twitter
    For Quick Alerts
    ALLOW NOTIFICATIONS  
    For Daily Alerts

    ಈ ಸಿನಿಮಾಗಳೆಲ್ಲಾ ಯಾವಾಗ ಬಂದ್ವು.? ಹೆಸರೇ ಕೇಳಿಲ್ಲ ಚೊಂಬೇಶ್ವರ.!

    |

    ಕಣ್ಮುಚ್ಚಿ ಕಣ್ತೆರೆಯುವಷ್ಟರಲ್ಲಿ ಡಿಸೆಂಬರ್ ಬಂದೇ ಬಿಟ್ಟಿದೆ. 2019 ವರ್ಷಾಂತ್ಯಕ್ಕೆ ದಿನಗಣನೆ ಶುರುವಾಗಿದೆ. 2020... ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳುವ ಮುನ್ನ ಒಮ್ಮೆ ಇಡೀ ವರ್ಷದತ್ತ ತಿರುಗಿ ನೋಡೋಣ.

    ಕನ್ನಡ ಚಿತ್ರರಂಗದ ಮಟ್ಟಿಗೆ 2019 ಹೇಳಿಕೊಳ್ಳುವ ಮಟ್ಟಿಗೆ 'ದಿ ಬೆಸ್ಟ್ ವರ್ಷ' ಅಲ್ಲವೇ ಅಲ್ಲ. ಯಾಕಂದ್ರೆ, ಈ ವರ್ಷ ಎಷ್ಟೋ ನಿರ್ಮಾಪಕರ ಜೇಬು ತುಂಬಿಲ್ಲ. ಭರ್ಜರಿ ಕಲೆಕ್ಷನ್ ಮಾಡಿದ ಕನ್ನಡ ಚಿತ್ರಗಳು 2019 ರಲ್ಲಿ ತೀರಾ ಕಮ್ಮಿ. ಸ್ಟಾರ್ ಸಿನಿಮಾಗಳು ತೆರೆಗೆ ಬಂದರೂ, ಕಮಾಲ್ ಮಾಡಿದ್ದು ಬೆರಳೆಣಿಕೆಯಷ್ಟು ಮಾತ್ರ.

    ಅಸಲಿಗೆ, ಈ ವರ್ಷ ಇಲ್ಲಿಯವರೆಗೂ ಸುಮಾರು 183 ಸಿನಿಮಾಗಳು ತೆರೆಗೆ ಬಂದಿವೆ. ಅದರಲ್ಲಿ 'ಪೈಲ್ವಾನ್', 'ಕುರುಕ್ಷೇತ್ರ', 'ಐ ಲವ್ ಯು', 'ನಟ ಸಾರ್ವಭೌಮ', 'ಅಮರ್', 'ಕವಚ', 'ಯಜಮಾನ', 'ಬೆಲ್ ಬಾಟಂ', 'ಸೀತಾರಾಮ ಕಲ್ಯಾಣ', 'ರಂಗನಾಯಕಿ', 'ಭರಾಟೆ', 'ಆಯುಷ್ಮಾನ್ ಭವ', 'ಕಥಾ ಸಂಗಮ', 'ದಮಯಂತಿ', 'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರಗಳನ್ನ ನೀವು ನೋಡಿರ್ತೀರಾ. ಒಂದು ವೇಳೆ ನೋಡಿಲ್ಲ ಅಂದ್ರೂ ಈ ಚಿತ್ರಗಳ ಹೆಸರುಗಳನ್ನ ಖಂಡಿತ ಕೇಳಿರ್ತೀರಾ.!

