ಈ ಜನಪ್ರಿಯ ನಟರ ಫಸ್ಟ್ ಕ್ರಶ್ ಯಾರು? ಯಾರ ಫಸ್ಟ್ ಲವ್ ಏನಾಯ್ತು?
ತೆರೆಮೇಲೆ ನಾಯಕಿ ಜೊತೆ ಪ್ರೀತಿ ಮಾಡುವ ಡ್ಯುಯೆಟ್ ಹಾಡುವ ನಟರು ನಿಜ ಜೀವನದಲ್ಲಿ ಕೂಡ ಪ್ರೀತಿಸಿ ಮದುವೆ ಆಗಿದ್ದಾರೆ. ಕೆಲವರ ಪ್ರೀತಿಗೆ ಜಯ ಸಿಕ್ಕಿದ್ದರೆ ಕೆಲ ಕೆಲವರದ್ದು ಅರ್ಧದಲ್ಲೇ ನಿಂತು ಹೋಗಿದೆ. ಅಮಿತಾಬ್ ಬಚ್ಚನ್, ಸುದೀಪ್, ಪ್ರಭಾಸ್ ಸೇರಿದಂತೆ ಸ್ಟಾರ್ ನಟರಿಗೆಲ್ಲಾ ಒಂದ್ಕಾಲದಲ್ಲಿ ಹುಡುಗಿಯ ಮೇಲೆ ಕ್ರಶ್ ಆಗಿತ್ತು.
ಯಾವುದೇ ಕಾರಣ ಇಲ್ಲದೇ ಒಂದು ಹುಡುಗಿಗೆ ಹುಡುಗನ ಮೇಲೆ, ಅಥವಾ ಹುಡುಗನಿಗೆ ಹುಡುಗಿಯ ಮೇಲೆ ಪ್ರೀತಿ ಹುಟ್ಟುತ್ತದೆ. ಟೀನೇಜ್‌ನಲ್ಲೇ ಕೆಲ ಸ್ಟಾರ್ ನಟರು ಪ್ರೀತಿಸಿದ್ದು ಇದೆ. ಇನ್ನು ಸೂಪರ್ ಸ್ಟಾರ್ ಆಗಿದ್ದರೂ ಒಂದ್ಕಾಲದಲ್ಲಿ ಅವರ ಪ್ರೀತಿ ರಿಜೆಕ್ಟ್ ಆಗಿರುವ ಉದಾಹರಣೆಗಳು ಇದೆ. ಕೆಲವರಿಗೆ ಸೆಲೆಬ್ರೆಟಿ ಕ್ರಶ್ ಕೂಡ ಇದ್ದಾರೆ. ಕೆಲ ಸಂದರ್ಶನಗಳಲ್ಲಿ ಖುದ್ದಾಗಿ ಆಯಾ ನಟರೇ ತಮ್ಮ ಫಸ್ಟ್ ಲವ್, ಕ್ರಶ್ ಬಗ್ಗೆ ಮಾತನಾಡಿರುವುದು ಇದೆ.

ಒಬ್ಬರಿಗಿಂತ ಒಬ್ಬರ ಲವ್ ಸ್ಟೋರಿ ಸಖತ್ ಇಂಟ್ರೆಸ್ಟಿಂಗ್. ಲತಾ ಅವರನ್ನು ರಜನಿಕಾಂತ್ ಪ್ರೀತಿಸಿ ಮದುವೆ ಆಗಿದ್ದು ಗೊತ್ತೇಯಿದೆ. ಆದರೆ ಅದಕ್ಕೂ ಮುನ್ನ ಬಸ್ ಕಂಡೆಕ್ಟರ್ ಆಗಿದ್ದ ದಿನಗಳಲ್ಲೇ ತಲೈವಾ ಬೆಂಗಳೂರಿನಲ್ಲಿ ಒಂದು ಹುಡುಗಿಯನ್ನು ಪ್ರೀತಿಸಿದ್ದರು. ಇವತ್ತಿಗೂ ಬೆಂಗಳೂರಿಗೆ ಬಂದರೆ ಆಕೆಗಾಗಿ ನನ್ನ ಕಣ್ಣು ಹುಡುಕಾಡುತ್ತದೆ ಎಂದು ಸ್ವತಃ ರಜನಿಕಾಂತ್ ಹೇಳಿರುವುದು ಇದೆ.
