Father's Day 2024; ಅಪ್ಪಾ ಐ ಲವ್‌ಯು ಪಾ

ಅಮ್ಮ ಅಕ್ಕರೆಯ ಕಡಲಾದರೆ, ಅಪ್ಪ ವಿಶ್ವಾಸದ ಆಕಾಶ. ತಂದೆ ತಾಯಿ ಮಕ್ಕಳಿಗೆ ಎರಡು ಕಣ್ಣುಗಳು. ಅವರಿಬ್ಬರ ತ್ಯಾಗ, ನೋವು, ನಗು, ನಲಿವಿಲ್ಲದೆ ಈ ಬದುಕು ಸಾಧ್ಯವಿಲ್ಲ. 9 ತಿಂಗಳು ಹೊತ್ತು ಹೆತ್ತು ಸಾಕುವವಳು ತಾಯಿಯಾದರೆ ಬದುಕಿನುದ್ದಕ್ಕೂ ಹೆಜ್ಜೆ ಹೆಜ್ಜೆ ಜೊತೆ ನಿಲ್ಲುವವವನು ಅಪ್ಪ. ಇಡೀ ಕುಟುಂಬದ ನೊಗ ಹೊತ್ತು ಸಾಗುವ ತ್ಯಾಗಮಯಿ ಅಪ್ಪ.

ಪ್ರತಿ ವರ್ಷ ಜೂನ್‌ ತಿಂಗಳ 3ನೇ ಭಾನುವಾರ ತಂದೆಯಂದಿರ ದಿನ ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಮಕ್ಕಳು ಅಪ್ಪನಿಗೆ ಶುಭಾಶಯ ತಿಳಿಸುವ ಮೂಲಕ ಆಚರಿಸುತ್ತಾರೆ. ತಂದೆಯ ತ್ಯಾಗವನ್ನು ನೆನೆಯುವ ದಿನವಿದು. ಮದರ್‌ ಸೆಂಟಿಮೆಂಟ್ ಸಿನಿಮಾಗಳೇ ಹೆಚ್ಚು. ಆಗೊಮ್ಮೆ ಈಗೊಮ್ಮೆ 'ಅಪ್ಪ ಐ ಲವ್ ಯು ಪಾ' ಎನ್ನುವ ಸಿನಿಮಾಗಳು ಬರುತ್ತವೆ. ಇತ್ತೀಚೆಗೆ ಬಂದ 'ಯುವ' ಚಿತ್ರದಲ್ಲಿ ಕೂಡ ತಂದೆ ಮಗನ ಬಾಂಧವ್ಯದ ಕಥೆಯಿತ್ತು. ಕಳೆದ ವರ್ಷ ಬಂದ 'ಅನಿಮಲ್', 'ಜವಾನ್' ಸಿನಿಮಾಗಳ ತಿರುಳು ಇದೇ ಆಗಿತ್ತು.

Father s Day These Father and children sentiment kannada movies ready to release

ಸದ್ಯ ಕನ್ನಡದಲ್ಲಿ ನಿರ್ಮಾಣವಾಗುತ್ತಿರುವ ಕೆಲ ಸಿನಿಮಾಗಳಲ್ಲಿ ತಂದೆ- ಮಗನ ಕಥೆಗಳಿವೆ. ಪ್ರತಿಯೊಬ್ಬರ ಬಾಳಿನ ರಿಯಲ್ ಹೀರೊ ಸುತ್ತಾ ಒಂದಷ್ಟು ಸಿನಿಮಾಗಳು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿವೆ. ತಂದೆ ತೊಂದರೆ ಕೊಟ್ಟವರ ವಿರುದ್ಧ ಸೇಡು ತೀರಿಸಿಕೊಳ್ಳುವ ಮಗನ ಕಥೆಗಳು ಸಾಕಷ್ಟು ಬಂದು ಹೋಗಿವೆ. ತಂದೆ-ಮಕ್ಕಳ ಬಾಂಡಿಂಗ್‌ ಬಗ್ಗೆ ಎಷ್ಟೇ ಸಿನಿಮಾಗಳು ಬಂದರೂ ಅದು ಚಿರುನೂತನ ಅಧ್ಯಾಯವೇ ಆಗಿರುತ್ತದೆ.

