"ದರ್ಶನ್‌ನ ಬರೀ ಅಂಡರ್‌ವೇರ್‌ನಲ್ಲಿ ಕೂರಿಸಿ ಹೊಡೆದಿದ್ರು ಅಪ್ಪ"; ದಿನಕರ್ ತೂಗುದೀಪ
ದಿನಕರ್ ತೂಗುದೀಪ ನಿರ್ದೇಶನದ 'ರಾಯಲ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದೇ ವಾರ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರ್ತಿದೆ. ವಿರಾಟ್ ಹಾಗೂ ಸಂಜನಾ ಆನಂದ್ ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸುತ್ತಿದ್ದಾರೆ. ಜಯಣ್ಣ ಹಾಗೂ ಭೋಗೇಂದ್ರ ಬಂಡವಾಳ ಹೂಡಿದ್ದಾರೆ. ಚಿತ್ರದ ಪ್ರಚಾರದ ಭಾಗವಾಗಿ ದಿನಕರ್ ಸಾಕಷ್ಟು ಸಂದರ್ಶನದಲ್ಲಿ ಭಾಗಿ ಆಗುತ್ತಿದ್ದಾರೆ.
ಫಿಲ್ಮಿಬೀಟ್ ಕನ್ನಡ ಸಂದರ್ಶನದಲ್ಲಿ ಕೂಡ ದಿನಕರ್ ತೂಗುದೀಪ ಮಾತನಾಡಿದ್ದಾರೆ. ತಮ್ಮ 'ರಾಯಲ್' ಸಿನಿಮಾ ಜೊತೆಗೆ ವೈಯಕ್ತಿಕ ವಿಚಾರಗಳ ಬಗ್ಗೆಯೂ ಮಾತನಾಡಿದ್ದಾರೆ. ತಮ್ಮ ಬಾಲ್ಯದ ದಿನಗಳು, ಚಿತ್ರರಂಗಕ್ಕೆ ಬಂದಿದ್ದು ಎನ್ನುವನ್ನು ನೆನಪಿಸಿಕೊಂಡಿದ್ದಾರೆ. ದರ್ಶನ್ ಜೊತೆಗಿನ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ. ತಂದೆ ತೂಗುದೀಪ ಶ್ರೀನಿವಾಸ್ ಇಬ್ಬರಿಗೂ ಒಮ್ಮೆ ಹೊಡೆದಿದ್ದ ಘಟನೆಯನ್ನು ಹೇಳಿ ನಕ್ಕಿದ್ದಾರೆ.

ನಟ ದರ್ಶನ್ ಮೊದಲ ಹೆಸರು ಹೇಮಂತ್ ಕುಮಾರ್. ಆದರೆ ಮನೆಯಲ್ಲಿ ಅಪ್ಪು ಎಂದು ಪ್ರೀತಿಯಿಂದ ಕರೆಯುತ್ತಾರೆ. ಅದೇ ರೀತಿ ದಿನಕರ್ ಅವರಿಗೆ ಪಾಪು ಎಂಬ ಮುದ್ದಿನ ಹೆಸರಿದೆ. ನಾನು ಒಂದು ಒಂದನೇ ತರಗತಿಯಲ್ಲಿದ್ದೆ. ಆಗ ದರ್ಶನ್ 3ನೇ ತರಗತಿ. ಒಮ್ಮೆ ಶಾಲೆಯಿಂದ ಮನೆಗೆ ಬೇಗ ಬಂದುಬಿಟ್ಟಿದ್ದೆವು. ಅವತ್ತು ಅಪ್ಪ ಮನೆಯಲ್ಲಿ ಇದ್ದರು. ಆಗ ತಂದೆ ದರ್ಶನ್‌ಗೆ ಸರಿಯಾಗಿ ಹೊಡೆದಿದ್ದರು ಎಂದು ದಿನಕರ್ ಹೇಳಿದ್ದಾರೆ.
ನಮ್ಮ ಶಾಲೆಯ ಪಕ್ಕದಲ್ಲಿ ಒಂದು ಟಾಂಗಾ ಗಾಡಿ ಸ್ಟ್ಯಾಂಡ್ ಇತ್ತು. ಅಲ್ಲಿ ಒಂದು ಕುದುರೆ ಮರಿ ಹಾಕಿತ್ತು. ಅದನ್ನು ದರ್ಶನ್ ನೋಡಿದ್ದ. ಹೇಗಾದರೂ ಮಾಡಿ ಕುದುರೆ ಮರಿಯನ್ನು ತೆಗೆದುಕೊಂಡು ಮನೆಗೆ ಹೋಗಬೇಕು ಎಂದು ಪ್ಲ್ಯಾನ್ ಮಾಡಿದ್ದ. ನಮ್ಮ ಜೊತೆ ಶಾಲೆಗೆ ಮಕ್ಕಳಿಗೆಲ್ಲಾ ಕುದುರೆ ಹಿಡಿಯುವ ವಿಚಾರ ಹೇಳಿದ್ದ. ಶಾಲೆಯಿಂದ ಚಕ್ಕರ್ ಹೊಡೆದು ಮಕ್ಕಳನ್ನು ಕರೆದುಕೊಂಡು ಕುದುರೆ ಹಿಡಿಯಲು ಹೋಗಿದ್ದೆವು" ಎಂದು ದಿನಕರ್ ಆ ಘಟನೆ ನೆನಪಿಸಿಕೊಂಡಿದ್ದಾರೆ.

