KGF ಚಾಪ್ಟರ್‌- 2 ಚಿತ್ರಕ್ಕೆ ವರ್ಷದ ಸಂಭ್ರಮ: ಸಿನಿಮಾ ಬರೆದ ಒಟ್ಟು 51 ದಾಖಲೆಗಳ ಪಟ್ಟಿ ರಿಲೀಸ್

ರಾಕಿಂಗ್ ಸ್ಟಾರ್ ಯಶ್ ನಟನೆಯ KGF ಚಾಪ್ಟರ್‌-2 ಸಿನಿಮಾ ಒಂದು ವರ್ಷದ ಸಂಭ್ರಮದಲ್ಲಿದೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಈ ಬಗ್ಗೆ ಟ್ರೆಂಡ್ ನಡೆಸುತ್ತಿದದ್ದಾರೆ. ಪ್ರಶಾಂತ್‌ ನೀಲ್ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಬರೆದ ದಾಖಲೆಗಳು ಒಂದೆರಡಲ್ಲ. ಕಳೆದ ವರ್ಷ ಏಪ್ರಿಲ್ 14ರಂದು ರಿಲೀಸ್ ಆಗಿದ್ದ ಸಿನಿಮಾ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು.

2018ರಲ್ಲಿ ತೆರೆಕಂಡಿದ್ದ ಸರಣಿಯ ಮೊದಲ ಸಿನಿಮಾ 250 ಕೋಟಿಗೂ ಅಧಿಕ ಗಳಿಕೆ ಕಂಡು ಸೂಪರ್ ಹಿಟ್ ಆಗಿತ್ತು. ಕನ್ನಡ ಚಿತ್ರರಂಗದಲ್ಲಿ 100 ಅಲ್ಲ 200 ಕೋಟಿ ಕ್ಲಬ್ ಸೇರಿದ ಮೊದಲ ಸಿನಿಮಾ KGF ಚಾಪ್ಟರ್‌- 1. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸಿನಿಮಾ ಸೂಪರ್ ಹಿಟ್ ಆಗಿ ಸೀಕ್ವೆಲ್ ಬಗ್ಗೆ ಕುತೂಹಲ ಕೆರಳಿಸಿತ್ತು. ಅದಕ್ಕೆ ತಕ್ಕಂತೆ ದೊಡ್ಡಮಟ್ಟದಲ್ಲಿ ಸಿನಿಮಾವನ್ನು ಪ್ರಶಾಂತ್‌ ನೀಲ್ ಅಂಡ್ ಟೀಂ ತೆರೆಗೆ ತಂದಿತ್ತು. ಸಿನಿಮಾ ರಿಲೀಸ್‌ ವೇಳೆಗೆ ನಿರೀಕ್ಷೆ ಎವರೆಸ್ಟ್ ಎತ್ತರಕ್ಕೆ ಏರಿತ್ತು. ಅದನ್ನು ತಲುಪುವಲ್ಲಿ ಸಿನಿಮಾ ಸಕ್ಸಸ್ ಕಂಡಿತ್ತು.

Fans listed Yash Starrer KGF Chapter- 2 movie 51 Records

ಹೊಂಬಾಳೆ ಫಿಲ್ಮ್ಸ್‌ ಸಂಸ್ಥೆಯ ಮಹತ್ವಾಕಾಂಕ್ಷೆಯ ಸಿನಿಮಾ ಬರೆದ ದಾಖಲೆಗಳು ಒಂದೆರಡಲ್ಲ. ಸಿನಿಮಾ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅಭಿಮಾನಿಗಳು ಸಿನಿಮಾ ಬರೆದ ದಾಖಲೆಗಳ ಪಟ್ಟಿ ತಯಾರಿಸಿದ್ದಾರೆ. ಒಂದಲ್ಲ ಎರಡಲ್ಲ ಬರೋಬ್ಬರಿ 51 ದಾಖಲೆಗಳು ಈ ಪಟ್ಟಿಯಲ್ಲಿದೆ.

