For Quick Alerts
  ALLOW NOTIFICATIONS  
  For Daily Alerts

  ವರ್ಷವೆಲ್ಲಾ ಸುದ್ದಿಯಲ್ಲಿದ್ದರೂ ನಿರಾಸೆ ಮಾಡಿದ ಸ್ಟಾರ್ ಗಳು

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೂರು ಸಿನಿಮಾ, ಪುನೀತ್ ರಾಜ್ ಕುಮಾರ್ ಒಂದು ಸಿನಿಮಾ, ಸುದೀಪ್ ಕನ್ನಡದಲ್ಲಿ ಒಂದು, ಪರಭಾಷೆಯಲ್ಲಿ ಎರಡು ಸಿನಿಮಾ, ಶಿವರಾಜ್ ಕುಮಾರ್ ಮೂರು ಸಿನಿಮಾ....ಹೀಗೆ ಈ ವರ್ಷ ಸ್ಟಾರ್ ನಟರು ಸ್ಯಾಂಡಲ್ವುಡ್ನಲ್ಲಿ ಹೆಚ್ಚು ಕಮಾಲ್ ಮಾಡಿವೆ.

  ವರ್ಷದ 'ಸಕ್ಸಸ್ ಫುಲ್ ನಿರ್ದೇಶಕ' ಪಟ್ಟ ಯಾರಿಗೆ ಸಿಗಬಹುದು?ವರ್ಷದ 'ಸಕ್ಸಸ್ ಫುಲ್ ನಿರ್ದೇಶಕ' ಪಟ್ಟ ಯಾರಿಗೆ ಸಿಗಬಹುದು?

  ಆದರೆ, ಕೆಲವು ನಟ-ನಟಿಯರು ಈ ವರ್ಷ ತೆರೆಮೇಲೆ ಬಂದಿಲ್ಲ. ನಿರೀಕ್ಷೆ ಹುಟ್ಟುಹಾಕಿರುವ ಚಿತ್ರಗಳು ಕೈಯಲ್ಲಿದ್ದರೂ 2019ರಲ್ಲಿ ಪ್ರೇಕ್ಷಕರೆದುರು ಬಂದಿಲ್ಲ.

  ಹಾಗಿದ್ರೆ, ಈ ವರ್ಷ ಯಾವೆಲ್ಲ ಕಲಾವಿದರ ಸಿನಿಮಾಗಳು ಬಿಡುಗಡೆಯಾಗಿಲ್ಲ ಎಂಬ ಪಟ್ಟಿ ಇಲ್ಲಿದೆ. ಮುಂದೆ ಓದಿ....

  ರಾಕಿಂಗ್ ಸ್ಟಾರ್ ಯಶ್

  ರಾಕಿಂಗ್ ಸ್ಟಾರ್ ಯಶ್

  ಈ ವರ್ಷ ರಾಕಿಂಗ್ ಸ್ಟಾರ್ ಯಶ್ ನಟನೆಯ ಸಿನಿಮಾ ಬಿಡುಗಡೆಯಾಗಿಲ್ಲ. 2018ರಲ್ಲಿ ಚಾಪ್ಟರ್ 1 ಬಂದಿತ್ತು. ಈಗ ಚಾಪ್ಟರ್ 2 ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಮುಂದಿನ ವರ್ಷ ಈ ಸಿನಿಮಾ ತೆರೆಗೆ ಬರಲಿದ್ದು, ಈ ವರ್ಷ ಯಶ್ ಅಭಿಮಾನಿಗಳು ನಿರಾಸೆಯಿಂದಲೇ ವರ್ಷ ಮುಗಿಸಿದ್ದಾರೆ.

  ಈ ವರ್ಷ ಕನ್ನಡದ 'ಸಕ್ಸಸ್ ಫುಲ್ ನಾಯಕಿ' ಪಟ್ಟ ಯಾರಿಗೆ ನೀಡಬಹುದು?ಈ ವರ್ಷ ಕನ್ನಡದ 'ಸಕ್ಸಸ್ ಫುಲ್ ನಾಯಕಿ' ಪಟ್ಟ ಯಾರಿಗೆ ನೀಡಬಹುದು?

  ದುನಿಯಾ ವಿಜಯ್

  ದುನಿಯಾ ವಿಜಯ್

  ಜಾನಿ ಜಾನಿ ಯಸ್ ಪಪ್ಪಾ ಸಿನಿಮಾ ಬಳಿಕ ದುನಿಯಾ ವಿಜಯ್ ನಿರ್ದೇಶನದ ಕಡೆ ಹೆಜ್ಜೆಯಿಟ್ಟರು. ಕಳೆದ ವರ್ಷ ಯಾವುದೇ ಸಿನಿಮಾ ಇಲ್ಲದೇ ಅಭಿಮಾನಿಗಳಿಗೆ ನಿರಾಸೆ ಮಾಡಿದ್ದಾರೆ. ಸದ್ಯ ಸಲಗ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಮುಂದಿನ ವರ್ಷ ತೆರೆಗೆ ಬರಲಿದೆ.

