For Quick Alerts
  ALLOW NOTIFICATIONS  
  For Daily Alerts

  Engineers Day 2021: ಇಂಜಿನಿಯರಿಂಗ್ ಓದಿದ್ದರೂ ಸಿನಿಮಾ ಸ್ಟಾರ್ ಆದವರು

  |

  ಸೆಪ್ಟೆಂಬರ್ 15 ರಂದು ಇಂಜಿನಿಯರ್ಸ್ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ದೇಶದ ಕಂಡ ಅತ್ಯುನ್ನತ ಇಂಜಿನಿಯರ್‌ಗಳನ್ನು ಜನಸಾಮಾನ್ಯರು ಸ್ಮರಿಸುತ್ತಾರೆ. ಇಂಜಿನಿಯರ್ ಕ್ಷೇತ್ರದಲ್ಲಿ ಸರ್ ಎಂವಿ ಅವರು ಸಲ್ಲಿಸಿರುವ ಅಪಾರ ಕೊಡುಗೆಯ ಸ್ಮರಣೆಗಾಗಿ ಇವರ ಜನ್ಮ ದಿನವನ್ನು (ಸೆಪ್ಟೆಂಬರ್ 15) ಭಾರತದಲ್ಲಿ ಪ್ರತಿವರ್ಷ ಇಂಜಿನಿಯರ್ಸ್ ದಿನವಾಗಿ ಆಚರಿಸಲಾಗುತ್ತದೆ.

  ಇಂಜಿನಿಯರ್ ಪದವಿ ಪಡೆದಿದ್ದರು ಆ ಕೆಲಸ ಬಿಟ್ಟು ಸಿನಿಮಾ ಕ್ಷೇತ್ರ ಆಯ್ಕೆ ಮಾಡಿಕೊಂಡಿರುವ ಹಲವು ಕಲಾವಿದರು ಉದಾಹರಣೆಯಾಗಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಬಾಲಿವುಡ್ ಇಂಡಸ್ಟ್ರಿಯಲ್ಲೂ ಇಂಜಿನಿಯರಿಂಗ್ ಓದಿ ನಟ-ನಟಿಯರಾಗಿರುವ ಸ್ಟಾರ್ಸ್ ಇದ್ದಾರೆ. ಅದರಲ್ಲಿ ಕೆಲವರು ಇಂಜಿನಿಯರ್ ಕೆಲಸ ಮಾಡಿ ಬಣ್ಣದ ಜಗತ್ತಿಗೆ ಬಂದಿರುವವರೂ ಇದ್ದಾರೆ. ಹಾಗಾದ್ರೆ, ಸಿನಿಮಾ ಇಂಡಸ್ಟ್ರಿಯಲ್ಲಿ ಯಾರೆಲ್ಲ ಇಂಜಿನಿಯರ್ ಶಿಕ್ಷಣ ಪಡೆದುಕೊಂಡಿದ್ದಾರೆ? ಮುಂದೆ ಓದಿ...

  ಸೋನು ಸೂದ್

  ಸೋನು ಸೂದ್

  ಕೊರೊನಾ ವೈರಸ್ ಕಷ್ಟಕಾಲದಲ್ಲಿ ಜನಸಾಮಾನ್ಯರ ಪಾಲಿಗೆ ರಿಯಲ್ ಹೀರೋ ಆದ ಸೋನು ಸೂದ್ ಇಂಜಿನಿಯರಿಂಗ್ ವಿದ್ಯಾರ್ಥಿ ಎನ್ನುವುದು ವಿಶೇಷ. ನಾಗಪುರದ ಯಶವಂತರಾವ್ ಚೌಹಾಣ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ಮಾಡಿದ್ದಾರೆ. ಆದರೆ ಅವರ ಆಸಕ್ತಿ ಸಿನಿಮಾ ಇಂಡಸ್ಟ್ರಿ ಕಡೆ ಕರೆದುಕೊಂಡು ಬಂತು.

