ಇನ್‌ಸ್ಟಾಗ್ರಾಂನಲ್ಲಿ ಈ ಸ್ಯಾಂಡಲ್‌ವುಡ್ ತಾರೆಯರಿಗಿರುವ ಫಾಲೋವರ್ಸ್ ಎಷ್ಟು?

By ಅನಿತಾ ಬನಾರಿ

ಕನ್ನಡ ನಟಿಯರು ಸೋಶಿಯಲ್ ಮೀಡಿಯಾದ ವೇದಿಕೆಗಳಲ್ಲಿ ಸದಾ ಆಕ್ಟಿವ್ ಆಗಿರುತ್ತಾರೆ. ಅದರಲ್ಲೂ ತಮ್ಮ ಅಭಿಮಾನಿಗಳೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ಕನೆಕ್ಟ್ ಆಗಿರುತ್ತಾರೆ. ತಮ್ಮ ಫೋಟೊಗಳು, ವಿಡಿಯೋ ಸೇರಿದಂತೆ ಸಿನಿಮಾಗೆ ಸಂಬಂಧ ಪಟ್ಟ ವಿಷಯಗಳನ್ನು ಇದೇ ವೇದಿಕೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಹೀಗೆ ಕನ್ನಡದ ನಟಿಯರು ತನ್ನ ಖಾತೆಯನ್ನು ಫಾಲೋ ಮಾಡುವವರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇರುತ್ತಾರೆ. ಸದ್ಯ ಕನ್ನಡದ ಚಿತ್ರರಂಗದ ಕೆಲವು ಪ್ರಮುಖ ನಟಿಯರ ಖಾತೆಯಲ್ಲಿ ಎಷ್ಟೆಷ್ಟು ಇನ್‌ಸ್ಟಾಗ್ರಾಂ ಫಾಲೋವರ್ಸ್ ಇದ್ದಾರೆ ಅನ್ನೋದರ ಪಟ್ಟಿ ಇಲ್ಲಿದೆ.

Do you know Radhika Pandit Rukmini Vasanth Rashmika Mandanna Rachita Ram instagram followers

ರಾಧಿಕಾ ಪಂಡಿತ್

ನಟಿ ರಾಧಿಕಾ ಪಂಡಿತ್ ಕನ್ನಡಿಗರ ಅಚ್ಚುಮೆಚ್ಚಿನ ನಟಿ. ಕಿರುತೆರೆಯ ಮೂಲಕ ನಟನೆಗೆ ಪಾದಾರ್ಪಣೆ ಮಾಡಿರುವ ಈಕೆ ತದ ನಂತರ ಬೆಳ್ಳಿತೆರೆಯಲ್ಲಿ ಮೋಡಿ ಮಾಡಿದ್ದಾರೆ. ಇತ್ತೀಚೆಗೆ ಸಿನಿಮಾಗಳಿಂದ ದೂರ ಉಳಿದಿದ್ದರೂ ಈಕೆ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿ ಕಾಣಿಸಿಕೊಳ್ಳುತ್ತಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅವರಿಗೆ 4.40 ಮಿಲಿಯನ್ (44 ಲಕ್ಷ) ಫಾಲೋವರ್ಸ್ ಇದ್ದಾರೆ.

ರಶ್ಮಿಕಾ ಮಂದಣ್ಣ

ಇನ್ನು ಆಲ್ ಇಂಡಿಯಾ ಕ್ರಷ್ ಎನಿಸಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ 43.70 ಮಿಲಿಯನ್ (4.37 ಕೋಟಿ) ಫಾಲೋವರ್ಸ್‌ ಅನ್ನು ಹೊಂದಿದ್ದಾರೆ. ಕಿರಿಕ್ ಪಾರ್ಟಿ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡ ಈಕೆ ಪರಭಾಷೆಯ ಸಿನಿಮಾ ರಂಗದಲ್ಲಿಯೂ ಮೋಡಿ ಮಾಡುತ್ತಿದ್ದಾರೆ. ಇಷ್ಟೊಂದು ಫಾಲೋವರ್ಸ್‌ ಹೊಂದಿರುವ ಭಾರತದ ಕೆಲವೇ ಕೆಲವು ನಟಿಯರಲ್ಲಿ ರಶ್ಮಿಕಾ ಕೂಡ ಒಬ್ಬರಾಗಿದ್ದಾರೆ.

