Independence Day 2024 ; ಬಾರ್ಡರ್ To ಗದರ್‌ 2 - ಸನ್ನಿ ಡಿಯೋಲ್ ಮತ್ತು ದೇಶಭಕ್ತಿ...!

ಸನ್ನಿ ಡಿಯೋಲ್ ಯಾರಿಗೆ ತಾನೇ ಗೊತ್ತಿಲ್ಲ. ಒಂದ್ಕಾಲದ ಸೂಪರ್ ಸ್ಟಾರ್. 90ರ ದಶಕದಲ್ಲಿ ಒಂದಾದ ಮೇಲೊಂದರಂತೆ ಗೆಲುವುನ್ನ ಕಂಡ ಸನ್ನಿ ಡಿಯೋಲ್ ಅವರನ್ನು ಮೊನ್ನೆ ಮೊನ್ನೆವರೆಗೆ ಅನೇಕರು ಮರೆತೇ ಹೋಗಿದ್ದರು. ಬಾಲಿವುಡ್‌ನವರಿಗೆನೇ ಸನ್ನಿ ಡಿಯೋಲ್ ನೆನಪಿರಲಿಲ್ಲ. ಧಮೇಂದ್ರ ಮಗನಾದರೂ .. ಒಂದ್ಕಾಲದಲ್ಲಿ ಚಿನ್ನದ ಗಣಿ ತೆಗೆದಿದ್ದರೂ..ಹಿಂದಿ ಚಿತ್ರರಂಗ ಸನ್ನಿ ಡಿಯೋಲ್ ಅವರನ್ನ ನಂಬಲಿಲ್ಲ. ಅವಕಾಶಗಳನ್ನ ಕೊಡಲಿಲ್ಲ. ಇದರಿಂದ ಹೈರಾಣಾದ ಸನ್ನಿ ಡಿಯೋಲ್‌ ಗೆ ಮಾಡಿಕೊಂಡ ಸಾಲ ಇನ್ನಷ್ಟು
ಕಂಗಲಾಗಿಸಿತ್ತು. ಗದರ್ -02 ಚಿತ್ರ ತೆರೆಗೆ ಬರುವ ಮುನ್ನ ಅಕ್ಷರಶಃ ಸನ್ನಿ ಡಿಯೋಲ್ ಅವರ ಬದುಕು ಕೇರ್ ಆಫ್ ಫುಟ್‌ಪಾತ್ ಎಂಬಂತಾಗಿತ್ತು.

ಇಂಥಾ ಸನ್ನಿ ಡಿಯೋಲ್ ಒಂದು ಕಾಲದಲ್ಲಿ ದೇಶ ಪ್ರೇಮಕ್ಕೆ ಕೇರ್ ಆಫ್ ಅಡ್ರೆಸ್ ಆಗಿದ್ದರು. ''ಬಾರ್ಡರ್''.. ''ಗದರ್''.. ''ಇಂಡಿಯನ್''.. ಅಬ್ಬಬ್ಬಾ, ಒಂದಾ.. ಎರಡಾ.. ಸಾಲು ಸಾಲು ಚಿತ್ರಗಳಲ್ಲಿ ಭಾರತಾಂಬೆಯ ಮುದ್ದಿನ ಮಗನಂತಹ ಪಾತ್ರಗಳನ್ನೂ ನಿರ್ವಹಿಸಿದರು. ಈ ಮೂಲಕ ಜನರ ಹೃದಯಕ್ಕೆ ಹತ್ತಿರವಾದವರು ಸನ್ನಿ ಡಿಯೋಲ್.

From Border to Gadar here is a list of Sunny Deol s patriotic movies

ಭಾರತಾಂಬೆಯ ಪ್ರೀತಿ ವಾತ್ಯಲದಲ್ಲಿಯೇ ಬೆಳೆದ ಸನ್ನಿ ಡಿಯೋಲ್ ಅಲ್ಲಲ್ಲಿ ಮೆರೆದರು. ಇನ್ನೂ ಕೆಲವೊಮ್ಮೆ ಮೈ ಮರೆತರು. ಇದಕ್ಕೆ ಉದಾಹರಣೆ ಎಂಬಂತೆ ಸನ್ನಿ ಡಿಯೋಲ್ ಅಭಿನಯದ ''ಮಾ ತುಜೆ ಸಲಾಮ್'' ಗೆಲ್ಲಲಿಲ್ಲ. ಅತ್ಯಂತ ಆತ್ಮ ವಿಶ್ವಾಸದಿಂದ ಮಾಡಿದ್ದ ''ಕಾಫಿಲಾ'' ಗೆಲ್ಲಲಿಲ್ಲ. ಸಲ್ಮಾನ್ ಖಾನ್, ಸೊಹೈಲ್ ಖಾನ್, ತಮ್ಮ ಸಹೋದರ ಬಾಬಿ ಡಿಯೋಲ್ ಜೊತೆ ''ಹೀರೋಸ್‌'' ಎಂಬ ಚಿತ್ರ ಮಾಡಿದರೂ ಜನ ಬಂದು ನೋಡಲಿಲ್ಲ. ಸನ್ನಿ ಡಿಯೋಲ್ ಅವರನ್ನು ಹೊತ್ತು ಮೆರೆಸಲಿಲ್ಲ.