  ಬಡವರ ಬಗ್ಗೆ ಪ್ರಕಾಶ್ ರೈ ಹೊಂದಿರುವ ಕಾಳಜಿಗೆ ಇಲ್ಲಿದೆ ಮತ್ತೊಂದು ಉದಾಹರಣೆಬಡವರ ಬಗ್ಗೆ ಪ್ರಕಾಶ್ ರೈ ಹೊಂದಿರುವ ಕಾಳಜಿಗೆ ಇಲ್ಲಿದೆ ಮತ್ತೊಂದು ಉದಾಹರಣೆ

  ತಾಪ್ಸಿ ಪೆನ್ನು

  ತಾಪ್ಸಿ ಪೆನ್ನು

  ಬಾಲಿವುಡ್‌ನಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿರುವ ನಟಿ ತಾಪ್ಸಿ ಪೆನ್ನು ಸಹ ಇಂಜಿನಿಯರಿಂಗ್ ಶಿಕ್ಷಣ ಪಡೆದುಕೊಂಡಿದ್ದಾರೆ. ದೆಹಲಿಯ ಗುರು ತೇಗ್ ಬಹದ್ದೂರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ.

  ನಾಗಾರ್ಜುನ

  ನಾಗಾರ್ಜುನ

  ತೆಲುಗಿನ ಖ್ಯಾತ ನಟ ನಾಗಾರ್ಜುನ ಅಕ್ಕಿನೇನಿ ಸಹ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದರು. ಮದ್ರಾಸ್‌ನ ಅಣ್ಣಾ ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಒಂದು ವರ್ಷದ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ್ದರು.

  ದುಬಾರಿ ಮದುವೆ ಎಂದರೆ ಭಯವಾಗುತ್ತದೆ, ನನಗೆ 4 ಮಕ್ಕಳಿದ್ದಾರೆ; ನಟ ಸೈಫ್ ಅಲಿ ಖಾನ್ದುಬಾರಿ ಮದುವೆ ಎಂದರೆ ಭಯವಾಗುತ್ತದೆ, ನನಗೆ 4 ಮಕ್ಕಳಿದ್ದಾರೆ; ನಟ ಸೈಫ್ ಅಲಿ ಖಾನ್

  ರಕ್ಷಿತ್ ಶೆಟ್ಟಿ

  ರಕ್ಷಿತ್ ಶೆಟ್ಟಿ

  ನಟ-ನಿರ್ದೇಶಕ ರಕ್ಷಿತ್ ಶೆಟ್ಟಿ ಸಹ ಇಂಜಿಯರಿಂಗ್ ವ್ಯಾಸಂಗ ಮಾಡಿದ್ದಾರೆ. ಮಂಗಳೂರಿನ ಎನ್.ಎಂ.ಎ.ಎಂ. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ.

  ರಮೇಶ್ ಅರವಿಂದ್

  ರಮೇಶ್ ಅರವಿಂದ್

  ಕನ್ನಡದ ಹಿರಿಯ ನಟ, ನಿರ್ದೇಶಕ ಹಾಗೂ ಟಿವಿ ನಿರೂಪಕ ರಮೇಶ್ ಅರವಿಂದ ಸಹ ಇಂಜಿನಿಯರ್. ಬೆಂಗಳೂರಿನ ಯುವಿಸಿಇ ಕಾಲೇಜಿನಲ್ಲಿ ಇಂಜಿನಿಯರ್ ಪದವಿ ಪಡೆದುಕೊಂಡಿದ್ದಾರೆ.

  ಕಿಚ್ಚ ಸುದೀಪ್

  ಕಿಚ್ಚ ಸುದೀಪ್

  ಕನ್ನಡ ನಟ ಕಿಚ್ಚ ಸುದೀಪ್ ಬೆಂಗಳೂರಿನ ದಯಾನಂದ ಸಾಗರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಡಸ್ಟ್ರಿಯಲ್ ಅಂಡ್ ಪ್ರೊಡಕ್ಷನ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದಾರೆ. ಆದರೆ, ಸುದೀಪ್ ಆಯ್ಕೆ ಮಾಡಿಕೊಂಡಿದ್ದು ಮಾತ್ರ ಸಿನಿಮಾರಂಗ.

