twitter
    For Quick Alerts
    ALLOW NOTIFICATIONS  
    For Daily Alerts

    ಈವರೆಗೆ ಆಸ್ಕರ್ ಪ್ರಶಸ್ತಿ ಪಡೆದ ಭಾರತೀಯರು ಯಾರ್ಯಾರು?

    |

    ಎಲ್ಲೆಲ್ಲೂ ಈಗ ಆಸ್ಕರ್ ಅವಾರ್ಡ್ ಬಗ್ಗೆನೇ ಚರ್ಚೆ ನಡೀತಿದೆ. ಸೂಪರ್ ಹಿಟ್ 'RRR' ಹಾಗೂ 'ಕಾಶ್ಮೀರಿ ಫೈಲ್ಸ್' ಸಿನಿಮಾಗಳು 2023ರ ಆಸ್ಕರ್‌ಗೆ ನಾಮಿನೇಟ್ ಆಗುತ್ತೆ ಅಂತಲೇ ಎಲ್ಲರೂ ಅಂದುಕೊಂಡಿದ್ದರು. ಈ ಬಗ್ಗೆ ಬಹಳ ದಿನಗಳಿಂದ ಚರ್ಚೆ ನಡೀತಾನೆ ಇತ್ತು. ಆದರೆ ಎಲ್ಲರೂ ಲೆಕ್ಕಚಾರ ತಲೆಕೆಳಗಾಗಿ ಗುಜರಾತಿ ಭಾಷೆಯ ಚಿತ್ರ 'ಚೆಲೋ ಶೋ' ಸಿನಿಮಾ 95ನೇ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಅಧಿಕೃತವಾಗಿ ನಾಮ ನಿರ್ದೇಶನಗೊಂಡಿದೆ. ಇತಿಹಾಸವನ್ನು ಒಮ್ಮೆ ನೋಡಿದರೆ ಭಾರತದ ಕೇವಲ 5 ಜನ ಮಾತ್ರ ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

    ಆಸ್ಕರ್ ಪ್ರಶಸ್ತಿ ಗೆಲ್ಲೋದು ಅಷ್ಟು ಸುಲಭ ಅಲ್ಲ. ಭಾರತದಿಂದ ಕೇವಲ 3 ಸಿನಿಮಾಗಳು ಮಾತ್ರ ಈವರೆಗೆ ಆಸ್ಕರ್‌ಗೆ ನಾಮಿನೇಟ್ ಆಗಿತ್ತು. 1957ರಲ್ಲಿ ಮೊದಲಬಾರಿಗೆ 'ಮದರ್ ಇಂಡಿಯಾ' ಸಿನಿಮಾ ಆಸ್ಕರ್‌ಗೆ ನಾಮಿನೇಷನ್‌ ಆಗಿ ಹೋಗಿತ್ತು. ಆದರೆ ಪ್ರಶಸ್ತಿ ಧಕ್ಕಿರಲಿಲ್ಲ. 1988ರಲ್ಲಿ 'ಸಲಾಂ ಬಾಂಬೆ' ಹಾಗೂ 2001ರಲ್ಲಿ ಆಮಿರ್ ಖಾನ್ ನಟನೆಯ 'ಲಗಾನ್' ಸಿನಿಮಾಗಳು ಕೂಡ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಮೂಡಿಸಿದ್ದವು. ಆದರೆ ಅದು ಸಾಧ್ಯವಾಗಿರಲಿಲ್ಲ. ಆಸ್ಕರ್ ಪ್ರಶಸ್ತಿಯನ್ನು ಮೊದಲಬಾರಿಗೆ ಭಾರತಕ್ಕೆ ತಂದವರು ಕಾಸ್ಟ್ಯೂಮ್ ಡಿಸೈನರ್ ಭಾನು ಅಥೈಯಾ.

    ಗುಜರಾತಿ ಸಿನಿಮಾ 'ಚೆಲ್ಲೋ ಶೋ' ಭಾರತದಿಂದ ಅಧಿಕೃತ ಆಸ್ಕರ್ ಎಂಟ್ರಿ:RRR, ಕಾಶ್ಮೀರ್ ಫೈಲ್ಸ್ ಗತಿಯೇನು?ಗುಜರಾತಿ ಸಿನಿಮಾ 'ಚೆಲ್ಲೋ ಶೋ' ಭಾರತದಿಂದ ಅಧಿಕೃತ ಆಸ್ಕರ್ ಎಂಟ್ರಿ:RRR, ಕಾಶ್ಮೀರ್ ಫೈಲ್ಸ್ ಗತಿಯೇನು?

