"ರಜನಿಕಾಂತ್‌ ಅವರನ್ನು ಕರಿಯ ಎಂದಿದ್ದ ವ್ಯಕ್ತಿ ಬಳಿಕ ಕೈ ಎತ್ತಿ ಮುಗಿದುಬಿಟ್ರು"; ರಘುನಂದನ್

ನಟ ರಜನಿಕಾಂತ್ ಇವತ್ತು ದೊಡ್ಡ ಸೂಪರ್ ಸ್ಟಾರ್. ಆದರೆ ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಅವರು ಎದುರಿಸಿದ ಕಷ್ಟ, ಅವಮಾನ ಅಷ್ಟಿಷ್ಟಲ್ಲ. ತಮ್ಮ ಬಣ್ಣದ ಕಾರಣಕ್ಕೂ ಸಾಕಷ್ಟು ಅವಮಾನ ಎದುರಿಸುವಂತಾಗಿತ್ತು. ಕನ್ನಡದಲ್ಲಿ ಅವಕಾಶಗಳಿಗೆ ಹುಡುಕಾಟ ನಡೆಸಿದ್ದರು. ಕೊನೆಗೆ ತಮಿಳಿನಲ್ಲಿ ಸಕ್ಸಸ್ ಸಿಕ್ಕಿತ್ತು.

ಬೆಂಗಳೂರಿನಲ್ಲಿ ಬಿಟಿಎಸ್ ಬಸ್ ಕಂಡೆಕ್ಟರ್ ಆಗಿದ್ದ ಶಿವಾಜಿರಾವ್ ಗಾಯಕ್‌ವಾಡ್ ಬಳಿಕ ಚಿತ್ರರಂಗಕ್ಕೆ ಬಂದರು. ಕಂಡೆಕ್ಟ್ ಆಗಿದ್ದಾಗಲೇ ನಾಟಕಗಳಲ್ಲಿ ನಟಿಸುತ್ತಿದ್ದಾರೆ. ಆತನ ಪ್ರತಿಭೆ ನೋಡಿ ಸ್ನೇಹಿತ ಬಸ್ ಡ್ರೈವರ್ ರಾಜ್‌ ಬಹದ್ದೂರ್ ಹುರಿದುಂಬಿಸಿದ್ದರು. ಮದ್ರಾಸ್ ಫಿಲ್ಮ್ ಇನ್ಸಿಟ್ಯೂಟ್‌ನಲ್ಲಿ ನಟನೆಯ ಪಟ್ಟುಗಳನ್ನು ಕಲಿತರು. ಆ ಬಳಿಕ ಕೆಲಸ ಬಿಟ್ಟು ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸಣ್ಣ ಪುಟ್ಟ ಪಾತ್ರಗಳಿಂದ ಶುರುವಾಗಿ ಮುಂದೆ ಹೀರೋ ಆಗಿದ್ದರು.

Friend Raghunandan recalls how Rajinikanth faced humiliation in his early days

ಬಾಲಚಂದರ್ ಸಿನಿಮಾಗಳಿಂದ ಹೆಚ್ಚು ಹೆಸರು ಬಂದಿತ್ತು. ಶಿವಾಜಿ ಹೆಸರನ್ನು ರಜನಿಕಾಂತ್ ಎಂದು ಬಾಲಚಂದರ್ ಬದಲಿಸಿದ್ದರು. ಕನ್ನಡದ ಕೆಲ ಚಿತ್ರಗಳಲ್ಲಿ ಕೂಡ ರಜನಿಕಾಂತ್ ನಟಿಸಿದ್ದರು. ತಲೈವಾ ತಾವು ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಲ್ಲಿ ಎದುರಿಸಿದ ಅವಮಾನದ ಬಗ್ಗೆ ಕೆಲ ವೇದಿಕೆಗಳಲ್ಲಿ ಹೇಳಿಕೊಂಡಿದ್ದಾರೆ. ಇದೇ ವಿಚಾರದ ಬಗ್ಗೆ ರಜನಿಕಾಂತ್ ಆಪ್ತಮಿತ್ರ ರಘುನಂದನ್ 'ಡೈಲಿ ಮಾಧ್ಯಮ' ಯೂಟ್ಯೂಬ್ ಚಾನಲ್ ಸಂದರ್ಶನಗಳಲ್ಲಿ ಮಾತನಾಡಿದ್ದಾರೆ.

ರಜನಿಕಾಂತ್ ಮದ್ರಾಸ್ ಇನ್ಸಿಟ್ಯೂಟ್‌ನಲ್ಲಿ ಕಲಿಯುವಾಗ ರಘುನಂದನ್ ಕ್ಲಾಸ್‌ಮೇಟ್ ಆಗಿದ್ದರು. ಬಳಿಕ ಕೆಲ ಸಿನಿಮಾಗಳ ಸಹಾಯ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ರಜನಿಕಾಂತ್ ಜೊತೆ ಇವತ್ತಿಗೂ ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ. ಮದ್ರಾಸ್‌ನಲ್ಲಿ ಆಕ್ಟಿಂಗ್ ಕಲಿಯುವಾಗ, ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದಾಗ ಶಿವಾಜಿ ಎದುರಿಸಿದ ಅವಮಾನಗಳ ಬಗ್ಗೆ ರಘು ಮಾತನಾಡಿದ್ದಾರೆ.