1. ಸತ್ಯ ಸನ್ ಆಫ್ ಹರಿಶ್ಚಂದ್ರ

'ರಂಗಿತರಂಗ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದ ಸಾಯಿಕುಮಾರ್ ಹಾಗೂ ನಿರೂಪ್ ಭಂಡಾರಿ ಜೊತೆಗಯಾಗಿರುವ ಮತ್ತೊಂದು ಸಿನಿಮಾ 'ಸತ್ಯ ಸನ್ ಆಫ್ ಹರಿಶ್ಚಂದ್ರ'. ಸಚಿನ್ ವಾಲಿ ನಿರ್ದೇಶನದ ಚಿತ್ರಕ್ಕೆ 'ನನ್ನ ತಂದೆಯೇ ನನ್ನ ವಿಲನ್' ಎನ್ನುವ ಟ್ಯಾಗ್‌ಲೈನ್ ಸಹ ಇದೆ. ಬೃಂದಾ ಆಚಾರ್ಯ ನಾಯಕಿಯಾಗಿ ನಟಿಸುತ್ತಿದ್ದಾರೆ. ಟೈಟಲ್‌ ಹೇಳುವಂತೆ ಇದು ತಂದೆ-ಮಗನ ಬಾಂಧವ್ಯದ ಕಥೆ. ಹಾಸ್ಯ ಹಾಗೂ ಸಾಂಸಾರಿಕ ವಿಷಯ ಚಿತ್ರದಲ್ಲಿದೆ.

2. ಫಾದರ್

ಆರ್‌. ಸಿ ಮೂವೀಸ್ ಬ್ಯಾನರ್‌ನಲ್ಲಿ ಆರ್‌. ಚಂದ್ರು ನಿರ್ಮಾಣದ ಚೊಚ್ಚಲ ಸಿನಿಮಾ 'ಫಾದರ್'. ರಾಜ್ ಮೋಹನ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಪ್ರಕಾಶ್ ರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಚಿತ್ರದಲ್ಲಿ ತಂದೆ- ಮಗನಾಗಿ ನಟಿಸುತ್ತಿದ್ದಾರೆ. ಅಮೃತಾ ಅಯ್ಯಂಗಾರ್ ನಾಯಕಿಯಾಗಿ ನಟಿಸುತ್ತಿದ್ದು ಸುನಿಲ್ ಸಹ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಬೈರಾಗಿ' ಚಿತ್ರಕ್ಕೆ ರಾಜ್‌ ಮೋಹನ್ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು.

3. ಜನಕ

ಮನು ನಿರ್ದೇಶಿಸಿ ಹೀರೊ ಆಗಿ ನಟಿಸಿರುವ ಸಿನಿಮಾ 'ಜನಕ' ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ ನಿರ್ದೇಶಕ ಓಂ ಸಾಯಿ ಪ್ರಕಾಶ್ ಈ ಚಿತ್ರದ ಟ್ರೈಲರ್ ಹಾಗೂ ಸಾಂಗ್ಸ್ ಬಿಡುಗಡೆ ಮಾಡಿದ್ದರು. ರಕ್ಷಾ ಹಾಗೂ ಶಾಲಿನಿ ಚಿತ್ರದ ನಾಯಕಿಯರು. ಸುರೇಶ್​ ಬಾಬು, ರಾಜಲಕ್ಷ್ಮಿ, ಆನಂದ್ ಇನ್ನುಳಿದ ತಾರಾಗಣದಲ್ಲಿದ್ದಾರೆ. ಮನು ತಾಯಿ ಪ್ರೇಮಾ 'ಜನಕ' ಚಿತ್ರಕ್ಕೆ ಹಣ ಹೂಡಿದ್ದಾರೆ. ಟೈಟಲ್ ಹೇಳುವಂತೆ ಇದು ತಂದೆ- ಮಗನ ಕಥೆ ಇರುವ ಸಿನಿಮಾ.

More from Filmibeat

English summary
Son of satya harishchandra to Janaka; 4 father son story films ready to big screen;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X