RGV ಕಂಪನಿಯಲ್ಲಿ ಅಜಯ್ ದೇವಗನ್ ಅಲ್ಲ ಬದಲಿಗೆ ಶಾರುಖ್ ಖಾನ್ ಇರಬೇಕಿತ್ತು. ಆದರೆ..?

ಟೆರೆರಿಸ್ಟ್‌ಗಳ ಟೆರರ್.. ಭಾರತವನ್ನ ಅದೆಷ್ಟೋ ಸಲ ರಕ್ತದ ಮಡುವಲ್ಲಿ ಮಲಗಿಸಿದೆ. ಮುಂಬೈ ಅಟ್ಯಾಕ್.. ಸಂಸತ್ ಮೇಲಿನ ದಾಳಿ.. ಹೈದ್ರಾಬಾದ್ ಬಾಂಬ್ ಬ್ಲ್ಯಾಸ್ಟ್.. ಒಂದಾ.. ಎರಡಾ..

ಒಂದರ ಹಿಂದೊಂದು ದಾಳಿ ನಡೀತಾನೇ ಇದೆ. ಪ್ರತಿ ಬಾರಿ ಬ್ಲ್ಯಾಸ್ಟ್ ಆದಾಗ್ಲೂ ಪ್ರತಿಯೊಬ್ಬರೂ, ಒಬ್ಬರ ಮೇಲೆ ಇನ್ನೊಬ್ಬರ ತಪ್ಪುಗಳನ್ನು ಹೋರಿಸಿ ಕೈ ತೊಳೆದುಕೊಂಡ್ಬಿಡ್ತಾರೆ. ಇನ್ನೊಂದಷ್ಟ್ ಸಲಾ ಅಪರಾಧಿಯನ್ನು ಹಿಡಿಯೋವಲ್ಲಿ ನಮ್ಮ ಸಿಸ್ಟಮ್ ಯಶಸ್ವಿಯಾಗುತ್ತೆ. ಇದಕ್ಕೆ ಕಸಬ್ ಮತ್ತು ಅಫ್ಜಲ್ ಗುರೂಗಾದ ಶಿಕ್ಷೆ ಸಾಕ್ಷಿ. ಆದ್ರೆ ಇದೆಲ್ಲದರ ಹಿಂದಿನ ವ್ಯಕ್ತಿ. ಭಾರತದ ಮೇಲೆ ಮೊದಲ ಬಾರಿಗೆ ದಾಳಿ ಮಾಡಿದ ದಾವೂದ್ ಎಲ್ಲಿದ್ದಾನೆ. ಇಷ್ಟ್‌ ದಿನಾ ಆದ್ರೂ ದಾವೂದ್ ಪೊಲೀಸರ ಕೈಗೆ ಯಾಕೆ ಸಿಕ್ಕಿಲ್ಲ ಸಿಕ್ತಿಲ್ಲ ಅನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ. ಇಂಥ ದಾವೂದ್ ಬಗ್ಗೆ ರಾಮ್ ಗೋಪಾಲ್ ವರ್ಮಾ ಮಾಡಿದ್ದ ಸಿನಿಮಾ ''ಕಂಪನಿ''.

do-you-know-shah-rukh-khan-was-actually-rgvs-initial-preference-for-company-not-ajay-devgn

''ಕಂಪನಿ''ಯಲ್ಲಿ ದಾವೂದ್ ಬೆಳೆದು ಬಂದ ಹಾದಿಯನ್ನು ಹಂತ ಹಂತವಾಗಿ ಹೇಳಿದ್ದ ಆರ್.ಜಿ.ವಿ ದಾವೂದ್ ಪಾತ್ರಕ್ಕೆ ಇಲ್ಲಿ ಅಜಯ್ ದೇವಗನ್‌ರನ್ನ ಕಾಸ್ಟ್ ಮಾಡಿಕೊಂಡಿದ್ದರು. ಛೋಟಾ ಶಕೀಲ್ ಕೂಡ ದಾವೂದ್ ಜೊತೆ ಸೇರಿ ತನ್ನ ದರ್ಬಾರನ್ನ ಹೇಗೆ ನಡೆಸ್ದ ಅನ್ನೋದನ್ನು ರಾಮು ಹೇಳಿದ್ದರು. ವಿವೇಕ್ ಓಬೆರಾಯ್ ಶಕೀಲ್‌ನ ರೋಲ್ ಇಲ್ಲಿ ನಿರ್ವಹಿಸಿದ್ದರು. ಬಿಟೌನ್‌ಗೆ ಹೊಸದಾಗಿದ್ದ ಭೂಗತ ಲೋಕದ ಕಥೆಯನ್ನು ಹೊಸತನದಿಂದ ಹೇಳಿದ್ದ ವರ್ಮಾ, ''ಕಂಪನಿ''ಗೆ ಪ್ರೇಕ್ಷಕರೆಲ್ಲ ತಮ್ಮ ತಮ್ಮ ಕಂಪ್ಯಾನಿಯನ್‌ಗಳ ಜೊತೆ ಬರೋ ಹಂಗೆ ಮಾಡಿದ್ರು.

