ತಮ್ಮ ಕಾರಿನ ಫ್ಯಾನ್ಸಿ ನಂಬರ್‌ಗಾಗಿ ಲಕ್ಷ ಲಕ್ಷ ಕೊಟ್ಟ ಸ್ಟಾರ್ ನಟರಿವರು

ಜನ ಜೋತಿಷ್ಯ, ಸಂಖ್ಯಾಶಾಸ್ತ್ರ, ವಾಸ್ತು ನಂಬುವುದು ಹೊಸದೇನು ಅಲ್ಲ. ಸಿನಿಮಾ ತಾರೆಯರು ಕೂಡ ಇದಕ್ಕೆ ಹೊರತಲ್ಲ. ತಾವು ನಟಿಸುವ ಸಿನಿಮಾ ಟೈಟಲ್, ಮುಹೂರ್ತ, ರಿಲೀಸ್ ದಿನಾಂಕ ಹೀಗೆ ಎಲ್ಲಾ ವಿಚಾರದಲ್ಲೂ ಅದೃಷ್ಟ, ಸಮಯ, ಗಳಿಗೆ ನಂಬುವವರು ಇರುತ್ತಾರೆ. ಕೆಲವೊಮ್ಮೆ ಇದಕ್ಕಾಗಿ ಲಕ್ಷ ಲಕ್ಷ ಖರ್ಚು ಮಾಡುತ್ತಾರೆ.

ಮುಖ್ಯವಾಗಿ ಸ್ಟಾರ್ ನಟ- ನಟಿಯರು ಸಂಖ್ಯಾಶಾಸ್ತ್ರದ ಮೇಲೆ ಬಹಳ ನಂಬಿಕೆ ಇಟ್ಟಿದ್ದಾರೆ. ಸಂಖ್ಯೆಗಳ ಆಯ್ಕೆಯಿಂದ ಅದೃಷ್ಟ ಖುಲಾಯಿಸುತ್ತದೆ ಎಂದು ಭಾವಿಸುತ್ತಾರೆ. ತಮ್ಮ ಕಾರುಗಳ ನಂಬರ್ ಪ್ಲೇಟ್ ವಿಚಾರದಲ್ಲಿ ಬಹಳ ಜಾಗ್ರತೆ ವಹಿಸುತ್ತಾರೆ. ಕೆಲವರು ಸಂಭಾವನೆ ಪಡೆಯುವಾಗ ಕೂಡ ಈ ನಂಬರ್ ವಿಚಾರವನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ.

From Balakrishna To Yash Celebs Spend Lakhs on Fancy Car Numbers

ನಟ ಪುನೀತ್ ರಾಜ್‌ಕುಮಾರ್ ಕೂಡ ಸಂಖ್ಯೆ 9 ಅನ್ನು ಲಕ್ಕಿ ಎಂದು ಭಾವಿಸಿದ್ದರು. 'ವೀರ ಕನ್ನಡಿಗ' ಚಿತ್ರಕ್ಕಾಗಿ 1 ಕೋಟಿ ರೂ. ಸಂಭಾವನೆ ಪಡೆದಿದ್ದರು. ಕನ್ನಡ ಚಿತ್ರರಂಗದಲ್ಲಿ ಇದು ದಾಖಲೆ ಆಗಿತ್ತು. ಆದರೆ 9 ಲಕ್ಕಿ ಎನ್ನುವ ಕಾರಣಕ್ಕೆ ಅಪ್ಪು 99 ಲಕ್ಷ ರೂ. ಸಂಭಾವನೆ ಪಡೆದಿದ್ದರು ಎನ್ನಲಾಗುತ್ತಿದೆ. 7 ಹಾಗೂ 9 ಅನ್ನು ದರ್ಶನ್‌ ಅದೃಷ್ಟ ಎಂದು ಭಾವಿಸುತ್ತಾರೆ.

ಅಮಿತಾಬ್ ಬಚ್ಚನ್, ರಜನಿಕಾಂತ್, ಯಶ್, ಮಮ್ಮುಟಿ ಹೀಗೆ ಭಾರತೀಯ ಚಿತ್ರರಂಗದ ಬಹುತೇಕ ಸ್ಟಾರ್ ನಟರು ಸಂಖ್ಯಾಶಾಸ್ತ್ರ ನಂಬುತ್ತಾರೆ. ಹೊಸದಾಗಿ ಕಾರ್ ಖರೀದಿಸಿದ್ದಾಗ ತಮಗಿಷ್ಟ ಫ್ಯಾನ್ಸಿ ನಂಬರ್ ಪಡೆಯಲು ಪ್ರಯತ್ನಿಸುತ್ತಾರೆ. ಕೋಟಿ ಕೋಟಿ ಕೊಟ್ಟು ಕಾರ್ ಖರೀದಿಸುವವರು ಲಕ್ಷ ಲಕ್ಷ ಚೆಲ್ಲಿ ಫ್ಯಾನ್ಸಿ ನಂಬರ್ ತಮ್ಮದಾಗಿಸಿಕೊಳ್ಳುತ್ತಾರೆ. ಇತ್ತೀಚೆಗೆ ತೆಲುಗು ನಟ ಬಾಲಕೃಷ್ಣ 7.75 ಲಕ್ಷ ರೂ. ಕೊಟ್ಟು ಕಾರ್ ನಂಬರ್ ಪಡೆದಿದ್ದು ಸುದ್ದಿಯಾಗಿತ್ತು.