Friend Raghunandan recalls how Rajinikanth faced humiliation in his early days

"ಒಂದು ಸಿನಿಮಾ ಶೂಟಿಂಗ್. ನಾವು ಸೆಟ್‌ಗೆ ಹೋಗಿದ್ದೆವು. ಬಾಲಚಂದರ್ ನಿರ್ದೇಶಕರು. ಅವತ್ತು 10 ಶಾಟ್ಸ್ ಇತ್ತು. ಶಿವಾಜಿಗೆ ಬೈದರು, ಏನು ತಮಿಳು ಬರಲ್ಲ ಅಂದ್ರು. ಆಗ ಕಮಲ್ ಹಾಸನ್ ದೊಡ್ಡ ಸ್ಟಾರ್. ಅವತ್ತು ರಾತ್ರಿ ರಜನಿಕಾಂತ್ ಕೋಪಗೊಂಡು ನಾನು ಸಿನಿಮಾ ಬೇಡ, ಏನು ಬೇಡ ಹೋಗಿಬಿಡ್ತೀನಿ ಅಂದ. ನಾವು ಸಮಾಧಾನ ಮಾಡಿದೆವು. ಮರುದಿನ ಕಾರ್ ಕಳುಹಿಸಿದರು. ಬಾಪ್ಪಾ ನಿನ್ನೆ ಬೈದುಬಿಟ್ಟೆ, ನೀನು ದೊಡ್ಡ ಹೀರೊ ಆಗಬೇಕು ಅಂದ್ರು. ಅವತ್ತು ಎಲ್ಲಾ ಟೇಕ್ ಓಕೆ ಆಯಿತು" ಎಂದು ರಘು ನೆನಪಿಸಿಕೊಂಡಿದ್ದಾರೆ.

'ಸಹೋದರರ ಸವಾಲ್' ಬಳಿಕ 'ಮೂಂಡ್ರು ಮುಡಿಚ್ಚು' ಸಿನಿಮಾದಲ್ಲಿ ಖಳನಾಯಕನಾಗಿ ಹೀರೊ ಕೂಡ ಆಗಿಬಿಟ್ಟರು. ಕನ್ನಡದ ಒಂದು ಚಿತ್ರಕ್ಕೆ ಮೇಕಪ್ ಹಾಕಿಸಿ ಬಳಿಕ ಅವಕಾಶ ಇಲ್ಲ ಎಂದುಬಿಟ್ಟಿದ್ದರು. ಅದೇ ಬೇಸರದಲ್ಲಿದ್ದಾಗ ರಾಜ್ ಬಹದ್ದೂರ್ ಸಲಹೆಯಂತೆ ರಜನಿಕಾಂತ್ ತಮಿಳು ಚಿತ್ರರಂಗಕ್ಕೆ ಹೋಗಿದ್ದು. ಇನ್ಸಿಟ್ಯೂಟ್‌ನಲ್ಲಿ ಕೋರ್ಸ್ ಮುಗಿಸಿದ ಬಳಿಕ ಒಂದು ಡ್ರಾಮಾ ಮಾಡಿದ್ದ. ಅದನ್ನು ನೋಡಲು ಬಾಲಚಂದರ್ ಬಂದಿದ್ದರು. ಅಲ್ಲಿ ಅವನ ನಟನೆ ನೋಡಿ, ಅವನ ಬಣ್ಣ ನೋಡಿ ತಮಿಳು ಚಿತ್ರಕ್ಕೆ ಅದು ಓಕೆ ಎಂದು ಅವರು ಅವಕಾಶ ಕೊಟ್ಟಿದ್ದರು" ಎಂದು ವಿವರಿಸಿದ್ದಾರೆ.

"ಮದ್ರಾಸ್ ಇನ್ಸಿಟ್ಯೂಟ್‌ನಲ್ಲಿ ಕಲಿಯುವಾಗ ವುಡ್‌ಲ್ಯಾಂಡ್ಸ್ ಹೋಟೆಲ್‌ನಲ್ಲಿ ಉಳಿದುಕೊಳ್ಳುತ್ತಿದ್ದೆವು. ಒಮ್ಮೆ ಆ ಹೋಟೆಲ್ ಓವರ್ ಆ ಕರಿಯ(ಶಿವಾಜಿರಾವ್)ನನ್ನು ಇಲ್ಲಿ ನೋಡಬಾರದು. ಅವನು ಇದ್ದರೆ ನಿಮಗೆ ಜಾಗ ಇಲ್ಲ, ಅವನು ಬರಬಾರದು ಎಂದಿದ್ದರು. ಬಳಿಕ ಯಾವುದೋ ಕಾರ್ಯಕ್ರಮಕ್ಕೆ ರಜನಿಕಾಂತ್ ಅದೇ ಹೋಟೆಲ್‌ಗೆ ಬಂದ. ಅಷ್ಟರಲ್ಲಿ ಸ್ಟಾರ್ ಆಗಿದ್ದ. ಆಗ ನಾನು ಓನರ್ ಬಂದ್ರು, ನಾನು ಸರ್ ಕರಿಯ ಅಂತ ಕರೆದಿದ್ರಲ್ಲ, ಅವನು ಬರ್ತಿದ್ದಾನೆ ಎಂದೆ. ಕೂಡಲೇ ಕೈ ಮುಗಿದು ಆ ವಿಚಾರ ಮರೆತುಬಿಡಿ" ಎಂದಿದ್ದಾಗಿ ರಘುನಂದನ್ ಆ ಘಟನೆ ಮೆಲುಕು ಹಾಕಿದ್ದಾರೆ.

More from Filmibeat

English summary
Raghunandan, a friend of Rajinikanth, remembers the racism shivajirao faced in his early days;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X