ಅಮಿತಾಬ್ ಬಚ್ಚನ್
ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಜಯಾ ಪ್ರೀತಿಸಿ ಮದುವೆ ಆದವರು. 'ಏಕ್ ನಜರ್' ಚಿತ್ರದ ಚಿತ್ರೀಕರಣದ ವೇಳೆ ಇಬ್ಬರ ಲವ್ ಸ್ಟೋರಿ ಶುರುವಾಗಿತ್ತು. ಇನ್ನು ಬಿಗ್‌ಬಿ ಹಾಗೂ ನಟಿ ರೇಖಾ ಲವ್ ಸ್ಟೋರಿ ಕೂಡ ಗುಟ್ಟಾಗಿ ಉಳಿದಿಲ್ಲ. ಅದಾಗಲೇ ಜಯಾ ಜೊತೆ ಮದುವೆ ಆಗಿದ್ದರೂ ಸಹನಟಿ ರೇಖಾ ಪ್ರೇಮಪಾಶದಲ್ಲಿ ಅಮಿತಾಬ್ ಬಿದ್ದಿದ್ದರು.
ನಿಮಗೆ ಗೊತ್ತಾ ಜಯಾ ಹಾಗೂ ರೇಖಾ ಅವರನ್ನು ಪ್ರೀತಿಸುವ ಮುನ್ನ ಕೊಲ್ಕತ್ತಾದ ಹುಡುಗಿ ಮೇಲೆ ಬಿಗ್‌ಬಿಗೆ ಲವ್ವಾಗಿತ್ತು. ಆಗಿನ್ನು ಅವರು ಚಿತ್ರರಂಗಕ್ಕೆ ಬಂದಿರಲಿಲ್ಲ. ಬಾಲಿವುಡ್ ಸಿನಿಮಾ ಬರಹಗಾರ ಹನೀಫ್ ಜವೇರಿ ಈ ವಿಚಾರವನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಕೊಲ್ಕತ್ತಾದ ಕಂಪನಿಯೊಂದರಲ್ಲಿ ಆಗ ಬಿಗ್‌ಬಿ ಕೆಲಸ ಮಾಡುತ್ತಿದ್ದರು. ಈ ವೇಳೆ ಮಾಯಾ ಎಂಬ ಹುಡುಗಿ ನೋಡಿ ಇಷ್ಟಪಟ್ಟಿದ್ದರು. ಇಬ್ಬರೂ ಪ್ರೀತಿಸುತ್ತಿದ್ದರು. ಆದರೆ ಅಮಿತಾಬ್ ಮುಂಬೈಗೆ ಬಂದು ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದ ಬಳಿಕ ಅಲ್ಲಿಗೆ ಮಾಯಾ ಹುಡುಕಿ ಬಂದಿದ್ದರಂತೆ. ಆದರೆ ಕಾರಣಾಂತರಗಳಿಂದ ಇಬ್ಬರೂ ಒಂದಾಗಲಿಲ್ಲ.

ರಜನಿಕಾಂತ್
ಸೂಪರ್ ಸ್ಟಾರ್ ರಜನಿಕಾಂತ್ ಹೆಸರು ಕೆಲ ನಟಿಯರ ಜೊತೆ ತಳುಕು ಹಾಕಿಕೊಂಡಿದ್ದು ಸುಳ್ಳಲ್ಲ. 'ತಿಲ್ಲು ಮುಳ್ಳು' ಚಿತ್ರದ ಚಿತ್ರೀಕರಣದ ವೇಳೆ ತಮ್ಮ ಸಂದರ್ಶನ ಮಾಡಲು ಬಂದಿದ್ದ ಲತಾ ಅವರನ್ನು ತಲೈವಾ ಪ್ರೀತಿಸಿ ಮದುವೆ ಆಗಿದ್ದರು. ರಜನಿ ಹಾಗೂ ಶ್ರೀದೇವಿ ನಡುವೆಯೂ ಸಂಥಿಂಗ್ ಸಂಥಿಂಗ್ ನಡೀತಿದೆ ಎಂದು ಗುಲ್ಲಾಗಿತ್ತು. ರಜನಿಕಾಂತ್ ಫಸ್ಟ್ ಲವ್ ಬಗ್ಗೆ ಸಹ ನಟ ದೇವನ್ ಸಂದರ್ಶನವೊಂದರಲ್ಲಿ ವಿವರಿಸಿದ್ದರು. ಈ ವಿಚಾರವನ್ನು ಸ್ವತಃ ತಲೈವಾ ತಮ್ಮ ಬಳಿ ಹೇಳಿಕೊಂಡಿದ್ದಾಗಿ ಅವರು ತಿಳಿಸಿದ್ದರು.