ಅಮಿತಾಬ್ ಬಚ್ಚನ್

ಬಾಲಿವುಡ್ ಶೆಹನ್ ಶಾ ಅಮಿತಾಬ್ ಬಚ್ಚನ್ ಸಂಖ್ಯೆ '2' ಅನ್ನು ಅದೃಷ್ಟ ಎಂದು ನಂಬುತ್ತಾರೆ. ಅವರ ಹುಟ್ಟುಹಬ್ಬ ಅಕ್ಟೋಬರ್ 11. ಅಂದರೆ 1 ಪ್ಲಸ್ 1 ಸೇರಿ 2 ಆಗುತ್ತದೆ. ಹಾಗಾಗಿ ಕಾರಿನ ಸಂಖ್ಯೆಯನ್ನು ಕೂಡಿದಾಗ '2' ಬರುವಂತೆ ಆಯ್ಕೆ ಮಾಡಿಕೊಳ್ಳುತ್ತಾರೆ. ಅವರ ಕಾರುಗಳಲ್ಲಿ 2000 ಹಾಗೂ 1010 ನಂಬರ್‌ ಪ್ಲೇಟ್ ಇರುವುದನ್ನು ನೋಡಬಹುದು.

From Balakrishna To Yash Celebs Spend Lakhs on Fancy Car Numbers

ರಣ್‌ಬೀರ್ ಕಪೂರ್

ಬಾಲಿವುಡ್ ನಟ ರಣ್‌ಬೀರ್ ಕಪೂರ್ ಅವರ ತಾಯಿ ನೀತು ಕಪೂರ್ ಹುಟ್ಟುಹಬ್ಬ ಜುಲೈ 8. ಹಾಗಾಗಿ ರಣ್‌ಬೀರ್ ತಮ್ಮ ಕಾರಿನ ಸಂಖ್ಯೆ 8 ಅಂಕಿ ಇರುವಂತೆ ನೋಡಿಕೊಳ್ಳುತ್ತಾರೆ. 8 ಅಥವಾ 8000 ಸಂಖ್ಯೆಯ ನಂಬರ್ ಪ್ಲೇಟ್ ಅವರ ಕಾರುಗಳಲ್ಲಿ ಇರುತ್ತದೆ. ಇನ್ನುಳಿದಂತೆ ರಣ್‌ವೀರ್ ಸಿಂಗ್ '6969', ಶಾಹಿದ್ ಕಪೂರ್ '7000' ಅಥವಾ '0700', ಸಂಜಯ್ ದತ್ '4545' ಹಾಗೂ ಶಾರುಖ್ ಖಾನ್ '0555' ಅಥವಾ '555', ಸಲ್ಮಾನ್ ಖಾನ್ '2727' ಸಂಖ್ಯೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಮಮ್ಮುಟಿ

ಮಲಯಾಳಂ ನಟ ಮಮ್ಮುಟಿ ತಮ್ಮ ಕಾರುಗಳಿಗೆ '0369' ಸಂಖ್ಯೆ ಆಯ್ಕೆ ಮಾಡಿಕೊಳ್ಳುತ್ತಾರೆ. ಮಾಲಿವುಡ್ ನಟ, ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ '7777' ಫ್ಯಾನ್ಸಿ ನಂಬರ್ ಅನ್ನು ತಮ್ಮ ಕಾರಿಗಾಗಿ ಪಡೆದುಕೊಂಡಿದ್ದರು.

ಚಿರಂಜೀವಿ

ಎರಡು ವರ್ಷಗಳ ಹಿಂದೆ ತೆಲುಗು ನಟ ಚಿರಂಜೀವಿ 5 ಲಕ್ಷ ರೂ. ಖರ್ಚು ಮಾಡಿ ತಮ್ಮ ಹೊಸ ಕಾರಿಗೆ ಫ್ಯಾನ್ಸಿ ನಂಬರ್ ಪಡೆದಿದ್ದರು. 1.2 ಕೋಟಿ ರೂ. ಮೌಲ್ಯದ ಟೊಯೊಟಾ ವೆಲ್‌ಫೇರ್ ಕಾರನ್ನು ಚಿರು ಖರೀದಿಸಿದ್ದರು. ಅದಕ್ಕಾಗಿ 'TS09 GB 1111' ಫ್ಯಾನ್ಸಿ ನಂಬರ್ ಪಡೆದುಕೊಂಡಿದ್ದು ಸುದ್ದಿ ಆಗಿತ್ತು.

