For Quick Alerts
  ALLOW NOTIFICATIONS  
  For Daily Alerts

  ಸೆಲೆಬ್ರಿಟಿಗಳಿಗಿಂತ ಈ ವರ್ಷ ಪುಟ್ಟ ಕಂದಮ್ಮಗಳದ್ದೇ ಕಾರುಬಾರು.!

  |

  ಸೆಲೆಬ್ರಿಟಿಗಳು ಅಂದ್ಮೇಲೆ ಸಿನಿಮಾ ಸುದ್ದಿಗಳು ಇದ್ದದ್ದೇ. ಆದ್ರೆ, ಈ ವರ್ಷ ಸಿನಿಮಾ ಸುದ್ದಿಗಳಿಗಿಂತ ಹೆಚ್ಚಾಗಿ ಕೆಲ ಸೆಲೆಬ್ರಿಟಿಗಳು ಸೌಂಡ್ ಮಾಡಿದ್ದು ವೈಯುಕ್ತಿಕ ವಿಚಾರಕ್ಕೆ.

  ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಅನೇಕ ಸೆಲೆಬ್ರಿಟಿ ದಂಪತಿಗಳು 2019 ರಲ್ಲಿ ತಂದೆ-ತಾಯಿ ಆಗಿ ಪ್ರಮೋಟ್ ಆದರು. ಶ್ವೇತಾ ಚೆಂಗಪ್ಪ, ದಿಶಾ ಮದನ್, ನಯನ ಸೇರಿದಂತೆ ಹಲವು ನಟಿಯರು ಈ ವರ್ಷ ನಟನೆಯಿಂದ ಬ್ರೇಕ್ ತೆಗೆದುಕೊಂಡು ತಾಯ್ತನದ ಸಂಭ್ರಮದಲ್ಲಿದ್ದಾರೆ. ಆ ಖುಷಿ ಗಳಿಗೆಯ ಒಂದು ರೌಂಡಪ್ ಇಲ್ಲಿದೆ, ನೋಡಿಕೊಂಡು ಬನ್ನಿ..

  ಸೃಜನ್ ಕುಟುಂಬಕ್ಕೆ ಬಂದ ಹೀರೋ

  ಸೃಜನ್ ಕುಟುಂಬಕ್ಕೆ ಬಂದ ಹೀರೋ

  ಕಳೆದ ಏಪ್ರಿಲ್ ತಿಂಗಳಲ್ಲಿ ಎರಡನೇ ಮಗುವನ್ನ ಸೃಜನ್ ಲೋಕೇಶ್ ಮತ್ತು ಗ್ರೀಷ್ಮ ದಂಪತಿ ವೆಲ್ ಕಮ್ ಮಾಡಿದರು. ಸೃಜನ್ ಪತ್ನಿ ಗ್ರೀಷ್ಮ ಗಂಡು ಮಗುವಿಗೆ ಜನ್ಮ ನೀಡಿದರು. 2010 ರಲ್ಲಿ ಸೃಜನ್-ಗ್ರೀಷ್ಮ ಮದುವೆಯಾಗಿದ್ದರು. ಈ ದಂಪತಿಗೆ ಈಗಾಗಲೇ ಒಬ್ಬ ಮಗನಿದ್ದಾನೆ.

  ಗಂಡು ಮಗುವಿಗೆ ಜನ್ಮ ನೀಡಿದ ಸೃಜನ್ ಪತ್ನಿ ಗ್ರೀಷ್ಮಗಂಡು ಮಗುವಿಗೆ ಜನ್ಮ ನೀಡಿದ ಸೃಜನ್ ಪತ್ನಿ ಗ್ರೀಷ್ಮ

