twitter
    For Quick Alerts
    ALLOW NOTIFICATIONS  
    For Daily Alerts

    ಈ ವರ್ಷ ಡಬ್ ಆಗಿ ಕನ್ನಡಕ್ಕೆ ಬಂದ ಪರಭಾಷೆ ಹಿಟ್ ಚಿತ್ರಗಳು

    |

    ವರ್ಷದಿಂದ ವರ್ಷಕ್ಕೆ ಕನ್ನಡದಲ್ಲಿ ಡಬ್ಬಿಂಗ್ ಚಿತ್ರಗಳು ಹೆಚ್ಚಾಗುತ್ತಿದೆ. ಆರಂಭದಲ್ಲಿ ಡಬ್ಬಿಂಗ್ ಸಿನಿಮಾಗಳಿಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಡಬ್ ಸಿನಿಮಾಗಳಿಗೆ ಪ್ರೇಕ್ಷಕರು ಸ್ವಾಗತಿಸುತ್ತಿದ್ದಾರೆ.

    ಈ ವರ್ಷವೂ ಅಂತಹ ಡಬ್ ಚಿತ್ರಗಳು ಹೆಚ್ಚಾಗಿ ಬಿಡುಗಡೆಯಾಗಿದೆ. 2018ರಲ್ಲಿ ಮೂರು ಡಬ್ ಸಿನಿಮಾ ಮಾತ್ರ ತೆರೆಕಂಡಿತ್ತು. ಈ ವರ್ಷ ಒಟ್ಟು 8 ಚಿತ್ರಗಳು ಕನ್ನಡಕ್ಕೆ ಡಬ್ ಆಗಿವೆ.

    'ಟ್ವಿಟ್ಟರ್'ನಲ್ಲಿ ಅತಿ ಹೆಚ್ಚು ಬಳಕೆಯಾಗಿರುವ 'ಹ್ಯಾಷ್ ಟ್ಯಾಗ್' ಈ ಸಿನಿಮಾದ್ದು!'ಟ್ವಿಟ್ಟರ್'ನಲ್ಲಿ ಅತಿ ಹೆಚ್ಚು ಬಳಕೆಯಾಗಿರುವ 'ಹ್ಯಾಷ್ ಟ್ಯಾಗ್' ಈ ಸಿನಿಮಾದ್ದು!

    ಅವುಗಳಲ್ಲಿ ಕೆಲವು ಹಿಟ್ ಆಗಿದೆ. ಮತ್ತೆ ಕೆಲವು ಬಂದಷ್ಟೇ ವೇಗವಾಗಿ ಚಿತ್ರಮಂದಿರದಿಂದ ಎತ್ತಂಗಡಿಯಾಗಿದೆ. ಹಾಗಿದ್ರೆ, 2019ರಲ್ಲಿ ತೆರೆಕಂಡ ಡಬ್ ಸಿನಿಮಾಗಳು ಯಾವುದು? ಮುಂದೆ ಓದಿ....

    ಅಲ್ಲಿ ವಿಶ್ವಾಸಂ, ಇಲ್ಲಿ ಜಗಮಲ್ಲ

    ಅಲ್ಲಿ ವಿಶ್ವಾಸಂ, ಇಲ್ಲಿ ಜಗಮಲ್ಲ

    ತಮಿಳು ನಟ ಅಜಿತ್ ಕುಮಾರ್ ನಟಿಸಿದ್ದ ವಿಶ್ವಾಸಂ ಸಿನಿಮಾ ಈ ವರ್ಷದ ಹಿಟ್ ಚಿತ್ರಗಳಲ್ಲಿ ಒಂದು. ಕಾಲಿವುಡ್ ಬಾಕ್ಸ್ ಆಫೀಸ್ ಧೂಳೆಬ್ಬಿಸಿದ್ದ ಈ ಚಿತ್ರ ಕನ್ನಡದಲ್ಲಿ 'ಜಗಮಲ್ಲ'ನಾಗಿ ತೆರೆಕಂಡಿತ್ತು. ಚಿತ್ರಮಂದಿರಕ್ಕೆ ಆಡಿಯೆನ್ಸ್ ಹೋದರು, ಹೆಚ್ಚು ಸಕ್ಸಸ್ ಕಾಣುವಲ್ಲಿ ಸಿನಿಮಾಗೆ ಹಿನ್ನಡೆ ಆಯಿತು.

