2024ನೇ ಸಾಲಿನ ಬೆಸ್ಟ್ ಕನ್ನಡ ಸಿನಿಮಾ ಯಾವುದು? ನೀವು ವೋಟ್ ಮಾಡಬಹುದು

ಕನ್ನಡದಲ್ಲಿ ಈ ವರ್ಷ ಬರೋಬ್ಬರಿ 225 ಸಿನಿಮಾಗಳು ಬಿಡುಗಡೆಯಾಗಿದೆ. ಅದರಲ್ಲಿ ಗೆಲುವಿನ ದಡ ಸೇರಿದ ಸಿನಿಮಾ ಸಂಖ್ಯೆ 10 ದಾಟಿಲ್ಲ. ವರ್ಷ ಮೊದಲಾರ್ಧ ಕನ್ನಡ ಸಿನಿಮಾಗಳ ಸಾಧನೆ ಬಹಳ ನೀರಸವಾಗಿತ್ತು. ಆದರೆ ದ್ವಿತಿಯಾರ್ಧ ಸಿನಿಮಾ ಎಲ್ಲರ ನಿರೀಕ್ಷೆ ಮೀರಿ ಚಿತ್ರಗಳು ಸದ್ದು ಮಾಡಿವೆ.

ಸದ್ಯ ವರ್ಷದ ಕೊನೆಗೆ 'ಯುಐ' ಹಾಗೂ 'ಮ್ಯಾಕ್ಸ್' ಚಿತ್ರಗಳು ತೆರೆಕಂಡು ಬಾಕ್ಸಾಫೀಸ್ ಸದ್ದು ಮಾಡ್ತಿವೆ. ಈ ವರ್ಷ ಕೆಲ ಚಿತ್ರಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿಲ್ಲ. ಆದರೆ ಓಟಿಟಿಗೆ ಬಂದು ಪ್ರೇಕ್ಷಕರನ್ನು ರಂಜಿಸಿವೆ. ಇನ್ನುಳಿದಂತೆ 7 ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹಿಟ್ ಆಗಿದೆ. 'ಜಾಕಿ' ಹಾಗೂ 'ನವಗ್ರಹ' ಚಿತ್ರಗಳು ರೀ-ರಿಲೀಸ್ ಆಗಿ ಸಕ್ಸಸ್ ಕಂಡಿವೆ. ಈ ವರ್ಷದ ಬೆಸ್ಟ್ ಚಿತ್ರಗಳನ್ನು ಮುಂದೆ ಓದಿ.

From Yuva to Max Vote for Best Kannada movie of 2024

1. ಭೀಮ

ಈ ವರ್ಷದ ಮೊದಲ ಹಿಟ್ ಸಿನಿಮಾ 'ಭೀಮ'. ಅದಕ್ಕೂ ಮುನ್ನ ಚಿಕ್ಕಣ್ಣ ನಟಿಸಿದ 'ಉಪಾಧ್ಯಕ್ಷ' ಹಾಗೂ ಯುವ ರಾಜ್‌ಕುಮಾರ್ ಚೊಚ್ಚಲ ಸಿನಿಮಾ 'ಯುವ' ಗೆಲುವಿನ ದಡ ಸೇರಿದ್ದವು. ಆದರೆ ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿದ್ದ 'ಭೀಮ' ಸಿನಿಮಾ ನೋಡಲು ದೊಡ್ಡಮಟ್ಟದಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬಂದಿದ್ದರು.

2. ಕೃಷ್ಣಂ ಪ್ರಣಯ ಸಖಿ

ಶ್ರೀನಿವಾಸ್ ರಾಜು ನಿರ್ದೇಶನದ 'ಕೃಷ್ಣಂ ಪ್ರಣಯ ಸಖಿ' ಈ ವರ್ಷದ ಮೊದಲ ಬ್ಲಾಕ್‌ಬಸ್ಟರ್ ಸಿನಿಮಾ. ಇತ್ತೀಚಿನ ವರ್ಷಗಳಲ್ಲಿ ಆಕ್ಷನ್ ಸಿನಿಮಾಗಳು ಮಾತ್ರ ಗೆಲ್ಲುತ್ತವೆ ಎನ್ನುವ ಮಾತನ್ನು ಈ ಸಿನಿಮಾ ಸುಳ್ಳಾಗಿಸಿತ್ತು. ಗೋಲ್ಡನ್ ಸ್ಟಾರ್ ಗಣೇಶ್ ಮತ್ತೊಮ್ಮೆ ಕೃಷ್ಣನಾಗಿ ಭರ್ಜರಿ ಕಂಬ್ಯಾಕ್ ಮಾಡಿದ್ದರು.