  ಮಗನನ್ನು ವೆಲ್ ಕಮ್ ಮಾಡಿದ ರಿಷಬ್-ಪ್ರಗತಿ

  ಮಗನನ್ನು ವೆಲ್ ಕಮ್ ಮಾಡಿದ ರಿಷಬ್-ಪ್ರಗತಿ

  2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಈ ವರ್ಷ ಮುದ್ದು ಮಗನನ್ನು ಬರಮಾಡಿಕೊಂಡರು. ಏಪ್ರಿಲ್ ತಿಂಗಳಲ್ಲಿ ಗಂಡು ಮಗುವಿಗೆ ಪ್ರಗತಿ ಶೆಟ್ಟಿ ಜನ್ಮ ನೀಡಿದರು. ಪುತ್ರನಿಗೆ ರಣ್ ವಿತ್ ಶೆಟ್ಟಿ ಅಂತ ನಾಮಕರಣ ಮಾಡಲಾಗಿದೆ.

  ರಿಷಬ್ - ಪ್ರಗತಿ ಕುಟುಂಬಕ್ಕೆ 'ಹೀರೋ' ಆಗಮನರಿಷಬ್ - ಪ್ರಗತಿ ಕುಟುಂಬಕ್ಕೆ 'ಹೀರೋ' ಆಗಮನ

  ಸಂತಸದಲ್ಲಿ ಕಿರುತೆರೆ ನಟಿ ದಿಶಾ ಮದನ್

  ಸಂತಸದಲ್ಲಿ ಕಿರುತೆರೆ ನಟಿ ದಿಶಾ ಮದನ್

  'ಕುಲವಧು' ಧಾರಾವಾಹಿಯಲ್ಲಿ ನಟಿಸಿದ್ದ ದಿಶಾ ಮದನ್ ಕಳೆದ ಏಪ್ರಿಲ್ ತಿಂಗಳಲ್ಲಿ ಗಂಡು ಮಗುವಿಗೆ ತಾಯಿಯಾದರು. ಸದ್ಯ ತಾಯ್ತನದ ಖುಷಿಯಲ್ಲಿದ್ದಾರೆ ದಿಶಾ ಮದನ್.

  ಗಂಡು ಮಗುವಿಗೆ ಜನ್ಮ ನೀಡಿದ ನಟಿ ದಿಶಾ ಮದನ್ಗಂಡು ಮಗುವಿಗೆ ಜನ್ಮ ನೀಡಿದ ನಟಿ ದಿಶಾ ಮದನ್

  ರಾಜೇಶ್ವರಿ ಮಡಿಲಲ್ಲಿ ನಲಿದಾಡಿದ ಮಗಳು

  ರಾಜೇಶ್ವರಿ ಮಡಿಲಲ್ಲಿ ನಲಿದಾಡಿದ ಮಗಳು

  ಪ್ರಸಿದ್ಧ ಧಾರಾವಾಹಿ 'ಅಗ್ನಿಸಾಕ್ಷಿ'ಯಲ್ಲಿ ಚಂದ್ರಿಕಾ ಪಾತ್ರ ಪೋಷಿಸುತ್ತಿದ್ದ ರಾಜೇಶ್ವರಿ ಈ ವರ್ಷ ನಿಜ ಜೀವನದಲ್ಲಿ ತಾಯಿಯಾದರು. ಆಸ್ಟ್ರೇಲಿಯಾದಲ್ಲಿ ಸೆಟಲ್ ಆಗಿರುವ ರಾಜೇಶ್ವರಿ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಇದೇ ವರ್ಷ. ಅಂದ್ಹಾಗೆ, ಮಗಳಿಗೆ ಹವ್ಯಾ ಕೃಷ್ಣ ಅಂತ ರಾಜೇಶ್ವರಿ ನಾಮಕರಣ ಮಾಡಿದ್ದಾರೆ.

