ಶಿವಣ್ಣನ ಮಗಳು ನಿರೂಪಮಾ ಜೊತೆಗಿನ ಲವ್ ಸ್ಟೋರಿ, ಮ್ಯಾರೇಜ್ ಸ್ಟೋರಿ ಬಿಚ್ಚಿಟ್ಟ ಡಾ. ದಿಲೀಪ್

11 ವರ್ಷಗಳ ಹಿಂದೆ ನಟ ಶಿವರಾಜ್ ಕುಮಾರ್ ಮಗಳು ಡಾ.ನಿರುಪಮ ಹಾಗೂ ಗೆಳೆಯ ಡಾ. ದಿಲೀಪ್ ಮದುವೆ ನಡೆದಿತ್ತು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಹಳ ಮದುವೆ ಸಂಭ್ರಮ ಕಳೆಕಟ್ಟಿತ್ತು. ಮೈಸೂರಿನಲ್ಲಿ ಓದುತ್ತಿದ್ದಾಗಲೇ ನಿರುಪಮಾ ಹಾಗೂ ದಿಲೀಪ್ ಸ್ನೇಹಿತರಾಗಿದ್ದರು. ಬಳಿಕ ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು ಮದುವೆ ಆಗಿದ್ದರು.

ಇದೇ ಮೊದಲ ಬಾರಿಗೆ ಡಾ. ದಿಲೀಪ್ ತಮ್ಮ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ. ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನಲ್ ಪಾಡ್‌ಕಾಸ್ಟ್‌ನಲ್ಲಿ ಅವರು ಮಾತನಾಡಿದ್ದಾರೆ. ಸಂದರ್ಶನದ ವೇಳೆ ಸಾಕಷ್ಟು ವಿಚಾರಗಳನ್ನು ದಿಲೀಪ್ ಹಂಚಿಕೊಂಡಿದ್ದಾರೆ. ತಮ್ಮ ಓದು, ವೃತ್ತಿ, ಮದುವೆ, ಪತ್ನಿ ನಿರುಪಮಾ ಆರೋಗ್ಯ, ಮಾವ ಶಿವರಾಜ್‌ಕುಮಾರ್ ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ಸಾಕಷ್ಟು ಸಂಗತಿ ಹಂಚಿಕೊಂಡಿದ್ದಾರೆ. ವೈದ್ಯರು ಆಗಿರುವುದರಿಂದ ಆರೋಗ್ಯದ ಬಗ್ಗೆ ಜನರಿಗೆ ಒಂದಷ್ಟು ಸಲಹೆಗಳನ್ನು ಕೊಟ್ಟಿದ್ದಾರೆ.

Dr Dileep Opens Up About His Love Story With Shivarajkumar s Daughter Nirupama

"ನಿರೂಪಮಾ ಬಹಳ ಬ್ರೈಟ್ ಸ್ಟೂಡೆಂಟ್.. ನಾನು ಓದಿನಲ್ಲಿ ಸ್ವಲ್ಪ ಹಿಂದೆ ಉಳಿದಿದ್ದೆ. ಆದರೆ ಆಕೆ ಬಹಳ ಪ್ರತಿಭಾನ್ವಿತೆ . ಒಂದು ಬುಕ್ ಕೊಟ್ಟು ರೆಪ್ಲಿಕೇಟ್ ಮಾಡು ಅಂದ್ರೆ ಬಹಳ ಚೆನ್ನಾಗಿ ಮಾಡ್ತಿದ್ಲು. ಅಷ್ಟು ಕೆಪಾಸಿಟಿ ಇತ್ತು. ಹಾಗೆ ಶುರುವಾಯಿತು. ನಾನು ಓದುತ್ತಿರಲಿಲ್ಲ. ಹಾಗಾಗಿ ಡೌಟ್ಸ್ ಬರ್ತಿರ್ಲಿಲ್ಲ.. ಆಕೆ ನಾನು ಓದಲು ಬಹಳ ಸಹಾಯ ಮಾಡಿದ್ಲು. ಫೈನಲ್ ಇಯರ್‌ವರೆಗೆ ಆಕೆಯ ಸ್ಟಡೀ ಮೆಟೀರಿಯಲ್, ನನ್ನ ಟೆಕ್ಸ್ಟ್ ಬುಕ್ ಆಗಿತ್ತು. ಶಿವಣ್ಣನ ಮಗಳು ಎನ್ನುವ ಕಾರಣಕ್ಕೆ ಮೊದಲಿಗೆ ಭಯ ಇತ್ತು" ಎಂದು ದಿಲೀಪ್ ಹೇಳಿದ್ದಾರೆ.

ನಾನು ನಿರೂಪಮಾಗೆ ಒಳ್ಳೆ ಲೈಫ್ ಕೊಡೋಕೆ ಸಾಧ್ಯನಾ? ಎನ್ನುವ ಅಳುಕಿತ್ತು. ಭಯ ಇತ್ತು ಎಂದು ದಿಲೀಪ್ ನೆನಪಿಸಿಕೊಂಡಿದ್ದಾರೆ. "ಇವತ್ತಿಗೂ ಆ ಭಯ ಇದೆ. ಎಂಎಸ್‌ ಸೆಕೆಂಡ್ ಇಯರ್ ಇದ್ದಾಗ ಮದುವೆ ವಿಚಾರ ಮನೆಗಳಲ್ಲಿ ಗೊತ್ತಾಗಿತ್ತು. ಫೈನಲ್ ಇಯರ್ ಮುಗಿದ ಬಳಿಕ ಮದುವೆ ಆಯ್ತು.. ಶಿವಣ್ಣ ಅವರಿಗೆ ಪ್ರೀತಿ ವಿಚಾರ ಗೊತ್ತಾಗಿ ಮದುವೆ ಆಗುವುದು ಸ್ವಲ್ಪ ಕಷ್ಟ ಅಂದುಕೊಂಡಿದ್ದೆ. ಆದರೆ ಅಷ್ಟು ಕಷ್ಟ ಆಗಲಿಲ್ಲ. ಅವ್ರು ಎಲ್ಲಾ ಸುಸೂತ್ರವಾಗಿ ನಡೆಯುವಂತೆ ಮಾಡಿದ್ರು. ಎಲ್ಲಾ ಗೊತ್ತಾಗುವ ಮುನ್ನ ಎಲ್ಲಾ ಮುಗೀತು. ಒಂದೇ ವಾರದಲ್ಲಿ ಮೈಸೂರಿಗೆ ಬಂದ್ರು. 6 ತಿಂಗಳಲ್ಲಿ ಮದುವೆ ಆಯ್ತು" ಎಂದಿದ್ದಾರೆ.