ಶಿವಾಜಿರಾವ್ ಬೆಂಗಳೂರಿನಲ್ಲಿ ಬಸ್ ಕಂಡೆಕ್ಟ್ ಆಗಿದ್ದ ಸಮಯದಲ್ಲಿ ನಿರ್ಮಲಾ ಎಂಬ ಎಂಬಿಬಿಎಸ್ ಹುಡುಗಿಯ ಮೋಹಪಾಶದಲ್ಲಿ ಬಿದ್ದಿದ್ದರಂತೆ. ಬೇಗ ಇಬ್ಬರು ಸ್ನೇಹಿತರಾಗಿದ್ದರು. ಆಗ ರಜನಿಕಾಂತ್ ನಾಟಕಗಳಲ್ಲಿ ನಟಿಸುತ್ತಿದ್ದರು. ತಮ್ಮ ನಾಟಕ ನೋಡೋಕೆ ಒಮ್ಮೆ ಆಕೆಯನ್ನು ಆಹ್ವಾನಿಸಿದ್ದರಂತೆ. ಶಿವಾಜಿ ಸಿನಿಮಾ ನಟ ಆಗಬೇಕು ಎನ್ನುವುದು ಆಕೆಯ ಆಸೆ ಆಗಿತ್ತಂತೆ. ಸ್ನೇಹಿತ ರಾಜ್ ಬಹದ್ದೂರ್ ಹಾಗೂ ನಿರ್ಮಲಾ ಸಲಹೆಯಂತೆ ಅವರು ಚೆನ್ನೈ ಫಿಲ್ಮ್ ಇನ್ಸಿಟ್ಯೂಟ್ ಸೇರಿದ್ದರು. ಆದರೆ ಬೆಂಗಳೂರಿಗೆ ವಾಪಸ್ ಬಂದಮೇಲೆ ತಲೈವಾಗೆ ನಿಮ್ಮಿ ಸಿಗಲೇ ಇಲ್ಲವಂತೆ.
ಪ್ರಭಾಸ್ ರಿಜೆಕ್ಟ್
ಭಾರತೀಯ ಚಿತ್ರರಂಗದ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಪ್ರಭಾಸ್. ವಯಸ್ಸು 40 ದಾಟಿದರೂ ಯಾಕೋ ಯಂಗ್ ರೆಬಲ್ ಸ್ಟಾರ್ ಮದುವೆ ಬಗ್ಗೆ ಆಲೋಚಿಸಿದಂತೆ ಕಾಣುತ್ತಿಲ್ಲ. ಅವರನು ಮದುವೆ ಆಗಲು ಸಾಕಷ್ಟು ಹುಡುಗಿಯರು ಸಿದ್ಧರಿದ್ದಾರೆ. ಆದರೆ ನಿಮಗೆ ಗೊತ್ತಾ ಕಾಲೇಜು ದಿನಗಳಲ್ಲೇ ಪ್ರಭಾಸ್ ಒಂದು ಹುಡುಗಿಯನ್ನು ಪ್ರೀತಿಸಿದ್ದರು. ಆಕೆ ನನ್ನ ಪ್ರೇಮ ನಿವೇದನೆಯನ್ನು ರಿಜೆಕ್ಟ್ ಮಾಡಿದ್ದಳು ಎಂದು ಸ್ವತಃ ಪ್ರಭಾಸ್ ಸಂದರ್ಶನವೊಂದರಲ್ಲಿ ಹೇಳಿದ್ದರು.