    ಕಿರಿಕ್ ಲವ್ ಸ್ಟೋರಿ

    ಕಿರಿಕ್ ಲವ್ ಸ್ಟೋರಿ

    ಕಣ್ಸನ್ನೆ ಮೂಲಕ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ್ದ ನಟಿ ಪ್ರಿಯಾ ಪ್ರಕಾಶ್ ವಾರಿಯರ್. ಪ್ರಿಯಾ ನಟನೆಯ ಮೊದಲ ಸಿನಿಮಾ ಒರು ಅದಾರ್ ಲವ್. ಈ ಚಿತ್ರ ಕನ್ನಡದಲ್ಲಿ 'ಕಿರಿಕ್ ಲವ್ ಸ್ಟೋರಿ' ಹೆಸರಿನಲ್ಲಿ ತೆರೆಕಂಡಿತ್ತು. ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಈ ಸಿನಿಮಾ ಸೋಲು ಕಂಡಿತು.

    ಈ ವರ್ಷದಲ್ಲಿ 'ವಿವಾದ'ಕ್ಕೆ ಗುರಿಯಾಗಿದ್ದ ಸ್ಟಾರ್ ನಟರ ಚಿತ್ರಗಳುಈ ವರ್ಷದಲ್ಲಿ 'ವಿವಾದ'ಕ್ಕೆ ಗುರಿಯಾಗಿದ್ದ ಸ್ಟಾರ್ ನಟರ ಚಿತ್ರಗಳು

    ಕಾಂಚನಾ 3

    ಕಾಂಚನಾ 3

    ರಾಘವ ಲಾರೆನ್ಸ್ ನಟನೆಯ ಕಾಂಚನಾ-3 ಸಿನಿಮಾ ತಮಿಳಿನಲ್ಲಿ ದೊಡ್ಡ ಹಿಟ್ ಆಯ್ತು. ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಕಬಳಿಸಿದ್ದ ಈ ಚಿತ್ರ ಕನ್ನಡದಲ್ಲಿ ಅದೇ ಹೆಸರಿನಲ್ಲಿ ರಿಲೀಸ್ ಆಯ್ತು. ಕನ್ನಡದಲ್ಲಿ ಮೋಡಿ ಮಾಡಲಿಲ್ಲ.

    ರಂಗಸ್ಥಳಂ ಸಿನಿಮಾ

    ರಂಗಸ್ಥಳಂ ಸಿನಿಮಾ

    ತೆಲುಗಿನ ಸೂಪರ್ ಹಿಟ್ ಸಿನಿಮಾ ರಂಗಸ್ಥಳಂ ಕನ್ನಡದಲ್ಲಿ ಡಬ್ ಆಗಿ ರಿಲೀಸ್ ಆಗಿತ್ತು. ತೆಲುಗಿನಲ್ಲಿ ಈ ಚಿತ್ರದ ಹಾಡುಗಳು ಬಹುದೊಡ್ಡ ಹಿಟ್ ಆಗಿತ್ತು. ಹಾಗೆ ಕನ್ನಡದ ಹಾಡುಗಳಿಗೆ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿತ್ತು.

    ಕನ್ನಡ ಇಂಡಸ್ಟ್ರಿಯಲ್ಲಿ ಈ ವರ್ಷ ಸೌಂಡ್ ಮಾಡಿದ ಟಾಪ್ ಡೈಲಾಗ್ ಯಾವುದು?ಕನ್ನಡ ಇಂಡಸ್ಟ್ರಿಯಲ್ಲಿ ಈ ವರ್ಷ ಸೌಂಡ್ ಮಾಡಿದ ಟಾಪ್ ಡೈಲಾಗ್ ಯಾವುದು?

    ಡಿಯರ್ ಕಾಮ್ರೇಡ್

    ಡಿಯರ್ ಕಾಮ್ರೇಡ್

    ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಟಿಸಿದ್ದ ಡಿಯರ್ ಕಾಮ್ರೇಡ್ ಸಿನಿಮಾ, ಕನ್ನಡದಲ್ಲೂ ತೆರೆಕಂಡಿತ್ತು. ಏಕಕಾಲದಲ್ಲಿ ಈ ಚಿತ್ರ ಎಲ್ಲಾ ಭಾಷೆಗಳಲ್ಲೂ ಬಿಡುಗಡೆಯಾಗಿತ್ತು. ಮೂಲ ಭಾಷೆಯಲ್ಲಿ ಈ ಚಿತ್ರಕ್ಕೆ ಮಿಶ್ರಪ್ರತಿಕ್ರಿಯ ವ್ಯಕ್ತವಾಗಿತ್ತು. ಅದೇ ರೀತಿ ಕನ್ನಡದಲ್ಲೂ ಹಿನ್ನಡೆ ಅನುಭವಿಸಿತು.

