Janhvi Kapoor: ನಟಿ ಜಾಹ್ನವಿ ಕಪೂರ್ ಫಿಟ್ನೆಸ್ ರಹಸ್ಯ ಗೊತ್ತೆ?: ಒಂದು ದಿನದಲ್ಲಿ ಏನೇನು ಸೇವಿಸುತ್ತಾರೆ ನೋಡಿ!
ಚಿತ್ರರಂಗದ ಅತಿಲೋಕ ಸುಂದರಿ ಶ್ರೀದೇವಿ ಅವರ ಮಗಳು ಜಾನ್ವಿ ಕಪೂರ್ ತಮ್ಮ ಚೊಚ್ಚಲ ಚಿತ್ರ 'ಧಡಕ್'ನಿಂದ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದವರು. ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿ, ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಇವರು, ಫಿಟ್ನೆಸ್‌ನಿಂದಲೂ ಹೆಚ್ಚು ಸುದ್ದಿಯಾಗುತ್ತಾರೆ.
ಜಾನ್ವಿ ಕಪೂರ್ ಮತ್ತು ವರುಣ್ ಧವನ್ ಅಭಿನಯದ ಇತ್ತೀಚೆಗೆ ಬವಾಲ್ ಸಿನಿಮಾ ಇತ್ತೀಚೆಗೆ ಬಿಡುಗೆಯಾಗಿತ್ತು. ಇದಾದ ನಂತರ ಈಗ ಅವರು ತೆಲುಗು ಚಿತ್ರರಂಗಕ್ಕೆ ಜೂನಿಯರ್ ಎನ್‌ಟಿಆರ್ ಅವರ ಜೊತೆಗೆ ದೇವರ ಸಿನಿಮಾ ಮೂಲಕ ಕಾಲಿಡುತ್ತಿದ್ದಾರೆ. ಈ ಮೂಲಕ ಶ್ರೀದೇವಿ ಅವರಂತೆ ತೆಲುಗು ಚಿತ್ರರಂಗದಲ್ಲೂ ಕೆಲಸ ಮಾಡಲು ಆರಂಭಿಸಿದ್ದಾರೆ.

ಎಲ್ಲರನ್ನೂ ಸೆಳೆಯುವ ಜಾನ್ವಿ ಫಿಟ್ನೆಸ್
ಜಾನ್ವಿ ಕಪೂರ್ ನಟನೆ ಮಾತ್ರವಲ್ಲ, ಆಕೆಯ ಫಿಟ್ನೆಸ್ ಎಲ್ಲರಲ್ಲೂ ಕುತೂಹಲಕ್ಕೆ ಕಾರಣವಾಗಿದೆ. ಆದರೆ ಸತ್ಯವೆಂದರೆ ಜಾನ್ವಿ ಕಪೂರ್ ತುಂಬಾ ಸರಳವಾದ ಆಹಾರ ಮತ್ತು ನಿಯಮಿತ ವ್ಯಾಯಾಮದ ಮೂಲಕ ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳುತ್ತಾರೆ. ಹಾಗಾದರೆ, ನಟಿ ಸಾಮಾನ್ಯವಾಗಿ ಒಂದು ದಿನದಲ್ಲಿ ಏನೇನು ತಿನ್ನುತ್ತಾರೆ ಎಂಬುದನ್ನು ಈ ಬರಹದಲ್ಲಿ ನೋಡೋಣ.
ಜಾನ್ವಿ ಕಪೂರ್ ತನ್ನ ದಿನದ ಆರಂಭವನ್ನು ಒಂದು ಚಮಚ ಶುದ್ಧ ದೇಸಿ ಹಸುವಿನ ತುಪ್ಪದಿಂದ ಪ್ರಾರಂಭಿಸುತ್ತಾರೆ. ವರ್ಷಗಳಿಂದ ಕೂಡ ಇದನ್ನು ಸೇರಿಸುವ ಅವರು ಇಂದಿಗೂ ಬದಲಾಗಿಲ್ಲ. ಏಕೆಂದರೆ ಇದನ್ನು ಸೇವಿಸುವುದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದರ ಜೊತೆಗೆ ಕೆಲವೊಮ್ಮೆ, ಬುಲೆಟ್ ಕಾಫಿ, ತುಪ್ಪದ ಬ್ಲ್ಯಾಕ್ ಕಾಫಿ ಕೂಡ ಕುಡಿಯುತ್ತಾರೆ.