  ಹೆಣ್ಣು ಮಗುವಿನ ತಾಯಿ 'ಅಗ್ನಿಸಾಕ್ಷಿ' ಖ್ಯಾತಿಯ ನಟಿ ಚಂದ್ರಿಕಾಹೆಣ್ಣು ಮಗುವಿನ ತಾಯಿ 'ಅಗ್ನಿಸಾಕ್ಷಿ' ಖ್ಯಾತಿಯ ನಟಿ ಚಂದ್ರಿಕಾ

  ಅಮ್ಮನಾದ ಖುಷಿಯಲ್ಲಿ ನಟಿ ನಯನ

  ಅಮ್ಮನಾದ ಖುಷಿಯಲ್ಲಿ ನಟಿ ನಯನ

  'ಪುಟ್ಟಗೌರಿ ಮದುವೆ', 'ಮನೆದೇವ್ರು', 'ಗಾಳಿಪಟ' ಸೇರಿದಂತೆ ಹಲವು ಸೀರಿಯಲ್ ಗಳಲ್ಲಿ ಅಭಿನಯಿಸಿದ್ದ ನಯನ ಗಂಡು ಮಗುವಿಗೆ ಜನ್ಮ ನೀಡಿದ್ದು ಇದೇ ವರ್ಷ. ಮಗುವಿನ ಲಾಲನೆ-ಪಾಲನೆಯಲ್ಲಿ ತೊಡಗಿರುವ ನಯನ ಕಿರುತೆರೆ ಲೋಕದಿಂದ ಕೊಂಚ ಬ್ರೇಕ್ ಪಡೆದಿದ್ದಾರೆ.

  ತಾಯಿಯಾದ 'ಪುಟ್ಟಗೌರಿ ಮದುವೆ' ಧಾರಾವಾಹಿ ನಟಿ ನಯನತಾಯಿಯಾದ 'ಪುಟ್ಟಗೌರಿ ಮದುವೆ' ಧಾರಾವಾಹಿ ನಟಿ ನಯನ

  ಮದುವೆ ಆಗದೆ ತಾಯಿಯಾದ ಆಮಿ ಜಾಕ್ಸನ್

  ಮದುವೆ ಆಗದೆ ತಾಯಿಯಾದ ಆಮಿ ಜಾಕ್ಸನ್

  'ದಿ ವಿಲನ್' ಚಿತ್ರದಲ್ಲಿ ನಟಿಸಿದ್ದ ಆಮಿ ಜಾಕ್ಸನ್ ಗಂಡು ಮಗುವಿಗೆ ಈ ವರ್ಷ ತಾಯಿಯಾದರು. ತನ್ನ ಬಾಯ್ ಫ್ರೆಂಡ್ ಜಾರ್ಜ್ ಜೊತೆ ಸಂಬಂಧ ಹೊಂದಿರುವ ಆಮಿ ಜಾಕ್ಸನ್ ಮದುವೆಯಾಗದೆ ಗರ್ಭಿಣಿಯಾಗಿದ್ದರು. ಸೆಪ್ಟೆಂಬರ್ ತಿಂಗಳಲ್ಲಿ ಈ ಜೋಡಿಗೆ ಮಗು ಜನಿಸಿದ್ದು, ಆಂಡ್ರಿಯಾಸ್ ಅಂತ ಹೆಸರು ಇಡಲಾಗಿದೆ.

  ಗಂಡು ಮಗುವಿಗೆ ಜನ್ಮ ನೀಡಿದ 'ವಿಲನ್' ನಾಯಕಿ ಆಮಿ ಜಾಕ್ಸನ್ಗಂಡು ಮಗುವಿಗೆ ಜನ್ಮ ನೀಡಿದ 'ವಿಲನ್' ನಾಯಕಿ ಆಮಿ ಜಾಕ್ಸನ್

  ಶ್ವೇತಾ ಕುಟುಂಬಕ್ಕೆ ಬಂದ ಪುಟ್ಟ ಕೊಡಗಿನ ವೀರ.!

  ಶ್ವೇತಾ ಕುಟುಂಬಕ್ಕೆ ಬಂದ ಪುಟ್ಟ ಕೊಡಗಿನ ವೀರ.!

