ಅಂದು ಬಾಲನಟಿಯರಾಗಿದ್ದವರು ಬಳಿಕ ನಾಯಕಿಯರು ಆಗಿ ಮಿಂಚಿದರು!

ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ನೂರಾರು ಜನ ಬರ್ತಿದ್ದಾರೆ. ಬಂದವರೆಲ್ಲಾ ಗೆಲ್ಲಲ್ಲ. ಅದೇ ರೀತಿ ಪ್ರಯತ್ನ ಕೂಡ ನಿಲ್ಲಲ್ಲ. ನಟನೆಯ ವಿಚಾರಕ್ಕೆ ಬಂದರೆ ಯಾರಿಗೆ ಯಾವಾಗ ಅದೃಷ್ಟ ಖುಲಾಯಿಸುತ್ತದೆ ಎಂದು ಹೇಳುವುದು ಕಷ್ಟ.

ಕೆಲವರು ಬಾಲ್ಯದಲ್ಲೇ ತಮ್ಮ ಪ್ರತಿಭೆ ಮೂಲಕ ಮೋಡಿ ಮಾಡಿ ಬೆಳ್ಳಿ ಪರದೆಗೆ ಬರುತ್ತಾರೆ. ನಟ ವಿಚಾರಕ್ಕೆ ಪುನೀತ್ ರಾಜ್‌ಕುಮಾರ್, ಮಾಸ್ಟರ್ ಮಂಜುನಾಥ್, ಮಾಸ್ಟರ್ ಆನಂದ್, ಅರ್ಜುನ್ ಸರ್ಜಾ, ವಿಜಯ ರಾಘವೇಂದ್ರ ಹೀಗೆ ದೊಡ್ಡ ಲಿಸ್ಟ್ ಸಿಗುತ್ತಿದೆ. ಇದರಲ್ಲಿ ಕೆಲವರು ಮುಂದೆ ನಾಯಕ ನಟರಾಗಿಯೂ ಚಿತ್ರರಂಗದಲ್ಲಿ ರೀ ಎಂಟ್ರಿ ಕೊಟ್ಟು ಗೆದ್ದಿದ್ದಾರೆ.

from Sudharani to amulya Sandalwood Actors who made their film debuts as kids

ಕೆಲ ನಟಿಯರು ಕೂಡ ತಮ್ಮ ಬಾಲ್ಯದಲ್ಲೇ ಚಿತ್ರರಂಗಕ್ಕೆ ಬಂದಿದ್ದರು. ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟರು. ಮುಂದೆ ನಾಯಕಿಯರು ಆಗಿ ಬಣ್ಣ ಹಚ್ಚಿದರು. ಅದರಲ್ಲಿ ಕೆಲವರು ಗೆದ್ದು ಬೀಗಿದ್ದಾರೆ. ಅಂತ ನಟಿಯರ ಪಟ್ಟಿ ಮುಂದೆ ಇದೆ ಓದಿ.

ಬೇಬಿ ಶಾಮಿಲಿ

ಕೇರಳದಲ್ಲಿ ಹುಟ್ಟಿ ಬೆಳೆದ ಬೇಬಿ ಶಾಮಿಲಿ ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ಬಾಲ ನಟಿಯಾಗಿ ಮಿಂಚಿದ್ದು ಗೊತ್ತೇಯಿದೆ. ಅಚ್ಚರಿ ಅಂದ್ರೆ ಆಕೆ 10 ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದ ಹುಡುಗಿಯೇ ಎನ್ನುವಷ್ಟು ಜನಪ್ರಿಯರಾಗಿದ್ದರು. ಭೈರವಿ, ಶಾಂಭವಿ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಈಕೆಯ ನಟನೆ ಮರೆಯೋಕೆ ಸಾಧ್ಯವಿಲ್ಲ. ಮುಂದೆ ತೆಲುಗು, ತಮಿಳು ಚಿತ್ರಗಳಲ್ಲಿ ನಾಯಕಿಯಾಗಿಯೂ ಆಕೆ ನಟಿಸಿದ್ದರು.

from Sudharani to amulya Sandalwood Actors who made their film debuts as kids

2. ಅನು ಪ್ರಭಾಕರ್

ನಟಿ, ಕಂಠದಾನ ಕಲಾವಿದೆ ಗಾಯತ್ರಿ ಪ್ರಭಾಕರ್ ಪುತ್ರಿ ಅನು ಪ್ರಭಾಕರ್ ಸಹ ಚಿಕ್ಕಂದಿನಲ್ಲೇ ಚಿತ್ರರಂಗಕ್ಕೆ ಬಂದವರು. 'ಚಪಲ ಚೆನ್ನಿಗರಾಯ', 'ಸ್ವರ್ಣ ಸಂಸಾರ' ಹಾಗೂ 'ಶಾಂತಿ ಕ್ರಾಂತಿ' ಚಿತ್ರಗಳಲ್ಲಿ ಬಾಲನಟಿಯಾಗಿ ಮಿಂಚಿದ್ದರು. ಬಳಿಕ 'ಹೃದಯ ಹೃದಯ' ಚಿತ್ರದಿಂದ ನಾಯಕಿಯಾದರು.