1. ಸಿಂಗಲ್ ಸಿನಿಮಾ ಚೈನ್‌ನಲ್ಲಿ(PVR) ಸಾರ್ವಕಾಲಿಕವಾಗಿ 124 ಕೋಟಿ ರೂ. ಗಳಿಕೆ ಮಾಡಿದ ಸಿನಿಮಾ KGF ಚಾಪ್ಟರ್‌-2

2. ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ 2ನೇ ಸಿನಿಮಾ KGF ಚಾಪ್ಟರ್‌-2 (ಬಾಹುಬಲಿ - 2- 27/29 ರಾಜ್ಯಗಳು) KGF2 - 26/29 ರಾಜ್ಯಗಳು,

Fans listed Yash Starrer KGF Chapter- 2 movie 51 Records

3. 21ನೇ ಶತಮಾನದಲ್ಲಿ ಬಾಹುಬಲಿ ಹಾಗೂ ಗದ್ದರ್ ಬಿಟ್ಟರೆ ಅತಿ ಹೆಚ್ಚು ಟಿಕೆಟ್ ಮಾರಾಟವಾದ ಸಿನಿಮಾ KGF ಚಾಪ್ಟರ್‌- 2 (5.4 ಕೋಟಿ)

4. ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತದ ಸಿನಿಮಾಗಳಲ್ಲಿ 3ನೇ ಸಿನಿಮಾ KGF ಚಾಪ್ಟರ್‌- 2,(1250 ಕೋಟಿ ರೂ.) (ಮೊದಲೆರಡು ಸ್ಥಾನದಲ್ಲಿ ದಂಗಲ್, ಬಾಹುಬಲಿ- 2)

5. ಬಾಹುಬಲಿ- 2 ನಂತರ ಭಾರತದಲ್ಲಿ ಸಾರ್ವಕಾಲಿಕ ಎರಡನೇ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ (ಒಟ್ಟು 1000 ಕೋಟಿ ರೂ.)

6. ಬೆಂಗಳೂರು ನಗರದಲ್ಲಿ (BMS + paytm + ಕೌಂಟರ್) 1 ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ದಾಟಿದ ಮೊದಲ ಸಿನಿಮಾ

7. ಮೊದಲ ಬಾರಿಗೆ ಹೈದರಾಬಾದ್ ನಗರದಲ್ಲಿ 7 ಕೋಟಿ ರೂ. ಅಧಿಕ ಮುಂಗಡ ಬುಕಿಂಗ್ ಗ್ರಾಸ್ ದಾಟಿದ 2ನೇ ಸಿನಿಮಾ (RRR-10.80 ಕೋಟಿ)

8. ಉತ್ತರ ಭಾರತದಲ್ಲಿ ಕೋವಿಡ್ ಪ್ಯಾಂಡಮಿಕ್ ನಂತರ 4400 ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಂಡ ಮೊದಲ ಸಿನಿಮಾ ಜೊತೆ ದೊಡ್ಡಮಟ್ಟದಲ್ಲಿ ಬಿಡುಗಡೆಯಾದ 5ನೇ ಸಿನಿಮಾ

9. ಮೊದಲ ದಿನ ಚೆನ್ನೈನಲ್ಲಿ ಅತಿಹೆಚ್ಚು ಸೋಲ್ಡ್‌ ಔಟ್‌ ಆದ ಶೋಗಳು (ತಮಿಳು ಬಿಟ್ಟು ಬೇರೆ ನಟನ ಸಿನಿಮಾ)

10. ಮೊದಲ ದಿನ ಬೆಂಗಳೂರಿನ ಊರ್ವಶಿ ಸಿಂಗಲ್ ಸ್ಕ್ರೀನ್‌ನಲ್ಲಿ 43.5 ಲಕ್ಷ ಗ್ರಾಸ್ ಕಲೆಕ್ಷನ್ ಸಾರ್ವಕಾಲಿಕ ದಾಖಲೆಯಾಗಿದೆ.

11. KGFC ಚಾಪ್ಟರ್‌-2 ಹಿಂದಿ ಆವೃತ್ತಿಯು ಜರ್ಮನಿಯಲ್ಲಿ 87 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿತ್ತು.

12. ಅಡ್ವಾನ್ಸ್‌ ಬುಕ್ಕಿಂಗ್‌ನಲ್ಲಿ ಮೊದಲ ದಿನ ಬೆಂಗಳೂರಿನಲ್ಲಿ 10 ಕೋಟಿ ರೂ. ಗ್ರಾಸ್ ಕಲೆಕ್ಷನ್

13. ಫಸ್ಟ್ ವೀಕೆಂಡ್‌ನಲ್ಲಿ ಅತಿಹೆಚ್ಚು ಗಳಿಕೆ ಕಂಡ ಭಾರತ ಸಿನಿಮಾ 552 ಕೋಟಿ ರೂ. (ಬಾಹುಬಲಿ- 2 ₹526 ಕೋಟಿ)

14. ಹಿಂದಿಯಲ್ಲಿ ಮೊದಲ ದಿನ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ( ನೆಟ್ ಕಲೆಕ್ಷನ್ 53.95 ಕೋಟಿ ರೂ.)

