲ್ಲ ಎಂದಿದ್ದರು. ಪತ್ನಿ ರಾಧಿಕಾ ಪಂಡಿತ್ ಬಗ್ಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರು. ಆಕೆ ನನ್ನ ಪಾರ್ಟ್ನರ್ ಆಗಿ ಸಿಕ್ಕಿದ್ದು ನನ್ನ ಅದೃಷ್ಟ, ಆಕೆಯ ಬೆಂಬಲದ ಬಗ್ಗೆ ಎಷ್ಟು ಹೇಳಿದರೂ ಕಮ್ಮಿ ಎಂದಿದ್ದರು.
ಇನ್‌ಸ್ಟಾಗ್ರಾಮ್ ಮೂಲಕ ಸೆಲೆಬ್ರೆಟಿಗಳು ತಮ್ಮ ಅಭಿಮಾನಿಗಳ ಜೊತೆ ಸದಾ ಟಚ್‌ನಲ್ಲಿ ಇರುತ್ತಾರೆ. ಆದರೆ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸಾಕಷ್ಟು ಜನರನ್ನು ಫಾಲೋ ಮಾಡುವ ನಟ, ನಟಿಯರು ಇದ್ದಾರೆ. ದಳಪತಿ ವಿಜಯ್ ರೀತಿ ಯಾರನ್ನೂ ಫಾಲೋ ಮಾಡದವರು ಇದ್ದಾರೆ. ಯಶ್ ಹಾಹೂ ಐಶ್ ರೀತಿ ತಮಗೆ ಆಪ್ತರಾದ ಒಬ್ಬರನ್ನು ಮಾತ್ರ ಫಾಲೋ ಮಾಡುವವರು ಇದ್ದಾರೆ.


Click it and Unblock the Notifications