ಆದರೆ ಕ್ರಿಟಿಕಲಿ ಮತ್ತು ಕಮರ್ಷಿಯಲಿ ಗೆದ್ದ ಈ ''ಕಂಪನಿ''ಯಲ್ಲಿ ಅಜಯ್ ದೇವಗನ್ ನಿರ್ವಹಿಸಿದ್ದ ಮಲ್ಲಿಕ್ ಪಾತ್ರಕ್ಕೆ ಶಾರುಖ್ ಖಾನ್ ಬಣ್ಣ ಹಚ್ಚಬೇಕಿತ್ತು. ವಿವೇಕ್ ಓಬೆರಾಯ್ ಮಾಡಿದ್ದ ಚಂದು ಪಾತ್ರವನ್ನುಅಭಿಷೇಕ್ ಬಚ್ಚನ್ ಮಾಡಬೇಕಿತ್ತು ಎಂಬ ವಿಚಾರ ನಿಮಗೆ ಗೊತ್ತಾ..? ಖುದ್ದು ರಾಮ್ ಗೋಪಾಲ್ ವರ್ಮಾ ತಮ್ಮ ಯೂಟ್ಯೂಬ್‌ನಲ್ಲಿ ಈ ವಿಚಾರ ಹಂಚಿಕೊಂಡಿದ್ದಾರೆ.
ಚಿತ್ರಕ್ಕೆ ಅಜಯ್ ದೇವಗನ್ ಬದಲು ಶಾರುಖ್ ಖಾನ್ ನನ್ನ ಮೊದಲ ಆಯ್ಕೆಯಾಗಿದ್ದರು ಎಂದು ಹೇಳಿದ್ದಾರೆ.

do-you-know-shah-rukh-khan-was-actually-rgvs-initial-preference-for-company-not-ajay-devgn

''ಕಂಪನಿ'' ಮಾಡುವ ಸಮಯದಲ್ಲಿ ಒಮ್ಮೆ ನಾನು ಶಾರುಖ್ ಖಾನ್ ಅವರನ್ನ ಭೇಟಿ ಮಾಡಿದ್ದೆ, ಅವರು ಕೂಡ ಸಿಕ್ಕಾಪಟ್ಟೆ ಉತ್ಸುಕರಾಗಿದ್ದರು ಆದರೆ ಆ ನಂತರ ಅವರ ಹಾವ-ಭಾವ-ಮಾತನಾಡುವ ಶೈಲಿ ಎಲ್ಲದಕ್ಕಿಂತ ಹೆಚ್ಚಾಗಿ ಆ ಕಾಲಕ್ಕೆ ಅವರಿಗೆ ಇದ್ದ ಮಾರ್ಕೆಟ್ ಮತ್ತು ಸ್ಟಾರ್‌ಡಂ, ಅಭಿಮಾನಿಗಳು ಶಾರುಖ್ ಖಾನ್ ಅವರನ್ನು ನೋಡುವ ರೀತಿ ಇವೆಲ್ಲವೂ ನನಗೆ ಅಡ್ಡಿಯಾದವು ಅಂದಿದ್ದಾರೆ ರಾಮ್ ಗೋಪಾಲ್ ವರ್ಮಾ.