15. ಕೋವಿಡ್ ಪ್ಯಾಂಡಮಿಕ್ ನಂತರ ಹಿಂದಿಯಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಹಾಗೂ ಅತಿ ಹೆಚ್ಚು ಗಳಿಕೆ ಕಂಡ 2ನೇ ಸಿನಿಮಾ.(432.23 ಕೋಟಿ ರೂ. ನೆಟ್ ಕಲೆಕ್ಷನ್ )

16. ಮುಂಗಡ ಬುಕಿಂಗ್‌ನಲ್ಲಿ ಅತಿ ಹೆಚ್ಚು ಗಳಿಸಿದ ಭಾರತದ ಸಿನಿಮಾ (80 ಕೋಟಿ ರೂ.) ಬಾಹುಬಲಿ -2 58 ಕೋಟಿ ರೂ. ಗಳಿಸಿತ್ತು.

17. ಒಡಿಶಾದಲ್ಲಿ 11.49 ಕೋಟಿ ರೂ. ಗಳಿಸಿದ ಎಲ್ಲಾ ಒಡಿಯಾ ಸಿನಿಮಾಗಳ ದಾಖಲೆ ಹಿಂದಿಕ್ಕಿತ್ತು

18. ಕೇರಳ 2022 ರ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ (68 ಕೋಟಿ. ರೂ.) ಹಾಗೂ 50 ಕೋಟಿ ರೂ. ಗಡಿಯನ್ನು ವೇಗವಾಗಿ ತಲುಪಿದ ಸಿನಿಮಾ

19. ಹಿಂದಿ ಬೆಲ್ಟ್, ಕೇರಳ, ಕರ್ನಾಟಕದಲ್ಲಿ ಸಾರ್ವಕಾಲಿಕ ಅತಿದೊಡ್ಡ ಓಪನಿಂಗ್

20. ವಿಶ್ವದಾದ್ಯಂತ ಒಟ್ಟು 1000 ಕೋಟಿ ಕ್ಲಬ್‌‌ಗೆ ವೇಗವಾಗಿ ಪ್ರವೇಶಿಸಿದ ಭಾರತದ ಸಿನಿಮಾ

21. ಮೊದಲ ಮತ್ತು ಅತಿ ಬೇಗ 100 ಮಿಲಿಯನ್, 150 ಮಿಲಿಯನ್ ಹಾಗೂ 250 ಮಿಲಿಯನ್ ವೀವ್ಸ್ ಪಡೆದ ಟೀಸರ್

22. ಯೂಟ್ಯೂಬ್‌ನಲ್ಲಿ ಮೊದಲ ಮತ್ತು ವೇಗವಾಗಿ 1 ಮಿಲಿಯನ್, 2 ಮಿಲಿಯನ್, 3 ಮಿಲಿಯನ್, 4 ಮಿಲಿಯನ್ ವೀವ್ಸ್ ಮತ್ತು ವಿಶ್ವದಲ್ಲೇ ಅತಿ ಹೆಚ್ಚು ಲೈಕ್ಸ್ ಗಿಟ್ಟಿಸಿದ ಟೀಸರ್ (9.8 ಮಿಲಿಯನ್ ಲೈಕ್ಸ್)

23. ಪ್ಯಾಂಡಮಿಕ್ ನಂತರ ಓವರ್‌ಸೀಸ್‌ನಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಹಿಂದಿ ಸಿನಿಮಾ $9M+

24. ಯುಕೆಯಲ್ಲಿ ಕೇವಲ 12 ಗಂಟೆಗಳಲ್ಲಿ ಸುಮಾರು 5,000 ಟಿಕೆಟ್‌ಗಳು ಮಾರಾಟವಾಗಿ ದಾಖಲೆ. ಈ ಅದ್ಭುತ ಸಾಧನೆ ಮಾಡಿದ ಮೊದಲ ಭಾರತೀಯ ಚಿತ್ರ.

25. ಕೆನಡಾದಲ್ಲಿ ಅತಿ ಹೆಚ್ಚು ಕಾಲ ಪ್ರದರ್ಶನ ಕಂಡ ಸಿನಿಮಾ (2 ವಾರಗಳು)

26. ಭಾರತದ ಚಿತ್ರಕ್ಕೆ ಅತ್ಯಧಿಕ ಅಡ್ವಾನ್ಸ್ ಬುಕ್ಕಿಂಗ್ (80.30 ಕೋಟಿ ರೂ.)