    ಹಾಗ್ನೋಡಿದ್ರೆ, ಈ ವರ್ಷ ಸ್ಯಾಂಡಲ್ ವುಡ್ ಅಂಗಳದಲ್ಲಿ ಸೌಂಡ್ ಮಾಡಿರೋದು ಈ ಚಿತ್ರಗಳಷ್ಟೇ.! ಹೀಗಿರುವಾಗ ಬಾಕಿ 150+ ಚಿತ್ರಗಳು ಯಾವುದಪ್ಪಾ ಅಂತ ಹುಡುಕಿಕೊಂಡು ಹೋದರೆ ನೀವು ದೇವ್ರಾಣೆಗೂ ಹೆಸರು ಕೇಳಿರದ ಚಿತ್ರಗಳ ದೊಡ್ಡ ಪಟ್ಟಿಯೇ ತೆರೆದುಕೊಳ್ಳುತ್ತದೆ. ಆ ಕುರಿತ ಒಂದು ಡೀಟೇಲ್ಡ್ ರಿಪೋರ್ಟ್ ಇಲ್ಲಿದೆ ನೋಡಿ...

    ಈ ಸಿನಿಮಾಗಳ ಬಗ್ಗೆ ನಿಮಗೆ ಗೊತ್ತಾ.?

    ಈ ಸಿನಿಮಾಗಳ ಬಗ್ಗೆ ನಿಮಗೆ ಗೊತ್ತಾ.?

    'ಗಿಣಿ ಹೇಳಿದ ಕಥೆ', 'ಲಾಕ್', 'ಸಪ್ಲಿಮೆಂಟರಿ', 'ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು', 'ಬದ್ರಿ ವರ್ಸಸ್ ಮಧುಮತಿ', 'ಹನಿಗಳು ಏನನ್ನು ಹೇಳಲು ಹೊರಟಿವೆ', 'ಪುನರ್ವಸು ನಕ್ಷತ್ರ ಮಿಥುನ ರಾಶಿ', 'ಒಮ್ಮೆ ನಿಶಬ್ಧ ಒಮ್ಮೆ ಯುದ್ಧ' ಸಿನಿಮಾಗಳು ಈ ವರ್ಷ ತೆರೆಗೆ ಬಂದಿವೆ. ಈ ಸಿನಿಮಾಗಳ ಪೈಕಿ ಯಾವುದನ್ನಾದರೂ ಒಂದನ್ನ ನೀವು ನೋಡಿದ್ದೀರಾ.? ಹೋಗ್ಲಿ.. ಈ ಚಿತ್ರಗಳ ಬಗ್ಗೆ ಎಲ್ಲಾದರೂ ಕೇಳಿದ್ದುಂಟಾ.?

    ಈ ವರ್ಷದಲ್ಲಿ 'ವಿವಾದ'ಕ್ಕೆ ಗುರಿಯಾಗಿದ್ದ ಸ್ಟಾರ್ ನಟರ ಚಿತ್ರಗಳುಈ ವರ್ಷದಲ್ಲಿ 'ವಿವಾದ'ಕ್ಕೆ ಗುರಿಯಾಗಿದ್ದ ಸ್ಟಾರ್ ನಟರ ಚಿತ್ರಗಳು

    'ಗಂಧದ ಕುಡಿ' ಬಗ್ಗೆ ಕೇಳಿದ್ದೀರಾ.?

    'ಗಂಧದ ಕುಡಿ' ಬಗ್ಗೆ ಕೇಳಿದ್ದೀರಾ.?

    ಡಾ.ರಾಜ್ ಕುಮಾರ್ ಅಭಿನಯದ 'ಗಂಧದ ಗುಡಿ' ಚಿತ್ರವನ್ನ ನೀವು ಮಿಸ್ ಮಾಡಿರಲು ಚಾನ್ಸೇ ಇಲ್ಲ. ಆದ್ರೆ, ಈ ವರ್ಷ ತೆರೆಗೆ ಬಂದ 'ಗಂಧದ ಕುಡಿ' ಚಿತ್ರದ ಪೋಸ್ಟರ್ ನಾದರೂ ಬೈ ಮಿಸ್ ಆಗಿ ಎಲ್ಲಾದರೂ ನೋಡಿದ್ದೀರಾ.?

