ದೀಪಾವಳಿ ಶುಭಾಶಯ, ಪಟಾಕಿ, ಆಸ್ಟ್ರೇಲಿಯಾ vs ಇಂಡಿಯಾ ಕ್ರಿಕೆಟ್ ಮ್ಯಾಚ್, ಎಲ್ಲೆಲ್ಲೂ ಅಪ್ಪು ನೆನಪು

ಅಭಿಮಾನ ಅನ್ನೋದೇ ಹಾಗೆ. ಅಷ್ಟು ಸುಮ್ಮನೆ ಬರಲ್ಲ, ಒಮ್ಮೆ ಶುರುವಾದ ಅಭಿಮಾನ ಅಷ್ಟು ಸುಲಭವಾಗಿ ಹೋಗುವುದಿಲ್ಲ.. ಸೂರ್ಯನೊಬ್ಬ, ಚಂದ್ರನೊಬ್ಬ, ಈ ರಾಜನೂ ಒಬ್ಬ ಎಂದು ಅಭಿಮಾನಿ ರಾಜರತ್ನನ ನೆನಪಿನಲ್ಲೇ ಕಾಲ ಕಳೆಯುತ್ತಿದ್ದಾರೆ. ದೀಪಾವಳಿ ಸಂಭ್ರಮದಲ್ಲೂ ಅಪ್ಪು ನೆನೆಪು ಅಭಿಮಾನಿಗಳನ್ನು ಕಾಡುತ್ತಿದೆ.

ದೊಡ್ಮನೆಯಲ್ಲಿ ಎಲ್ಲಾ ಹಬ್ಬಗಳನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ಪುನೀತ್ ರಾಜ್‌ಕುಮಾರ್ ಕೂಡ ಹಬ್ಬದ ಸಂಭ್ರಮದಲ್ಲಿ ಶುಭಾಶಯ ಕೋರಿ ಹಬ್ಬ ಆಚರಿಸಿ, ಹಬ್ಬದೂಟ ಮಾಡಿ ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿದ್ದರು. 4 ವರ್ಷಗಳ ಹಿಂದೆ ದೀಪಾವಳಿ ಹಬ್ಬದ ಸಂಭ್ರಮವನ್ನು ಅಪ್ಪು ಅಗಲಿಕೆ ನೋವು ಕಿತ್ತುಕೊಂಡಿತ್ತು. 2021 ಅಕ್ಟೋಬರ್ 29ರಂದು ಪುನೀತ್ ರಾಜ್‌ಕುಮಾರ್ ಹೃದಯಾಘಾತದಿಂದ ನಿಧನರಾಗಿದ್ದರು.

Fans Keep Puneeth Rajkumar s Memory Alive This Diwali with Heartfelt Tributes

ಅಪ್ಪು ಅಗಲಿಕೆ ರಾಜ್ಯದಲ್ಲಿ ಶೋಕ ಮಡುಗಟ್ಟುವಂತೆ ಮಾಡಿತ್ತು. ಅವರು ನಿಧನರಾದ 5 ದಿನಕ್ಕೆ ಬಂದ ದೀಪಾವಳಿ ಹಬ್ಬ ಅಷ್ಟೇನು ಸಡಗರದಿಂದ ಕೂಡಿರಲಿಲ್ಲ. ಕಳೆದ 4 ವರ್ಷಗಳಿಂದ ದೀಪಾವಳಿ ಹಬ್ಬ ಬಂದಾಗಲೆಲ್ಲಾ ಪುನೀತ್ ನೆನಪು ಮರುಕಳಿಸುತ್ತದೆ. ಅವರು ಬೆಳಕಿನ ಹಬ್ಬದ ಶುಭಾಶಯ ಕೋರಿದ್ದ ಹಳೇ ವೀಡಿಯೋ ವೈರಲ್ ಆಗುತ್ತದೆ. 'ಜಾಕಿ' ಚಿತ್ರದ ಪಟಾಕಿ ಡೈಲಾಗ್ ನೆನಪಾಗುತ್ತದೆ. ಈ ವರ್ಷವೂ ಅದು ಮುಂದುವರೆದಿದೆ.

ನಮ್ ಬದುಕಲ್ಲೂ ದೀಪಾವಳಿ ಬಂದೇ ಬರುತ್ತೆ. ಪಟಾಕಿ ಯಾವಂದೇ ಆಗಿರಲಿ ಅಂಟ್ಸೋರು ನಾವಾಗಿರ್ಬೇಕು ಎನ್ನುವ ಡೈಲಾಗ್ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಇನ್ನು ದೀಪಾವಳಿ ಹಬ್ಬಕ್ಕೆ ಪಟಾಕಿ ಬಾಕ್ಸ್‌ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡ್ತಿವೆ. ದೇವರ ಚಿತ್ರ ಇರುವ ಪಟಾಕಿ ಬಾಕ್ಸ್‌ಗಳ ಜೊತೆಗೆ ಪುನೀತ್ ರಾಜ್‌ಕುಮಾರ್ ಭಾವಚಿತ್ರ ಇರುವ ಪಟಾಕಿ ಬಾಕ್ಸ್‌ಗಳು ಈ ಬಾರಿ ಗಮನ ಸೆಳೆಯುತ್ತಿವೆ.

