Puneeth Rajkumar ; ಈ ಚಿತ್ರಗಳಲ್ಲಿ ಒಟ್ಟಿಗೆ ನಟಿಸಬೇಕಿತ್ತು ಅಣ್ಣಾವ್ರ ಮಕ್ಕಳು..!
ರಾಮ- ಲಕ್ಷ್ಮಣ-ಭರತರಂತಿದ್ದರು ರಾಜ್ ಸೋದರರು. ಆದರೆ ಈ ಸೋದರರ ನಡುವಿನ ಬಂಧವನ್ನ ವಿಧಿ ಒಡೆದು ಹಾಕಿದೆ. ಈ ಮೂಲಕ ಕನಸೊಂದು ಅಪೂರ್ಣವಾಗಿಯೇ ಉಳಿದುಕೊಂಡಿದೆ. ಅಣ್ಣಾವ್ರ ಮಕ್ಕಳನ್ನ ಜೊತೇಲೀ ತೆರೆ ಮೇಲೆ ನೋಡಬೇಕೆಂಬ ಆಸೆ ಆಸೆಯಾಗಿಯೇ ಉಳಿದು ಹೋಗಿದೆ.
ಹೌದು, ನಿಮಗೆ ಗೊತ್ತಿರಲಿ.. ದಶಕದ ಹಿಂದೆ ಪಟ್ಟಾಭಿರಾಮ ಕನಸನ್ನ ಕಂಡಿದ್ದರು. ಅಣ್ಣಾವ್ರ ಕುಟುಂಬದ ಎಲ್ರನ್ನೂ ಹಾಕಿಕೊಂಡು ಅಂದ್ರೆ ಡಾ.ರಾಜ್. ಶಿವಣ್ಣ-ರಾಘಣ್ಣ ಹಾಗೂ ಪುನೀತ್ ಅವರರನ್ನ ಹಾಕಿಕೊಂಡು ಸಿನಿಮಾ ಮಾಡಬೇಕೆಂಬ ಕನಸು ಅದು. ಆ ಕನಸಿನ ಹೆಸರು ಭರತೇಶ ವೈಭವ.

ಆ ಕಾಲಕ್ಕೆ ಸಿಕ್ಕಾಪಟ್ಟೆ ಸದ್ದು ಮಾಡಿದ್ದ ಸುದ್ದಿ ಇದು. ಯಾಕಂದ್ರೇ ಎಲ್ಲವೂ ನಿಕ್ಕಿಯಾಗಿತ್ತು. ಜಾಹೀರಾತನ್ನೂ ನೀಡಿಯಾಗಿತ್ತು. ಇನ್ನೇನೂ ಚಿತ್ರ ಆರಂಭವಾಗುವದಷ್ಟೇ ಬಾಕಿ ಇತ್ತು. ಆದ್ರೇ ಅದು ಆಗಲೇ ಇಲ್ಲ. ಹಾಗಂತ ಮತ್ತೆಂದು ಪ್ರಯತ್ನ ನಡಿಲೇ ಇಲ್ಲ ಅಂತಾನೂ ಇಲ್ಲ. ಪ್ರಯತ್ನ ಅಂದಿನಿಂತ ನಿರಂತರವಾಗಿಯೇ ನಡಿತಾನೇ ಇತ್ತು.
ಇದಕ್ಕೆ ಉದಾಹರಣೆಯೆನ್ನುವಂತೆ ಕಾರ್ಪೊರೇಟ್ ಸಂಸ್ಥೆಯೊಂದು ಅಣ್ಣಾವ್ರ ಮಕ್ಕಳಿಗಾಗಿ ಸಿನಿಮಾ ಮಾಡಲು ಮುಂದೆಯೂ ಬಂದಿತ್ತು. ಈ ಮೂವರನ್ನು ಒಟ್ಟಿಗೆ ತೆರೆ ಮೇಲೆ ತರಲು ದೊಡ್ಡ ಮೊತ್ತದ ಬಂಡವಾಳ ಬೇಕಾಗಿತ್ತು ಅಷ್ಟು ಬಂಡವಾಳ ಹೂಡಲು ಆ ಕಾರ್ಪೊರೇಟ್ ಸಂಸ್ಥೆ ತಯಾರಿತ್ತು. ಆ ಕಾರ್ಪೊರೇಟ್ ಸಂಸ್ಥೆ ಪತ್ರಿಕಾಗೋಷ್ಠಿ ಕರೆದು ಸಿನಿಮಾ ಘೋಷಿಸಿತ್ತು ಕೂಡ. ಆ ಪತ್ರಿಕಾಗೋಷ್ಠಿಯಲ್ಲಿ ಶಿವಣ್ಣ, ರಾಘಣ್ಣ, ಅಪ್ಪು ಸಹ ಭಾಗವಹಿಸಿದ್ದರು. ಆದರೆ ಆ ಸಿನಿಮಾ ಸಹ ಕಾರಣಾಂತರಗಳಿಂದ ಮುಂದುವರೆಯಲಿಲ್ಲ.