  ಅನೂಪ್-ನಿರೂಪ್ ಭಂಡಾರಿ

  ಅನೂಪ್-ನಿರೂಪ್ ಭಂಡಾರಿ

  ರಂಗಿತರಂಗ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಹಾಗೂ ನಾಯಕ ನಿರೂಪ್ ಭಂಡಾರಿ ಇಬ್ಬರು ಸಹ ಇಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ. ಮೈಸೂರಿನ ವಿದ್ಯಾ ವಿಕಾಸ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ (ವಿವಿಐಇಟಿ) ಸಂಸ್ಥೆಯಲ್ಲಿ ಎಂಜಿನಿಯರಿಂಗ್ ಮುಗಿಸಿದ್ದಾರೆ.

  ಡಾಲಿ ಧನಂಜಯ್

  ಡಾಲಿ ಧನಂಜಯ್

  ಡಾಲಿ ಖ್ಯಾತಿಯ ನಟ ಧನಂಜಯ್ ಸಹ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಮೈಸೂರಿನ ಶ್ರೀ ಜಯಚಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದಿದ್ದು, ಇವರು Rank ವಿದ್ಯಾರ್ಥಿ ಎನ್ನುವುದು ವಿಶೇಷ.

  ಹರ್ಷಿಕಾ ಪೂಣಚ್ಚ-ಚೇತನ್ ಚಂದ್ರ

  ಹರ್ಷಿಕಾ ಪೂಣಚ್ಚ-ಚೇತನ್ ಚಂದ್ರ

  ಕನ್ನಡದ ಯುವ ನಟಿ ಹರ್ಷಿಕಾ ಪೂಣಚ್ಚ ಬೆಂಗಳೂರಿನ ಕೇಂಬ್ರಿಡ್ಜ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಎಲೆಕ್ಟ್ರಿಕಲ್ ವಿಭಾಗದಲ್ಲಿ ಬ್ಯಾಚುಲರ್ ಆಫ್ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ. ಕನ್ನಡದ ಮತ್ತೊಬ್ಬ ನಟ ಚೇತನ್ ಚಂದ್ರ ಸಹ ಇಂಜಿನಿಯರಿಂಗ್ ಪದವಿ ಮುಗಿಸಿದ್ದಾರೆ. ಮಾಹಿತಿ ವಿಜ್ಞಾನ ವಿಭಾದಲ್ಲಿ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ.

  ಬಾಲಿವುಡ್‌ನ ಹಲವು ಸ್ಟಾರ್ಸ್

  ಬಾಲಿವುಡ್‌ನ ಹಲವು ಸ್ಟಾರ್ಸ್

  ಬಹುಭಾಷೆ ನಟ ಆರ್ ಮಾಧವನ್ ಮದ್ರಾಸ್‌ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮಾಡಿದ್ದಾರೆ. ಬಾಲಿವುಡ್ ನಟಿ ಕೃತಿ ಸನೂನ್ ನೋಯ್ಡಾದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಇಂಜಿನಿಯರಿಂಗ್ ಮಾಡಿದ್ದಾರೆ. ನಟ ವಿಕ್ಕಿ ಕೌಶಲ್ ಮುಂಬೈನ ರಾಜೀವ್ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್​ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಕಾರ್ತಿನ್ ಆರ್ಯನ್ ಜೈವಿಕ ತಂತ್ರಜ್ಞಾನದಲ್ಲಿ ಇಂಜಿನಿಯರಿಂಗ್ ಮಾಡಿದ್ದು, ರಿತೇಶ್ ದೇಶ್‌ಮುಖ್ ವಾಸ್ತುಶಿಲ್ಪ ಇಂಜಿನಿಯರಿಂಗ್ ಅಧ್ಯಯನ ಮಾಡಿದ್ದಾರೆ. ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಸಹ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದರು.

  English summary
  Engineers Day 2021: Film Celebrities Who are Engineers.
  Wednesday, September 15, 2021, 17:39
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X