ಶೂಟಿಂಗ್ ಸೆಟ್‌ನಲ್ಲೇ ಹುಟ್ಟಿತ್ತು ಪ್ರೀತಿ; ಯಾರು ಯಾರಿಗೆ ಫಸ್ಟ್ ಪ್ರಪೋಸ್ ಮಾಡಿದ್ರು ಗೊತ್ತಾ?
ಜೀವನದಲ್ಲಿ ಒಮ್ಮೆಯಾದರೂ ಪ್ರೀತಿಸಿದರವರು ಇರದೇ ಇರಲ್ಲ ಎನ್ನುವ ಮಾತಿದೆ. ಯಾರಿಗೆ ಯಾವಾಗ, ಯಾರ ಮೇಲೆ ಪ್ರೀತಿ ಮೂಡುತ್ತದೆ ಎಂದು ಹೇಳುವುದು ಕಷ್ಟ. ಸಾಕಷ್ಟು ಸಿನಿಮಾ ತಾರೆಯರಿಗೆ ಶೂಟಿಂಗ್ ಸೆಟ್‌ನಲ್ಲಿ ಲವ್ವಾಗಿದೆ. ಒಟ್ಟಿಗೆ ನಟಿಸುತ್ತಾ ಪ್ರೀತಿಲಿ ಬಿದ್ದು ಕೊನೆಗೆ ಹಸೆಮಣೆ ಏರಿದ್ದಾರೆ. ಪ್ರೇಮಿಗಳಾಗಿ ನಟಿಸಿದವರು ನಿಜಜೀವನದಲ್ಲಿ ಪ್ರೀತಿಗೆ ಒಂದಾಗಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಪ್ರೇಮ ವಿವಾಹಗಳಿವೆ. ವಿಷ್ಣುವರ್ಧನ್- ಭಾರತಿ, ಅಂಬರೀಶ್- ಸುಮಲತಾ, ಯಶ್- ರಾಧಿಕಾ ಪಂಡಿತ್, ದಿಗಂತ್- ಐಂದ್ರಿತಾ, ಡಾರ್ಲಿಂಗ್ ಕೃಷ್ಣ- ಮಿಲನಾ ನಾಗರಾಜ್ ಹೀಗೆ ಹಲವರು ಪ್ರೀತಿಸಿ ಮದುವೆ ಆಗಿದ್ದಾರೆ. ಅವರಿಗೆ ಇವರು, ಇವರಿಗೆ ಅವರು ಪ್ರಪೋಸ್ ಮಾಡಿದ್ದು ಇದೆ. ಹುಡುಗಿಯನ್ನು ಇಂಪ್ರೆಸ್ ಮಾಡುವುದಕ್ಕೂ ಮುನ್ನ ಅವರ ಪೋಷಕರನ್ನು ಇಂಪ್ರೆಸ್ ಮಾಡಿ ಮದುವೆಗೆ ಆದವರು ಇದ್ದಾರೆ.

1. ವಿಷ್ಣುವರ್ಧನ್- ಭಾರತಿ
ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ತಾರಾ ಜೋಡಿ ಎಂದಾಗ ಮೊದಲಿಗೆ ನೆನಪಾಗುವುದು ವಿಷ್ಣುವರ್ಧನ್- ಭಾರತಿ. ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಭಾರತಿ ವಿಷ್ಣುವರ್ಧನ್ ತಮ್ಮ ಪ್ರೇಮ್ ಕಹಾನಿ ಬಿಚ್ಚಿಟ್ಟಿದ್ದರು. ಭಾರತಿ 'ದೂರದ ಬೆಟ್ಟ' ಚಿತ್ರೀಕರಣದಲ್ಲಿದ್ದಾಗ ಮೊದಲ ಬಾರಿಗೆ ವಿಷ್ಣಯ ಹೋಗಿ ಭೇಟಿ ಮಾಡಿದ್ದರಂತೆ. 'ನಾಗರಹಾವು' ಶತದಿನೋತ್ಸವ ಸಮಾರಂಭಕ್ಕೆ ಆಹ್ವಾನಿಸಿದ್ದರಂತೆ. ಬಳಿಕ 'ಮನೆ ಬೆಳಗಿದ ಸೊಸೆ' ಚಿತ್ರದಲ್ಲಿ ಒಟ್ಟಿಗೆ ನಟಿಸಿದರು. ಸೆಟ್‌ನಲ್ಲಿ ಜಾಲಿಯಾಗಿ ಮಾತನಾಡುತ್ತಾ ಇಬ್ಬರೂ ಕಾಲ ಕಳೆಯುತ್ತಿದ್ದರು. ಭಾರತಿಯವರನ್ನು ನೋಡಿದಾಗಲೆಲ್ಲಾ ದಾದಾ 'ಮೇರೆ ದಿಲ್ ಮೇ ಆಜ್ ಕ್ಯಾ' ಹಾಡು ಹಾಡುತ್ತಿದ್ದಂರಂತೆ. ಅದರಲ್ಲೇ ಭಾರತಿಯವರಿಗೆ ಸುಳಿವು ಸಿಕ್ಕಿತ್ತಂತೆ. ನನ್ನ ಪೋಷಕರನ್ನು ಒಪ್ಪಿಸಿ ಮದುವೆ ಆದರು ಎಂದು ಹೇಳಿದ್ದರು.