    ಕನ್ನಡ ಇಂಡಸ್ಟ್ರಿಯಲ್ಲಿ ಈ ವರ್ಷ ಸೌಂಡ್ ಮಾಡಿದ ಟಾಪ್ ಡೈಲಾಗ್ ಯಾವುದು?ಕನ್ನಡ ಇಂಡಸ್ಟ್ರಿಯಲ್ಲಿ ಈ ವರ್ಷ ಸೌಂಡ್ ಮಾಡಿದ ಟಾಪ್ ಡೈಲಾಗ್ ಯಾವುದು?

    ಯಾವಾಗ ರಿಲೀಸ್ ಆಯ್ತು.?

    ಯಾವಾಗ ರಿಲೀಸ್ ಆಯ್ತು.?

    'ರಣರಣಕ', 'ರವಿ ಹಿಸ್ಟರಿ', 'ಜೈ ಕೇಸರಿ ನಂದನ', 'ಲೋಫರ್ಸ್', 'ದಿಗ್ಭಯಂ', 'ಡಿಚ್ಕಿ ಡಿಸೈನ್'... ಹೀಗೆ ಡಿಸೈನ್, ಡಿಸೈನ್ ಹೆಸರುಗಳನ್ನಿಟ್ಟುಕೊಂಡು ತೆರೆಗೆ ಬಂದ ಸಿನಿಮಾಗಳ ಪಟ್ಟಿ ಈ ವರ್ಷ ಹನುಮಂತನ ಬಾಲದಂತೆ ಉದ್ದವಾಗಿದೆ. ಆದ್ರೆ, ಈ ಚಿತ್ರಗಳು ಯಾವಾಗ ರಿಲೀಸ್ ಆಯ್ತು.? ಎಷ್ಟು ಶೋಗಳು ಓಡ್ತು.? ಆ ಚಿತ್ರಗಳ ನಿರ್ಮಾಪಕರ ಗತಿ ಏನಾಯ್ತು ಅಂತ ನಮ್ಮನ್ನ ಮಾತ್ರ ಕೇಳ್ಬೇಡಿ.!

    2019ರಲ್ಲಿ ಅತಿ ಹೆಚ್ಚು ಟ್ರೋಲ್ ಆದ ಕನ್ನಡದ ಸಿನಿಮಾಗಳಿವು2019ರಲ್ಲಿ ಅತಿ ಹೆಚ್ಚು ಟ್ರೋಲ್ ಆದ ಕನ್ನಡದ ಸಿನಿಮಾಗಳಿವು

    ಇದು ಚಿತ್ರರಂಗದ 'ಅದ್ಭುತ'

    ಇದು ಚಿತ್ರರಂಗದ 'ಅದ್ಭುತ'

    ಜಗತ್ತಿನಲ್ಲಿ ಎಂಟು ಅದ್ಭುತಗಳಿರೋದು ಎಲ್ಲರಿಗೂ ಗೊತ್ತು. ಆದರೆ, ಇಲ್ಲೊಂದು ಸಿನಿಮಾ ತಂಡ 'ಒಂಬತ್ತನೇ ಅದ್ಭುತ' ಅಂತ ಶೀರ್ಷಿಕೆ ಇಟ್ಟುಕೊಂಡು ಚಿತ್ರವನ್ನ ಈ ವರ್ಷ ತೆರೆಗೆ ತಂದಿದೆ. ಇನ್ನೂ ಕೋಟಿಗೊಬ್ಬ, ಕೋಟಿಗೊಬ್ಬ-2 ಚಿತ್ರಗಳನ್ನ ನೀವು ನೋಡಿರಬಹುದು. ಆದ್ರೆ, ಕೀರ್ತಿಗೊಬ್ಬ-2 ಚಿತ್ರವನ್ನ ವೀಕ್ಷಿಸಿದ್ದೀರಾ.? (ಕೀರ್ತಿಗೊಬ್ಬ ಚಿತ್ರದ ಮೊದಲ ಭಾಗ ಯಾವಾಗಪ್ಪಾ ಬಂತು ಅಂತ ಈಗ ತಲೆ ಕೆರ್ಕೊಳ್ಬೇಡಿ)

    ಯಾವಾಗ ಬಂತು? ಯಾವಾಗ ಹೋಯ್ತು?

