ಪೆಟ್ರೋಲ್ ಬಂಕ್‌- ಬೇಕರಿ ; ನೀಲಿ ಪ್ರಪಂಚಕ್ಕೆ ಕಾಲಿಡುವ ಮುನ್ನ ಹೇಗಿತ್ತು ಸನ್ನಿ ಲಿಯೋನ್ ಬದುಕು..?

ಸನ್ನಿ ಲಿಯೋನ್ ಎಂಬ ಹೆಸರಿಗೆ ಸಮ್ಮೋಹಕವಾದೊಂದು ಸೆಳೆತವಿದೆ. ಅದಕ್ಕೆ ಕಾರಣವಾದ 'ನೀಲಿ' ನೆರಳು ಏನೇ ಇರಬಹುದು. ಆದರೆ ಇವತ್ತು ಸನ್ನಿ ಲಿಯೋನ್ ಬಾಲಿವುಡ್‌ನಲ್ಲಿ ಅಷ್ಟೇ ಅಲ್ಲದೇ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಕೂಡ ತಮ್ಮ ಅಸ್ತಿತ್ವವನ್ನ ಕಂಡುಕೊಂಡಿದ್ದಾರೆ. ನಟಿಯಾಗಿ ನೆಲೆಯೂರಿದ್ದಾರೆ. ಈ ಎಲ್ಲ ವಿಚಾರ ನಿಮಗೆ ಗೊತ್ತು. ಆದರೆ ಅಸಂಖ್ಯಾತ ಅಭಿಮಾನಿಗಳನ್ನ ಇಂದು ಹೊಂದಿರುವ ಸನ್ನಿ ಲಿಯೋನ್ ಬಡತನದ ಬೇಗೆಯಲ್ಲಿ ನೊಂದು ಬೆಂದು ಹೋದ ಕಥೆ ನಿಮಗೆ ಗೊತ್ತಾ..?

ಹೌದು. ಸಂಪ್ರದಾಯಸ್ಥ ಸಿಖ್ ಕುಟುಂಬದ ಕರಣ್‌ಜೀತ್ ಕೌರ್ ವೊಹ್ರಾ ಅಲಿಯಾಸ್ ಸನ್ನಿ ಲಿಯೋನ್ ಹುಟ್ಟಿದ್ದು ಕೆನಡಾದಲ್ಲಿ. ಮಗಳು ಪಬ್ಲಿಕ್ ಶಾಲೆಗೆ ಹೋಗುವುದು ಸುರಕ್ಷಿತವಲ್ಲ ಎಂದು ಆಕೆಯ ಇಷ್ಟಕ್ಕೆ ವಿರುದ್ಧವಾಗಿ ಕ್ಯಾಥೊಲಿಕ್ ಶಾಲೆಗೆ ಸೇರಿಸಿದ್ದರು ಇವರ ಪೋಷಕರು.

Do you know before entering into the adult industry Sunny Leone used to do these jobs

ಇನ್ನೂ ಸನ್ನಿ ಸಹ ಎಳವೆಯಲ್ಲಿ ಬಹಳ ಗಟ್ಟಿಗಿತ್ತಿ. ಹುಡುಗರೊಟ್ಟಿಗೆ ಸೇರಿ ಮನೆಯ ಮುಂದೆ ಹಾಕಿ ಆಡ್ತಿದ್ದ ಸನ್ನಿ ಲಿಯೋನ್ ಹರೆಯದ ವಯಸ್ಸಿನಲ್ಲಿಯೇ ಹಣಕ್ಕಾಗಿ ಪೆಟ್ರೋಲ್ ಬಂಕ್‌ನಲ್ಲಿ ಕೆಲಸಕ್ಕೆ ಸೇರಿಕೊಂಡರು. ಅದಕ್ಕೂ ಮುನ್ನ ಬೇಕರಿಯೊಂದರಲ್ಲಿ ಕೆಲಸ ಮಾಡಿದರು. ಆ ನಂತರ ಪೆನ್ಶನ್ ಸಂಸ್ಥೆಯೊಂದರಲ್ಲಿ ಉದ್ಯೋಗಕ್ಕೆ ಸೇರಿಕೊಂಡರು. ಈ ನಡುವೆ ನರ್ಸ್‌ ಆಗಲು ಶಿಕ್ಷಣ ಸಹ ಪಡೆಯಲು ಆರಂಭಿಸಿದ್ದರು ಸನ್ನಿ.

ತನ್ನ ಓರಗೆಯವರ ಐಶಾರಾಮಿತ್ವ ಸನ್ನಿಗೆ ಇರಲಿಲ್ಲ. ಇದು ಸನ್ನಿಯನ್ನು ಬಹುವಾಗಿ ಕಾಡುತ್ತಿತ್ತು. ಹಣ ಸಂಪಾದಿಸಲು ಹಲವು ಯತ್ನಗಳನ್ನು ಸನ್ನಿ ಮಾಡಿದರು ಆದರೆ ಬೇಕರಿ, ಬಂಕ್‌ಗಳಲ್ಲಿ ಬರುತ್ತಿದ್ದ ಸಂಬಳ ಬಹಳ ಕಡಿಮೆ ಆಗಿತ್ತು. ಸನ್ನಿಯ ಕನಸುಗಳನ್ನು ಪೂರೈಸಿಕೊಳ್ಳಲು ಅದು ಸಾಕಾಗುತ್ತಿರಲಿಲ್ಲ. ಸಾಮಾನ್ಯವಾಗಿ ಕಷ್ಟದ ಪರಿಸ್ಥಿತಿಯಲ್ಲಿದ್ದವರು ಏನನ್ನಾದರೂ ಮಾಡಿ ಕಷ್ಟದಿಂದ ಹೊರಬರಬೇಕೆನ್ನುವ ಹಪ ಹಪಿಯಲ್ಲಿರುತ್ತಾರೆ. ಸನ್ನಿ ಲಿಯೋನ್ ಕೂಡ ಮಾಡಿದ್ದು ಇದನ್ನೇ.