2. ಅಂಬರೀಶ್- ಸುಮಲತಾ
'ಆಹುತಿ' ಸಿನಿಮಾ ಶೂಟಿಂಗ್ ಸೆಟ್‌ನಲ್ಲಿ ಅಂಬರೀಶ್- ಸುಮಲತಾ ಮೊದಲ ಬಾರಿಗೆ ಭೇಟಿ ಆಗಿದ್ದರು. ಇಬ್ಬರು ಒಟ್ಟಿಗೆ ಐಲವ್ ಹೇಳಿರ್ತೀವಿ, ಯಾರು ಅನ್ನೋದು ಬೇಡ ಎಂದು ಹಳೇ ಸಂದರ್ಶನವೊಂದರಲ್ಲಿ ಅಂಬರೀಶ್ ಹೇಳಿದ್ದರು. ಐಲವ್ ಯು ಎಂದು ಹೇಳುವಷ್ಟು ರೊಮ್ಯಾಂಟಿಕ್ ಅಂಬರೀಶ್ ಅಲ್ಲ, ನಾನು ಹೇಳಿರಬಹುದು ಎಂದು ಸುಮಲತಾ ಹೇಳಿದ್ದರು.

3. ಯಶ್- ರಾಧಿಕಾ
ಸ್ಯಾಂಡಲ್‌ವುಡ್ ಹಾಟ್ ಕಪಲ್ ಯಶ್ ಮತ್ತು ರಾಧಿಕಾ ಪಂಡಿತ್. 'ಮೊಗ್ಗಿನ ಮನಸು' ಚಿತ್ರದಲ್ಲಿ ಒಟ್ಟಿಗೆ ನಟಿಸುವ ಮುನ್ನ ಕಿರುತೆರೆಯಲ್ಲಿ ಪರಿಚಯ ಇತ್ತು. ರಾಧಿಕಾ ಅವರಿಗೆ ನಾನೇ ಫೋನ್ ಮಾಡಿ ಮೊದಲು ಪ್ರಪೋಸ್ ಮಾಡಿದ್ದೆ ಎಂದು ಯಶ್ ನಿಶ್ಚಿತಾರ್ಥದ ಬಳಿಕ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಆದರೆ ಪ್ರಪೋಸ್ ಮಾಡಿದ ರೀತಿ ಆಕೆಗೆ ಇಷ್ಟವಾಗಿರಲಿಲ್ಲ. ಅದೇ ಕಾರಣಕ್ಕೆ ಮಿ. & ಮಿ. ರಾಮಾಚಾರಿ ಚಿತ್ರದಲ್ಲಿ ವಿಶೇಷವಾಗಿ ಪ್ರಪೋಸ್ ಮಾಡುವ ಸೀನ್ ಡಿಸೈನ್ ಮಾಡಲಾಗಿತ್ತು ಎಂದಿದ್ದರು.