    ಇದುವರೆಗೂ ಭಾರತದ ಚಿತ್ರವೊಂದು ಆಸ್ಕರ್ ಪ್ರಶಸ್ತಿ ಗೆದ್ದಿಲ್ಲ. ಆದರೆ ಕೆಲವರು ಭಾರತ ಹೆಮ್ಮೆಪಡುವಂತಹ ಸಾಧನೆ ಮಾಡಿದ್ದಾರೆ. ಭಾನು ಅಥೈಯಾ ಅವರಿಂದ ಹಿಡಿದು ಎ.ಆರ್‌ ರೆಹಮಾನ್‌ವರೆಗೆ ಕೆಲ ಭಾರತೀಯರು ಆಸ್ಕರ್ ಟ್ರೋಫಿ ಎತ್ತಿ ಹಿಡಿದಿದ್ದಾರೆ.

     ಸತ್ಯಜಿತ್ ರೇಗೆ ಜೀವಮಾನ ಸಾಧನೆಗೆ ಪ್ರಶಸ್ತಿ

    ಸತ್ಯಜಿತ್ ರೇಗೆ ಜೀವಮಾನ ಸಾಧನೆಗೆ ಪ್ರಶಸ್ತಿ

    ವಿಶ್ವ ಚಿತ್ರರಂಗ ಕಂಡ ಮಹಾನ್ ಸಿನಿಕರ್ಮಿ ಸತ್ಯಜಿತ್ ರೇ. ನಿರ್ದೇಶಕರಾಗಿ, ನಿರ್ಮಾಪಕರಾಗಿ ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾತ. ಅಂತರಾಷ್ಟ್ರೀಯಮಟ್ಟದ ಸಿನಿಮಾಗಳನ್ನು ನಿರ್ದೇಶಿಸಿದ ಸತ್ಯಜಿತ್ ರೇ ಅವರ ಯಾವುದೇ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಸಿಗದೇ ಹೋಗಿದ್ದು ವಿಪರ್ಯಾಸ. 1992ರಲ್ಲಿ ಅವರಿಗೆ ಆಸ್ಕರ್ ಅಕಾಡೆಮಿ ಪ್ರಶಸ್ತಿ ಸಮಿತಿಯು ಜೀವಮಾನದ ಸಾಧನೆಗಾಗಿ ಪುರಸ್ಕರಿಸಿತ್ತು.

    ಆಸ್ಕರ್‌ಗೆ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಕಳಿಸಿ: ಟ್ವಿಟರ್‌ನಲ್ಲಿ ಗಂಭೀರ ಚರ್ಚೆ!ಆಸ್ಕರ್‌ಗೆ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಕಳಿಸಿ: ಟ್ವಿಟರ್‌ನಲ್ಲಿ ಗಂಭೀರ ಚರ್ಚೆ!

     ಸತ್ಯಜಿತ್ ರೇಗೆ ಜೀವಮಾನ ಸಾಧನೆಗೆ ಪ್ರಶಸ್ತಿ

    ಸತ್ಯಜಿತ್ ರೇಗೆ ಜೀವಮಾನ ಸಾಧನೆಗೆ ಪ್ರಶಸ್ತಿ

    ವಿಶ್ವ ಚಿತ್ರರಂಗ ಕಂಡ ಮಹಾನ್ ಸಿನಿಕರ್ಮಿ ಸತ್ಯಜಿತ್ ರೇ. ನಿರ್ದೇಶಕರಾಗಿ, ನಿರ್ಮಾಪಕರಾಗಿ ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾತ. ಅಂತರಾಷ್ಟ್ರೀಯಮಟ್ಟದ ಸಿನಿಮಾಗಳನ್ನು ನಿರ್ದೇಶಿಸಿದ ಸತ್ಯಜಿತ್ ರೇ ಅವರ ಯಾವುದೇ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಸಿಗದೇ ಹೋಗಿದ್ದು ವಿಪರ್ಯಾಸ. 1992ರಲ್ಲಿ ಅವರಿಗೆ ಆಸ್ಕರ್ ಅಕಾಡೆಮಿ ಪ್ರಶಸ್ತಿ ಸಮಿತಿಯು ಜೀವಮಾನದ ಸಾಧನೆಗಾಗಿ ಪುರಸ್ಕರಿಸಿತ್ತು.