27. ಕೆನಡಾದಲ್ಲಿ 30,000 ಟಿಕೆಟ್‌ಗಳು ಮಾರಾಟವಾದ ಸಿನಿಮಾ KGF ಚಾಪ್ಟರ್ -2

28. ಬುಕ್‌ಮೈ ಶೋನಲ್ಲಿ ಸಾರ್ವಕಾಲಿಕ ದಾಖಲೆಯ ಟಿಕೆಟ್‌ಗಳು ಮಾರಾಟ (17.1 ಮಿಲಿಯನ್) ಬಾಹುಬಲಿ- 2 (17 ಮಿಲಿಯನ್)

29. ಕೆನಡಾದಲ್ಲಿ ಬಿಡುಗಡೆಯಾದ ಸಿನಿಮಾಗಳಲ್ಲಿ ಮೊದಲ ದಿನ ಹೆಚ್ಚು ಶೋಗಳು ಕಂಡ ಸಿನಿಮಾ

30. ನೇಪಾಳದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ 2ನೇ ವಿದೇಶಿ ಸಿನಿಮಾ (21. 1 ಕೋಟಿ ರೂ.) (ಬಾಹುಬಲಿ- 2 25 ಕೋಟಿ ರೂ.)

31. ಕೇರಳ ಬಾಕ್ಸಾಫೀಸ್‌ನಲ್ಲಿ ಮೊದಲ ದಿನ 7 ಕೋಟಿ ರೂ. ಗಳಿಕೆ ದಾಟಿದ ಸಿನಿಮಾ. (ಒಟ್ಟು 7.48 ಕೋಟಿ ರೂ. )

32. ಮೊದಲ 4 ದಿನ ತಮಿಳುನಾಡಿನಲ್ಲಿ ರಾತ್ರಿ 12 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ಹೆಚ್ಚು ಶೋಗಳು ಪ್ರದರ್ಶನ ಕಂಡ ಸಿನಿಮಾ.

33. ಬುಕ್‌ಮೈ ಶೋನಲ್ಲಿ RRR (989 ಸಾವಿರ) ನಂತರ ಹೆಚ್ಚು ರೇಟಿಂಗ್ ಪಡೆದ (923 ಸಾವಿರ) KGF ಚಾಪ್ಟರ್- 2

34. ಪ್ಯಾಂಡಮಿಖ್ ನಂತರ ವಿಶ್ವದಾದ್ಯಂತ 10 ಸಾವಿರಕ್ಕು ಹೆಚ್ಚು ಪ್ರದರ್ಶನ ಕಂಡ 2ನೇ ಸಿನಿಮಾ

35. ಅವೆಂಜರ್ಸ್ ಎಂಡ್‌ ಗೇಮ್ ಹಾಗೂ ಬಾಹುಬಲಿ-2 ದಾಖಲೆ ಮುರಿದು ಮೊದಲ ದಿನ ಅತಿ ಹೆಚ್ಚು ಅಡ್ವಾನ್ಸ್ ಬುಕ್ಕಿಂಗ್ ಕಂಡ ಸಿನಿಮಾ(2.9 ಮಿಲಿಯನ್)

36. ಹಿಂದಿ ವರ್ಷನ್ ಸಿನಿಮಾ ಹಿಂದಿ ಬೆಲ್ಟ್‌ನಲ್ಲಿ ಮೊದಲ ದಿನ, ಮೊದಲ ವೀಕೆಂಡ್ ಹಾಗೂ ಮೊದಲ ವಾರ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ

37. KGF- 2 ವಿಶ್ವದಾದ್ಯಂತ IMAXನಲ್ಲಿ ಬಿಡುಗಡೆಯಾದ ಮೊದಲ ಕನ್ನಡ ಸಿನಿಮಾ

38. ಹಿಂದಿ ಸರ್ಕ್ಯೂಟ್‌ನಲ್ಲಿ 250 ಕೋಟಿ ರೂ. ಅತಿ ವೇಗವಾಗಿ ತಲುಪಿದ ಸಿನಿಮಾ

39. ಬುಕ್‌ಮೈ ಶೋ ಪ್ಲಾಟ್‌ಫಾರ್ಮ್‌ನಲ್ಲಿ ಅತಿ ಹೆಚ್ಚು ಟಿಕೆಟ್ ಮಾರಾಟವಾಗಿ ಹಳೇ ದಾಖಲೆಗಳನ್ನೆಲ್ಲಾ ಮುರಿದಿದೆ. ಪ್ರತಿ ಸೆಕೆಂಡಿಗೆ 84 ಟಿಕೆಟ್‌ಗಳು ಮಾರಾಟವಾಗಿತ್ತು.