ಅಂಗಡಿ ಮಂಗಟ್ಟುಗಳ ಮೇಲೆ, ಹೋಟೆಲ್‌ಗಳ ಮೇಲೆ ಪುನೀತ್ ರಾಜ್‌ಕುಮಾರ್ ಭಾವಚಿತ್ರಗಳು ರಾರಾಜಿಸುತ್ತಲೇ ಇವೆ. ಆಸ್ಟ್ರೇಲಿಯಾ ವಿರುದ್ಧ ಭಾರತ ಕ್ರಿಕೆಟ್ ತಂಡ ಏಕದಿನ ಸರಣಿ ಕ್ರಿಕೆಟ್ ಪಂದ್ಯ ಆಡುತ್ತಿದೆ. 2ನೇ ಏಕದಿನ ಪಂದ್ಯ ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯ ವೀಕ್ಷಿಸಲು ಸಾಕಷ್ಟು ಜನ ಭಾರತೀಯರು ಆಗಮಿಸಿದ್ದಾರೆ. ಅಭಿಮಾನಿಯೊಬ್ಬರು ಪುನೀತ್ ರಾಜ್‌ಕುಮಾರ್ ಭಾವಚಿತ್ರವನ್ನು ಪ್ರದರ್ಶಿಸಿದ್ದಾರೆ. ಅದು ಕ್ಯಾಮರಾದಲ್ಲಿ ಸೆರೆಯಾಗಿದೆ.

"The King Lives for Ever" ಎಂದು ಬರೆದ ಪುನೀತ್ ರಾಜ್‌ಕುಮಾರ್ ಭಾವಚಿತ್ರವನ್ನು ಅಭಿಮಾನಿಯೊಬ್ಬರು ಪ್ರೇಕ್ಷಕರ ಗ್ಯಾಲರಿಯಲ್ಲಿ ಪ್ರದರ್ಶಿಸಿರುವುದು ವಿಶೇಷ. ಸ್ಟಾರ್‌ ಸ್ಪೋರ್ಟ್ಸ್ ಕನ್ನಡ ಈ ಫೋಟೊವನ್ನು ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು "ಸೂರ್ಯನೊಬ್ಬ, ಚಂದ್ರನೊಬ್ಬ, ಈ ರಾಜನೂ ಒಬ್ಬ" ಎಂದು ಪೋಸ್ಟ್ ಮಾಡಿದೆ. ಇದು ರಾಜರತ್ನನ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.

ಇನ್ನು ಪುನೀತ್ ರಾಜ್‌ಕುಮಾರ್ ಅವರ ಸಾಕಷ್ಟು AI ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಪತ್ನಿ ಅಶ್ವಿನಿ ಜೊತೆ ದೀಪಾವಳಿ ಹಬ್ಬ ಆಚರಿಸಿದಂತೆ, ವಿನಯ್, ಯುವ ಜೊತೆ ಪಟಾಕಿ ಸಿಡಿಸಿ ಸಂಭ್ರಮಿಸಿದಂತೆ AI ವೀಡಿಯೋ ಜನರೇಟ್ ಮಾಡಿ ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ. ಇನ್ನು ಅಪ್ಪು ಫ್ಯಾನ್‌ಡಮ್ ಆಪ್ ಕೂಡ ಸಖತ್ ಸದ್ದು ಮಾಡ್ತಿದೆ.

ಪುನೀತ್ ರಾಜಕುಮಾರ್ ಪ್ರತಿಭೆ, ಸಮಾಜಸೇವೆ, ಮಾನವೀಯ ಮೌಲ್ಯಗಳು, ಅವರ ಸಾಧನೆಯನ್ನು ಪ್ರತಿಯೊಬ್ಬರಿಗೂ ತಲುಪಿಸಲು ಹಾಗೂ ಸ್ಫೂರ್ತಿ ತುಂಬಲು ಪಿಆರ್‌ಕೆ ಹೆಸರಿನ ಅಪ್ಲಿಕೇಶನ್ ತಯಾರಾಗಿದೆ. ಇತ್ತೀಚೆಗೆ ಅದರ ಟ್ರೈಲರ್ ಸಹ ಬಿಡುಗಡೆಯಾಗಿತ್ತು. "ಪ್ರತಿ ಅಭಿಮಾನಿಯ ಹೃದಯದಿಂದ - ಪ್ರತಿಯೊಂದು ಮನೆಯವರೆಗೂ ಅಪ್ಪುವಿನ ನೆನಪು ಅಜರಾಮರ... ಪ್ರೀತಿಸುವ ಹೃದಯಗಳಿಂದ ನಿರ್ಮಾಣವಾದ ವಿಶ್ವದ ಮೊಟ್ಟಮೊದಲ ಫ್ಯಾನ್‌ಡಮ್‌ ಆ್ಯಪ್‌" ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಮಾಹಿತಿ ನೀಡಿದ್ದರು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X