  ಕೊಡಗಿನ ಚೆಲುವೆ, ಮಜಾ ಟಾಕೀಸ್ ರಾಣಿ ಕುಟುಂಬಕ್ಕೆ ಈ ವರ್ಷ ಪುಟ್ಟ ಕೊಡಗಿನ ವೀರನ ಆಗಮನವಾಯಿತು. ಸೆಪ್ಟೆಂಬರ್ ತಿಂಗಳಲ್ಲಿ ಮುದ್ದಾದ ಗಂಡು ಮಗುವಿಗೆ ಶ್ವೇತಾ ಚೆಂಗಪ್ಪ ಜನ್ಮ ನೀಡಿದರು.

  ತಾಯಿಯಾದ ಸಂತಸದಲ್ಲಿ 'ಮಜಾ ಟಾಕೀಸ್' ರಾಣಿ ಶ್ವೇತಾ ಚೆಂಗಪ್ಪತಾಯಿಯಾದ ಸಂತಸದಲ್ಲಿ 'ಮಜಾ ಟಾಕೀಸ್' ರಾಣಿ ಶ್ವೇತಾ ಚೆಂಗಪ್ಪ

  ಸಮೀರಾ ರೆಡ್ಡಿಗೆ ಡಬಲ್ ಸಂತೋಷ

  ಸಮೀರಾ ರೆಡ್ಡಿಗೆ ಡಬಲ್ ಸಂತೋಷ

  ಹಿಂದಿ, ತೆಲುಗು, ತಮಿಳು ಮತ್ತು ಕನ್ನಡ ಚಿತ್ರಗಳಲ್ಲಿ ನಟಿಸಿರುವ ಸಮೀರಾ ರೆಡ್ಡಿ 2014 ರಲ್ಲಿ ಅಕ್ಷಯ್ ಜೊತೆಗೆ ವೈವಾಹಿಕ ಬದುಕಿಗೆ ಅಡಿಯಿಟ್ಟರು. ಈಗಾಗಲೇ ಸಮೀರಾ ರೆಡ್ಡಿ-ಅಕ್ಷಯ್ ದಂಪತಿಗೆ ಒಬ್ಬ ಮಗನಿದ್ದು, ಈ ವರ್ಷ ಎರಡನೇ ಮಗುವನ್ನು ಬರಮಾಡಿಕೊಂಡರು.

  2 ತಿಂಗಳ ಮಗುವಿನೊಂದಿಗೆ ಕರ್ನಾಟಕದ ಅತಿ ಎತ್ತರದ ಬೆಟ್ಟ ಏರಿದ ನಟಿ ಸಮೀರಾ ರೆಡ್ಡಿ.!2 ತಿಂಗಳ ಮಗುವಿನೊಂದಿಗೆ ಕರ್ನಾಟಕದ ಅತಿ ಎತ್ತರದ ಬೆಟ್ಟ ಏರಿದ ನಟಿ ಸಮೀರಾ ರೆಡ್ಡಿ.!

  ಹೆಣ್ಣು ಮಗುವಿಗೆ ತಾಯಿಯಾದ ಶ್ರುತಿ ಹರಿಹರನ್

  ಹೆಣ್ಣು ಮಗುವಿಗೆ ತಾಯಿಯಾದ ಶ್ರುತಿ ಹರಿಹರನ್

  ಕನ್ನಡದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದ ಶ್ರುತಿ ಹರಿಹರನ್ ಈ ವರ್ಷ ಹೆಣ್ಣು ಮಗುವಿಗೆ ತಾಯಿಯಾದರು. ರಾಮ್ ಎಂಬುವರನ್ನು ಮದುವೆ ಆಗಿರುವ ಶ್ರುತಿ ಹರಿಹರನ್ ಸದ್ಯ ತಾಯ್ತನದ ದಿನಗಳನ್ನು ಖುಷಿಯಿಂದ ಕಳೆಯುತ್ತಿದ್ದಾರೆ. ಮಗಳಿಗೆ ಜಾನಕಿ ಅಂತ ಶ್ರುತಿ ಹರಿಹರನ್ ನಾಮಕರಣ ಮಾಡಿದ್ದಾರೆ.