ಜ್ಯೂ. ಎನ್‌ಟಿಆರ್

ಟಾಲಿವುಡ್ ನಟ ಜ್ಯೂ. ಎನ್‌ಟಿಆರ್ '9' ಸಂಖ್ಯೆಯನ್ನು ಅದೃಷ್ಟವೆಂದು ಭಾವಿಸುತ್ತಾರೆ. ಹಾಗಾಗಿ ತಮ್ಮ ಲ್ಯಾಂಬೋರ್ಗಿನಿ ಉರುಸ್ ಕಾರಿಗೆ 'TS 09 FS 9999' ಸಂಖ್ಯೆ 17 ಲಕ್ಷ ರೂ. ಕೊಟ್ಟು ಖರೀದಿಸಿದ್ದರು. ಆಗ ಇದು ದೊಡ್ಡ ಸುದ್ದಿ ಆಗಿತ್ತು.

ಅಲ್ಲು ಅರ್ಜುನ್

'ಪುಷ್ಪ' ಚಿತ್ರನಟ ಅಲ್ಲು ಅರ್ಜುನ್ ಈಗ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿದ್ದಾರೆ. ಚಿತ್ರವೊಂದಕ್ಕೆ 100 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆಯುತ್ತಾರೆ. ಅದಕ್ಕೆ ತಕ್ಕಂತೆ ಐಷಾರಾಮಿ ಕಾರುಗಳನ್ನು ತಮ್ಮ ಗ್ಯಾರೇಜ್‌ನಲ್ಲಿ ನಿಲ್ಲಿಸಿದ್ದಾರೆ. ತಮ್ಮ ಕಾರಿಗಾಗಿ 'TS 07 GE 9999' ನಂಬರ್ ಪಡೆಯಲು 10 ಲಕ್ಷ ರೂ. ಖರ್ಚು ಮಾಡಿದ್ದರು ಎಂದು ಸುದ್ದಿ ಆಗಿತ್ತು.

ಮಹೇಶ್ ಬಾಬು

ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಕೂಡ ಸಂಖ್ಯೆ 6 ಅನ್ನು ಅದೃಷ್ಟವೆಂದು ಭಾವಿಸುತ್ತಾರೆ. ತಮ್ಮ ಕಾರುಗಳಿಗೆ '600' ಸಂಖ್ಯೆ ಇರುವ ನಂಬರ್ ಪ್ಲೇಟ್ ಅನ್ನು ಬಳಸುತ್ತಾರೆ. ಹೀಗೆ ಹೇಳ್ತಾ ಹೋದರೆ ತೆಲುಗಿನ ಖ್ಯಾತ ನಟರೆಲ್ಲಾ ತಮ್ಮ ಕಾರಿನ ಫ್ಯಾನ್ಸಿ ನಂಬರ್‌ಗಾಗಿ ಲಕ್ಷ ಲಕ್ಷ ಸುರಿಯುತ್ತಾರೆ.

ಬಾಲಕೃಷ್ಣ

ಕಳೆದ ವಾರವಷ್ಟೆ ನಟ ಬಾಲಕೃಷ್ಣ ಕೆಲ ವರ್ಷಗಳ ಹಿಂದೆ ತಮ್ಮ ಬೆಂಟ್ಲಿ ಕಾರಿನ ಫ್ಯಾನ್ಸಿ ನಂಬರ್‌ಗೆ 7 ಲಕ್ಷ ರೂ. ಪಾವತಿಸಿದ್ದರು. 'TS09 EU0001' ನಂಬರ್ ಅನ್ನು ಆಗ ಪಡೆದಿದ್ದರು. ಇದೀಗ ಹರಾಜಿನಲ್ಲಿ 7.75 ಲಕ್ಷ ಕೊಟ್ಟು ತಮ್ಮ ಬಿಎಂಡಬ್ಯೂ ಕಾರಿಗೆ 'TG09 F0001' ನಂಬರ್ ಸ್ವಂತ ಮಾಡಿಕೊಂಡಿದ್ದಾರೆ.