4. ಕೃಷ್ಣ- ಮಿಲನಾ
'ಲವ್ ಮಾಕ್ಟೇಲ್' ಸಿನಿಮಾ ಸಕ್ಸಸ್ ಬೆನ್ನಲ್ಲೇ ಕೃಷ್ಣ- ಮಿಲನಾ ತಮ್ಮ ಲವ್ ಸ್ಟೋರಿ ಹಂಚಿಕೊಂಡಿದ್ದರು. ಚಾಕಲೇಟ್ ಕೊಟ್ಟು ಮಿಲನಾಗೆ ಮೊದಲು ಪ್ರಪೋಸ್ ಮಾಡಿದವರು ಕೃಷ್ಣ. 'ಚಾರ್ಲಿ' ಸಿನಿಮಾದಲ್ಲಿ ಇಬ್ಬರು ಒಟ್ಟಿಗೆ ಮೊದಲು ನಟಿಸಿದ್ದರು. ಅದಕ್ಕೂ ಮುನ್ನ 'ನಮ್ ದುನಿಯಾ ನಮ್ ಸ್ಟೈಲ್' ಚಿತ್ರದಲ್ಲಿ ನಟಿಸಿದ್ದರು. ಆದರೆ ಬೇರೆಯವರಿಗೆ ಪೇರ್ ಆಗಿದ್ದರು. ಪ್ರೇಮಿಗಳ ದಿನವೇ ಇಬ್ಬರೂ ಹಸೆಮಣೆ ಏರಿದ್ದರು.
5. ದಿಗಂತ್- ಐಂದ್ರಿತಾ
'ಮನಸಾರೆ' ಸಿನಿಮಾದಲ್ಲಿ ಮೊದಲಿಗೆ ದಿಗಂತ್- ಐಂದ್ರಿತಾ ರೇ ಒಟ್ಟಿಗೆ ನಟಿಸಿದ್ದರು. ಆ ಸಮಯದಲ್ಲೇ ಇಬ್ಬರ ನಡುವೆ ಪ್ರೇಮ ರಾಗ ಶುರುವಾಗಿತ್ತು. ಸಿನಿಮಾ ಚಿತ್ರೀಕರಣದ ಬಳಿಕ ಟ್ರಿಪ್ ಹೋಗಿದ್ದ ಸಮಯದಲ್ಲಿ ದಿಗಂತ್ ಒಂದು ಉಂಗುರ ಕೊಟ್ಟು ಐಂದ್ರಿತಾಗೆ ಪ್ರಪೋಸ್ ಮಾಡಿದ್ದರು.
6. ಚಿರಂಜೀವಿ ಸರ್ಜಾ- ಮೇಘನಾ ರಾಜ್
'ಆಟಗಾರ' ಚಿತ್ರದಲ್ಲಿ ಚಿರು ಸರ್ಜಾ- ಮೇಘನಾ ರಾಜ್ ಒಟ್ಟಿಗೆ ನಟಿಸಿದ್ದರು. ಆಗ ಶುರುವಾದ ಪರಿಚಯ ಪ್ರೀತಿಗೆ ತಿರುಗಿತ್ತು. ಇಂದು ಚಿರು ಇಲ್ಲದೇ ಇದ್ದರೂ ಅವರ ಪ್ರೀತಿಯಲ್ಲೇ ಕುಟಿಮಾ ದಿನಗಳನ್ನು ದೂಡುತ್ತಿದ್ದಾರೆ. ಅಂದಹಾಗೆ ಮೇಘನಾಗೆ ಮೊದಲು ಪ್ರಪೋಸ್ ಮಾಡಿದ್ದು ಚಿರು ಸರ್ಜಾ.
7. ವಸಿಷ್ಠ ಸಿಂಹ- ಹರಿಪ್ರಿಯಾ
ಒಟ್ಟಿಗೆ ನಟಿಸದೇ ಇದ್ದರೂ ನಟ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಪ್ರೀತಿಸಿ ಮದುವೆ ಆಗಿದ್ದರು. ಹರಿಪ್ರಿಯಾ ತಂದೆ ಕಾರ್ಯದ ದಿನವೇ ವಸಿಷ್ಠ ಪ್ರಪೋಸ್ ಮಾಡಿದ್ದರಂತೆ. ಎರಡೂವರೆ ವರ್ಷ ತಮ್ಮಿಬ್ಬರ ಪ್ರೀತಿಯನ್ನು ಇಬ್ಬರೂ ಗುಟ್ಟಾಗಿ ಇಟ್ಟುಕೊಂಡಿದ್ದರು.


Click it and Unblock the Notifications











