2023 Roundup: ಈ ವರ್ಷ ಬಾಲಿವುಡ್‌ನಲ್ಲಿ ಹೀನಾಯವಾಗಿ ಸೋಲುಂಡ ಟಾಪ್ 10 ಚಿತ್ರಗಳ ಪಟ್ಟಿ

ಒಳ್ಳೆ ಸಿನಿಮಾಗಳು ಕೆಲವೊಮ್ಮೆ ಬಾಕ್ಸಾಫೀಸ್‌ನಲ್ಲಿ ಸೋತಿರುವ ಉದಹಾರಣೆ ಇದೆ. ಅದೇ ರೀತಿ ಅಷ್ಟೇನು ಒಳ್ಳೆ ರೆಸ್ಪಾನ್ಸ್ ಸಿಗದ ಸಿನಿಮಾಗಳು ಒಳ್ಳೆ ಕಲೆಕ್ಷನ್ ಮಾಡಿ ಅಚ್ಚರಿ ಮೂಡಿಸಿದ್ದು ಇದೆ. ಈ ವರ್ಷ ಎಲ್ಲಾ ಚಿತ್ರರಂಗಗಳಲ್ಲಿ ಸಿನಿಮಾಗಳ ಸಾಧನೆ ಅಷ್ಟಕ್ಕಷ್ಟೆ. ಇದ್ದಿದ್ದರಲ್ಲಿ ಬಾಲಿವುಡ್‌ ಕೊಂಚಮಟ್ಟಿಗೆ ಚೇತರಿಸಿಕೊಂಡಿದ್ದು ಸುಳ್ಳಲ್ಲ.

ಸೋಲಿನ ಸುಳಿಗೆ ಸಿಲುಕಿದ್ದ ಬಾಲಿವುಡ್‌ಗೆ 'ಪಠಾಣ್', 'ಜವಾನ್', 'ಅನಿಮಲ್' ಈ ವರ್ಷ ಗೆಲುವಿನ ಟಾನಿಕ್ ನೀಡಿವೆ. ಈ ಮೂರು ಸಿನಿಮಾಗಳ ಜೊತೆಗೆ 'ದಿ ಕೇರಳ ಸ್ಟೋರಿ', ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ಸೇರಿದಂತೆ ಒಂದಷ್ಟು ಸಿನಿಮಾಗಳು 100 ಕೋಟಿ ರೂ. ಕ್ಲಬ್ ಸೇರಿ ದಾಖಲೆ ಬರೆದಿದ್ದವು.

Ganapath to Adipurush; Top 10 Flop Movies In Bollywood In 2023

ಬರೀ ಹಿಟ್ ಸಿನಿಮಾಗಳು ಮಾತ್ರವಲ್ಲ ಭಾರೀ ನಿರೀಕ್ಷೆ ಹುಟ್ಟಾಕಿ ಹೀನಾಯವಾಗಿ ಸೋಲುಂಡ ಸಿನಿಮಾಗಳ ಲಿಸ್ಟ್ ದೊಡ್ಡದಿದೆ. ಅಕ್ಷಯ್‌ಕುಮಾರ್‌ ಈ ವರ್ಷವೂ ಗೆಲುವಿನ ಲಯಕ್ಕೆ ಮರಳಲಿಲ್ಲ. ಈ ವರ್ಷ ಬಾಲಿವುಡ್‌ನಲ್ಲಿ ಸೋಲುಂಡ ಟಾಲ್ 10 ಸಿನಿಮಾಗಳ ಲಿಸ್ಟ್ ಇಲ್ಲಿದೆ ನೋಡಿ.

