ಸೈಂಟಿಸ್ಟ್ ಆಗಬೇಕು ಎಂದುಕೊಂಡಿದ್ದ ಕಾಶಿನಾಥ್ ಸ್ಟಾರ್ ಡೈರೆಕ್ಟರ್ ಆಗಿದ್ಹೇಗೆ..?
ಕನ್ನಡ ಚಿತ್ರರಂಗದ ಸಿದ್ಧ ಸೂತ್ರಗಳನ್ನೆಲ್ಲ ಪಕ್ಕಕ್ಕೆ ಇಟ್ಟು, ಹೊಸದೊಂದು ಸಿನಿಮಾ ವ್ಯಾಕರಣವನ್ನ ಪರಿಚಯ ಮಾಡಿದ ಖ್ಯಾತಿ ಕನ್ನಡ ಚಿತ್ರರಂಗದ ಖ್ಯಾತ ನಾಯಕ.. ನಿರ್ದೇಶಕ.. ನಿರ್ಮಾಪಕ.. ಕಾಶಿನಾಥ್ ಅವರದ್ದು. ಸಿನಿಮಾವನ್ನ ಹೀಗೆಯೇ ಯಾಕೆ ಮಾಡಬೇಕು..? ಹೀಗೆ ಯಾಕೆ ಮಾಡಬಾರದೆನ್ನೋ ಹೊಸ ಆಲೋಚನೆಗೆ ಮುನ್ನುಡಿ ಬರೆದವರು ಕಾಶಿನಾಥ್.
ಅಲ್ಲೀತನ್ಕ ಇದ್ದ ಮಡಿವಂತಿಕೆ.. ಸಂಪ್ರದಾಯ.. ಸಂಸ್ಕ್ರತಿಯೆನ್ನೆಲ್ಲ ಪಾಲಿಸದೇ ಹೊಸ ಅಲೆಯನ್ನೇ ಕನ್ನಡ ಚಿತ್ರರಂಗದಲ್ಲಿ ಸೃಷ್ಟಿಸಿದ್ದ ಕಾಶಿನಾಥ್ ಅವರಿಗೆ ನಟನಾಗಲು ಬೇಕಾದ ಸೌಂದರ್ಯವೂ ಇರಲಿಲ್ಲ. ಅಂದು..ಇಂದು..ಎಂದೆಂದೂ ಮಾನದಂಡವಾದ ಆಕರ್ಷಕ ಮೈ ಕಟ್ಟು ಇರಲಿಲ್ಲ.. ಚೆಲುವ ಎಂಬ ಬಿರುದು ಇರಲಿಲ್ಲ.

ಆದರೂ ಅಸಾಧ್ಯವನ್ನ ಸಾಧ್ಯವನ್ನಾಗಿಸಿ, ಹಾಸ್ಯದ ಮೂಲಕವೇ ಕ್ರಾಂತಿಯನ್ನ ಮಾಡಿದವರು ಕಾಶೀನಾಥ್. ಆದ್ರೇ ದುರಂತ ಇವತ್ತು ಕಾಶಿನಾಥ್ ಅಂದಕೂಡಲೇ ಇಂದಿನ ಜನರೇಶನ್ನಿನವರಿಗೆ ಒಬ್ಬ ಹಾಸ್ಯನಟ ನಾಗಿ ಮಾತ್ರ ಗೋಚರವಾಗ್ತಾರೆ.
ಆದರೆ 1980-90ರ ದಶಕದ ಸಿನಿಮಾಗಳನ್ನ ನೋಡಿದವರಿಗೂ ಕಾಶಿನಾಥ್ ಒಬ್ಬ ಪ್ರತಿಭಾನ್ವಿತ ನಟ ಕೂಡ ಹೌದು ಅನ್ನೋದು ಗೊತ್ತಿರುತ್ತೆ. ಇನ್ನೂ ಚಿತ್ರರಂಗದವರಿಗೆ ಕಾಶಿಯವರ ಮತ್ತಷ್ಟು ಪ್ರತಿಭೆಗಳ ಬಗ್ಗೆಯೂ ಗೊತ್ತಿದೆ. ಆದ್ರೆ ಇದೆಲ್ಲವನ್ನೂ ಮೀರಿದ ಮತ್ತಷ್ಟು ಪ್ರತಿಭೆ, ಚಿಂತನೆಗಳು ಕಾಶಿನಾಥ್ ರಲ್ಲಿದ್ವು. ಕಾಶಿನಾಥ್ ಒಬ್ಬ ಸೈಂಟಿಸ್ಟ್ ಕೂಡ ಆಗಬೇಕೆಂದು ಕೊಂಡಿದ್ದರು ಅನ್ನೋದು ತುಂಬಾ ಕಡಿಮೆ ಜನಕ್ಕೆ ಗೊತ್ತಿರೋ ಸಂಗತಿ.