    ಸೈರಾ ನರಸಿಂಹ ರೆಡ್ಡಿ

    ಸೈರಾ ನರಸಿಂಹ ರೆಡ್ಡಿ

    ಮೆಗಾಸ್ಟಾರ್ ಚಿರಂಜೀವಿ, ಕಿಚ್ಚ ಸುದೀಪ್, ವಿಜಯ್ ಸೇತುಪತಿ, ನಯನತಾರ, ತಮನ್ನಾ ಅಂತಹ ಸ್ಟಾರ್ ಕಲಾವಿದರು ನಟಿಸಿದ್ದ ಸೈರಾ ನರಸಿಂಹ ರೆಡ್ಡಿ ಸಿನಿಮಾ ಏಕಕಾಲದಲ್ಲಿ ತೆಲುಗು ಸೇರಿದಂತೆ ಐದು ಭಾಷೆಯಗಳಲ್ಲಿ ಬಂದಿತ್ತು. ಕನ್ನಡದಲ್ಲೂ ಈ ಸಿನಿಮಾ ಡಬ್ ಆಗಿ ರಿಲೀಸ್ ಆಗಿತ್ತು. ತೆಲುಗಿನಲ್ಲಿ ಸಕ್ಸಸ್ ಆದ ಈ ಚಿತ್ರಕ್ಕೆ ಕನ್ನಡದಲ್ಲೂ ಸ್ವಲ್ಪ ಮಟ್ಟಿಗೆ ಸದ್ದು ಮಾಡಿತ್ತು.

    2019ರಲ್ಲಿ ಅತಿ ಹೆಚ್ಚು ಟ್ರೋಲ್ ಆದ ಕನ್ನಡದ ಸಿನಿಮಾಗಳಿವು2019ರಲ್ಲಿ ಅತಿ ಹೆಚ್ಚು ಟ್ರೋಲ್ ಆದ ಕನ್ನಡದ ಸಿನಿಮಾಗಳಿವು

    ಟರ್ಮಿನೇಟರ್ ಡಾರ್ಕ್ ಫೇಟ್

    ಟರ್ಮಿನೇಟರ್ ಡಾರ್ಕ್ ಫೇಟ್

    ಹಾಲಿವುಡ್ ಚಿತ್ರ 'ಟರ್ಮಿನೇಟರ್ ಡಾರ್ಕ್ ಫೇಟ್' ಪೂರ್ಣ ಪ್ರಮಾಣದಲ್ಲಿ ಕನ್ನಡಕ್ಕೆ ಡಬ್ ಆಗಿ ಬಂತು. ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಮತ್ತು ಲಿಂಡಾ ಹ್ಯಾಮಿಲ್ಟನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ ಈ ಚಿತ್ರ ಟರ್ಮಿನೇಟರ್ ಸೀರಿಸ್ ಗಳಲ್ಲಿ ಆರನೇ ಚಿತ್ರ. ಟಿಮ್ ಮಿಲ್ಲರ್ ನಿರ್ದೇಶನದ ಈ ಚಿತ್ರಕ್ಕೆ ಟೈಟಾನಿಕ್ ಮತ್ತು ಅವತಾರ್ ಖ್ಯಾತಿಯ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಬಂಡವಾಳ ಹೂಡಿದ್ದಾರೆ.

    ಕನ್ನಡದಲ್ಲೂ ದಬಾಂಗ್ 3

    ಕನ್ನಡದಲ್ಲೂ ದಬಾಂಗ್ 3

    ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಕಿಚ್ಚ ಸುದೀಪ್ ನಟನೆಯ ದಬಾಂಗ್ 3 ಸಿನಿಮಾ ಡಿಸೆಂಬರ್ 20ಕ್ಕೆ ಬಿಡುಗಡೆಯಾಗುತ್ತಿದೆ. ಹಿಂದಿಯ ಜೊತೆ, ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲೂ ದಬಾಂಗ್ ತೆರೆಕಾಣುತ್ತಿದೆ.

    English summary
    Saira narasimha reddy, Dear Comrade, Rangasthalam, kanchana 3 movies are dubbed in kannada and released this year.
    Friday, December 13, 2019, 19:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X