"ಶಾಲೆ ಬಿಟ್ಟಿದೆ ಎಂದುಕೊಂಡು ಬೇಗ ಮನೆಗೆ ಹೋಗಿದ್ದೆವು. ಅಮ್ಮ ಕೇಳಿದರೂ ಯಾಕೆ ಬೇಗ ಬಂದ್ರಿ ಎಂದ್ರು. ಶಾಲೆ ಬಿಟ್ರು ಬಂದುಬಿಟ್ಟೆವು ಎಂದು ದರ್ಶನ್ ಹೇಳಿದ. ನಮ್ಮ ಅಪ್ಪ ಇದ್ರು, ದರ್ಶನ್‌ಗೆ ಸರಿಯಾಗಿ ಬೆಂಡ್ ಎತ್ತಿದ್ರು. ನಾನು ಚಿಕ್ಕವನು ಎಂದು ಪಕ್ಕದಲ್ಲಿ ಕೂರಿಸಿದ್ರು. ಕೆಂಡಕ್ಕೆ ಮೆಣಸಿನ ಕಾಯಿ ಹಾಕಿದ್ದರು. ದರ್ಶನ್‌ನ ಬರೀ ಅಂಡರ್‌ವೇರ್‌ನಲ್ಲಿ ಕೂರಿಸಿ ಬೆಲ್ಟ್‌ನಲ್ಲಿ ಹೊಡೆದರು. ಅಕ್ಕ ಗಾಬರಿಯಿಂದ ಬಂದ್ಲು, ಅಪ್ಪು, ಪಾಪು ಶಾಲೆಯಲ್ಲಿ ಇಲ್ಲ ಅಂದ್ಲು, ಅಮ್ಮ ರೂಮ್ ಅಲ್ಲಿ ನೋಡು ಅಂದ್ಲು. ಅಕ್ಕ ಬಾಗಿಲು ತೆಗೆದಾಗ ದರ್ಶನ್ ಅಂಡರ್‌ವೇರ್‌ನಲ್ಲಿ ಕೂತಿದ್ದ, ನಾನು ಅಳುತ್ತ ಪಕ್ಕ ಕೂತಿದ್ದೆ" ಎಂದು ದಿನಕರ್ ನೆನಪು ಮಾಡಿಕೊಂಡಿದ್ದಾರೆ.
ಚಿತ್ರರಂಗಕ್ಕೆ ಬಂಧ ವಿಚಾರವನ್ನು ದಿನಕರ್ ನೆನಪಿಸಿಕೊಂಡಿದ್ದಾರೆ. ತಂದೆ ಪಟ್ಟಷ್ಟು ಕಷ್ಟ ದರ್ಶನ್ ಪಡಲಿಲ್ಲ, ಅದೇ ರೀತಿ ದರ್ಶನ್ ಪಟ್ಟ ಕಷ್ಟ ನಾನು ಪಡಲಿಲ್ಲ. ದರ್ಶನ್ ಬೆಂಬಲದಿಂದ ನಾನು ಚಿತ್ರರಂಗಕ್ಕೆ ಬಂದೆ. ನನ್ನನ್ನು ಹೀರೊ ಆಗಿ ನಟಿಸುವಂತೆ ಕೇಳಿದರು, ನಾನೇ ಒಪ್ಪಲಿಲ್ಲ. ನಾನು ನಿರ್ದೇಶಕ ಆಗಬೇಕು ಎಂದುಕೊಂಡೆ ಚಿತ್ರರಂಗಕ್ಕೆ ಬಂದೆ. ಅದೇ ರೀತಿ ಆಗಿದ್ದೀನಿ. 'ಜೊತೆ ಜೊತೆಯಲಿ' ಸಿನಿಮಾ ಸಿಲ್ವರ್ ಜ್ಯುಬಿಲಿ ಹೋಯ್ತು.
ಆ ಕಥೆಯನ್ನು ಬಹಳ ಜನ ರಿಜೆಕ್ಟ್ ಮಾಡಿದ್ದರು. ದರ್ಶನ್ ಹೆಸರು ಹೇಳಿದರೆ ನಿರ್ಮಾಪಕರು ಮುಂದೆ ಬಂದು ಸಿನಿಮಾ ಮಾಡ್ತಾರೆ. ಆದರೆ ಸಿನಿಮಾ ಚೆನ್ನಾಗಿ ಆಗದಿದ್ದರೆ ನಿರ್ಮಾಪಕರಿಗೆ ನಾನು ನಷ್ಟ ಮಾಡಿದಂತೆ ಆಗುತ್ತದೆ. 'ಜೊತೆ ಜೊತೆಯಲಿ' ಸಿನಿಮಾ ಮಾಡೋಕೆ ಕಷ್ಟ ಆಯ್ತು. ಆ ಟೈಮಲ್ಲಿ ದರ್ಶನ್‌ನ ಸಾಕಷ್ಟು ಬೈದುಕೊಂಡಿದ್ದೀನಿ ಎಂದು ದಿನಕರ್ ಹೇಳಿದ್ದಾರೆ.


Click it and Unblock the Notifications











