For Quick Alerts
  ALLOW NOTIFICATIONS  
  For Daily Alerts

  2020 ಕನ್ನಡ ಚಿತ್ರರಂಗ; ಕೊರೊನಾ ವರ್ಷದಲ್ಲಿ ತೆರೆಕಂಡ ಕನ್ನಡ ಸಿನಿಮಾಗಳು

  |

  2020ರ ಕೊನೆಯ ತಿಂಗಳಿನಲ್ಲಿದ್ದೇವೆ. ಕೊರೊನಾ ಸಾಂಕ್ರಾಮಿಕ ರೋಗದ ಮಧ್ಯೆಯೇ ಜೀವನ ನಡೆಸಿ ಇದೀಗ 2020 ವರ್ಷವನ್ನು ಬೀಳ್ಕೊಡಲು ಎಲ್ಲರೂ ತುದಿಗಾಲಿನಲ್ಲಿ ನಿಂತಿದ್ದಾರೆ. ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳುವ ಮುನ್ನ ಒಮ್ಮೆ ಇಡೀ ವರ್ಷದತ್ತ ತಿರುಗಿ ನೋಡೋಣ.

  2020 ದಿ ಬೆಸ್ಟ್ ವರ್ಷವಾಗಿರಲು ಸಾಧ್ಯವೇ ಇಲ್ಲ. ಹೀಗಿರುವಾಗ ಚಿತ್ರರಂಗದ ಪಾಲಿಗಂತೂ ಈ ವರ್ಷ ಭಾರಿ ನಿರಾಸೆಯ ವರ್ಷವಾಗಿದೆ. ಮೊದಲೇ ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕ ಜೇಬು ತುಂಬಿಸುವ ಸಿನಿಮಾಗಳ ಸಂಖ್ಯೆ ತೀರ ವಿರಳ. ಹೀಗಿರುವಾಗ ಈ ವರ್ಷದ ಮೊದಲು ಎರಡುವರೆ ತಿಂಗಳಲ್ಲಿ ರಿಲೀಸ್ ಆದ ಸಿನಿಮಾಗಳಲ್ಲಿ ಉತ್ತಮ ಕಲೆಕ್ಷನ್ ಮಾಡಿದ ಸಿನಿಮಾಗಳ ಸಂಖ್ಯೆ ತೀರ ಕಡಿಮೆ. ಈ ವರ್ಷ ಲಾಕ್ ಡೌನ್ ಗೂ ಮೊದಲು ಒಟ್ಟು 58 ಸಿನಿಮಾಗಳು ರಿಲೀಸ್ ಆಗಿವೆ.

  ಸೋನು ಸೂದ್ '2020ರ ರಿಯಲ್ ಹೀರೋ' ಎಂದು ಘೋಷಿಸಿದ Yahoo

  ಜನವರಿಯಿಂದ ಮಾರ್ಚ್ 13ರ ವರೆಗೆ ಸಿನಿಮಾಗಳು ರಿಲೀಸ್ ಆಗಿವೆ. ಎರಡೂವರೆ ತಿಂಗಳಲ್ಲಿ ಅಂದರೆ ಜನವರಿ, ಫೆಬ್ರವರಿ ಮತ್ತು ಮಾರ್ಚ್ 13ರವರೆಗೆ ಸ್ಯಾಂಡಲ್ ವುಡ್ ನಲ್ಲಿ ಒಟ್ಟು 58 ಸಿನಿಮಾಗಳು ರಿಲೀಸ್ ಆಗಿವೆ. ಲಾಕ್ ಡೌನ್ ಬಳಿಕ ಅಂದರೆ ಒಟಿಟಿಯಲ್ಲಿ 4 ಸಿನಿಮಾಗಳು ಮತ್ತು ಚಿತ್ರಮಂದಿರಗಳು ರಿ ಓಪನ್ ಆದ ನಂತರ 1 ಸಿನಿಮಾ, ಒಟ್ಟು 63 ಸಿನಿಮಾಗಳು ಈ ವರ್ಷ ರಿಲೀಸ್ ಆಗಿವೆ. ಮುಂದೆ ಓದಿ..

