For Quick Alerts
  ALLOW NOTIFICATIONS  
  For Daily Alerts

  ಫ್ಲ್ಯಾಶ್ ಬ್ಯಾಕ್ 2019: ಸಂಬಂಧ ಮುರಿದುಕೊಂಡು ದೂರಾದ ತಾರೆಯರು

  |

  2019 ರಲ್ಲಿ ಮದುವೆ ಸಂಭ್ರಮ ಜೋರಾಗೇ ಇತ್ತು. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ನಟಿ ನಿತ್ಯ ರಾಮ್, ನಟ ರಿಷಿ ಸೇರಿದಂತೆ ಹಲವು ತಾರೆಯರು ಈ ವರ್ಷ ಸಿಂಗಲ್ ಸ್ಟೇಟಸ್ ಗೆ ಗುಡ್ ಬೈ ಹೇಳಿ ದಾಂಪತ್ಯ ಜೀವನಕ್ಕೆ ನಾಂದಿ ಹಾಡಿದ್ದು ನಿಮಗೆಲ್ಲ ಗೊತ್ತೇ ಇದೆ.

  ಅತ್ತ ಹೊಸ ಜೀವನ ಶುರುವಾದ ಖುಷಿಯಲ್ಲಿ ಹಲವರಿದ್ದರೆ, ಇತ್ತ ವರ್ಷಾನುಗಟ್ಟಲೆ ಸಂಸಾರ ಮಾಡಿ, ವಿಚ್ಛೇದನ ಪಡೆದವರೂ ಇದ್ದಾರೆ. 2019 ರಲ್ಲಿ ಸಂಬಂಧ ಮುರಿದುಕೊಂಡು ನಾ ನೊಂದು ತೀರ, ನೀ ನೊಂದು ತೀರ ಎಂತಾದ ತಾರೆಯರ ಪಟ್ಟಿ ಇಲ್ಲಿದೆ. ನೋಡಿಕೊಂಡು ಬನ್ನಿ...

  ರಘು ದೀಕ್ಷಿತ್ ದಾಂಪತ್ಯದಲ್ಲಿ ಬಿರುಕು

  ರಘು ದೀಕ್ಷಿತ್ ದಾಂಪತ್ಯದಲ್ಲಿ ಬಿರುಕು

  ಖ್ಯಾತ ಗಾಯಕ ರಘು ದೀಕ್ಷಿತ್ ದಾಂಪತ್ಯದಲ್ಲಿ ಈ ವರ್ಷ ಬಿರುಕು ಮೂಡಿತು. ವಿಚ್ಛೇದನ ಕೋರಿ ರಘು ದೀಕ್ಷಿತ್ ಮತ್ತು ಮಯೂರಿ ಕೋರ್ಟ್ ಮೆಟ್ಟಿಲೇರಿದರು. ವರ್ಷದಿಂದ ಬೇರೆ ಬೇರೆ ವಾಸಿಸುತ್ತಿರುವ ರಘು ದೀಕ್ಷಿತ್ ಮತ್ತು ಮಯೂರಿ ಪರಸ್ಪರ ಒಪ್ಪಿಗೆ ಮೇರೆ ಡಿವೋರ್ಸ್ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ.

  ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ ಖ್ಯಾತ ಗಾಯಕ ರಘುದೀಕ್ಷಿತ್ ದಂಪತಿವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ ಖ್ಯಾತ ಗಾಯಕ ರಘುದೀಕ್ಷಿತ್ ದಂಪತಿ

  ಮಂಚು ಮನೋಜ್ ಸಂಸಾರದಲ್ಲಿ ಬಿರುಗಾಳಿ

  ಮಂಚು ಮನೋಜ್ ಸಂಸಾರದಲ್ಲಿ ಬಿರುಗಾಳಿ

  ಪ್ರಣತಿ ರೆಡ್ಡಿ ಜೊತೆಗಿನ ಎರಡು ವರ್ಷಗಳ ದಾಂಪತ್ಯ ಜೀವನಕ್ಕೆ ಫುಲ್ ಸ್ಟಾಪ್ ಇಡಲು ತೆಲುಗು ನಟ ಮಂಚು ಮನೋಜ್ ಮುಂದಾದರು. ''ನನ್ನ ವೈವಾಹಿಕ ಜೀವನ ಅಂತ್ಯಗೊಂಡಿದೆ. ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯಗಳಿದ್ದವು. ಹೀಗಾಗಿ ಪರಸ್ಪರ ಪರಾಮರ್ಶೆ ಮಾಡಿಕೊಂಡು ದೂರವಾಗಲು ನಿರ್ಧರಿಸಿದ್ದೇವೆ'' ಎಂದು ಸೋಷಿಯಲ್ ಮೀಡಿಯಾದಲ್ಲಿ ಮಂಚು ಮನೋಜ್ ಬಹಿರಂಗ ಪಡಿಸಿದ್ದರು.