     ಒಂದೇ ಚಿತ್ರಕ್ಕೆ 2 ಆಸ್ಕರ್ ಪಡೆದ ರೆಹಮಾನ್

    ಒಂದೇ ಚಿತ್ರಕ್ಕೆ 2 ಆಸ್ಕರ್ ಪಡೆದ ರೆಹಮಾನ್

    81ನೇ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ 'ಸ್ಲಮ್ ಡಾಗ್ ಮಿಲೇನಿಯರ್' ಚಿತ್ರಕ್ಕಾಗಿ ಎ. ಆರ್ ರೆಹಮಾನ್ ಆಸ್ಕರ್ ಪ್ರಶಸ್ತಿ ಪಡೆದುಕೊಂಡಿದ್ದು ವಿಶೇಷ. ಚಿತ್ರದ ಅತ್ಯುತ್ತಮ ಸಂಗೀತ (ಒರಿಜಿನಲ್ ಸ್ಕೋರ್) ಹಾಗೂ 'ಜೈ ಹೋ' ಹಾಡಿನ ಸಂಗೀತಕ್ಕಾಗಿ ಎ.ಆರ್. ರೆಹಮಾನ್ ಒಟ್ಟು 2 ಪ್ರಶಸ್ತಿ ಮುಡಿಗೇರಿಸಿಕೊಂಡು ದಾಖಲೆ ಬರೆದಿದ್ದರು.

    ಆಸ್ಕರ್ ಹಾದಿಯಲ್ಲಿ 'RRR': ರಾಜಮೌಳಿ ಹೇಳಿದ್ದು ಹೀಗೆಆಸ್ಕರ್ ಹಾದಿಯಲ್ಲಿ 'RRR': ರಾಜಮೌಳಿ ಹೇಳಿದ್ದು ಹೀಗೆ

     ರಸೂಲ್ ಪೂಕುಟ್ಟಿ, ಗುಲ್ಜಾರ್‌ಗೂ ಪ್ರಶಸ್ತಿ

    ರಸೂಲ್ ಪೂಕುಟ್ಟಿ, ಗುಲ್ಜಾರ್‌ಗೂ ಪ್ರಶಸ್ತಿ

    'ಸ್ಲಮ್ ಡಾಗ್ ಮಿಲೇನಿಯರ್' ಸಿನಿಮಾ ಒಟ್ಟು 8 ವಿಭಾಗಳಲ್ಲಿ ಆಸ್ಕರ್ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಚಿತ್ರದ ಅತ್ಯುತ್ತಮ ಧ್ವನಿ ಮಿಶ್ರಣಕ್ಕಾಗಿ ಕೇರಳದ ರಸೂಲ್ ಪೂಕುಟ್ಟಿ ಪ್ರಶಸ್ತಿ ಪಡೆದರು. ಇಯಾನ್ ಟ್ಯಾಪ್ ಮತ್ತು ರಿಚರ್ಡ್ ಪ್ರೈಕ್ ಅವರೊಂದಿಗೆ ರಸೂಲ್ ಗೌರವವನ್ನು ಹಂಚಿಕೊಂಡಿದ್ದರು. 'ಜೈಹೋ' ಹಾಡಿನ ಸಾಹಿತ್ಯಕ್ಕಾಗಿ ಖ್ಯಾತ ಸಾಹಿತಿ ಗುಲ್ಜಾರ್ ಆಸ್ಕರ್ ಅಕಾಡೆಮಿ ಪ್ರಶಸ್ತಿ ಗಳಿಸಿದ್ದರು.

    English summary
    Do you Know the 5 Indians who won the oscar Awards. Till date, there are 5 Indian in the list of Oscars winners. Know More.
    Wednesday, September 21, 2022, 14:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X