1. ಶಹಜಾದಾ

ತೆಲುಗಿನಲ್ಲಿ ಸೂಪರ್ ಹಿಟ್ ಆಗಿದ್ದ 'ಅಲಾ ವೈಕುಂಠಪುರಂಲೋ' ಸಿನಿಮಾ ಶಹಜಾದಾ ಹೆಸರಿನಲ್ಲಿ ಹಿಂದಿಗೆ ರೀಮೆಕ್ ಆಗಿತ್ತು. ಕಾರ್ತಿಕ್ ಆರ್ಯನ್ ಹಾಗೂ ಕೃತಿ ಸನೂನ್ ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸಿದ್ದರು. ರೋಹಿತ್ ಧವನ್ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಆದರೆ ಚಿತ್ರಕ್ಕೆ ನೆಗೆಟಿವ್ ರಿವ್ಯೂ ಸಿಕ್ಕಿತ್ತು. ಬಾಕ್ಸಾಫೀಸ್‌ನಲ್ಲಿ ಸಿನಿಮಾ ಹೀನಾಯವಾಗಿ ಸೋತಿತ್ತು.

2. ಛತ್ರಪತಿ

ಈ ವರ್ಷ ಬಾಲಿವುಡ್‌ನಲ್ಲಿ ಹೀನಾಯವಾಗಿ ಸೋಲುಂಡ ಮತ್ತೊಂದು ಸಿನಿಮಾ 'ಛತ್ರಪತಿ'. ಇದು ಕೂಡ ತೆಲುಗಿನ ಸೂಪರ್ ಹಿಟ್ ಸಿನಿಮಾ ರೀಮೆಕ್ ಆಗಿತ್ತು. ರಾಜಮೌಳಿ ನಿರ್ದೇಶನದಲ್ಲಿ ಪ್ರಭಾಸ್ ನಟಿಸಿ ಗೆದ್ದಿದ್ದ ಕಥೆಯನ್ನು ವಿ. ವಿ ವಿನಾಯಕ್ ಬಾಲಿವುಡ್‌ನಲ್ಲಿ ರೀಮೆಕ್ ಮಾಡಿದ್ದರು. ಬೆಲ್ಲಂಕೊಂಡ ಸಾಯಿ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದರು. ಆದರೆ ಸಿನಿಮಾ ಒಂದು ವಾರವೂ ಥಿಯೇಟರ್‌ನಲ್ಲಿ ನಿಲ್ಲದೇ ಅಟ್ಟರ್ ಫ್ಲಾಪ್ ಆಗಿತ್ತು.

3. ಸೆಲ್ಫಿ

ಅದ್ಯಾಕೋ ಬಾಲಿವುಡ್ ಖಿಲಾಡಿ ಅಕ್ಷಯ್‌ಕುಮಾರ್‌ಗೆ ಅದೃಷ್ಟ ಕೈಕೊಟ್ಟಂತೆ ಕಾಣುತ್ತಿದೆ. ಅಕ್ಕಿ ಸಿನಿಮಾಗಳು ಇತ್ತೀಚಿನ ದಿನಗಳಲ್ಲಿ ಮ್ಯಾಜಿಕ್ ಮಾಡುತ್ತಿಲ್ಲ. ಇದ್ದಿದ್ದರಲ್ಲಿ 'ಓ ಮೈ ಗಾಡ್' ಸಿನಿಮಾ ತಕ್ಕ ಮಟ್ಟಿಗೆ ಗೆದ್ದಿತ್ತು. ಆದರೆ ಅದರಲ್ಲಿ ಪಂಕಜ್ ತ್ರಿಪಾಠಿ ಪಾಲೂ ಇತ್ತು. ಇನ್ನುಳಿದಂತೆ ಅಕ್ಷಯ್ ಕುಮಾರ್ ನಟಿಸಿದ 'ಸೆಲ್ಫಿ' ಸಿನಿಮಾ ಈ ವರ್ಷ ತೆರೆಕಂಡು ಸೋಲುಂಡಿತ್ತು.