ನನಗೆ ಆಗ ಮಾಸ್ ಸ್ಟಾರ್ ಬದಲು ಕಣ್ಣಲ್ಲಿ ಮಾತನಾಡುವ ಕಲೆ ಹೊಂದಿರುವ ನಾಯಕ ಬೇಕಿದ್ದ, ಹೀಗಾಗಿ ಶಾರುಖ್ ಖಾನ್ ಅವರನ್ನು ಭೇಟಿಯಾದ ಮೇಲೆ ನನಗೆ ಮಲ್ಲಿಕ್ ಪಾತ್ರಕ್ಕೆ ಶಾರುಖ್ ಸೂಕ್ತವಾಗಲ್ಲ ಎಂದು ಮನವರಿಕೆ ಆಯಿತು ಎಂದಿರುವ ರಾಮ್ ಗೋಪಾಲ್ ವರ್ಮಾ, ''ಕಂಪನಿ'' ಚಿತ್ರಕ್ಕೋಸ್ಕರ ಕೇವಲ ಒಂದು ಬಾರಿಯಷ್ಟೇ ನಾನು ಶಾರುಖ್ ಖಾನ್ ಅವರನ್ನು ಭೇಟಿಯಾಗಿದ್ದೇ ಎಂದಿದ್ದಾರೆ.

do-you-know-shah-rukh-khan-was-actually-rgvs-initial-preference-for-company-not-ajay-devgn

ಇನ್ನೂ ಮುಂದುವರೆದು ಮಾತನಾಡಿರುವ ರಾಮ್ ಗೋಪಾಲ್ ವರ್ಮಾ, ವಿವೇಕ್ ಓಬೆರಾಯ್ ಮಾಡಿದ್ದ ಪಾತ್ರವನ್ನ ಅಭಿಷೇಕ್ ಬಚ್ಚನ್ ಅವರಿಂದ ಮಾಡಿಸಬೇಕು ಎಂದು ನಾನು ಪ್ರಾರಂಭದಲ್ಲಿ ಅಂದುಕೊಂಡಿದ್ದೆ ಎಂದು ಕೂಡ ಹೇಳಿದ್ದಾರೆ. ಆದರೆ ಆಗ ಅಭಿಷೇಕ್ ಬಚ್ಚನ್ ಅವರು ಬೇರೆ ಬೇರೆ ಚಿತ್ರಗಳಲ್ಲಿ ಬ್ಯುಸಿಯಾಗಿದ್ದ ಕಾರಣ ಅದು ಸಾಧ್ಯವಾಗಲಿಲ್ಲ ಎಂದಿರುವ ಆರ್.ಜಿ.ವಿ ಚಿತ್ರದಲ್ಲಿ ಮೋಹನ್ ಲಾಲ್ ಮಾಡಿದ್ದ ಪಾತ್ರಕ್ಕೆ ಮೊದಲು ಕಮಲ್ ಹಾಸನ್ ನನ್ನ ಆಯ್ಕೆಯಾಗಿದ್ದರು, ಆದರೆ ಕಮಲ್ ಹಾಸನ್ ಅವರ ವಿಚಾರದಲ್ಲಿ ಕೂಡ ಶಾರುಖ್ ಖಾನ್ ವಿಚಾರದಲ್ಲಿ ಎದುರಾದ ಸಮಸ್ಯೆಯೇ ಎದುರಾಯಿತು, ಆ ಪಾತ್ರದಲ್ಲಿ ಕಮಲ್ ಹಾಸನ್ ಅವರನ್ನು ಪ್ರೇಕ್ಷಕರು ಸ್ವೀಕರಿಸುತ್ತಾರಾ ಅನ್ನುವ ಪ್ರಶ್ನೆ ಮೂಡಿತು. ಹೀಗಾಗಿಯೇ ಪ್ರಯೋಗ ಮಾಡುವುದು ಬೇಡ ಎಂದು ನಿರ್ಧರಿಸಿ ಕೊನೆಗೆ ಮೋಹನ್‌ ಲಾಲ್ ಅವರನ್ನು ಸಂಪರ್ಕ ಮಾಡಿದೆ ಎಂದು ಕೂಡ ಹೇಳಿದ್ದಾರೆ ರಾಮ್ ಗೋಪಾಲ್ ವರ್ಮಾ.

More from Filmibeat

Read more about: rgv srk ಬಾಲಿವುಡ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X