From Yuva to Max Vote for Best Kannada movie of 2024

3. ಬಘೀರ

ಡಾ. ಸೂರಿ ನಿರ್ದೇಶನದ 'ಬಘೀರ' ಕೂಡ ಪ್ರೇಕ್ಷಕರನ್ನು ರಂಜಿಸುವಲ್ಲಿ ಗೆದ್ದಿತ್ತು. ಹೊಂಬಾಳೆ ಸಂಸ್ಥೆ ಬಹಳ ಅದ್ಧೂರಿಯಾಗಿಯೇ ಸಿನಿಮಾ ನಿರ್ಮಾಣ ಮಾಡಿತ್ತು. ರೋರಿಂಗ್ ಸ್ಟಾರ್ ಶ್ರೀಮುರಳಿ ಆರ್ಭಟಕ್ಕೆ ಸಿನಿರಸಿಕರು ಫಿದಾ ಆಗಿದ್ದರು. ಸದ್ಯ ಓಟಿಟಿಯಲ್ಲಿ ಸಿನಿಮಾ ಗಮನ ಸೆಳೆದಿದೆ.

4. ಯುವ

ರಾಘಣ್ಣನ ಕಿರಿಮಗ ಯುವ ರಾಜ್‌ಕುಮಾರ್ ಈ ವರ್ಷ ಚಿತ್ರರಂಗಕ್ಕೆ ಬಂದಿದ್ದಾರೆ. ಸಂತೋಷ್ ಆನಂದ್ ರಾಮ್ ನಿರ್ದೇಶನದ 'ಯುವ' ಸಿನಿಮಾ ಗೆದ್ದಿತ್ತು. ಈ ಚಿತ್ರವನ್ನು ಕೂಡ ಹೊಂಬಾಳೆ ಸಂಸ್ಥೆ ನಿರ್ಮಿಸಿದ್ದು ವಿಶೇಷ. ಸಪ್ತಮಿ ಗೌಡ ನಾಯಕಿಯಾಗಿ ಮಿಂಚಿದ್ದರು. ಡ್ಯಾನ್ಸ್, ಫೈಟ್‌ನಲ್ಲಿ ಅಣ್ಣಾವ್ರ ಮೊಮ್ಮಗ ಮ್ಯಾಜಿಕ್ ಮಾಡಿದ್ದರು.

5. ಭೈರತಿ ರಣಗಲ್

ಸೂಪರ್ ಹಿಟ್ 'ಮಫ್ತಿ' ಪ್ರೀಕ್ವೆಲ್ 'ಭೈರತಿ ರಣಗಲ್' ಈ ವರ್ಷದ ಮತ್ತೊಂದು ಹಿಟ್ ಸಿನಿಮಾ. ಮತ್ತೊಮ್ಮೆ ರಣಗಲ್ ಆಗಿ ಶಿವಣ್ಣ ಅಬ್ಬರಿಸಿದ್ದರು. ನರ್ತನ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಚಿತ್ರವನ್ನು ಗೀತಾ ಶಿವರಾಜ್‌ಕುಮಾರ್ ನಿರ್ಮಿಸಿದ್ದರು.

6. ಯುಐ

ಉಪೇಂದ್ರ ಬಹಳ ವರ್ಷಗಳ ಬಳಿಕ ನಿರ್ದೇಶಿಸಿ ನಟಿಸಿದ ಸಿನಿಮಾ 'ಯುಐ'. ಡಿಸೆಂಬರ್ 20ಕ್ಕೆ ತೆರೆಗೆ ಬಂದ ಸಿನಿಮಾ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿದೆ. ಆದರೆ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಸದ್ದು ಮಾಡ್ತಿದೆ. ತಮ್ಮದೇ ವಿಭಿನ್ನ ಶೈಲಿಯ ನಿರೂಪಣೆಯಿಂದ ಉಪ್ಪಿ ಕಮಾಲ್ ಮಾಡಿದ್ದಾರೆ.

7. ಸುದೀಪ್ ನಟನೆಯ 'ಮ್ಯಾಕ್ಸ್' ವರ್ಷಾಂತ್ಯಕ್ಕೆ ಬಿಗ್ ಸರ್‌ಪ್ರೈಸ್. ವಿಜಯ್ ಕಾರ್ತಿಕೇಯನ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ ಪ್ರೇಕ್ಷಕರ ಮನೆಗೆದ್ದಿದೆ. ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಕೊಳ್ಳೆ ಹೊಡೆಯುತ್ತಿದೆ.

ಈ 7 ಸಿನಿಮಾಗಳಲ್ಲಿ ಈ ವರ್ಷದ ನಿಮ್ಮ ನೆಚ್ಚಿನ ಕನ್ನಡ ಸಿನಿಮಾ ಯಾವುದು? ಫಿಲ್ಮಿಬೀಟ್ ವೆಬ್‌ಸೈಟ್ ಪೋಲ್‌ನಲ್ಲಿ ನೀವು ವೋಟ್ ಮಾಡಿ. ನಿಮ್ಮ ನೆಚ್ಚಿನ ಸಿನಿಮಾ ಯಾವುದು ಎಂದು ಆಯ್ಕೆ ಮಾಡಿ. ನಿಮ್ಮ ಸ್ನೇಹಿತರೊಂದಿಗೆ ಫಿಲ್ಮಿಬೀಟ್ ಪೋಲ್ ಶೇರ್ ಮಾಡಿ ಮತ್ತು ನಿಮ್ಮ ನೆಚ್ಚಿನ ಸಿನಿಮಾ, ಕಲಾವಿದರು, ತಂತ್ರಜ್ಞರನ್ನು ಗೆಲ್ಲಿಸಿ.

More from Filmibeat

English summary
Kannada filmibeat best of 2024;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X