4. ಮಿಷನ್ ರಾಣಿಗಂಜ್

'ಸೆಲ್ಫಿ' ಮಾತ್ರವಲ್ಲ ಈ ವರ್ಷ ಅಕ್ಷಯ್ ಕುಮಾರ್ ನಟಿಸಿದ್ದ 'ಮಿಷನ್ ರಾಣಿಗಂಜ್' ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ನೈಜ ಘಟನೆ ಆಧರಿಸಿದ್ದ ಸಿನಿಮಾ ಗೆಲ್ಲಲಿಲ್ಲ. 1989ರಲ್ಲಿ ರಾಣಿಗಂಜ್ ಕಲ್ಲಿದ್ದಲು ಗಣಿಯೊಂದರಲ್ಲಿ 350 ಅಡಿ ಆಳದ ಕಲ್ಲಿದ್ದಲು ಗಣಿಯ ಕೆಳಗೆ 65 ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿರುತ್ತಾರೆ. ಅವರನ್ನು ಗಣಿಯ ಎಂಜಿನಿಯರ್‌ ಜಸ್ವಂತ್ ಸಿಂಗ್ ಗಿಲ್, ರಕ್ಷಣಾ ಕಾರ್ಯಾಚರಣೆಯ ಮೂಲಕ ಹೇಗೆ ರಕ್ಷಿಸುತ್ತಾನೆ ಎನ್ನುವ ಕಥೆ ಚಿತ್ರದಲ್ಲಿತ್ತು.

5. ತೇಜಸ್

ಕಂಗನಾ ರಾಣವತ್ ನಟನೆಯ 'ತೇಜಸ್' ಸಿನಿಮಾ ಅಟ್ಟರ್ ಫ್ಲಾಪ್ ಆಗಿತ್ತು. ಮೊದಲ ದಿನವೇ ಪ್ರೇಕ್ಷಕರ ಬರ ಎದುರಿಸಿದ ಸಿನಿಮಾ ಭಾರೀ ನಷ್ಟ ತಂದೊಡ್ಡಿತ್ತು. ಅಂದಾಜು 70 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಕೇವಲ 5 ಕೋಟಿ ರೂ. ಮಾತ್ರ ಗಳಿಸಿತ್ತು. ಚಿತ್ರದಲ್ಲಿ ಕಂಗನಾ IAF ಆಫೀಸರ್ ತೇಜಸ್ ಗಿಲ್ ಆಗಿ ನಟಿಸಿದ್ದರು. ಮೊದಲ ದಿನವೇ ಶೋಗಳು ಕ್ಯಾನ್ಸಲ್ ಆಗಿ ಚಿತ್ರಕ್ಕೆ ಹಿನ್ನಡೆಯಾಗಿತ್ತು.

6. ಗಣಪತ್

ದಸರಾ ಹಬ್ಬದ ಸಂಭ್ರಮದಲ್ಲಿ ತಮಿಳಿನ 'ಲಿಯೋ' ಹಾಗೂ ಕನ್ನಡದ 'ಘೋಸ್ಟ್' ಸಿನಿಮಾಗಳು ರಿಲೀಸ್ ಆಗಿತ್ತು. ಅತ್ತ ಬಾಲಿವುಡ್‌ನಲ್ಲಿ ಟೈಗರ್ ಶ್ರಾಫ್ ನಟನೆಯ 'ಗಣಪತ್' ಸಿನಿಮಾ ತೆರೆಗಪ್ಪಳಿಸಿತ್ತು. ವಿಕಾಸ್ ಬೇಲ್ ನಿರ್ದೇಶನದ ಚಿತ್ರದಲ್ಲಿ ಕೃತಿ ಸನೂನ್ ನಾಯಕಿಯಾಗಿ ಮಿಂಚಿದ್ದರು. ಅಂದಾಜು 200 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಿದ್ದ ಸಿನಿಮಾ 10 ಕೋಟಿ ಗಳಿಸಲು ತಿಣುಕಾಡುವಂತಾಯಿತು. ಮುಖ್ಯ ಪಾತ್ರದಲ್ಲಿ ನಟಿಸಿದ್ದ ಬಿಗ್‌ ಬಿ ಅಮಿತಾಬ್ ಬಚ್ಚನ್ ಕೂಡ ಸಿನಿಮಾವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.