  ಶ್ರುತಿ ಹರಿಹರನ್ ಮನೆಯಲ್ಲಿ ನಾಮಕರಣದ ಸಂಭ್ರಮ: ಮಗಳ ಹೆಸರೇನು?ಶ್ರುತಿ ಹರಿಹರನ್ ಮನೆಯಲ್ಲಿ ನಾಮಕರಣದ ಸಂಭ್ರಮ: ಮಗಳ ಹೆಸರೇನು?

  ಎರಡನೇ ಮಗುವಿಗೆ ಜನ್ಮ ನೀಡಿದ ರಾಧಿಕಾ ಪಂಡಿತ್

  ಎರಡನೇ ಮಗುವಿಗೆ ಜನ್ಮ ನೀಡಿದ ರಾಧಿಕಾ ಪಂಡಿತ್

  ಡಿಸೆಂಬರ್ 9, 2016 ರಂದು ವೈವಾಹಿಕ ಜೀವನಕ್ಕೆ ಯಶ್ ಮತ್ತು ರಾಧಿಕಾ ಪಂಡಿತ್ ಕಾಲಿಟ್ಟಿದ್ದರು. ಕಳೆದ ವರ್ಷ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ರಾಧಿಕಾ ಪಂಡಿತ್ ಈ ವರ್ಷದ ಅಕ್ಟೋಬರ್ 30 ರಂದು ಎರಡನೇ ಮಗುವಿಗೆ ತಾಯಿ ಆದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವನ್ನ ರಾಧಿಕಾ ಪಂಡಿತ್ ಮತ್ತು ಯಶ್ ಬರಮಾಡಿಕೊಂಡರು.

  ಜೂನಿಯರ್ ಯಶ್ ನ ಬರಮಾಡಿಕೊಂಡ ರಾಕಿಂಗ್ ದಂಪತಿಜೂನಿಯರ್ ಯಶ್ ನ ಬರಮಾಡಿಕೊಂಡ ರಾಕಿಂಗ್ ದಂಪತಿ

  ಮತ್ತೆ ಸಂತಸದಲ್ಲಿ ಶೆಟ್ರ ಕುಟುಂಬ

  ಮತ್ತೆ ಸಂತಸದಲ್ಲಿ ಶೆಟ್ರ ಕುಟುಂಬ

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ 'ಕುಲವಧು' ಧಾರಾವಾಹಿಯಲ್ಲಿ 'ಕಾಂಚನಾ' ಪಾತ್ರದಲ್ಲಿ ಮಿಂಚಿದ್ದ ಸುಪ್ರೀತಾ ಶೆಟ್ಟಿ ಬಾಳಲ್ಲಿ ಈ ವರ್ಷ ಮತ್ತೊಮ್ಮೆ ಸಂತಸ ಮೂಡಿತು. ನವೆಂಬರ್ 20 ರಂದು ಗಂಡು ಮಗುವಿಗೆ ಸುಪ್ರೀತಾ ಶೆಟ್ಟಿ ಜನ್ಮ ನೀಡಿದರು. ಸುಪ್ರೀತಾ ಶೆಟ್ಟಿ ಮತ್ತು ಪ್ರಮೋದ್ ಶೆಟ್ಟಿ ದಂಪತಿಗೆ ಈಗಾಗಲೇ ಒಂದು ಹೆಣ್ಣು ಮಗುವಿದೆ.

  ಗಂಡು ಮಗುವಿಗೆ ತಾಯಿಯಾದ 'ಕುಲವಧು' ಸುಪ್ರೀತಾ ಶೆಟ್ಟಿಗಂಡು ಮಗುವಿಗೆ ತಾಯಿಯಾದ 'ಕುಲವಧು' ಸುಪ್ರೀತಾ ಶೆಟ್ಟಿ

  English summary
  Here, is the detailed report of the Celebrities who welcomed their new borns in 2019.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X