40. ತಮಿಳುನಾಡು, ಆಂಧ್ರ/ತೆಲಂಗಾಣ ಮತ್ತು ಹಿಂದಿ ಬಾಕ್ಸಾಫೀಸ್‌ನಲ್ಲಿ 100 ಕೋಟಿ ರೂ. ಕಲೆಕ್ಷನ್ ಮಾಡಿದ ಸಿನಿಮಾ.

41. ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಗಳಿಕೆಯ ಚಲನಚಿತ್ರ 180 ಕೋಟಿ ರೂ. (ಅಂದಾಜು)

42. ದಕ್ಷಿಣ ಕೊರಿಯಾದಲ್ಲಿ ಪ್ರದರ್ಶನಗೊಂಡ ಮೊದಲ ದಕ್ಷಿಣ ಭಾರತದ ಸಿನಿಮಾ

43. ಉತ್ತರ ಭಾರತದಲ್ಲಿ 1.50 ಕೋಟಿ ರೂ. ಕಲೆಕ್ಷನ್ ಮಾಡಿದ ಕನ್ನಡ ವರ್ಷನ್ ಸಿನಿಮಾ.

44. 2022ರ ಅತಿ ಹೆಚ್ಚು ಲಾಭ ಗಳಿಸಿದ 3ನೇ ಸಿನಿಮಾ. (680% ಆದಾಯ) ಸಾರ್ವಕಾಲಿಕವಾಗಿ 4ನೇ ಸಿನಿಮಾ.

45. ತಮಿಳುನಾಡಿದ ವಾಸು ಚಿತ್ರಮಂದಿರದಲ್ಲಿ ಕೆಜಿಎಫ್- 2 ಕಳೆದ 15 ವರ್ಷಗಳಲ್ಲಿ ದೊಡ್ಡ ಬ್ಲಾಕ್‌ಬಸ್ಟರ್ ಸಿನಿಮಾ.

46. ಮೊದಲದ ದಿನದ ಗಳಿಕೆಯಲ್ಲಿ RRR(222 ಕೋಟಿ ರೂ.) ಮತ್ತು ಬಾಹುಬಲಿ- 2 (213 ಕೋಟಿ ರೂ.) ನಂತರ ಸ್ಥಾನದಲ್ಲಿ KGF ಚಾಪ್ಟರ್-2 ಸಿನಿಮಾ ಇದೆ. (ಒಟ್ಟು 165.1 ಕೋಟಿ ರೂ.)

47. ಫಸ್ಟ್ ವೀಕೆಂಡ್‌ನಲ್ಲಿ ಭಾರತದಲ್ಲಿ IMAXನಲ್ಲಿ ದಾಖಲೆ

48. ಆಂಧ್ರ, ತೆಲಂಗಾಣದಲ್ಲಿ ತೆಲುಗು ಅಲ್ಲದ ಹೊರಗಿನ ಸಿನಿಮಾ ಮೊದಲ ದಿನ, 2 ನೇ ದಿನ ಹಾಗೂ ವೀಕೆಂಡ್‌ನಲ್ಲಿ ಹೆಚ್ಚು ಗಳಿಕೆ.

49. ಯೂಟ್ಯೂಬ್‌ನಲ್ಲಿ ಎಲ್ಲಾ ಭಾಷೆಗಳು ಟ್ರೈಲರ್ 109 ಮಿಲಿಯನ್‌ಗೂ ಹೆಚ್ಚು ವೀವ್ಸ್. 24 ಗಂಟೆಗಳಲ್ಲಿ ಅತಿ ಹೆಚ್ಚು ವೀಕ್ಷಿಸಿದ ಭಾರತದ ಸಿನಿಮಾ ಟ್ರೈಲರ್

50. ಭಾರತದಲ್ಲಿ 'ತೂಫಾನ್' ಹಾಡು 24 ಗಂಟೆಗಳಲ್ಲಿ ಅತಿ ಹೆಚ್ಚು ವೀಕ್ಷಿಸಿದ ಲಿರಿಕಲ್ ವಿಡಿಯೋ ಸಾಂಗ್ ಆಗಿದೆ. (26 ಮಿಲಿಯನ್)

51. ಕಿರಿಯ ವಯಸ್ಸಿನ ಉಜ್ವಲ್ ಕುಲಕರ್ಣಿ ಚಿತ್ರದ ಸಂಕಲನ ಮಾಡಿದ್ದಾರೆ. (ಅವರು ತಂಡ ಸೇರಿಕೊಂಡಾಗ ವಯಸ್ಸು 16 ವರ್ಷ)

More from Filmibeat

English summary
Fans listed Yash Starrer KGF Chapter- 2 movie 51 Records. KGF Chapter- 2 completes a year, Fans Remember craze an Records. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X