7. ಆದಿಪುರುಷ್

ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿತ್ತು. ಸಾಕಷ್ಟು ಟೀಕೆಗೆ ಗುರಿಯಾಗಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋಲುಂಡಿತ್ತು. ಭಾರೀ ಓಪನಿಂಗ್ ಪಡೆದುಕೊಂಡರೂ ಸಿನಿಮಾ ಬಳಿಕ ಗೆಲ್ಲಲಿಲ್ಲ. ರಾಮಾಯಣ ಕಾವ್ಯ ಆಧರಿಸಿ ಓಂ ರಾವುತ್ ಈ ಸಿನಿಮಾ ನಿರ್ಮಿಸಿದ್ದರು. ಪ್ರಭಾಸ್ ರಾಮನಾಗಿ ನಟಿಸಿದ್ದರು. ಬಜೆಟ್ ಜಾಸ್ತಿ ಆಗಿದ್ದರಿಂದ ಸಿನಿಮಾ ನಷ್ಟ ಅನುಭವಿಸಬೇಕಾಯಿತು.

8. ಘೂಮರ್

ಅಭಿಷೇಕ್ ಬಚ್ಚನ್ ಹಿಟ್ ಸಿನಿಮಾ ಕೊಟ್ಟು ಬಹಳ ದಿನಗಳಾಯಿತು. ಈ ವರ್ಷ 'ಘೂಮರ್' ಸಿನಿಮಾ ಮೂಲಕ ಜ್ಯೂ. ಬಚ್ಚನ್ ಪ್ರೇಕ್ಷಕರ ಮುಂದೆ ಬಂದಿದ್ದರು. 'ಓ ಮೈ ಗಾಡ್' ಹಾಗೂ 'ಗದರ್'-2 ನಡುವೆ ಬಂದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲುವುದು ಅಷ್ಟು ಸುಲಭವಾಗಲಿಲ್ಲ. ಮೊದಲ ಎರಡು ದಿನಕ್ಕೆ ಸಿನಿಮಾ 2 ಕೋಟಿ ರೂ. ಮಾತ್ರ ಗಳಿಸಿತ್ತು. ಬಳಿಕ ಚೇತರಿಸಿಕೊಳ್ಳಲೇಯಿಲ್ಲ.

9. ಕುಟ್ಟೆ

ತಬು, ಅರ್ಜುನ್ ಕಪೂರ್ ನಟನೆ ಆಕ್ಷನ್ ಥ್ರಿಲ್ಲರ್ 'ಕುಟ್ಟೆ' ಸಿನಿಮಾ ಕೂಡ ಈ ವರ್ಷದ ದೊಡ್ಡ ಡಿಸಾಸ್ಟರ್ ಎನಿಸಿಕೊಂಡಿದೆ. ಅಂದಾಜು 45 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ 5 ಕೋಟಿ ರೂ.ಕೂಡ ಕಲೆಕ್ಷನ್ ಮಾಡಲಿಲ್ಲ. ಆಸ್ಮಾನ್ ಭಾರಧ್ವಜ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು.

10. ಗುಮ್ರಾಹ್

ವರ್ಧನ್ ಕಟೇಕರ್ ನಿರ್ದೇಶನದ 'ಗುಮ್ರಾಹ್' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿತ್ತು. ಆದರೆ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಗೆಲ್ಲಲಿಲ್ಲ. ಆದಿತ್ಯಾ ರಾಯ್ ಕಪೂರ್, ಮೃಣಾಲ್ ಠಾಕೂರ್ ಹಾಗೂ ರೊನಿತ್ ರೈ ಚಿತ್ರದಲ್ಲಿ ಮುಖ್ಯಭೂಮಿಯಲ್ಲಿದ್ದರು. 25 ಕೋಟಿ ರೂ. ಬಜೆಟ್ ಸಿನಿಮಾ 11 ಕೋಟಿ ರೂ. ಗಳಿಸಲಷ್ಟೇ ಶಕ್ತವಾಯಿತು.

More from Filmibeat

English summary
Bollywood's 10 Biggest flops of 2023;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X