ದಿನದ ಆರಂಭದ ಬ್ರೇಕ್ ಫಾಸ್ಟ್ ಅನ್ನು, ತಾಜಾ ಹಣ್ಣುಗಳು ಅಥವಾ ಹಣ್ಣಿನ ರಸವನ್ನು, ಒಮ್ಮೊಮ್ಮೆ ಮೊಸರಿನ ಜೊತೆಗೆ ಪರಾಠವನ್ನೂ ಸೇವಿಸುತ್ತಾರೆ. ವಿಶೇಷವಾಗಿ ತನಗೆ ದಕ್ಷಿಣ ಭಾರತೀಯ ಆಹಾರದ ಬಗ್ಗೆ ಅದರಲ್ಲೂ ಆಂಧ್ರ ಪಾಕಪದ್ಧತಿಯ ಬಗ್ಗೆ ತಮ್ಮ ಪ್ರೀತಿಯನ್ನು ಬಹಿರಂಗಪಡಿಸಿದ್ದಾರೆ.
ಮನೆ ಊಟಕ್ಕೆ ಹೆಚ್ಚು ಆದ್ಯತೆ ನೀಡುವ ಜಾನ್ವಿ ಕಪೂರ್
ಜಾನ್ವಿ ಕಪೂರ್ ಹೆಚ್ಚಾಗಿ ಮನೆಯಲ್ಲಿ ಮಾಡಿದ ಊಟಕ್ಕೆ ಆದ್ಯತೆ ನೀಡುತ್ತಾರೆ. ಕಡಿಮೆ ಎಣ್ಣೆ, ತುಪ್ಪ ಬಳಸಿ ಮಾಡಿದ ರೊಟ್ಟಿಗಳು ಮತ್ತು ಬೆಂಡೆಕಾಯಿ, ಪಾಲಕ್ ಅಥವಾ ಮೆಂತ್ಯೆಯಂತಹ ವಿವಿಧ ಸೋಪು, ತರಕಾರಿಗಳನ್ನು ಬಳಸುತ್ತಾರೆ. ಜಾನ್ವಿಗೆ ಹೆಚ್ಚು ಫೆವರಿಟ್ ಎಂದರೆ ಅದು ದಾಲ್. ಹಾಗಾಗಿ ವಿವಿಧ ಬಗೆಯ ದಾಲ್‌ಗಳನ್ನು ಇಷ್ಟಪಡುತ್ತಾರೆ. ಇದರಲ್ಲಿ ಕೆಲವೊಮ್ಮೆ ಪನೀರ್ ಅಥವಾ ಚಿಕನ್ ಮೂಲಕ ಪ್ರೋಟೀನ್ ತೆಗೆದುಕೊಳ್ಳುತ್ತಾರೆ.
ರಾತ್ರಿಯ ಊಟಕ್ಕೆ, ಜಾನ್ವಿ ಮನೆಯಲ್ಲಿಯೇ ಮಾಡಿದ ಲೈಟ್ ಸಲಾಡ್ ಅಥವಾ ರೆಡ್ ರೈಸ್ ಬಿರಿಯಾನಿ ತೆಗೆದುಕೊಳ್ಳುತ್ತಾರೆ. ಎಂದೂ ಯಾವುದೇ ಊಟದ ಸಮಯವನ್ನು ತಪ್ಪಿಸುವುದಿಲ್ಲ. ರಾತ್ರಿ 10 ಗಂಟೆಗೆ ತನ್ನ ಕೊನೆಯ ಊಟವನ್ನು ಮುಗಿಸುತ್ತಾರೆ. ಇನ್ನು, ನಟಿ ಜಾನ್ವಿ ಕೊರಿಯನ್ ಆಹಾರದ ದೊಡ್ಡ ಅಭಿಮಾನಿ.
ವ್ಯಾಯಾಮ ಮತ್ತು ಜಾನ್ವಿ ಕಪೂರ್
ಊಟದ ಜೊತೆಗೆ ಜಾನ್ವಿ ತಮ್ಮ ವ್ಯಾಯಾಮಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಹೀಗಾಗಿಯೇ ತನ್ನ ಜಿಮ್‌ನ ಹೊರಗೆ ಹೆಚ್ಚು ಕಾಣಿಸಿಕೊಂಡಿದ್ದಾರೆ. ಪೈಲೇಟ್ಸ್ ಮತ್ತು ಕಾರ್ಡಿಯೋ ವರ್ಕ್‌ಔಟ್ ಮಾಡುತ್ತಾರೆ. ಉತ್ತಮ ಡ್ಯಾನ್ಸರ್ ಆಗಿರುವ ಜಾನ್ವಿ ಜುಂಬಾ ವರ್ಕೌಟ್ ಮಾಡುವಾಗ ಡ್ಯಾನ್ಸ್ ಮಾಡಲು ಇಷ್ಟಪಡುತ್ತಾರೆ. ವ್ಯಾಯಾಮದ ನಂತರದ ಸಾಮಾನ್ಯವಾಗಿ ಒಣ ಹಣ್ಣುಗಳು ಮತ್ತು ಸಿಹಿ ಗೆಣಸು ಪರಾಠ ತೆಗೆದುಕೊಳ್ಳುತ್ತಾರೆ. ಚೀಟ್ ಡೇನಲ್ಲಿ ಕೇಕ್, ಐಸ್ ಕ್ರೀಮ್, ಹಲ್ವಾ ಮತ್ತು ಎಲ್ಲ ರೀತಿಯ ಸಿಹಿತಿಂಡಿಗಳನ್ನು ತಿನ್ನುತ್ತಾರೆ.


Click it and Unblock the Notifications