ಯಶ್

ಕನ್ನಡದಲ್ಲಿ ನಟ ಯಶ್ ಐಷಾರಾಮಿ ಕಾರುಗಳನ್ನು ಖರೀದಿಸಿದ್ದಾರೆ. 8 ವರ್ಷಗಳ ಹಿಂದೆ ಒಮ್ಮೆ ಮೂರು 'Mercedes Benz' ಕಾರುಗಳನ್ನು ಯಶ್ ಖರೀದಿಸಿದ್ದು ಭಾರೀ ಸುದ್ದಿ ಆಗಿತ್ತು. ತಮಗೆ ಒಂದು, ಪತ್ನಿ ರಾಧಿಕಾಗೆ ಒಂದು ಹಾಗೂ ಪೋಷಕರು ಒಂದು ಕಾರನ್ನು ಯಶ್ ಒಮ್ಮೆ ಖರೀದಿಸಿದ್ದರು. ಇನ್ನು 72 ಸಾವಿರ ಹಣ ನೀಡಿ 'KA 01 NA 8055' ಸಂಖ್ಯೆಯ ನಂಬರ್ ಅನ್ನು ಕಾರಿಗಾಗಿ ಪಡೆದಿದ್ದರು. '8055' ಅಂಕೆಯಲ್ಲಿ ಇಂಗ್ಲೀಷ್‌ನಲ್ಲಿ 'BOSS' ಎಂದು ಸಂಕೇತಿಸುವ ಪಡೆದಿದ್ದಾರೆ ಎಂದು ಸುದ್ದಿ ಆಗಿತ್ತು.

ಪವಿತ್ರಾ ಗೌಡ

ಕನ್ನಡ ನಟಿ ಪವಿತ್ರಾ ಗೌಡ ಲಕ್ಕಿ ನಂಬರ್ 7. ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ರೇಂಜ್ ರೋವರ್ ಕಾರ್ ಉಡುಗೊರೆ ಕೊಟ್ಟಿದ್ದರು. ಅದೇ ಮಾಡೆಲ್ ಕಾರ್ ತಮಗೂ ಬೇಕು ಎಂದು ಹಠ ಹಿಡಿದು ಪವಿತ್ರಾ ಗೌಡ ತೆಗೆದುಕೊಂಡಿದ್ದರು ಎಂದು ಹೇಳಲಾಗಿತ್ತು. ಆ ಕಾರಿನ ಸಂಖ್ಯೆ 'KA 04 NE 0777'. ಪವಿತ್ರಾ ಗೌಡ ಜನ್ಮ ದಿನಾಂಕ 7. 'ರೆಡ್ ಕಾರ್ಪೆಟ್‌ ಸ್ಟುಡಿಯೋ 777' ಹೆಸರಿನ ಬೋಟಿಕ್‌ ಹೊಂದಿದ್ದಾರೆ. ಕಾರಿಗೂ 0777 ಸಂಖ್ಯೆ ನಂಬರ್ ಪ್ಲೇಟ್ ಹಾಕಿಸಿದ್ದಾರೆ.

ದಳಪತಿ ವಿಜಯ್

ತಮಿಳು ನಟ ದಳಪತಿ ವಿಜಯ್ ರಾಜಕೀಯರಂಗಕ್ಕೆ ಪ್ರವೇಶಿಸಿದ್ದು 'ತಮಿಳಗ ವೆಟ್ರಿ ಕಳಗಂ' ಎಂಬ ಪಕ್ಷ ಸ್ಥಾಪಿಸಿದ್ದಾರೆ. ಮುಂದಿನ ವರ್ಷ ನಡೆಯುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದಾರೆ. ಕಳೆದ ವರ್ಷ ತಮ್ಮ ಕಾರಿಗೆ ವಿಜಯ್ ಇಂಟ್ರೆಸ್ಟಿಂಗ್ ನಂಬರ್ ಪ್ಲೇಟ್ ಹಾಕಿಸಿದ್ದರು. 'TN 07 CM 2026' ನಂಬರ್ ಅನ್ನು ಪಡೆದುಕೊಂಡಿದ್ದಾರೆ. ತಾವೇ ತಮಿಳುನಾಡಿನ ಮುಂದಿನ ಸಿಎಂ ಎನ್ನುವಂತೆ ವಿಜಯ್ ಈ ಫ್ಯಾನ್ಸಿ ನಂಬರ್ ಪಡೆದಿದ್ದಾರೆ ಎಂದು ಆಗ ಗುಲ್ಲಾಗಿತ್ತು. ವಿಜಯ್ ಪೊಲಿಟಿಕಲ್ ಎಂಟ್ರಿ ಬಗ್ಗೆ ಸುಳಿವು ಸಿಕ್ಕಿತ್ತು.

More from Filmibeat

English summary
Indian Cinema Super Stars and their favourite car numbers
Read more about: yash balakrishna salman khan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X