  100 ದಿನಗಳನ್ನು ಪೂರೈಸಿದ ಸಿನಿಮಾಗಳಿಲ್ಲ

  100 ದಿನಗಳನ್ನು ಪೂರೈಸಿದ ಸಿನಿಮಾಗಳಿಲ್ಲ

  ಈ ವರ್ಷ ಬಂದ ಸಿನಿಮಾಗಳಲ್ಲಿ 100 ದಿನ ಪೂರೈಸಿದ ಸಿನಿಮಾಗಳೇ ಇಲ್ಲ. ಲವ್ ಮಾಕ್ಟೇಲ್ ಮತ್ತು ದಿಯಾ ಸಿನಿಮಾಗಳು ಉತ್ತಮ ಪ್ರದರ್ಶನ ಕಾಣುತ್ತಾ ಪ್ರೇಕ್ಷಕರನ್ನು ಸೆಳೆಯುತ್ತಿದ್ದ ಸಮಯದಲ್ಲೇ ಲಾಕ್ ಡೌನ್ ಆದ ಪರಿಣಾಮ ಸಿನಿಮಾ ಪ್ರದರ್ಶನವನ್ನೇ ರದ್ದು ಮಾಡಬೇಕಾಯಿತು.

  ಜನವರಿ 3ರಿಂದ ಚಿತ್ರರಂಗದ ವರ್ಷ ಪ್ರಾರಂಭ

  ಜನವರಿ 3ರಿಂದ ಚಿತ್ರರಂಗದ ವರ್ಷ ಪ್ರಾರಂಭ

  ಜನವರಿಯಲ್ಲಿ ಒಟ್ಟು 17 ಸಿನಿಮಾಗಳು ರಿಲೀಸ್ ಆಗಿದ್ದು, ವರ್ಷದ ಪ್ರಾರಂಭದಲ್ಲಿ ಅಂದರೆ ಜನವರಿ 3ರಂದು ಒಟ್ಟು 2 ಸಿನಿಮಾಗಳು ಬಿಡುಗಡೆಯಾಗಿವೆ. ರಾಜೀವ ಐಎಎಸ್, ವೇಷಧಾರಿ ಸಿನಿಮಾಗಳು ಚಿತ್ರಮಂದಿರದ ಅಂಗಳಕ್ಕೆ ಬಂದಿವೆ. ಆದರೆ ಈ 2 ಸಿನಿಮಾಗಳು ಬಂದು ಹೋಗಿದ್ದೆ ಪ್ರೇಕ್ಷಕರಿಗೆ ಗೊತ್ತಾಗಲಿಲ್ಲ. ನಂತರದ ವಾರದಲ್ಲಿ ಬಂದ ಗುಡುಮನ ಅವಾಂತರ, ಜನ್ ಧನ್ ಮತ್ತು ಶ್ರೀ ಭರತ ಬಾಹುಬಲಿ ಸಿನಿಮಾಗಳು ಸಹ ಪ್ರೇಕ್ಷಕರ ಮನಗೆಲ್ಲಲು ಯಶಸ್ವಿಯಾಗಿಲ್ಲ.

  ಖಾಕಿ ಮತ್ತು ಇಂಡಿಯಾ ವರ್ಸಸ್ ಇಂಗ್ಲೆಂಡ್

  ಖಾಕಿ ಮತ್ತು ಇಂಡಿಯಾ ವರ್ಸಸ್ ಇಂಗ್ಲೆಂಡ್

  ಜನವರಿ 24ರಂದು ರಿಲೀಸ್ ಆದ ಸಿನಿಮಾಗಳಲ್ಲಿ ಖಾಕಿ, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಇಂಡಿಯಾ ವರ್ಸಸ್ ಇಂಗ್ಲೆಂಡ್ ಮತ್ತು ನಾನು ಮತ್ತು ಗುಂಡ ಸಿನಿಮಾಗಳು ಕೊಂಚ ಸದ್ದು ಮಾಡಿತ್ತಾದರೂ, ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಮಾಯಿ ಮಾಡಲು ಸಾಧ್ಯವಾಗಿಲ್ಲ.

  2020 ರಲ್ಲಿ ಬಾಲಿವುಡ್‌ ಕಳೆದುಕೊಂಡ ತಾರೆಗಳೆಷ್ಟು? ಇಲ್ಲಿದೆ ಪಟ್ಟಿ

  ಲವ್ ಮಾಕ್ಟೇಲ್

  ಲವ್ ಮಾಕ್ಟೇಲ್

  ಜನವರಿ ತಿಂಗಳ ಕೊನೆಯಲ್ಲಿ ಬಂದ 'ಲವ್ ಮಾಕ್ಟೇಲ್' ಸಿನಿಮಾ ಮಲಗಿದ್ದ ಚಿತ್ರರಂಗವನ್ನು ಬಡಿದೆಬ್ಬಿಸಿತ್ತು. ಸಿನಿಮಾ ರಿಲೀಸ್ ಆದ ಮೊದಲು ಚಿತ್ರಮಂದಿರಗಳು ಸಿಗದೆ ಪರದಾಡುತ್ತಿದ್ದ ಲವ್ ಮಾಕ್ಟೇಲ್ ತಂಡ ಕೊನೆಗೆ ಪ್ರೇಕ್ಷಕರು ಸಿನಿಮಾ ಒಪ್ಪಿಕೊಂಡ ಬಳಿಕ ಅದ್ಭುತ ಪ್ರದರ್ಶನ ಕಂಡಿದೆ. ಡಾರ್ಲಿಂಗ್ ಕೃಷ್ಣ ನಿರ್ದೇಶನದ ಮೊದಲ ಸಿನಿಮಾ ಇದಾಗಿದ್ದು, ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಮಿಂಚಿದ್ದಾರೆ.