Do you know before entering into the adult industry Sunny Leone used to do these jobs

ಗೆಳತಿಯ ಸಹಾಯದಿಂದ ಪೆಂಟ್‌ಹೌಸ್ ಮ್ಯಾಗಜಿನ್‌ನ ಕವರ್ ಪೇಜ್‌ಗಾಗಿ ಗ್ಲಾಮರಸ್ ಆಗಿ ಫೋಸ್‌ ನೀಡಿದರು ಸನ್ನಿ. ಆ ನಂತರ 2011ರಲ್ಲಿ ಹಸ್ಟ್ಲರ್ ಮ್ಯಾಗಜೀನ್‌ಗೆ ಫೋಸು ನೀಡಿದರು. ಆ ನಂತರ ಇನ್ನೂ ಹಲವು ಮ್ಯಾಗಜೀನ್‌ನ ಮುಖಪುಟಗಳಲ್ಲಿ ಕಾಣಿಸಿಕೊಂಡರು. ಗ್ಲಾಮರಸ್ ಫೊಟೊದಿಂದ ಆರಂಭ ಮಾಡಿ ಅರೆ ಬೆತ್ತಲೆ, ಬೆತ್ತಲೆ ಫೊಟೊಗಳವರೆಗೆ ಬಂದರು ಸನ್ನಿ. ಇದರಿಂದ ಸಾಕಷ್ಟು ಹಣವನ್ನು ಸಹ ಸಂಪಾದಿಸಿದರು.

ಆ ನಂತರ 2003ರ ಆಚೀಚೆ ಪೋರ್ನ್ ಜಗತ್ತಿಗೆ ಪ್ರವೇಶ ಪಡೆದ ಸನ್ನಿ ಲಿಯೋನ್ ರಾತ್ರೋ ರಾತ್ರಿ ತನ್ನ ಮಾದಕ ಮೈ ಮಾಟದಿಂದ ಫೇಮಸ್ ಆಗಿದ್ದು, ಕೈ ತುಂಬ ನಿರೀಕ್ಷೆಗೂ ಮೀರಿದ ಹಣ ಗಳಿಸಿದ್ದು ಸದ್ಯಕ್ಕೆ ಬೇಡದ ಸಂಗತಿ. ಅದಾದ ಮೇಲೆ ಆಕೆ ಪೋರ್ನ್ ಜಗತ್ತಿನಿಂದ ಹೊರಬರಲು ತನಗಿದ್ದ ಟ್ರೇಡ್ ಮಾರ್ಕನ್ನು ಕಿತ್ತೆಸೆದಿದ್ದು ಕೂಡ ಈಗ ಇತಿಹಾಸ

Do you know before entering into the adult industry Sunny Leone used to do these jobs

ಇನ್ನು ನಟಿಯಾಗಿ ಗುರುತಿಸಿಕೊಳ್ಳಲು ಪ್ರಾರಂಭವಾದ ಮೇಲಂತೂ ಸನ್ನಿಲಿಯೋನ್ ತೆರೆದ ಪುಸ್ತಕದಂತೆ ತನಗಾದ ಎಲ್ಲ ಅನುಭವಗಳನ್ನು ಹಂಚಿಕೊಂಡಿದ್ದು ಇದೆ. ನನ್ನ ಸ್ವ ಇಚ್ಛೆಯಿಂದಲೇ ನಾನು ಪೋರ್ನ್ ಉದ್ಯಮಕ್ಕೆ ಹೋದೆ. ಅದು ನನಗೆ ಉದ್ಯಮವಾಗಿ ಕಂಡಿತು. ಅಲ್ಲಿ ನಾನು ಅವಕಾಶವನ್ನಷ್ಟೆ ನೋಡಿದೆ. ನಾನೊಬ್ಬ ಉದ್ಯಮಶೀಲೆಯಂತೆ ಆ ಅವಕಾಶದ ಬಗ್ಗೆ ಯೋಚಿಸಿದೆ. ನಾನು ಪೋರ್ನ್ ಉದ್ಯಮ ಪ್ರವೇಶ ಮಾಡಿದ್ದಕ್ಕೆ ನನಗೆ ಯಾವುದೇ ಬೇಸರವಿಲ್ಲ ಎಂದು ಸನ್ನಿ ಹೇಳಿದ್ದು ಇದೆ.

ಒಟ್ನಲ್ಲಿ ಬದುಕು ಎಷ್ಟರಮಟ್ಟಿಗೆ ಪಾಠಗಳನ್ನು ಕಲಿಸಬಲ್ಲದು ಎಂಬುದಕ್ಕೆ ಸನ್ನಿಲಿಯೋನ್ ಬದುಕೇ ಉದಾಹರಣೆ. ಇಂತಹ ಸನ್ನಿ ಲಿಯೋನ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ ಸಡಗರ. ಬದುಕನ್ನು ಬೇರೆಯದ್ದೇ ರೀತಿಯಲ್ಲಿ ಸ್ವೀಕರಿಸಿ, ʼಅನುಭವಿಸಿʼದ ಸನ್ನಿಗೆ ನಿಮ್ಮದು ಒಂದು ಶುಭಾಶಯ ಇರಲಿ

More from Filmibeat

English summary
From working at a petrol bunk to entering the world of adult entertainment, here is the story of Sunny Leone
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X