ನೀನು ನಟಿಯಾಗೋದು ಬೇಡ, ದರ್ಶನ್ ಜೊತೆ ಮದ್ವೆಯಾಗಿ ಸೆಟ್ಲ್ ಆಗಿಬಿಡು; ಖ್ಯಾತನಟಿಗೆ ಸಲಹೆ ಕೊಟ್ಟಿದ್ರು ತಂದೆ
ತೂಗುದೀಪ ಶ್ರೀನಿವಾಸ್ ಮಗನಾದರೂ ದರ್ಶನ್ ಚಿತ್ರರಂಗದಲ್ಲಿ ಗುರ್ತಿಸಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಆರಂಭದಲ್ಲಿ ಲೈಟ್ ಬಾಯ್, ಕ್ಯಾಮರಾ ಅಸಿಸ್ಟೆಂಟ್ ಆಗಿ ಕೂಡ ದರ್ಶನ್ ಕೆಲಸ ಮಾಡಿದ್ದರು. 'ಜನುಮದ ಜೋಡಿ' ಚಿತ್ರಕ್ಕೂ ತೆರೆಹಿಂದೆ ದರ್ಶನ್ ದುಡಿದಿದ್ದರು. 'ಮಹಾಭಾರತ' ಹಾಗೂ 'ದೇವರ ಮಗ' ಚಿತ್ರಗಳ ಸಣ್ಣ ಪಾತ್ರಗಳಲ್ಲಿ ನಟಿಸಿದ್ದ ದರ್ಶನ್ 'ಮೆಜೆಸ್ಟಿಕ್' ಚಿತ್ರದ ಮೂಲಕ ಹೀರೊ ಆಗಿ ಸಕ್ಸಸ್ ಕಂಡಿದ್ದರು.
ಕಿರುತೆರೆ ಧಾರಾವಾಹಿಯಲ್ಲಿ ಕೂಡ ದರ್ಶನ್ ನಟಿಸಿದ್ದರು. ಹೀರೊ, ಸೂಪರ್ ಸ್ಟಾರ್ ಆಗುವ ಕನಸ್ಸು ಕಂಡಿರಲಿಲ್ಲ. ನೀನಾಸಂಗೆ ಹೋಗಿ ಕಲಿತುಬಂದಿದ್ದ ದರ್ಶನ್ ಒಳ್ಳೆ ನಟನಾಗುವ ಆಸೆ ಇತ್ತು. ತಂದೆ ಬೇಡ ಎಂದರೂ ಕೇಳದೇ ಚಿತ್ರರಂಗದಲ್ಲೇ ಸಾಧಿಸುವ ಹಠ ತೊಟ್ಟರು. ತಮಿಳು ಚಿತ್ರವೊಂದರಲ್ಲಿ ಸಣ್ಣ ಪಾತ್ರದಲ್ಲಿ ನಟಿಸಿದ್ದರು. ಚಿತ್ರರಂಗದಲ್ಲಿ ಹೀರೊ ಆಗಿ ಕೊಂಚ ಯಶಸ್ಸು ಕಂಡು, ಒಳ್ಳೆ ಅವಕಾಶಗಳು ಬರುತ್ತಿದ್ದ ಸಮಯದಲ್ಲೇ ವಿಜಯಲಕ್ಷ್ಮಿ ಅವರನ್ನು ದರ್ಶನ್ ಮದುವೆ ಆಗಿದ್ದರು. ಆದರೆ ಕ್ಯಾಮರಾ ಅಸಿಸ್ಟೆಂಟ್ ಆಗಿದ್ದಾಗಲೇ ಮಗಳನ್ನು ಕೊಟ್ಟು ಮದುವೆ ಮಾಡಲು ಕನ್ನಡ ಚಿತ್ರರಂಗದ ಖ್ಯಾತ ಕ್ಯಾಮರಾಮನ್ ಆಸೆಪಟ್ಟಿದ್ದರು.