ಮಾವ ಶಿವಣ್ಣನ ಬಗ್ಗೆ ಅಳಿಯ ಡಾ. ದಿಲೀಪ್ ಮಾತನಾಡಿ "ಶಿವಣ್ಣ ಅವರೊಟ್ಟಿಗೆ ಕಂಫರ್ಟ್‌ನೆಸ್‌ ಚೆನ್ನಾಗಿದೆ. ಯಾವುದೇ ವಿಚಾರ ಆಗಿದ್ರು, ನೇರವಾಗಿ ಹೋಗಿ ಹೇಳಿಕೊಳ್ಳಬಹುದು. ಅಂಕಲ್ ಅಂತ ಅವ್ರನ್ನ ಕರೀತಿನಿ, ಮನೆ ವಿಚಾರ ಬಿಟ್ಟು ಬೇರೆ ಏನೂ ಮಾತಾಡಲ್ಲ. ಎಷ್ಟು ಮಾತನಾಡಬೇಕೋ ಅಷ್ಟು ಮಾತನಾಡ್ತೀನಿ. ಗೊತ್ತಿಲ್ಲದ ವಿಚಾರಗಳ ಬಗ್ಗೆ ಮಾತನಾಡಲು ಹೋಗಲ್ಲ" ಎಂದು ದಿಲೀಪ್ ವಿವರಿಸಿದ್ದಾರೆ.

ಮಧ್ಯಮವರ್ಗದ ಕುಟುಂಬದಿಂದ ಬಂದವರು ದಿಲೀಪ್. ಸಿನಿಮಾ ಹಿನ್ನೆಲೆ ಇರುವ ಕುಟುಂಬಕ್ಕೆ ಅಳಿಯನಾಗಿ ಹೋಗಿದ್ದಾರೆ. "ಅಪ್ಪು ಸರ್‌ನ ಅವರ ಮನೆಯಲ್ಲೇ ಮೊದಲ ಬಾರಿ ಭೇಟಿ ಮಾಡಿದ್ದೆ. ಒಮ್ಮೆ ಮನೆಯಲ್ಲಿ ಡಿನ್ನರ್ ಇಟ್ಟುಕೊಂಡಿದ್ದರು. ಅಲ್ಲೇ ಅಣ್ಣಾವ್ರ ಮನೆ ಸದಸ್ಯರ ಪರಿಚಯ ಆಗಿತ್ತು. ನೆಮ್ಮದಿಯಾಗಿ ಇರಬೇಕು, ಬೇಡದನ್ನು ನೆನಪಿಸಿಕೊಳ್ಳಬಾರದು, ಮರೆತು ಮುಂದೆ ಹೋಗಬೇಕು. ಪತ್ನಿಯ ಆರೋಗ್ಯ ವಿಚಾರದಲ್ಲಿ ಕೂಡ ಹೆಚ್ಚು ನೆನಪಿಸಿಕೊಳ್ಳಲು ಹೋಗಲ್ಲ. ಬೇಡದ್ದನ್ನು ನೆನಪಿಸಿಕೊಳ್ಳುವುದು ಬೇಡ" ಎಂದು ದಿಲೀಪ್ ಹೇಳಿದ್ದಾರೆ.

ಕಳೆದ 5 ವರ್ಷಗಳಿಂದ ಶಿವಣ್ಣನ ಮನೆಯಲ್ಲೇ ಇದ್ದೀವಿ. ಬೆಳಗ್ಗೆ 6.30ಕ್ಕೆ ಹಾಸಿಗೆಯಿಂದ ಏಳುತ್ತೇನೆ. ಅತ್ತೆ ಎರಡ್ಮೂರು ತರ ತಿಂಡಿ ಸಿದ್ಧಪಡಿಸಿರ್ತಾರೆ. ನಿರೂಪಮಾ ಜೊತೆ ಕೊಂಚ ಹೊತ್ತು ಮಾತಾಡ್ತೀನಿ. ಬಳಿಕ ಕೆಲಸಕ್ಕೆ ಹೊರಡುತ್ತೇನೆ. ಕೆಲಸ ಮುಗಿದಿ ರಾತ್ರಿ 8.30ಕ್ಕೆ ವಾಪಸ್ ಬರ್ತೀನಿ. ಕೆಲವೊಮ್ಮೆ ತಡವಾಗಬಹುದು. ವೈಟ್‌ಫೀಲ್ಡ್ ಮೆಡಿಕೋವರ್ ಆಸ್ಪತ್ರೆಯಲ್ಲಿ ಸರ್ಜನ್ ಆಗಿ ಕೆಲಸ ಮಾಡುತ್ತಿರುವುದಾಗಿ ಡಾ. ದಿಲೀಪ್ ಮಾಹಿತಿ ನೀಡಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X