  2020 ಫ್ಲ್ಯಾಶ್ ಬ್ಯಾಕ್: ಈ ವರ್ಷ ಚಂದನವನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಾರೆಯರು

  ದಿಯಾ ಮತ್ತು ಜೆಂಟಲ್ ಮನ್

  ದಿಯಾ ಮತ್ತು ಜೆಂಟಲ್ ಮನ್

  ಫೆಬ್ರವರಿ ಮೊದಲ ವಾರದಲ್ಲಿ ರಿಲೀಸ್ ಆದ ಒಟ್ಟು 8 ಸಿನಿಮಾಗಳಲ್ಲಿ ದಿಯಾ ಮತ್ತು ಜಂಟಲ್ ಮನ್ ಎರಡು ಸಿನಿಮಾಗಳು ಗಮನ ಸೆಳೆದಿವೆ. ದಿಯಾ ಸಿನಿಮಾ ಈ ವರ್ಷದ ಬೆಸ್ಟ್ ಸಿನಿಮಾಗಳಲ್ಲಿ ಒಂದಾಗಿದೆ. ಅಶೋಕ್ ಸಾರಥ್ಯದಲ್ಲಿ ಬಂದ ಸಿನಿಮಾದಲ್ಲಿ ದೀಕ್ಷಿತ್, ಪೃಥ್ವಿ ಅಂಬರ್ ಮತ್ತು ಖುಷಿ ಕಾಣಿಸಿಕೊಂಡಿದ್ದಾರೆ. ಈ ವರ್ಷ ಸದ್ದು ಮಾಡಿದ ಸಿನಿಮಾಗಳಲ್ಲಿ ದಿಯಾ ಸಿನಿಮಾ ಒಂದಾಗಿದೆ. ಆದರೆ ನಂತರ ವಾರದಲ್ಲಿ ಬಂದ ಸಿನಿಮಾಗಳ ಸಂಖ್ಯೆ ಹೆಚ್ಚಾಗಿತ್ತಾದರೂ ಆ ಎಲ್ಲಾ ಸಿನಿಮಾಗಳು ಕಾಣದಂತೆ ಹಾಗೆ ಮಾಯವಾಗಿವೆ.

  ಪಾಪ್ ಕಾರ್ನ್ ಮಂಕಿ ಟೈಗರ್, ಶಿವಾಜಿ ಸೂರತ್ಕಲ್

  ಪಾಪ್ ಕಾರ್ನ್ ಮಂಕಿ ಟೈಗರ್, ಶಿವಾಜಿ ಸೂರತ್ಕಲ್

  ಫೆಬ್ರವರಿ 21ರಂದು ರಿಲೀಸ್ ಆದ ಪಾಪ್ ಕಾರ್ನ್ ಮಂಕಿ ಟೈಗರ್ ಮತ್ತು ಶಿವಾಜಿ ಸೂರತ್ಕಲ್ ಸಿನಿಮಾಗಳು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. ದುನಿಯಾ ಸೂರಿ ನಿರ್ದೇಶನದ, ಧನಂಜಯ್ ಅಭಿನಯದ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಉತ್ತಮ ಪ್ರದರ್ಶನ ಕಂಡ ಸಿನಿಮಾಗಳಲ್ಲಿ ಒಂದಾಗಿದೆ. ಇನ್ನು ರಮೇಶ್ ಅರವಿಂದ್ ನಟನೆಯ ಶಿವಾಜಿ ಸೂರತ್ಕಲ್ ಸಿನಿಮಾಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

  ಮಾಯಾಬಜಾರ್, ಬಿಚ್ಚುಗತ್ತಿ

  ಮಾಯಾಬಜಾರ್, ಬಿಚ್ಚುಗತ್ತಿ

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪಿ ಆರ್ ಕೆ ಬ್ಯಾನರ್ ನಲ್ಲಿ ಬಂದ ಮಾಯಾಬಜಾರ್ ಸಿನಿಮಾ ಸಹ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ರಾಧಕೃಷ್ಣ ಚೊಚ್ಚಲ ನಿರ್ದೇಶನದಲ್ಲಿ ಬಂದ ಮಾಯಬಜಾರ್ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ, ವಸಿಷ್ಠ ಸಿಂಹ, ಅಚ್ಯುತ್ ಕುಮಾರ್ ಸೇರಿದಂತೆ ಅನೇಕರಿದ್ದಾರೆ. ರಾಜವರ್ಧನ್ ಮತ್ತು ಹರಿಪ್ರಿಯ ನಟನೆಯ ಬಿಚ್ಚುಗತ್ತಿ ಸಿನಿಮಾ ನಿರೀಕ್ಷೆ ಮೂಡಿಸಿತ್ತಾದರೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿಲ್ಲ.