ಮಗಳು ಸಿನಿಮಾ ನಾಯಕಿ ಆಗ್ತೀನಿ ಅಂದಾಗ ತಂದೆ ಬೇಡ ಅಂದಿದ್ರು. ದರ್ಶನ್ ಎಂಬ ಒಳ್ಳೆ ಹುಡುಗ ಇದ್ದಾನೆ, ಅವನನ್ನು ಮದುವೆ ಆಗಿ ಲೈಫಲ್ಲಿ ಸೆಟ್ಲ್ ಆಗಿಬಿಡು ಎಂದು ಮಗಳಿಗೆ ಸಲಹೆ ನೀಡಿದ್ದರು. ಅಚ್ಚರಿಯ ಸಂಗತಿಯಂದರೆ ದರ್ಶನ್ ಯಾರು? ಹೇಗಿದ್ದಾರೆ ಎನ್ನುವುದು ಅಲ್ಲಿಯವರೆಗೆ ಆಕೆಗೆ ಗೊತ್ತಿರಲಿಲ್ಲ. ಮುಂದೆ ಅವರು ಕನ್ನಡ ಚಿತ್ರರಂಗ ಪ್ರವೇಶಿಸಿ ಸಕ್ಸಸ್ ಕಂಡರು. ತೆಲುಗು ಚಿತ್ರರಂಗದಲ್ಲೂ ಒಳ್ಳೆ ಕ್ರೇಜ್ ಸಂಪಾದಿಸಿದರು. ತಮಿಳು ಚಿತ್ರದಲ್ಲಿ ಕೂಡ ನಟಿಸಿದ್ದರು. ಕೊನೆ ದರ್ಶನ್ ಜೋಡಿಯಾಗಿ ಮಿಂಚಿದ್ದರು. ಅವರಿಬ್ಬರು ನಟಿಸಿದ ಸಿನಿಮಾಗಳು ಹಿಟ್ ಆಗಿ ಹಿಟ್ ಜೋಡಿ ಎನಿಸಿಕೊಂಡಿದ್ದರು.
ಅಷ್ಟಕ್ಕೂ ಆ ನಟಿ ಯಾರು ಎನ್ನುವುದು ನಿಮಗೆ ಅರ್ಥ ಆಗಿರುತ್ತದೆ. ಹೌದು, ಅದು ಮತ್ಯಾರೂ ಅಲ್ಲ, ಕ್ರೇಜಿ ಕ್ವೀನ್ ರಕ್ಷಿತಾ. ಅಂದಹಾಗೆ ದರ್ಶನ್ ಹೀರೊ ಆಗುವ ಮುನ್ನ ಕ್ಯಾಮರಾಮನ್ ಗೌರಿ ಶಂಕರ್ ಬಳಿಕ ಸಹಾಯಕರಾಗಿ ಕೆಲಸ ಮಾಡಿಕೊಂಡಿದ್ದರು. ಗೌರಿ ಶಂಕರ್ ಮಗಳು ರಕ್ಷಿತಾ. 'ಅಪ್ಪು' ಸಿನಿಮಾ ಮೂಲಕ ಆಕೆ ನಾಯಕಿಯಾಗಿ ಸಕ್ಸಸ್ ಕಂಡಿದ್ದು ಗೊತ್ತೇಯಿದೆ. ಮುಂದೆ 'ಕಲಾಸಿಪಾಳ್ಯ' ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ಕಮಾಲ್ ಮಾಡಿದ್ದರು. ದರ್ಶನ್ ಜೊತೆ ಮದುವೆ ಆಗುವಂತೆ ರಕ್ಷಿತಾಗೆ ತಂದೆ ಗೌರಿಶಂಕರ್ ಸಲಹೆ ನೀಡಿದ್ದರಂತೆ. ಈ ವಿಚಾರವನ್ನು ಸ್ವತ ರಕ್ಷಿತಾ ಹಾಗೂ ದರ್ಶನ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು.
ರಕ್ಷಿತಾ ಪ್ರೇಮ್ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬಂದಾಗ ತಮ್ಮ ಸಿನಿ ಜೀವನದ ಆರಂಭದ ದಿನಗಳ ಬಗ್ಗೆ ಮಾತನಾಡಿದ್ದರು. ತಾವು ನಾಯಕಿಯಾಗಬೇಕು ಅಂದುಕೊಂಡಾಂಗ ತಂದೆ ಗೌರಿ ಶಂಕರ್ ಬೇಡ ಎಂದಿದ್ರು. ನನ್ನ ಬಳಿ ದರ್ಶನ್ ಎಂಬ ಒಳ್ಳೆ ಹುಡುಗ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದಾನೆ. ಅವನ್ನು ಮದುವೆ ಆಗಿಬಿಡು ಎಂದು ಸಲಹೆ ಕೊಟ್ಟಿದ್ದಾಗಿ ನೆನಪಿಸಿಕೊಂಡಿದ್ದರು. ಇದೇ ವಿಚಾರವನ್ನು ಬಳಿಕ ದರ್ಶನ್ ಶೋಗೆ ಬಂದಾಗ ರಮೇಶ್ ನೆನಪು ಮಾಡಿದ್ದರು.

ದರ್ಶನ್ ಹಾಗೂ ರಕ್ಷಿತಾ ಬಹಳ ಆತ್ಮೀಯ ಸ್ನೇಹಿತರು. ಹೋಗೆ.. ಬಾರೋ.. ಎನ್ನುವಂತಹ ಆತ್ಮೀಯ ಸ್ನೇಹ ಒಡನಾಟ ಇಬ್ಬರ ನಡುವೆ ಇದೆ. 'ಕಲಾಸಿಪಾಳ್ಯ' ಬಳಿಕ 'ಮಂಡ್ಯ', 'ಅಯ್ಯ' ಹಾಗೂ 'ಸುಂಟರಗಾಳಿ' ಸಿನಿಮಾಗಳಲ್ಲಿ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಇವತ್ತಿಗೂ ಅವರಿಬ್ಬರ ಸ್ನೇಹ ಅದೇ ರೀತಿ ಮುಂದುವರೆದಿದೆ.


Click it and Unblock the Notifications