    ಯಾವಾಗ ಬಂತು? ಯಾವಾಗ ಹೋಯ್ತು?

    ಪುನೀತ್ ರಾಜ್ ಕುಮಾರ್ ಅಭಿನಯದ 'ವೀರ ಕನ್ನಡಿಗ' ಚಿತ್ರ ಸೌಂಡ್ ಮಾಡಿತ್ತು. ಆದ್ರೆ, ಈ ವರ್ಷ ಬಿಡುಗಡೆ ಆದ 'ಧೀರ ಕನ್ನಡಿಗ'ನ ಕಥೆ ಮಾತ್ರ ಯಾರಿಗೂ ಗೊತ್ತಾಗಲಿಲ್ಲ. 'ಇಂತಿ ನಿಮ್ಮ ಭೈರ', 'ಇನ್ ಜೆಕ್ಟ್ 0.7' ಚಿತ್ರಗಳು ಯಾವಾಗ ಬಂತು, ಯಾವಾಗ ಹೋಯ್ತು ಅನ್ನೋದೇ ತಿಳಿದಿಲ್ಲ.

    ಹೇಳ ಹೆಸರಿಲ್ಲದಂತೆ ಮಾಯವಾಗುವುದು ಯಾಕೆ.?

    ಹೇಳ ಹೆಸರಿಲ್ಲದಂತೆ ಮಾಯವಾಗುವುದು ಯಾಕೆ.?

    ನಾವು ಪಟ್ಟಿ ಮಾಡಿರುವ ಚಿತ್ರಗಳೂ ಸೇರಿದಂತೆ ಈ ವರ್ಷ ಹೇಳ ಹೆಸರಿಲ್ಲದಂತೆ ಮಾಯವಾದ ಸಿನಿಮಾಗಳು ಇನ್ನೂ ಬೇಕಾದಷ್ಟಿವೆ. ಕನ್ನಡ ಚಿತ್ರರಂಗ, ಸಿನಿಮಾ ಮಾರ್ಕೆಟ್, ತಂತ್ರಜ್ಞಾನದ ಬಗ್ಗೆ ಎಳ್ಳಷ್ಟು ತಿಳಿಯದ ತಂಡದಿಂದ ಗಟ್ಟಿಕಥೆ ಮತ್ತು ಕ್ಲಾಲಿಟಿ ಸಿನಿಮಾಗಳ ನಿರೀಕ್ಷೆ ಅಸಾಧ್ಯ. ಇನ್ನೂ ಉತ್ತಮ ಕಥೆ ಹೊಂದಿದ್ದರೂ ಪ್ರಮೋಷನ್ ಸ್ಟ್ರಾಟೆಜಿ ಇಲ್ಲದೇ ಕೆಲ ಸಿನಿಮಾಗಳು ಪ್ರೇಕ್ಷಕರನ್ನು ತಲುಪಲು ಸಾಧ್ಯ ಆಗುತ್ತಿಲ್ಲ. ಪ್ಯಾಶನ್ ನಿಂದ ಸಿನಿಮಾ ಮಾಡಿ ಎಲ್ಲಾ ಸರಿ ಇದ್ದರೂ, ಕನ್ನಡ ಚಿತ್ರಗಳಿಗೆ ಥಿಯೇಟರ್ ಗಳ ಕೊರತೆ ಇದೆ. ಹೀಗಾಗಿ ಎಷ್ಟೋ ಸಿನಿಮಾಗಳು ಒಂದೇ ಶೋಗೆ ಎತ್ತಂಗಡಿ ಆಗಿವೆ.

    English summary
    Flash Back 2019: Movies released in 2019 that failed to create buzz in Sandalwood.
    Friday, December 13, 2019, 16:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X