ಯಸ್, ಅಸಲಿಗೆ ಕಾಶಿನಾಥ್ ಓದಿದ್ದು ಬಿ.ಎಸ್.ಸಿ. 1970ರ ದಶಕದ ಯುವಕರು ಕನಸು ಕಾಣ್ತಿದ್ದಂತೆ ಇವರು ಕೂಡ ಅಮೇರಿಕಕ್ಕೆ ಹೋಗಬೇಕು ಅಂತ ಕನಸು ಕಂಡಿದ್ರು. ಅದ್ರಲ್ಲೂ ದೊಡ್ಡ ಸೈಂಟಿಸ್ಟ್ ಆಗಬೇಕು ಮನುಕುಲಕ್ಕೆ ಒಳಿತಾಗುವಂಥದ್ದೇನಾದ್ರೂ ಕಂಡು ಹಿಡಿಯಬೇಕು ಅಂತ ಕನಸು ಕಂಡಿದ್ರಂತೆ ಕಾಶಿನಾಥ್. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಬೆಳ್ಳಿ ಹೆಜ್ಜೆಯ ಕಾರ್ಯಕ್ರಮದಲ್ಲಿ ಕಾಶಿನಾಥ್ ಈ ವಿಚಾರವನ್ನ ಹಂಚಿಕೊಂಡಿದ್ದರು ಕೂಡ.
ಆದರೆ ಬಿಎಸ್‌ಸಿಯಲ್ಲಿದ್ದಾಗ ಕಾಶಿನಾಥ್ ಬಣ್ಣದ ಸೆಳೆತಕ್ಕೆ ಸಿಲುಕಿದರು. ಇದಕ್ಕೆ ಕೈಗನ್ನಡಿ ಅನ್ನುವಂತೆ ಮೊದಲ ವರ್ಷ ಉತ್ತಮ ಅಂಕಗಳೊಂದಿಗೆ ತೇಗರ್ಡೆಯಾಗಿದ್ದ ಕಾಶಿನಾಥ್ ಎರಡನೇ ವರ್ಷ ಸ್ವಲ್ಪ ಡಲ್ಲಾದರು. ಮೂರನೇ ವರ್ಷ ಇನ್ನೂ ಡಲ್ಲಾದರು ಕಾಶಿನಾಥ್. ಇನ್ನೂ ಕಾಶಿನಾಥ್ ಅವರದ್ದು ಉದ್ಯಮದ ಹಿನ್ನೆಲೆಯಾಗಿತ್ತು. ಸಿನಿಮಾದ ಗಂಧ ಗಾಳಿ ಗೊತ್ತಿರದ ಕುಟುಂಬ.

ಎಲ್ಲಕ್ಕಿಂತ ಹೆಚ್ಚಾಗಿ ಕುಂದಾಪುರದಲ್ಲಿ ಆಗಿನ್ನೂ ಯಾರು ಚಿತ್ರರಂಗಕ್ಕೆ ಬಂದಿರಲಿಲ್ಲ. ಹೊಟೇಲ್, ಕಿರಾಣಿ ಸ್ಟೋರ್ ಮತ್ತು ಬ್ಯಾಂಕ್ ನಲ್ಲಿಯೇ ಅನೇಕರು ಕೆಲಸ ಮಾಡ್ತಿದ್ದ ದಿನಗಳವು. ಈ ಕಾರಣಕ್ಕೆ ಕಾಶಿನಾಥ್ ಅವರ ತಂದೆ ಸುತಾರಾಂ ಒಪ್ಪಲಿಲ್ಲ. ಎಲ್ಲ ತಂದೆ-ತಾಯಿಯಂತೆ ಬೈಯದಿದ್ದರು.
ಆದರೆ ವಿಧಿ ಲಿಖಿತ.. ಕಾಶಿನಾಥ್ ತಂದೆ-ತಾಯಿಯ ಮಾತನ್ನ ದಿಕ್ಕರಿಸಿ ಈ ಕಡೆ ಬಂದರು. ಸುರೇಶ್ ಹೆಬ್ಳಿಕರ್, ರಾಮದಾಸ್ ನಾಯ್ಡು ರಂತಹ ಪ್ರತಿಭಾನ್ವಿತವರ ಜೊತೆ ಸೇರಿ ಅಸೀಮಾ ಅನ್ನೋ ತಂಡ ಕಟ್ಟಿದರು. ಒಂದು ಸಿನಿಮಾ ಕ್ಲಬ್ ಮಾಡಿಕೊಂಡರು. ಈ ಕ್ಲಬ್ ನಲ್ಲಿ ಹಲವಿ ವಿದೇಶಿ ಚಿತ್ರಗಳನ್ನ ನೋಡ್ತಾ ಸಿನಿಮಾ ಬಗ್ಗೆ ತಮ್ಮದೇ ಆದ ಚಿಂತನೆಗಳನ್ನ ಬೆಳೆಸಿಕೊಂಡ್ರು ಕಾಶಿನಾಥ್. ಆ ಕಾಲದಲ್ಲಿ ಕಾಶಿನಾಥ್ ಸ್ಲಿಪ್ ಅನ್ನೋ ಕಿರುಚಿತ್ರ ಮಾಡಿದರು. ಮುಂದಾಗಿದ್ದು ಇತಿಹಾಸ


Click it and Unblock the Notifications