  ದ್ರೋಣ ಮತ್ತು ಶಿವಾರ್ಜುನ

  ದ್ರೋಣ ಮತ್ತು ಶಿವಾರ್ಜುನ

  ಮಾರ್ಚ್ ತಿಂಗಳಲ್ಲಿ ಅಂದರೆ ಇನ್ನೇನು ಲಾಕ್ ಡೌನ್ ಆಗುವ ಕೆಲವೇ ಕೆಲವು ದಿನಗಳ ಮುಂಚೆ ರಿಲೀಸ್ ಆದ ಸಿನಿಮಾಗಳಲ್ಲಿ ಶಿವರಾಜ್ ಕುಮಾರ್ ಅಭಿನಯದ ದ್ರೋಣ ಮತ್ತು ಚಿರಂಜೀವಿ ಸರ್ಜಾ ಅಭಿನಯದ ಶಿವಾರ್ಜುನ ಸಿನಿಮಾ ಸೇರಿದಂತೆ 11 ಸಿನಿಮಾಗಳು ರಿಲೀಸ್ ಆಗಿವೆ. ಆದರೆ 11 ಸಿನಿಮಾಗಳಲ್ಲಿ ಯಾವ ಸಿನಿಮಾಗಳು ಸಹ ಪ್ರೇಕ್ಷಕರ ನಿರೀಕ್ಷೆಯ ಮಟ್ಟಮುಟ್ಟುವಲ್ಲಿ ಯಶಸ್ವಿಯಾಗಿಲ್ಲ.

  ಒಟಿಟಿಯಲ್ಲಿ ಬಂದ ಸಿನಿಮಾಗಳು

  ಒಟಿಟಿಯಲ್ಲಿ ಬಂದ ಸಿನಿಮಾಗಳು

  ಲಾಕ್ ಬಳಿಕ ಸಿನಿಮಾ ಪ್ರದರ್ಶನ ಸೇರಿದಂತೆ ಚಿತ್ರೀಕರಣ ಸಹ ಸ್ಥಗಿತವಾಗಿತ್ತು. ಈ ಸಮಯದಲ್ಲಿ ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಪ್ರೇಕ್ಷಕರಿಗೆ ತಲುಪಿಸಲು ಆಯ್ದುಕೊಂಡ ದಾರಿ ಒಟಿಟಿ. ಲಾಕ್ ಡೌನ್ ಬಳಿಕ ಕನ್ನಡದಲ್ಲಿ 4 ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್ ಆಗಿವೆ. ಪುನೀತ್ ರಾಜ್ ಕುಮಾರ್ ನಿರ್ಮಾಣದ ಲಾ, ಫ್ರೆಂಚ್ ಬಿರಿಯಾನಿ ಸಿನಿಮಾಗಳು ಮತ್ತು ಭೀಮಸೇನ ನಳಮಹರಾಜ ಮತ್ತು ಮನೆ ನಂಬರ್ 13 ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್ ಆಗಿವೆ.

  ಲಾಕ್ ಡೌನ್ ಬಳಿಕ ರಿಲೀಸ್ ಆದ ಸಿನಿಮಾ

  ಲಾಕ್ ಡೌನ್ ಬಳಿಕ ರಿಲೀಸ್ ಆದ ಸಿನಿಮಾ

  ಲಾಕ್ ಡೌನ್ ಬಳಿಕ ಚಿತ್ರಮಂದಿರಗಳು ಓಪನ್ ಆದ ನಂತರ ಕನ್ನಡದಲ್ಲಿ ಒಂದು ಸಿನಿಮಾ ರಿಲೀಸ್ ಆಗಿದೆ. ನವೆಂಬರ್ 20 ರಂದು ತೆರೆಗೆ ಬಂದ ಆಕ್ಟ್-1978 ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಸಾರಥ್ಯದಲ್ಲಿ ಬಂದ ಆಕ್ಟ್-1978 ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಸಿನಿ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದೆ.

  English summary
  Flash back 2020; 63 Kannada movies released in 2020.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X