ಕನ್ನಡಿಗರ ಬಗ್ಗೆ ಅಂದು ಜ್ಯೂ. ಎನ್‌ಟಿಆರ್ ಅವರಿಗೆ ತಾಯಿ ಕೊಟ್ಟಿದ್ದ ಎಚ್ಚರಿಕೆ ಏನು?

ತೆಲುಗು ನಟ ಜ್ಯೂ. ಎನ್‌ಟಿಆರ್ ಕನ್ನಡ ಸಿನಿರಸಿಕರಿಗೂ ಚಿರಪರಿಚಿತ. ತಾರಕ್‌ ಕುಟುಂಬಕ್ಕೆ ಕರ್ನಾಟಕದ ಜೊತೆಗೂ ನಂಟಿದೆ. ಅವರ ತಾಯಿ ಕುಂದಾಪುರ ಮೂಲದವರು. ಹಾಗಾಗಿ ತಾಯಿಯಿಂದ ಜ್ಯೂ. ಎನ್‌ಟಿಆರ್ ಕನ್ನಡ ಮಾತನಾಡುವುದನ್ನು ಕೂಡ ಕಲಿತಿದ್ದಾರೆ.

ಕೆಲ ವೇದಿಕೆಗಳಲ್ಲಿ ತಾರಕ್ ಕನ್ನಡದಲ್ಲೇ ಮಾತನಾಡಿದ್ದಾರೆ. ಇತ್ತೀಚೆಗೆ ರಿಷಬ್ ಶೆಟ್ಟಿ ಸೇರಿ ಕರ್ನಾಟಕದ ಕರಾವಳಿ ಭಾಗದ ದೇವಸ್ಥಾನಗಳಿಗೆ ಭೇಟಿ ನೀಡಿದ್ದರು. ಪುನೀತ್ ರಾಜ್‌ಕುಮಾರ್ ನಟನೆಯ 'ಚಕ್ರವ್ಯೂಹ' ಚಿತ್ರಕ್ಕಾಗಿ 'ಗೆಳೆಯಾ ಗೆಳೆಯಾ' ಹಾಡನ್ನು ತಾರಕ್ ಹಾಡಿದ್ದರು. ಕೆಲ ವೇದಿಕೆಗಳಲ್ಲಿ ಕೂಡ ಹಾಡನ್ನು ಗುನುಗಿದ್ದರು. ತೆಲುಗು ಬಿಗ್‌ಬಾಸ್ ನಿರೂಪಕರಾಗಿಯೂ ಅವರು ಕಾಣಿಸಿಕೊಂಡಿದ್ದರು. ಕರ್ನಾಟಕ ಮೂಲದ ಸ್ಪರ್ಧಿಗಳು ಮನೆಯೊಳಗೆ ಇದ್ದಾಗ ವೇದಿಕೆಯಿಂದ ಕನ್ನಡದಲ್ಲೇ ಮಾತನಾಡಿಸಿದ್ದು ಇದೆ.

Dub carefully Our people are there warning that Jr NTR s mother gave him

ರಾಜಮೌಳಿ ನಿರ್ದೇಶನದ 'RRR' ಚಿತ್ರದಲ್ಲಿ ರಾಮ್‌ಚರಣ್ ಹಾಗೂ ತಾರಕ್ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾ ಕನ್ನಡಕ್ಕೂ ಡಬ್ ಆಗಿ ಬಿಡುಗಡೆಯಾಗಿತ್ತು. ಈ ವೇಳೆ ಚರಣ್ ಹಾಗೂ ತಾರಕ್ ಇಬ್ಬರೂ ತಮ್ಮ ಪಾತ್ರಗಳಿಗೆ ತಾವೇ ಕನ್ನಡದಲ್ಲಿ ಡಬ್ಬಿಂಗ್ ಮಾಡಿದ್ದರು. ಸಂಭಾಷಣೆಕಾರ ವರದರಾಜ್ ಚಿಕ್ಕಬಳ್ಳಾಪುರ ಅವರಿಗೆ ಕನ್ನಡದ ಡಬ್ಬಿಂಗ್ ಮಾಡಲು ಸಹಾಯ ಮಾಡಿದ್ದರು.

'RRR' ಸಿನಿಮಾ ಸುದ್ದಿಗೋಷ್ಠಿ ಬೆಂಗಳೂರಿನಲ್ಲಿ ನಡೆದಿತ್ತು. ಈ ವೇಳೆ ಕನ್ನಡ ಸಿನಿಮಾ ಪತ್ರಕರ್ತಕರ ಪ್ರಶ್ನೆಗಳಿಗೆ ರಾಜಮೌಳಿ ಹಾಗೂ ತಾರಕ್ ಕನ್ನಡದಲ್ಲೇ ಉತ್ತರಿಸಿದ್ದರು. ಕನ್ನಡದಲ್ಲಿ ಡಬ್ ಮಾಡಲು ನಿಮ್ಮ ತಾಯಿ ಏನಾದರೂ ಟಿಪ್ಸ್ ಕೊಟ್ಟಿದ್ರಾ? ಎನ್ನುವ ಪ್ರಶ್ನೆ ತಾರಕ್‌ಗೆ ಎದುರಾಗಿತ್ತು. ಇದಕ್ಕೆ ಉತ್ತರಿಸಿ "ನಾನು ಡಬ್ ಮಾಡುವಾಗ ಅಮ್ಮ ಡಿಸ್ಟರ್ಬ್ ಮಾಡಲಿಲ್ಲ. ಆದ್ರೆ ಎಚ್ಚರಿಕೆಯಿಂದ ಡಬ್ ಮಾಡು. ನಮ್ಮವರು ಇದ್ದಾರೆ ಅಲ್ಲಿ, ಹಾಗಾಗಿ ನಾನು ತಗ್ಗಿಸುವಂತೆ ಮಾಡಬೇಡ. ನೀನು ಡಬ್ಬಿಂಗ್ ಮಾಡದಿದ್ದರೂ ಪರವಾಗಿಲ್ಲ. ಆದ್ರೆ ಮಾಡಿದ್ರೆ ಮಾತ್ರ ಚೆನ್ನಾಗಿ ಮಾಡು ಎಂದಿದ್ರು" ಎಂದು ನೆನಪಿಸಿಕೊಂಡಿದ್ದರು.

