'ದೀಪಾವಳಿ ದೀಪಾವಳಿ' ಹಾಡು ಹಾಡಲು ಅಣ್ಣಾವ್ರು ಪಡೆದಿದ್ದ ಸಂಭಾವನೆ ಎಷ್ಟು?

ಡಾ. ರಾಜ್‌ಕುಮಾರ್ ಅದ್ಭುತ ನಟ ಮಾತ್ರವಲ್ಲ, ಅತ್ಯದ್ಭುತ ಗಾಯಕರು ಆಗಿದ್ದರು. ಹಲವು ಸೂಪರ್ ಹಿಟ್ ಗೀತೆಗಳನ್ನು ಹಾಕಿದ್ದರು. ಗಾಯನಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ದೀಪಾವಳಿ ಹಬ್ಬ ಅಂದಾಕ್ಷಣ ಅಣ್ಣಾವ್ರು ಹಾಡಿದ್ದ 'ದೀಪಾವಳಿ ದೀಪಾವಳಿ' ಹಾಡು ನೆನಪಾಗುತ್ತದೆ. ಈ ಹಾಡನ್ನು ಹಾಡಲು ಮೊದಲು ಅಣ್ಣಾವ್ರು ಒಪ್ಪಿರಲಿಲ್ಲವಂತೆ. ಬಳಿಕ ಎಸ್‌ಪಿಬಿ ಪಟ್ಟು ಹಿಡಿದು ಒಪ್ಪಿಸಿದ್ದರು.

ತಮಿಳು ಚಿತ್ರದ ರೀಮೆಕ್ ಆಗಿದ್ದ 'ಮುದ್ದಿನ ಮಾವ' ಸಿನಿಮಾ 1993ರಲ್ಲಿ ತೆರೆಗೆ ಬಂದಿತ್ತು. ಶ್ರುತಿ ಹಾಗೂ ಶಶಿಕುಮಾರ್ ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸಿದ್ದರು. ರಾಮಯ್ಯ ಎನ್ನುವ ಮುಖ್ಯವಾದ ಪಾತ್ರದಲ್ಲಿ ಖ್ಯಾತ ಗಾಯಕ ಎಸ್‌. ಪಿ ಬಾಲಸುಬ್ರಮಣ್ಯಂ ನಟಿಸಿದ್ದರು. ತಾರಾ, ದೊಡ್ಡಣ್ಣ, ದ್ವಾರಕೀಶ್, ಗಿರಿಜಾ ಲೋಕೇಶ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿತ್ತು.

Dr Rajkumar sung Muddina Maava film Deepavali Deepavali Song for free

ಸ್ವತಃ ಎಸ್‌. ಪಿ ಬಾಲಸುಬ್ರಮಣ್ಯಂ 'ಮುದ್ದಿನ ಮಾವ' ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದರು. ಮೂರು ಹಾಡುಗಳನ್ನು ಹಾಡಿದ್ದರು. ಆದರೆ 'ದೀಪಾವಳಿ ದೀಪಾವಳಿ' ಅವರಿಗೆ ಇಷ್ಟವಿರಲಿಲ್ಲ. ಆದರೆ ಶಶಿಕುಮಾರ್ ನೀವೇ ಹಾಡಬೇಕು ಎಂದು ಪಟ್ಟು ಹಿಡಿದ್ದಿದ್ದರು. ಕೊನೆಗೆ ಅಣ್ಣಾವ್ರು ಈ ಹಾಡನ್ನು ಹಾಡುವಂತಾಯಿತು. ಈ ಇಂಟ್ರೆಸ್ಟಿಂಗ್ ಸಂಗತಿಯನ್ನು ತೆಲುಗು ಸಂದರ್ಶನವೊಂದರಲ್ಲಿ ಎಸ್‌ಪಿಬಿ ಹಂಚಿಕೊಂಡಿದ್ದರು.

ಓಂ ಸಾಯಿ ಪ್ರಕಾಶ್ ನಿರ್ದೇಶನದ 'ಮುದ್ದಿನ ಮಾವ' ಚಿತ್ರದಲ್ಲಿ ನಾನು ನಟಿಸಿದ್ದೆ. ಜೊತೆಗೆ ಸಂಗೀತ ಸಂಯೋಜನೆ ಮಾಡಿದ್ದೆ. ಚಿತ್ರದ 3 ಹಾಡುಗಳನ್ನು ನಾನು ಹಾಡುತ್ತೇನೆ ಎಂದು ನಿರ್ದೇಶಕರಿಗೆ ಹೇಳಿದ್ದೆ. ಶಶಿಕುಮಾರ್‌ಗೂ ಹಾಡಿ ನನಗೂ ಹಾಡಿಕೊಳ್ಳುವುದು ಸರಿಯಲ್ಲ ಎಂದೆ. ರಾಜೇಶ್ ಕೃಷ್ಣ ಕೈಲಿ ಆತನಿಗೆ ಹಾಡಿಸೋಣ ಎಂದು ಹೇಳಿದ್ದೆ. ಅದಕ್ಕೆ ಶಶಿಕುಮಾರ್ ಸುತಾರಾಂ ಒಪ್ಪಲಿಲ್ಲ. ನೀವೇ ನನಗೆ ಹಾಡಬೇಕು ಎಂದು ಹಠ ಮಾಡಿದ್ದರು ಎಂದು ಆ ಘಟನೆಯನ್ನು ಮೆಲುಕು ಹಾಕಿದ್ದರು.

