"ರಾಜ್‌ಕುಮಾರ್ ಕಿಡ್ನಾಪ್ ಮಾಡಿದ್ದನ್ನು ವೀರಪ್ಪನ್ ಅಪ್ಪುಗೆ ಮಾತ್ರ ಹೇಳಿದ್ದ" ತಮಿಳು ಪತ್ರಕರ್ತ!
ಪವರ್‌ಸ್ಟಾರ್ ಪುನೀತ್‌ರಾಜ್‌ಕುಮಾರ್ ಅಗಲಿಕೆಯನ್ನು ಅವರ ಅಭಿಮಾನಿಗಳು ಇನ್ನೂ ಒಪ್ಪಿಕೊಂಡಿಲ್ಲ. ಇಂದಿಗೂ ಅಪ್ಪು ನೆನಪಿನಲ್ಲಿಯೇ ಫ್ಯಾನ್ಸ್ ಬದುಕುತ್ತಿದ್ದಾರೆ. ಕೆಲವರು ಯುವರಾಜ್‌ಕುಮಾರ್‌ನಲ್ಲಿ ಪುನೀತ್ ಕಾಣುವುದಕ್ಕೆ ಯತ್ನಿಸುತ್ತಿದ್ದಾರೆ.
ಪುನೀತ್ ರಾಜ್‌ಕುಮಾರ್ ಒಬ್ಬ ನಟನಾಗಿ ಅಷ್ಟೇ ಅಲ್ಲ, ಸಮಾಜಮುಖಿ ಕೆಲಸಗಳಿಂದಲೂ ಜನರಿಗೆ ಹತ್ತಿರ ಆಗಿದ್ದರು. ಅದಕ್ಕೆ ಪುನೀತ್ ಅಗಲಿ ಎರಡು ವರ್ಷಗಳಾಗುತ್ತಿದ್ದರೂ ಇನ್ನೂ ಅಭಿಮಾನಿಗಳು ಆ ನೋವಿನಿಂದ ಹೊರಬಂದಿಲ್ಲ.

ಪುನೀತ್ ರಾಜ್‌ಕುಮಾರ್ ಅಗಲಿ ಇಷ್ಟು ದಿನಗಳಾದರೂ ಅವರನ್ನು ನೆನೆಯುತ್ತಲೇ ಇರುತ್ತಾರೆ. ಈಗ ತಮಿಳಿನ ಸಿನಿಮಾ ಕ್ರಿಟಿಕ್ ಒಬ್ಬರು ರಾಜ್‌ಕುಮಾರ್ ಕಿಡ್ನಾಪ್ ಹಾಗೂ ಪುನೀತ್ ರಾಜ್‌ಕುಮಾರ್ ಬಗ್ಗೆ ಆಸಕ್ತಿಕರ ಸಂಗತಿಗಳನ್ನು ಹೊರಹಾಕಿದ್ದಾರೆ. ಆ ಹೇಳಿಕೆ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
"ಅಣ್ಣಾವ್ರ ಕಣ್ಮರೆ ಬಳಿಕ ಮಂಕಾಗಿದ್ದರು"
ತಮಿಳಿನ ಜನಪ್ರಿಯ ಫಿಲ್ಮ್ ಕ್ರಿಟಿಕ್ ಚೆಯ್ಯರ್ ಬಾಬು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಬಗೆಗಿನ ಇಂಟ್ರೆಸ್ಟಿಂಗ್ ವಿಷಯಗಳನ್ನು ಹೊರ ಹಾಕಿದ್ದಾರೆ. ಅಗಯಂ ತಮಿಳ್ ಅನ್ನೂ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ " ಅಣ್ಣಾವ್ರು ಕಣ್ಮರೆ ಬಳಿಕ ಪುನೀತ್ ರಾಜ್‌ಕುಮಾರ್ ಮಂಕಾಗಿದ್ದರು. ಪುನೀತ್ ಚೆನ್ನೈನಲ್ಲಿ ಹುಟ್ಟಿದರು. ಅತೀ ಚಿಕ್ಕ ವಯಸ್ಸಿನಲ್ಲಿಯೇ ಹೀರೊ ಆದರು. ಶಿವರಾಜ್‌ಕುಮಾರ್‌ನಿಂದ ಅಪ್ಪುಗೆ ತುಂಬಾನೇ ದೊಡ್ಡ ಅಭಿಮಾನಿ ಬಳಗವಿತ್ತು. 'ಅಪ್ಪು' ಬಳಿಕ ಪುನೀತ್ ನಟಿಸಿದ ಬಹುತೇಕ ಎಲ್ಲಾ ಸಿನಿಮಾಗಳು ಹಿಟ್" ಎಂದು ಚೆಯ್ಯರ್ ಬಾಲು ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
ಶಿವಣ್ಣ ಅಣ್ಣನಿಗಿಂತ ಹೆಚ್ಚು
"ಪುನೀತ್ ಮತ್ತು ಶಿವರಾಜ್‌ಕುಮಾರ್ ನಡುವೆ ಸಂಬಂಧವೇ ಬೇರೆ ಇತ್ತು. ಶಿವಣ್ಣನಿಗೆ ಅಪ್ಪು ಅಣ್ಣನಿಗಿಂತ ದೊಡ್ಡ ಸ್ಥಾನ ನೀಡಿದ್ದರು. ಪುನೀತ್ ಹಾಗೂ ಶಿವರಾಜ್‌ಕುಮಾರ್ ಇಬ್ಬರೂ ಒಟ್ಟಿಗೆ ತಮಿಳು ಸಿನಿಮಾಗಳನ್ನು ನೋಡುತ್ತಿದ್ದರು. ಇವತ್ತಿಗೂ ಶಿವರಾಜ್‌ಕುಮಾರ್ ತಮ್ಮನ ಅಗಲಿಕೆ ನೋವಿನಿಂದ ಹೊರಬಂದಿಲ್ಲ. ಇಂದಿಗೂ ಅಪ್ಪು ನೆನಪಿಸಿಕೊಂಡು ಭಾವುಕರಾಗುತ್ತಾರೆ." ಎಂದು ಚೆಯ್ಯರ್ ಬಾಬು ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

ತಂದೆಯ ಹಾದಿ ಹಿಡಿದಿದ್ದ ಅಪ್ಪು
"ಪುನೀತ್ ರಾಜ್‌ಕುಮಾರ್ ತಂದೆಯ ಹಾದಿಯನ್ನೇ ಹಿಡಿದಿದ್ದರು. ಅವರ ಜನಪ್ರಿಯತೆಗೆ ರಾಜಕೀಯಕ್ಕೆ ಬರಬಹುದಿತ್ತು. ಅಪ್ಪ ಶಪತ ಮಾಡಿದಂತೆ ಅವರೂ ಪಾಲಿಟಿಕ್ಸ್‌ಗೆ ಬರೋದಿಲ್ಲ ಅಂತ ನಿರ್ಧರಿಸಿದ್ದರು. ಅಲ್ಲದೆ ಸಿನಿಮಾದಲ್ಲೂ ಅಷ್ಟೇ ಕೆಟ್ಟ ದೃಶ್ಯಗಳು, ಕೆಟ್ಟ ಡೈಲಾಗ್‌ಗಳು ಹಾಗೂ ದೃಶ್ಯಗಳು ಇರುತ್ತಿರಲಿಲ್ಲ" ಎಂದು ಅಪ್ಪು ನಟಿಸಿದ ಸಿನಿಮಾಗಳನ್ನು ಹಾಡಿ ಹೊಗಳಿದಿದ್ದಾರೆ.


Click it and Unblock the Notifications