3. ಸುಧಾರಾಣಿ

'ಆನಂದ್' ಚಿತ್ರದಲ್ಲಿ ಸುಧಾರಾಣಿ ನಾಯಕಿಯಾಗಿ ಚಿತ್ರರಂಗಕ್ಕೆ ಪರಿಚಿತರಾದರು. ಆದರೆ ಅದಕ್ಕು ಮುನ್ನ ದಿಗ್ಗಜ ನಟರ ಸಿನಿಮಾಗಳಲ್ಲಿ ಬಾಲನಟಿಯಾಗಿ ಆಕೆ ನಟಿಸಿದ್ದರು ಎನ್ನುವುದು ಬಹಳ ಜನರಿಗೆ ಗೊತ್ತಿಲ್ಲ. 'ಕಿಲಾಡಿ ಕಿಟ್ಟು' ಚಿತ್ರದಲ್ಲಿ ಬಾಲನಟಿಯಾಗಿ ಸುಧಾರಾಣಿ ಮೊದಲಿಗೆ ನಟಿಸಿದ್ದರು. ಬಳಿಕ 'ಕುಳ್ಳ-ಕುಳ್ಳಿ', 'ರಂಗನಾಯಕಿ', 'ಅನುಪಮ, ಭಾಗ್ಯವಂತ' ಚಿತ್ರಗಳಲ್ಲಿ ಕೂಡ ಕಾಣಿಸಿಕೊಂಡಿದ್ದರು.

4. ಸಿಂಧು ಮೆನನ್

ಸುದೀಪ್ ಜೊತೆ 'ನಂದಿ' ಹಾಗೂ ದರ್ಶನ್ ಜೊತೆ 'ಧರ್ಮ' ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿ ಸಿಂಧು ಮೆನನ್ ಮೋಡಿ ಮಾಡಿದ್ದರು. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಈಕೆ ಚಿಕ್ಕಂದಿನಲ್ಲೇ 'ರಶ್ಮಿ' ಹಾಗೂ 'ಹುಲಿಯಾ' ಚಿತ್ರಗಳಲ್ಲಿ ಮಿಂಚಿದ್ದರು.

5. ಅಮೂಲ್ಯ

ಬೆಳ್ಳಿತೆರೆಮೇಲೆ 'ಚೆಲುವಿನ ಚಿತ್ತಾರ' ಮೂಡಿಸುವ ಮುನ್ನ ಅಮೂಲ್ಯ ಕೂಡ ಬಾಲ ನಟಿಯಾಗಿ ಒಂದಷ್ಟು ಚಿತ್ರಗಳಲ್ಲಿ ಮಿಂಚಿದ್ದರು. 'ಪರ್ವ', 'ಚಂದು', 'ಲಾಲಿ ಹಾಡು', 'ಮಹಾರಾಜ', 'ಮಂಡ್ಯ', 'ನಮ್ಮ ಬಸವ' ಹೀಗೆ ಸಾಲು ಸಾಲು ಚಿತ್ರಗಳಲ್ಲಿ ತನ್ನ ಚಿನಕುರಳಿ ಆಗಿ ಪ್ರೇಕ್ಷಕರನ್ನು ರಂಜಿಸಿದ್ದರು.

6. ಸಾನ್ಯಾ ಅಯ್ಯರ್

ಇತ್ತೀಚೆಗೆ 'ಗೌರಿ' ಚಿತ್ರದ ಮೂಲಕ ಸಾನ್ಯ ಅಯ್ಯರ್ ನಾಯಕಿಯಾಗಿ ಚಿತ್ರರಂಗಕ್ಕೆ ಪರಿಚಿತರಾದರು. ಆದರೆ ಕಿರುತೆರೆಯ 'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ಪುಟಾಣಿ ಗೌರಿ ಆಗಿ ನಟಿಸಿ ವೀಕ್ಷಕರ ಮನ ಗೆದ್ದಿದ್ದರು. ಇವತ್ತಿಗೂ ಅದೇ ಪಾತ್ರದಿಂದ ಆಕೆಯನ್ನು ಜನ ಗುರ್ತಿಸುವಂತಾಗಿದೆ.

More from Filmibeat

English summary
Children's Day: kannada actresses Who Started Their Career as a Child Artist;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X