ರುಕ್ಮಿಣಿ ವಸಂತ

'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಖ್ಯಾತಿಯ ರುಕ್ಮಿಣಿ ವಸಂತ್ ಕನ್ನಡ ಚಿತ್ರರಂಗಕ್ಕೆ ಹೊಸಮುಖವಾದರೂ ಕೂಡ ಹಿಂದಿನ ನಟಿಯರಿಗಿಂತ ಹೆಚ್ಚು ಫಾಲೋವರ್ಸ್ ಅನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ರುಕ್ಮಿಣಿ ವಸಂತ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ 6.24 ಲಕ್ಷ ಮಂದಿ ಫಾಲೋ ಮಾಡುತ್ತಿದ್ದಾರೆ.

Do you know Radhika Pandit Rukmini Vasanth Rashmika Mandanna Rachita Ram instagram followers

ಶ್ರೀನಿಧಿ ಶೆಟ್ಟಿ

'ಕೆಜಿಎಫ್‌' ನಾಯಕಿ, ಬ್ಯೂಟಿ ಕ್ವೀನ್ ನಟಿ ಶ್ರೀನಿಧಿ ಶೆಟ್ಟಿ ಎಲ್ಲರಿಗೂ ಇಷ್ಟವಾಗುವ ತಾರೆ. ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 5.2 ಮಿಲಿಯನ್‌( 52 ಲಕ್ಷ)ಫಾಲೋವರ್ಸ್‌ ಇದ್ದಾರೆ. ವಿಶೇಷವೆಂದರೆ ಅವರು ಕೇವಲ 89 ಮಂದಿಯನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ.

ರಚಿತಾ ರಾಮ್

ಸ್ಯಾಂಡಲ್‌ವುಡ್‌ 'ಡಿಂಪಲ್ ಕ್ವೀನ್' ಎಂದರೆ ಅದು ರಚಿತಾ ರಾಮ್. 'ಅರಸಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಈಕೆ ನಂತರ ಕಾಣಿಸಿಕೊಂಡಿದ್ದು ಹಿರಿತೆರೆಯಲ್ಲಿ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಸಿನಿಪ್ರಿಯರ ಮನ ಸೆಳೆದಿರುವ ರಚಿತಾ ರಾಮ್ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 2.4 ಮಿಲಿಯನ್ (24 ಲಕ್ಷ) ಫಾಲೋವರ್ಸ್ ಇದ್ದಾರೆ. ಆದರೆ, ನಟಿ ರಚಿತಾ ರಾಮ್ ಅವರು 389 ಮಂದಿಯನ್ನು ಫಾಲೋ ಮಾಡ್ತಾ ಇದ್ದಾರೆ.

ಆಶಿಕಾ ರಂಗನಾಥ್

'ಮುಗುಳುನಗೆ' ಬೆಡಗಿ ಆಶಿಕಾ ರಂಗನಾಥ್ ಅವರು ಕೂಡಾ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಇನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ 2.20 ಮಿಲಿಯನ್‌ (22 ಲಕ್ಷ) ಫಾಲೋವರ್ಸ್‌ ಅನ್ನು ಹೊಂದಿದ್ದಾರೆ. ಜೊತೆಗೆ ಅವರು 579 ಮಂದಿಯನ್ನು ಫಾಲೋ ಮಾಡ್ತಾ ಇದ್ದಾರೆ.

More from Filmibeat

English summary
Do you know Radhika Pandit, Rashmika Mandanna, Rachita Ram, Rukmini Vasanth, Ashika Ranganath Instagram followers?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X