ಹೇಗಿದ್ದ ನಿಖಿತಾ ತುಕ್ರಾಲ್ ಈಗ ಹೇಗಿದ್ದಾರೆ ಗೊತ್ತಾ?

By ಫಿಲ್ಮಿಬೀಟ್ ಡೆಸ್ಕ್

ಪರಭಾಷಾ ನಟಿಯರು ಕನ್ನಡ ಸಿನಿಮಾಗಳಲ್ಲಿ ಮಿಂಚುವುದು ಹೊಸದೇನು ಅಲ್ಲ. ದಶಕಗಳಿಂದ ಈ ಪರಿಪಾಠ ನಡೆದುಬಂದಿದೆ. ಮುಂಬೈ ಬೆಡಗಿಯರು ಕನ್ನಡ ಸಿನಿಮಾಗಳಲ್ಲಿ ಸೊಂಟ ಬಳುಕಿಸಿದ್ದಾರೆ. ನಿಖಿತಾ ತುಕ್ರಾಲ್ ಸಹ ಕನ್ನಡ ಒಂದಷ್ಟು ಸಿನಿಮಾಗಳಲ್ಲಿ ಮಿಂಚಿ ಸೈ ಎನಿಸಿಕೊಂಡಿದ್ದರು.

ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ದಾಂಪತ್ಯದಲ್ಲಿ ಹುಳಿ ಹಿಂಡಿದ್ದು ನಿಖಿತಾ ತುಕ್ರಾಲ್ ಎಂದು ಇತ್ತೀಚೆಗೆ ನಿರ್ದೇಶಕ ಓಂ ಪ್ರಕಾಶ್ ರಾವ್ ಹೇಳಿದ್ದರು. ಬೆರಳೆಣಿಯೆಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿದರೂ ಸ್ಯಾಂಡಲ್‌ವುಡ್‌ನಲ್ಲಿ ನಿಖಿತಾ ಕ್ರೇಜ್ ಸೃಷ್ಟಿಸಿಕೊಂಡಿದ್ದರು. ನಟ ದರ್ಶನ್ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ನಿರ್ಮಾಪಕರ ಸಂಘ ನಿಖಿತಾರನ್ನು ಬ್ಯಾನ್ ಮಾಡಿತ್ತು. ಬಳಿಕ ಪಾರ್ವತಮ್ಮ ರಾಜ್‌ಕುಮಾರ್ ಮಧ್ಯಪ್ರವೇಶಿಸಿ ಈ ಬ್ಯಾನ್ ವಾಪಸ್ ಪಡೆಯುವಂತಾಗಿತ್ತು. ನಂತರ ದರ್ಶನ್ ಜೊತೆ 'ಸಂಗೊಳ್ಳಿ ರಾಯಣ್ಣ' ಚಿತ್ರದಲ್ಲಿ ನಟಿಸಿದ್ದರು.

Do you remember Actress Nikita Thukral This is How She Looks Now

ಮುಂಬೈ ಬೆಡಗಿ ನಿಖಿತಾ ತುಕ್ರಾಲ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು ಆಕೆಗೆ ಶುಭಾಶಯ ಕೋರುತ್ತಿದ್ದಾರೆ. ಸದ್ಯ ಆಕೆ ಮದುವೆ ಆಗಿ ಪತಿ ಹಾಗೂ ಮಗಳ ಜೊತೆ ಜೀವನ ಸಾಗಿಸುತ್ತಿದ್ದಾರೆ. 2018ರಲ್ಲಿ ಬಂದ ಕನ್ನಡದ 'ರಾಜಸಿಂಹ' ಚಿತ್ರದಲ್ಲಿ ಆಕೆ ಕೊನೆಯದಾಗಿ ನಟಿಸಿದ್ದರು. ಆ ಬಳಿಕ ಮತ್ತೆ ಬಣ್ಣ ಹಚ್ಚಲಿಲ್ಲ. ಆದರೆ ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್ ಆಕ್ಟೀವ್ ಆಗಿದ್ದು ಆಗಾಗ್ಗೆ ಫೋಟೊ, ವೀಡಿಯೋ ಶೇರ್ ಮಾಡುತ್ತಿರುತ್ತಾರೆ.