  ಮಂಚು ಮನೋಜ್ ಸಂಸಾರದಲ್ಲಿ ಬಿರುಗಾಳಿ: ಪತ್ನಿಗೆ ವಿಚ್ಛೇದನ ನೀಡಿದ ನಟಮಂಚು ಮನೋಜ್ ಸಂಸಾರದಲ್ಲಿ ಬಿರುಗಾಳಿ: ಪತ್ನಿಗೆ ವಿಚ್ಛೇದನ ನೀಡಿದ ನಟ

  ಡಿವೋರ್ಸ್ ಪಡೆದ ಅರ್ಜುನ್ ರಾಂಪಾಲ್-ಮೆಹರ್

  ಡಿವೋರ್ಸ್ ಪಡೆದ ಅರ್ಜುನ್ ರಾಂಪಾಲ್-ಮೆಹರ್

  ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಮತ್ತು ಮೆಹರ್ ಜೆಸಿಯಾ ದಂಪತಿಗೆ ಮುಂಬೈನ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ನೀಡಲು ಒಪ್ಪಿಗೆ ಸೂಚಿಸಿತು. ಆ ಮೂಲಕ ಅರ್ಜುನ್-ಮೆಹರ್ ಜೋಡಿಯ ಇಪ್ಪತ್ತೊಂದು ವರ್ಷಗಳ ಸುದೀರ್ಘ ದಾಂಪತ್ಯ ಅಧಿಕೃತವಾಗಿ ಅಂತ್ಯಗೊಂಡಿತು.

  ಅರ್ಜುನ್ ರಾಂಪಾಲ್-ಮೆಹರ್ ವಿಚ್ಛೇದನಕ್ಕೆ ಕೋರ್ಟ್ ಒಪ್ಪಿಗೆ: ಮಕ್ಕಳ ಸುಪರ್ದಿ ತಾಯಿಗೆಅರ್ಜುನ್ ರಾಂಪಾಲ್-ಮೆಹರ್ ವಿಚ್ಛೇದನಕ್ಕೆ ಕೋರ್ಟ್ ಒಪ್ಪಿಗೆ: ಮಕ್ಕಳ ಸುಪರ್ದಿ ತಾಯಿಗೆ

  ಮುರಿದು ಬಿದ್ದ ಶ್ವೇತಾ ಬಸು ದಾಂಪತ್ಯ

  ಮುರಿದು ಬಿದ್ದ ಶ್ವೇತಾ ಬಸು ದಾಂಪತ್ಯ

  ಕಳೆದ ಡಿಸೆಂಬರ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಶ್ವೇತಾ ಬಸು, ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುವ ಮುನ್ನವೇ ವೈವಾಹಿಕ ಬದುಕಿಗೆ ಶುಭಂ ಹಾಡಿದ್ದಾರೆ. ಪರಸ್ಪರ ಒಪ್ಪಿಗೆ ಮೇರೆಗೆ ಶ್ವೇತಾ ಬಸು ಮತ್ತು ರೋಹಿತ್ ಮಿತ್ತಲ್ ದೂರವಾಗಲು ನಿರ್ಧರಿಸಿದ್ದಾರೆ. ಇಬ್ಬರ ನಡುವೆ ಮನಸ್ತಾಪ ಮೂಡಲು ಕಾರಣ ಏನು ಎಂಬುದು ಬಹಿರಂಗವಾಗಿಲ್ಲ.

  ಶ್ವೇತಾ ಬಸು ದಾಂಪತ್ಯದಲ್ಲಿ ಬಿರುಗಾಳಿ: ಪತಿಗೆ ವಿಚ್ಛೇದನ ನೀಡಿದ ನಟಿಶ್ವೇತಾ ಬಸು ದಾಂಪತ್ಯದಲ್ಲಿ ಬಿರುಗಾಳಿ: ಪತಿಗೆ ವಿಚ್ಛೇದನ ನೀಡಿದ ನಟಿ

  English summary
  Here, is the detailed report of the Celebrities who decided to end their marriage life.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X