ಇದಾದ ಬಳಿಕ ಸಾಹಸ ನಿರ್ದೇಶಕ ರವಿವರ್ಮಾ ಮೂವರನ್ನ ಬೆಳ್ಳಿ ತೆರೆಯ ಮೇಲೆ ಒಂದು ಮಾಡುವ ಪ್ರಯತ್ನ ಮಾಡಿದ್ದರು. ಮಾತುಕಥೆಯೂ ನಡೆದಿತ್ತು. ಇದ್ರ ನಡುವೆ ಈಸೂರು ದಂಗೆ ಸಿನಿಮಾದಲ್ಲಿ ಅಣ್ಣಾವ್ರ ಮಕ್ಕಳು ಕಾಣಿಸಿಕೊಳ್ಳಲಿದ್ದಾರೆಯೆಂಬ ಸುದ್ದಿ 2015ರ ಆಚೀಚೆ ವ್ಯಾಪಕವಾಗಿ ಹರಡಿತ್ತು. ವಿಧಿಯಾಟ ಅದು ಆಗಲಿಲ್ಲ.
ಅಪ್ಪು ಅಗಲುವ ಮುನ್ನ ಶಿವಣ್ಣ ರಾಘಣ್ಣ ಹಾಗೂ ಪುನೀತ್ ಜೊತೆಯಲ್ಲಿ ಮಾಡಲಿರುವ ಸಿನಿಮಾ ಶುರುವಾಗಿಯೇ ಆಗುತ್ತೆಯೆನ್ನುವ ವಾತಾವರಣ ಕೂಡಾ ನಿರ್ಮಾಣವಾಗಿತ್ತು. ಟಗರು ಚಿತ್ರದ ಅಭೂತಪೂರ್ವ ಗೆಲುವು ಬುನಾದಿಯನ್ನೂ ಹಾಕಿತ್ತು. ಟಗರು 2 ಚಿತ್ರಕ್ಕೆ ಅಪ್ಪು ಅವರನ್ನ ಕರೆತರುವ ಬಗ್ಗೆ ಚರ್ಚೆಯೂ ಆಗಿತ್ತು. ಈ ವಿಷಯವನ್ನು ನಿರ್ದೇಶಕ ಸೂರಿ ಅವರೇ ಶಿವಣ್ಣ ಹಾಗೂ ಅಪ್ಪು ಇಬ್ಬರ ಬಳಿ ಮಾತನಾಡಿದ್ದರು. ಆಗ ಅಪ್ಪು ಅವರು ಈ ಸಿನಿಮಾವನ್ನು ನಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಮಾಡ್ತೀನಿ ಅಂತಾನೂ ಅಂದಿದ್ದರು. ಆದ್ರೇ ದುರಾದೃಷ್ಟ ಇದು ಆಗಲಿಲ್ಲ.

ಇದೆಲ್ಲ ಯಾಕೆ ಪುನೀತ್ ನಮ್ಮೆಲ್ಲರನ್ನ ಅಗಲುವ ಮುನ್ನ ಕೆಲವೇ ದಿನದ ಹಿಂದೆ ನಿರ್ದೇಶಕ ಹರ್ಷ ಕಥೆಯೊಂದನ್ನ ಮಾಡಿಕೊಂಡಿದ್ದರು. ಶಿವಣ್ಣ ಬಳಿ ಚರ್ಚೆಯೂ ಮಾಡಿದ್ದರು. ಚಿತ್ರದ ಒಂದೆಳೆಯನ್ನ ಕೇಳಿದ್ದ ಶಿವಣ್ಣ ಕೂಡಾ ಸಿಕ್ಕಾಪಟ್ಟೆ ಇಂಪ್ರೆಸ್ ಆಗಿದ್ದರು. ಇನ್ನೇನೂ ಪುನೀತ್ ಹತ್ರ ಹೋಗಿ ಕಥೆಯ ಕುರಿತು ಹರ್ಷ ಹಾಗೂ ಶಿವಣ್ಣ ಚರ್ಚೆ ಮಾಡಬೇಕು ಅಷ್ಟರಲ್ಲಿ ಕನ್ನಡಿಗರ ಪ್ರೀತಿಯ ರಾಜಕುಮಾರ ಬಾರದೂರಿಗೆ ಹೊರಟು ಹೋದರು.
ಹೀಗೆ ಡಾ.ರಾಜ್ ಅವರ ಮಕ್ಕಳನ್ನ ಒಂದೇ ಸಿನಿಮಾದಲ್ಲಿ ನೋಡಬೇಕೆನ್ನೋ ಆಶಯ ಬರೀ ಅಭಿಮಾನಿಗಳಿಗಷ್ಟೇ ಅಲ್ಲ ಕನ್ನಡ ಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕರಿಗೂ ಇತ್ತು. ಇದಕ್ಕೆ ಕಾಲ ಕಾಲಕ್ಕೆ ಅನೇಕ ಬಾರಿ ಪ್ರಯತ್ನವನ್ನೂ ಮಾಡಲಾಯ್ತು. ಆದ್ರೇ ಪ್ರಯತ್ನ ಯಶಸ್ವೀಯಾಗಲೇ ಇಲ್ಲ. ಅಣ್ಣಾವ್ರ ಮಕ್ಕಳನ್ನ ಒಂದೇ ಸಿನಿಮಾದಲ್ಲಿ ನೋಡುವ ಸೌಭಾಗ್ಯ ಅಭಿಮಾನಿಗಳಿಗೆ ಸಿಗಲೇ ಇಲ್ಲ.
ವಿಪರ್ಯಾಸ ನೋಡಿ ಸಿನಿಮಾದಲ್ಲಿ ತ್ರಿಮೂರ್ತಿಗಳು ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ. ಕೊನೆ ಪಕ್ಷ ಯಾವದಾದ್ರೂ ಒಂದು ಸಿನಿಮಾದ ಹಾಡಲ್ಲಾದರೂ ಮೂರು ಜನ ಕಾಣಿಸಿಕೊಳ್ಳಬಹುದಿತ್ತು. ಜೊತೆಯಾಗಿ ಹೆಜ್ಜೆ ಹಾಕಬಹುದಿತ್ತು. ಕುಣಿಯಬಹುದಿತ್ತು. ಆದ್ರೇ. ಅದು ಆಗಲಿಲ್ಲ.


Click it and Unblock the Notifications