3 ವರ್ಷಗಳ ಹಿಂದೆ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿ ನೀಡಿಲಾಗಿತ್ತು. ವಿಧಾನಸೌಧದ ಮುಂಭಾಗದಲ್ಲಿ ನಡೆದ ಕಾರ್ಯಕ್ರಮಕ್ಕೆ ರಜನಿಕಾಂತ್ ಜೊತೆಗೆ ಜ್ಯೂ. ಎನ್‌ಟಿಆರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಜಿಟಿ ಜಿಟಿ ಮಳೆಯ ನಡುವೆ ಕನ್ನಡದಲ್ಲೇ ತಾರಕ್ ಮಾತನಾಡಿದ್ದರು.

ಕನ್ನಡ ಹಾಗೂ ಕನ್ನಡಿಗರ ಬಗ್ಗೆ ಜ್ಯೂ. ಎನ್‌ಟಿಆರ್ ಅಪಾರ ಅಭಿಮಾನ, ಗೌರವ ಹೊಂದಿದ್ದಾರೆ. ಸದ್ಯ ಪ್ರಶಾಲ್ ನೀಲ್ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಕರಾವಳಿಯ ಕುಮಟಾದಲ್ಲಿ ಚಿತ್ರದ ಒಂದು ಸಣ್ಣ ಶೆಡ್ಯೂಲ್ ಚಿತ್ರೀಕರಣ ನಡೀತು. ನೀಲ್ ನಿರ್ದೇಶನದಲ್ಲಿ ಕೆಲ ಸನ್ನಿವೇಶಗಳನ್ನು ಸೆರೆ ಹಿಡಿಯಲಾಯಿತು. ತಾತ ಎನ್‌ಟಿಆರ್, ತಂದೆ ಹರಿಕೃಷ್ಣ ಹಾಗೂ ಚಿಕ್ಕ ಬಾಲಕೃಷ್ಣ ಹಾದಿಯಲ್ಲೇ ತಾರಕ್ ಚಿತ್ರರಂಗಕ್ಕೆ ಬಂದು ಸಕ್ಸಸ್ ಕಂಡಿದ್ದಾರೆ.

ಮಾಸ್ ಕಮರ್ಷಿಲ್ ಸಿನಿಮಾಗಳ ಮೂಲಕ ಯಂಗ್ ಟೈಗರ್ ಎನ್‌ಟಿಆರ್ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಕಳೆದ ವರ್ಷ 'ದೇವರ' ಚಿತ್ರದಲ್ಲಿ ನಟಿಸಿದ್ದರು. ಇದೀಗ ಬಾಲಿವುಡ್ ಅಂಗಳಕ್ಕೂ ಜಿಗಿದ್ದಿದ್ದು ಹೃತಿಕ್ ರೋಷನ್ ಎದುರು 'ವಾರ್-2' ಚಿತ್ರದಲ್ಲಿ ಅಬ್ಬರಿಸಿದ್ದಾರೆ. ಈ ಸಿನಿಮಾ ಆಗಸ್ಟ್ 15ಕ್ಕೆ ತೆರೆಗೆ ಬರಲಿದೆ. ಮುಂದೆ 'ದೇವರ'-2 ಚಿತ್ರದಲ್ಲಿ ನಟಿಸಬೇಕಿದೆ. ಇದರ ನಡುವೆ ಪ್ರಶಾಂತ್ ನೀಲ್ ಜೊತೆ ಕೈ ಜೋಡಿಸಿದ್ದಾರೆ.

'ಸ್ಟೂಡೆಂಟ್‌ ನಂ.1' ಚಿತ್ರದ ಮೂಲಕ ಭರ್ಜರಿ ಸಕ್ಸಸ್ ಕಂಡಿದ್ದ ತಾರಕ್ ಬಳಿಕ 'ಆದಿ', 'ಸಿಂಹಾದ್ರಿ', 'ಯಮದೊಂಗ', 'ಅಶೋಕ್', 'ಬಾದ್‌ಶಾ', 'ಅದುರ್ಸ್', 'ಜನತಾ ಗ್ಯಾರೇಜ್', 'ಜೈ ಲವ ಕುಶ', 'ಅರವಿಂದ ಸಮೇತ' ಹಾಗೂ 'RRR' ರೀತಿಯ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

More from Filmibeat

English summary
Telugu superstar Jr. NTR shares a deep connection with Karnataka through his family roots and love for Kannada cinema.
Read more about: jr ntr kannada tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X