ಆದರೆ ಇದೇ ಸನ್ನಿ ಡಿಯೋಲ್ ಜೆಪಿ ದತ್ತಾ ನಿರ್ದೇಶನದ ''ಬಾರ್ಡರ್‌'' ಚಿತ್ರದಲ್ಲಿ ಮೇಜರ್ ಕುಲ್‌ದೀಪ್ ಸಿಂಗ್ ಪಾತ್ರಕ್ಕೆ ಜೀವ ತುಂಬಿದಾಗ ಅನೇಕರು ಕಣ್ಣೀರಾದರು.''ಗದರ್'' ಚಿತ್ರದಲ್ಲಿ ತಾರಾ ಸಿಂಗ್ ರೂಪದಲ್ಲಿ ಅಬ್ಬರಿಸಿದಾಗ ಸಮಸ್ತ ದೇಶದ ಜನ ಹುಚ್ಚೆದ್ದು ಕುಣಿದರು. ''ಇಂಡಿಯನ್‌'' ಚಿತ್ರದಲ್ಲಿ ಡಿಸಿಪಿ ಚಂದ್ರಶೇಖರ್ ಆಜಾದ್ ಪಾತ್ರವನ್ನು ನಿರ್ವಹಿಸಿದಾಗ ಶಿಳ್ಳೆ ಹೊಡೆದರು. ''23 ಮಾರ್ಚ್ 1931 ಶಹೀದ್ '' ಚಿತ್ರದಲ್ಲಿ ಚಂದ್ರಶೇಖರ್ ಆಜಾದ್ ಪಾತ್ರದಲ್ಲಿ ಸನ್ನಿ ಡಿಯೋಲ್ ಅವರ ಅಭಿನಯವನ್ನು ಕಣ್ತುಂಬಿಕೊಂಡು ಅನೇಕರು ಕಣ್ಣೀರಾದರು.

From Border to Gadar here is a list of Sunny Deol s patriotic movies


ಹೀಗೆ ಕಾಲ ಕಾಲಕ್ಕೆ ದೇಶ ಪ್ರೇಮವನ್ನು ಸಾರುವ ಸಿನಿಮಾಗಳಲ್ಲಿ ಕಾಣಿಸಿಕೊಂಡ ಸನ್ನಿ ಡಿಯೋಲ್ ಹಿಂದೊಮ್ಮೆ ಪಾತಾಳಕ್ಕೆ ಕುಸಿದಾಗ ಅವರನ್ನು ಮತ್ತೆ ಕೈ ಹಿಡಿದು ಮೇಲಕ್ಕೆತ್ತಿದ್ದು ಕೂಡ ಇದೇ ದೇಶ ಪ್ರೇಮ. ''ಗದರ್ 02'' ಚಿತ್ರದ ಮೂಲಕ ಮತ್ತೆ ಮೈ ಕೊಡವಿ ಎದ್ದು ನಿಂತ ಸನ್ನಿ ಡಿಯೋಲ್ ಸದ್ಯಕ್ಕೆ ''ಲಾಹೋರ್ 1947'' ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ವಿಶೇಷ ಅಂದರೆ ಈ ಚಿತ್ರವನ್ನು ಹಿಂದೊಮ್ಮೆ ಸನ್ನಿ ಡಿಯೋಲ್ ಅವರ ''23 ಮಾರ್ಚ್ 1931 ಶಹೀದ್ '' ಚಿತ್ರದ ಎದುರು ತಮ್ಮ ''ದಿ ಲೆಜೆಂಡ್ ಆಫ್ ಭಗತ್ ಸಿಂಗ್‌'' ಚಿತ್ರವನ್ನು ಬಿಡುಗಡೆ ಮಾಡಿದ್ದ, ಅದಕ್ಕೂ ಮುನ್ನ ಇದೇ ಸನ್ನಿ ಡಿಯೋಲ್ ಅವರಿಗೆ ''ಘಾಯಲ್‌''.. ''ದಾಮಿನಿ'' ಮತ್ತು ''ಘಾತಕ್'' ಚಿತ್ರಗಳನ್ನು ನಿರ್ದೇಶಿಸಿದ್ದ ರಾಜ್ ಕುಮಾರ್ ಸಂತೋಷಿ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇನ್ನೂ ವಿಶೇಷ ಅಂದರೆ ದೇಶ ಪ್ರೇಮಗಳ ಚಿತ್ರಕ್ಕೆ ಹೆಸರುವಾಸಿಯಾದ ಮತ್ತೊಬ್ಬ ಸ್ಟಾರ್ ಆಮೀರ್ ಖಾನ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

from-border-to-gadar-here-is-a-list-of-sunny-deols-patriotic-movies

''ಲಾಹೋರ್ 1947'' ಚಿತ್ರ ಹೊರತು ಪಡಿಸಿದರೆ ಸನ್ನಿ ಡಿಯೋಲ್, ಜೆಪಿ ದತ್ತಾ ಅವರದ್ದೇ ಆದ ''ಬಾರ್ಡರ್‌-02'' ಚಿತ್ರಕ್ಕೂ ಬಣ್ಣ ಹಚ್ಚುತ್ತಿದ್ದಾರೆ. ಅಂದ್ಹಾಗೇ ''ಬಾರ್ಡರ್‌'' ಮೊದಲ ಭಾಗ ಬಿಡುಗಡೆಗೊಂಡು ಹಲವು ದಶಕಗಳಾಗಿದ್ದರೂ ಇಂದಿಗೂ ಬಾಲಿವುಡ್‌ನ ಅತಿ ಫೇವರಿಟ್‌ ದೇಶಭಕ್ತಿಯ ಚಿತ್ರಗಳಲ್ಲಿ ಇದು ಒಂದು. 1971ರ ಲಾಂಗೇವಾಲಾ ಯುದ್ಧದ ಹಿನ್ನೆಲೆಯನ್ನು ಹೊಂದಿರುವ ಈ ಚಿತ್ರದ ''ಸಂದೇಶೇ ಆತೇ ಹೈಂ..'' ಹಾಡು ದೇಶದ ಆಲ್‌ಟೈಮ್‌ ಫೇವರಿಟ್‌ಗಳಲ್ಲಿ ಒಂದು. ʼ

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X