1995ರಲ್ಲಿ ಬಾಲನಟಿಯಾಗಿ ನಿಖಿತಾ ಮೊದಲಿಗೆ ಬಣ್ಣ ಹಚ್ಚಿದ್ದರು. ಬಳಿಕ ಅರ್ಥಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಒಮ್ಮೆ ಹೋಟೆಲ್‌ವೊಂದರಲ್ಲಿ ತೆಲುಗು ನಿರ್ಮಾಪಕ ರಾಮಾನಾಯ್ಡು ಕಣ್ಣಿಗೆ ಬಿದ್ದು 'ಹಾಯ್' ಎನ್ನುವ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದರು. ಬಳಿಕ ತೆಲುಗು, ತಮಿಳಿನ ಸಾಲು ಸಾಲು ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದರು. ಕನ್ನಡದಲ್ಲಿ ಸುದೀಪ್ ಜೋಡಿಯಾಗಿ ಮೊದಲಿಗೆ 'ಮಹಾರಾಜ' ಚಿತ್ರದಲ್ಲಿ ಮಿಂಚಿದರು.

Do you remember Actress Nikita Thukral This is How She Looks Now

ಬಳಿಕ 'ನೀ ಟಾಟ ನಾ ಬಿರ್ಲಾ', 'ವಂಶಿ', 'ರಾಜಕುಮಾರಿ' ಸಿನಿಮಾಗಳಲ್ಲಿ ನಟಿಸಿದರು. ಅದೇ ಸಮಯದಲ್ಲಿ ದರ್ಶನ್ ನಟನೆಯ 'ಯೋಧ' ಚಿತ್ರಕ್ಕೆ ದರ್ಶನ್ ನಾಯಕಿಯಾಗಿ ಆಯ್ಕೆ ಆಗಿದ್ದರು. ಅದೇ ಸಮಯದಲ್ಲಿ ಇಬ್ಬರ ನಡುವೆ ಅಫೇರ್ ಶುರುವಾಗಿತ್ತು. ಮುಂದೆ ಓಂಪ್ರಕಾಶ್ ರಾವ್ ನಿರ್ದೇಶನದಲ್ಲಿ ದರ್ಶನ್ 'ಪ್ರಿನ್ಸ್' ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರಕ್ಕೂ ನಿಖಿತಾ ನಾಯಕಿಯಾಗಿದ್ದರು. 'ಸಂಗೊಳ್ಳಿ ರಾಯಣ್ಣ' ಬಳಿಕ ಆಕೆ ದರ್ಶನ್ ಜೊತೆ ಮತ್ತೆ ನಟಿಸಲಿಲ್ಲ.

ಬಿಗ್‌ಬಾಸ್ ಕನ್ನಡ ಸೀಸನ್-1 ಸ್ಪರ್ಧಿಯಾಗಿ ನಿಖಿತಾ ತುಕ್ರಾಲ್ ದೊಡ್ಮನೆ ಒಳಗೆ ಹೋಗಿ ಬಂದಿದ್ದರು. ಬಳಿಕ ಆಕೆ ಸ್ಯಾಂಡಲ್‌ವುಡ್ ಕಡೆ ಮುಖ ಮಾಡಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಆಕೆ ಏನೇ ಪೋಸ್ಟ್ ಮಾಡಿದರು ಕೆಲವರು ಟ್ರೋಲ್ ಮಾಡುವುದು ನಿಲ್ಲಲಿಲ್ಲ. ಇನ್ನು ನಿಖಿತಾ ಏನೇ ಪೋಸ್ಟ್ ಮಾಡಿದ್ರು ಜೈ ಡಿ ಬಾಸ್ ಎಂದು ಕಾಮೆಂಟ್ ಮಾಡುವವರು ಇದ್ದಾರೆ.

'ಖುಷಿ ಖುಷಿಗಾ', ಎವಂಡೋಯ್ ಶ್ರೀವಾರು, ಡಾನ್, 'ಸರೋಜಾ', 'ಅವುನು-2', 'ಟ್ರಾಫಿಕ್', 'ಮುರನ್' ಆಕೆ ನಟಿಸಿದ ಕೆಲ ಪರಭಾಷಾ ಸಿನಿಮಾಗಳು. ನಿಖಿತಾ ಹೆಚ್ಚು ಕನ್ನಡ ಸಿನಿಮಾಗಳಲ್ಲೇ ನಟಿಸಿದ್ದರು. 'ಸಾಫ್‌ವೇರ್ ಗಂಡ', 'ರಿಂಗ್‌ರೋಡ್', 'ಮುಕುಂದ ಮುರಾರಿ' ಆಕೆ ನಟಿಸಿದ ಮತ್ತಷ್ಟು ಕನ್ನಡ ಚಿತ್ರಗಳು.

More from Filmibeat

English summary
Why Nikita Thukral exit from film industry?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X