ಆ ಕಾಲೇಜು ಹುಡುಗಿ ಮಾತ್ರವಲ್ಲ ಆ ಬಳಿಕ ಕೂಡ ಕೆಲವರು ತಮ್ಮ ಪ್ರೀತಿಯನ್ನು ರಿಜೆಕ್ಟ್ ಮಾಡಿದ್ದಾರೆ ಪ್ರಭಾಸ್ ಹೇಳಿದ್ದರು. ಇನ್ನು ಆ ಕಾಲೇಜು ಹುಡುಗಿಯೇ ನನ್ನ ಫಸ್ಟ್ ಕ್ರಶ್. ಆದರೆ ಆಕೆಯ ಯಾರು? ಹೆಸರು ಏನು ಎನ್ನುವುದೆಲ್ಲಾ ಈಗ ಹೇಳುವುದು ಬೇಡ ಎಂದು ಪ್ರಭಾಸ್ ನಕ್ಕಿದ್ದರು. ನಟಿ ಅನುಷ್ಕಾ ಶೆಟ್ಟಿ ಜೊತೆಗೂ ಪ್ರಭಾಸ್ ಹೆಸರು ತಳುಕು ಹಾಕಿಕೊಂಡಿದೆ.
ಮೆಗಾಸ್ಟಾರ್ ಚಿರಂಜೀವಿ
ಸುರೇಖಾ ಅವೆರನ್ನು ತೆಲುಗು ನಟ ಚಿರಂಜೀವಿ ಮದುವೆ ಆಗಿದ್ದಾರೆ. ಒಂದರ್ಥದಲ್ಲಿ ಇವರದ್ದು ಲವ್ ಕಂ ಅರೇಜ್ಡ್ ಮ್ಯಾರೇಜ್. ಆದರೆ ಶಾಲಾ ದಿನಗಳಲ್ಲೇ ಒಂದು ಹುಡುಗಿ ಮೇಲೆ ನನಗೆ ಕ್ರಶ್ ಆಗಿತ್ತು ಎಂದು ಚಿರು ಹೇಳಿಕೊಂಡಿದ್ದರು. ಆಮೀರ್ ಖಾನ್ ಜೊತೆಗಿನ ಸಂದರ್ಶನದಲ್ಲಿ ಮೆಗಾಸ್ಟಾರ್ ಈ ವಿಚಾರ ಬಹಿರಂಗಪಡಿಸಿದ್ದರು.
ಮೊಗಳ್ತೂರಿನಲ್ಲಿ ಒಂದು ಹುಡುಗಿ ಸೈಕಲ್ ತುಳಿಯುವುದನ್ನು ನೋಡುವುದೇ ನಮಗೆಲ್ಲಾ ಅಚ್ಚರಿ. ಅಂತಾದ್ರಲ್ಲಿ ಆ ಹುಡುಗಿ ಸೈಕಲ್ ಹಿಡಿದುಕೊಂಡರೆ ನಾನು ತುಳೀತಿದ್ದೆ. ಆಗ ಸೈಕಲ್ ತುಳಿಯೋದು ಬಿಟ್ಟು ಆಕೆಯನ್ನು ನೋಡುತ್ತಿದ್ದೆ. ಕೂಡಲೇ ಆಕೆ ಮುಂದೆ ನೋಡು ಅಂತ ನನ್ನ ಮುಖ ತಿರುಗಿಸಿದ್ದಳು" ಎಂದು ಚಿರಂಜೀವಿ ವಿವರಿಸಿದ್ದರು.
ದಳಪತಿ ವಿಜಯ್
ತಮಿಳು ನಟ ದಳಪತಿ ವಿಜಯ್ 10ನೇ ತರಗತಿಯಲ್ಲಿ ಇದ್ದಗಾಲೇ ಕ್ರಶ್ ಆಗಿತ್ತಂತೆ. ಆ ವಯಸ್ಸಿನಲ್ಲೇ ನಾನು ಹುಡುಗಿಯರ ಕಡೆ ಆಕರ್ಷಿತನಾಗುತ್ತಿದ್ದೆ. ಆದರೆ ಮುಂದುವರೆಯುತ್ತಿರಲಿಲ್ಲ. ಸುಮ್ಮನಾಗಿಬಿಡುತ್ತಿದ್ದೆ. ಆದರೆ ಇದೇ ಒನ್‌ಸೈಡ್ ಲವ್ ತಮಗೆ ಮುಂದೆ ರೊಮ್ಯಾಂಟಿಕ್ ಸಿನಿಮಾಗಳಲ್ಲಿ ನಟಿಸೋಕೆ ಸಹಾಯಕವಾಗಿತ್ತು ಎಂದು ವಿಜಯ್ ಹೇಳಿಕೊಂಡಿದ್ದರು.