ಶಶಿಕುಮಾರ್ ಮಾತಿಗೆ ನಾನು ಕಟ್ಟಿಬಿದ್ದೆ. ಸರಿ ನಾನು ಆತನಿಗೆ ಹಾಡಿದರೆ ನನ್ನ ಹಾಡನ್ನು ಯಾರು ಹಾಡುತ್ತಾರೆ? ಎನ್ನುವ ಪ್ರಶ್ನೆ ಹುಟ್ಟಿಕೊಂಡಿತ್ತು. ನನ್ನ ಅದೃಷ್ಟ ಚೆನ್ನಾಗಿದ್ದರೆ ಡಾ. ರಾಜ್‌ಕುಮಾರ್ ಅವರನ್ನು ಕೇಳೋಣ ಎಂದೆ. ನಾನು ಹಾಗೂ ನಿರ್ದೇಶಕರು ಎಲ್ಲರೂ ಅಣ್ಣಾವ್ರ ಬಳಿ ಮನವಿ ಮಾಡಿದೆವು. ಅವರು ಸಾಧ್ಯವೇಯಿಲ್ಲ ಎಂದುಬಿಟ್ಟರು. ನಿಮಗೆ ಇಲ್ಲಿ ದೊಡ್ಡ ಅಭಿಮಾನಿ ಬಳಗವಿದೆ. ನಿಮ್ಮಂಥ ಅದ್ಭುತ ಗಾಯಕನಿಗೆ ನಾನು ಹಾಡುವುದಿಲ್ಲ, ಅಂತಹ ಸಾಹಸ ಮಾಡಲ್ಲ, ಜನ ಒಪ್ಪದಿದ್ದರೆ ಕಷ್ಟ ಎಂದುಬಿಟ್ಟಿದ್ದರು ಎಂದು ಎಸ್‌ಪಿವಿ ಹೇಳದ್ದರು.

Dr Rajkumar sung Muddina Maava film Deepavali Deepavali Song for free

ಅಣ್ಣಾವ್ರ ಮಾತಿಗೆ ನೀವೇ ಹಾಡಬೇಕು. ಇಲ್ಲದಿದ್ದರೆ ಸಿನಿಾ ಬಿಡುಗಡೆ ಆಗಲ್ಲ. ನಾನು ಟ್ರ್ಯಾಕ್ ಹಾಡಿದ್ದೇನೆ. ಕ್ಯಾಸೆಟ್ ಇದೆ, ನೀವು ಹಾಡಲೇಬೇಕು ಎಂದು ಹೇಳಿ ನಾನು ಹೊರಟುಬಂದುಬಿಟ್ಟೆ. ಕೊನೆಗೆ ಅವರು ಒಪ್ಪಿ ತಾವಾಗಿಯೇ ರೆಕಾರ್ಡಿಂಗ್ ಸ್ಟುಡಿಯೋಗೆ ಹೋಗಿ ಹಾಡು ಹಾಡಿದ್ದರು. ಅವತ್ತು ನಾನು ಅಲ್ಲಿ ಇರಲಿಲ್ಲ. ನಾನು ಏನೋ ಹಾಡಿದ್ದೀನಿ, ನಿಮ್ಮಷ್ಟು ಚೆನ್ನಾಗಿ ಹಾಡಿಲ್ಲ, ಚೆನ್ನಾಗಿಲ್ಲ ಅಂದರೆ ಏನು ಅಂದುಕೊಳ್ಳಬೇಡಿ ಎಂದು ಅಣ್ಣಾವ್ರು ವಿನಮ್ರತೆಯಿಂದ ಹೇಳಿಕೊಂಡಿದ್ದರು. ಯಾವುದೇ ಸಂಭಾವನೆ ಪಡೆಯದೇ ಅಣ್ಣಾವ್ರು ಆ ಹಾಡು ಹಾಡಿದ್ದರು ಎಂದು ಬಾಲು ವಿವರಿಸಿದ್ದರು.

ಯಾವುದೇ ಸಂಭಾವನೆ ಪಡೆಯದೇ ಡಾ. ರಾಜ್‌ಕುಮಾರ್ 'ದೀಪಾವಳಿ ದೀಪಾವಳಿ' ಹಾಡಿಗೆ ದನಿಯಾಗಿದ್ದರು. ಎಸ್‌ಪಿಬಿ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಹಬ್ಬದ ಸಂಭ್ರಮದಲ್ಲಿ ಮಗಳು, ಅಳಿಯನ ಜೊತೆಗೆ ಕುಣಿದು ಸಂಭ್ರಮಿಸುವ ಹಾಡಿದು. ಚಿತ್ರಕ್ಕೆ ಈ ಹಾಡು ಪ್ಲಸ್ ಆಗಿದ್ದು ಸುಳ್ಳಲ್ಲ. 'ನಾನ್ ಪುಡಿಚ ಮಾಪಿಳ್ಳೈ' ಎನ್ನುವ ತಮಿಳು ಸಿನಿಮಾ ರೀಮೆಕ್ 'ಮುದ್ದಿನ ಮಾವ'. ಇದೇ ಸಿನಿಮಾ ತೆಲುಗಿನಲ್ಲಿ 'ಮಾಮಗಾರು' ಹೆಸರಿನಲ್ಲಿ ತೆರೆಗೆ ಬಂದಿತ್ತು.

More from Filmibeat

English summary
Do You Know How Much Dr Rajkumar Charged to sing Deepavali Deepavali Song for Muddina Maava?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X