  ಧ್ರುವ ಸರ್ಜಾ

  ಧ್ರುವ ಸರ್ಜಾ

  2017ರಲ್ಲಿ ತೆರೆಕಂಡಿದ್ದ ಭರ್ಜರಿ ಸಿನಿಮಾ ಬಳಿಕ ಧ್ರುವ ಸರ್ಜಾ ಯಾವ ಸಿನಿಮಾ ಮಾಡಿಲ್ಲ. ನಂದಕಿಶೋರ್ ನಿರ್ದೇಶನದ ಪೊಗರು ಸಿನಿಮಾ ಮಾಡ್ತಿದ್ದು, ಈ ವರ್ಷವೂ ಚಿತ್ರಮಂದಿರಕ್ಕೆ ಬಂದಿಲ್ಲ. ಮುಂದಿನ ವರ್ಷದ ನಿರೀಕ್ಷೆಯ ಚಿತ್ರಗಳಲ ಪೈಕಿ ಪೊಗರು ಕೂಡ ಒಂದು.

  ಡೆಡ್ಲಿ ಆದಿತ್ಯ

  ಡೆಡ್ಲಿ ಆದಿತ್ಯ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಚಕ್ರವರ್ತಿ ಚಿತ್ರದಲ್ಲಿ ಆದಿತ್ಯ ಕೊನೆಯದಾಗಿ ನಟಿಸಿದ್ದರು. ಈ ವರ್ಷ ಆದಿತ್ಯ ಅವರ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಮುಂದುವರಿದ ಅಧ್ಯಾಯ ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದು, ಮುಂದಿನ ವರ್ಷ ಥಿಯೇಟರ್ ಗೆ ಬರಲಿದೆ.

  1 ವರ್ಷದ ಚಿತ್ರರಂಗ: ಹಿಟ್ ಎಷ್ಟು? ಫ್ಲಾಫ್ ಎಷ್ಟು?1 ವರ್ಷದ ಚಿತ್ರರಂಗ: ಹಿಟ್ ಎಷ್ಟು? ಫ್ಲಾಫ್ ಎಷ್ಟು?

  ರಮೇಶ್ ಅರವಿಂದ್

  ರಮೇಶ್ ಅರವಿಂದ್

  ಪುಷ್ಕರ್ ವಿಮಾನ ಸಿನಿಮಾ ಬಳಿಕ ರಮೇಶ್ ಅರವಿಂದ್ ಯಾವ ಚಿತ್ರದಲ್ಲೂ ನಟಿಸಿಲ್ಲ. ಬಟರ್ ಫ್ಲೈ ನಿರ್ದೇಶನ ಮಾಡಿದ್ದರೂ ಆ ಚಿತ್ರವೂ ಇನ್ನು ತೆರೆಗೆ ಬಂದಿಲ್ಲ. ಸದ್ಯ ರಮೇಶ್ ಅವರು ಬೈರಾದೇವಿ, ಶಿವಾಜಿ ಸೂರತ್ಕಲ್, 100 ಎಂಬ ಸಿನಿಮಾ ಮಾಡುತ್ತಿದ್ದು, ಮುಂದಿನ ವರ್ಷಕ್ಕೆ ಬರಬಹುದು.

  ಪೂಜಾ ಗಾಂಧಿ

  ಪೂಜಾ ಗಾಂಧಿ

  ದಂಡುಪಾಳ್ಯ 3 ಚಿತ್ರ ಬಳಿಕ ಪೂಜಾ ಗಾಂಧಿ ತೆರೆಮೇಲೆ ಬಂದೇ ಇಲ್ಲ. ನಾಲ್ಕೈದು ಸಿನಿಮಾ ಅನೌನ್ಸ್ ಆಗಿದ್ದರೂ ಯಾವ ಚಿತ್ರವೂ ಟೇಕ್ ಆನ್ ಆಗಿರಲಿಲ್ಲ. ಬಹುಶಃ ಮುಂದಿನ ವರ್ಷಕ್ಕೆ ಪೂಜಾ ಚಿತ್ರಮಂದಿರಕ್ಕೆ ಬರಬಹುದು.

  ಪಾರೂಲ್ ಯಾದವ್

  ಪಾರೂಲ್ ಯಾದವ್

  ನಟಿ ಪಾರೂಲ್ ಯಾದವ್ ನಟನೆಯ ಯಾವ ಚಿತ್ರವೂ ಈ ವರ್ಷ ಬಿಡುಗಡೆಯಾಗಿಲ್ಲ. ಬಟರ್ ಫ್ಲೈ ಸಿನಿಮಾದಲ್ಲಿ ನಟಿಸಿದ್ದರೂ ಆ ಸಿನಿಮಾ ರಿಲೀಸ್ ಆಗಿಲ್ಲ. ಮುಂದಿನ ವರ್ಷಕ್ಕಾದರೂ ಈ ಚಿತ್ರ ಬರುತ್ತಾ ಎಂದು ಕಾದುನೋಡಬೇಕಿದೆ.

  English summary
  Kannada actor Duniya Vijay, Dhruva Sarja, Pooja Gandhi, Parul yadav movies are not released in this year.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X