ಜ್ಯೂ. ಎನ್‌ಟಿಆರ್
ತೆಲುಗು ನಟ ಜ್ಯೂ. ಎನ್‌ಟಿಆರ್ ಕನ್ನಡ ಸಿನಿರಸಿಕರಿಗೂ ಪರಿಚಿತ ಹೆಸರು. ಲಕ್ಷ್ಮಿ ಪ್ರಣಿತಿ ಅವರನ್ನು ತಾರಕ್ ಮದುವೆ ಆಗಿದ್ದಾರೆ. ಆದರೆ 'ಅಶೋಕ್' ಸಿನಿಮಾ ಚಿತ್ರೀಕರಣದ ವೇಳೆ ಸಹನಟ ಸಮೀರಾ ರೆಡ್ಡಿ ಮೋಹಪಾಶದಲ್ಲಿ ಬಿದ್ದಿದ್ದಾಗಿ ಖುದ್ದು ಸಂದರ್ಶನವೊಂದರಲ್ಲಿ ಅವರು ಹೇಳಿದ್ದರು. ಬಳಿಕ ಅದು ದೊಡ್ಡ ಸುದ್ದಿಯಾಗಿ ಸುಮ್ಮನಾಗಿಬಿಟ್ಟೆ ಎಂದಿದ್ದರು.
ಸುದೀಪ್ ಫಸ್ಟ್ ಲವ್
ನಟ ಕಿಚ್ಚ ಸುದೀಪ್ ಸೆಲೆಬ್ರೆಟಿ ಕ್ರಶ್ ಬಗ್ಗೆ ಹೊಸದಾಗಿ ಬಿಡಿಸಿ ಹೇಳುವುದು ಬೇಕಿಲ್ಲ. ಬಾಲಿವುಡ್ ನಟಿ ಕಾಜೋಲ್ ಅಂದ್ರೆ ಕಿಚ್ಚನಿಗೆ ಬಹಳ ಇಷ್ಟ. ಆದರೆ 3ನೇ ತರಗತಿಯಲ್ಲಿ ಇದ್ದಾಗಲೇ ನಾನು ಹಾಗೂ ಒಂದು ಹುಡುಗಿ ಕೈ ಹಿಡಿದುಕೊಂಡು ಶಾಲೆಗೆ ಹೋಗುತ್ತಿದ್ದೆವು. ಅವರು ಶೀ ವಾಸ್ ಎ ವೆರಿ ಪ್ರಿಟಿ ಗರ್ಲ್ ಎಂದು ಬಿಗ್ ಬಾಸ್ ವೇದಿಕೆಯಲ್ಲಿ ಒಮ್ಮೆ ಹೇಳಿದ್ದರು. ಇನ್ನು ಪ್ರಿಯಾ ಅವರನ್ನು ಪ್ರೀತಿಸಿ ಸುದೀಪ್ ಮದುವೆ ಆಗಿದ್ದು ಗೊತ್ತೇಯಿದೆ.
ಇನ್ನುಳಿದಂತೆ ಯಶ್, ರಾಮ್‌ಚರಣ್, ಸೂರ್ಯ, ಅಲ್ಲು ಅರ್ಜುನ್, ಸೂರ್ಯ, ಮಹೇಶ್ ಬಾಬು ಸೇರಿದಂತೆ ಕೆಲ ಸ್ಟಾರ್ ನಟರು ತಾವು ಪ್ರೀತಿಸಿದರನ್ನೇ ಮದುವೆ ಆಗಿ ಜೀವನ ಸಾಗಿಸುತ್ತಿದ್ದಾರೆ. ಅದರಲ್ಲಿ ಕೆಲವರದ್ದುಅದೇ ಫಸ್ಟ್ ಲವ್ ಸಹ ಆಗಿತ್ತು.


Click it and Unblock the Notifications











