Shivanna: 'ಓಂ', 'ಜೋಗಿ' ಬಿಟ್ಟು ಪರಭಾಷಿಕರು ನೋಡೋಕೆ ಖುದ್ದು ಶಿವಣ್ಣ ಸೂಚಿಸಿದ ತಮ್ಮ 5 ಚಿತ್ರಗಳು ಯಾವ್ದು?

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ 'ಘೋಸ್ಟ್' ಆಗಿ ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಶ್ರೀನಿ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ದಸರಾ ಸಂಭ್ರಮದಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ. ಸಿನಿಮಾ ಪ್ರಚಾರಕ್ಕಾಗಿ ಶಿವಣ್ಣ ಊರೂರು ಸುತ್ತಾಡುತ್ತಿದ್ದಾರೆ.

ರಜನಿಕಾಂತ್ ನಟನೆಯ 'ಜೈಲರ್' ಚಿತ್ರದಲ್ಲಿ ನರಸಿಂಹ ಆಗಿ ಅತಿಥಿ ಪಾತ್ರದಲ್ಲಿ ಶಿವಣ್ಣ ಅಬ್ಬರಿಸಿದ್ದರು. ಪರಭಾಷಾ ಪ್ರೇಕ್ಷಕರು ಕೂಡ ಶಿವಣ್ಣ ಸ್ಕ್ರೀನ್‌ ಪ್ರಸೆನ್ಸ್ ನೋಡಿ ದಂಗಾಗಿದ್ದರು. ಥಿಯೇಟರ್‌ಗಳಲ್ಲಿ ಶಿಳ್ಳೆ ಚಪ್ಪಾಳೆ ಹೊಡೆದು ಸಂಭ್ರಮಿಸಿದ್ದರು. ಕೆಲವು ಕ್ಷಣ ರಜನಿಕಾಂತ್‌ನ ಕೂಡ ಶಿವಣ್ಣ ನಿವಾಳಿಸಿ ಬಿಸಾಕಿಬಿಟ್ಟರು ಎಂದಿದ್ದರು. ಆ ನಂತರ ಹ್ಯಾಟ್ರಿಕ್ ಹೀರೊ ಹಳೇ ಸಿನಿಮಾಗಳನ್ನು ನೋಡಲು ಮುಗಿಬಿದ್ದರು.

Ghost actor Shivarajkumar suggests to other language audience 5 best movies of him

ಸೋಶಿಯಲ್ ಮೀಡಿಯಾದಲ್ಲಿ ಶಿವಣ್ಣನ ಹಿಟ್ ಸಿನಿಮಾಗಳ ಪಟ್ಟಿ ಕೊಡಿ. ಯಾವ ಸಿನಿಮಾಗಳನ್ನು ನೋಡಲೇಬೇಕು ಹೇಳಿ ಎಂದು ಪರಭಾಷಾ ಪ್ರೇಕ್ಷಕರು ಕೇಳಲು ಆರಂಭಿಸಿದರು. ಕನ್ನಡದ ಪ್ರೇಕ್ಷಕರು ಸಾಕಷ್ಟು ಸಿನಿಮಾಗಳ ಪಟ್ಟಿ ಕೊಟ್ಟಿದ್ದರು. ಕೆಲವರು ಶಿವಣ್ಣನ ಈ ಹಿಂದಿನ ಹಿಟ್ ಸಿನಿಮಾಗಳನ್ನು ನೋಡಿ ಮೆಚ್ಚಿಕೊಂಡಿದ್ದರು. ಶಿವಣ್ಣ ನೇರವಾಗಿ ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸಬೇಕು ಎಂದು ಮನವಿ ಮಾಡಿದ್ದರು.

ಈಗಾಗಲೇ ತೆಲುಗು, ತಮಿಳಿನಿಂದ ಶಿವಣ್ಣನಿಗೆ ಸಾಕಷ್ಟು ಸಿನಿಮಾಗಳ ಅವಕಾಶಗಳು ಬರುತ್ತಿದೆ. ಅತಿಥಿ ಪಾತ್ರ ಮಾತ್ರವಲ್ಲ ಹೀರೊ ಆಗಿ ಕೂಡ ನಟಿಸುವಂತೆ ನಿರ್ಮಾಪಕರು, ನಿರ್ದೇಶಕರು ಕೇಳುತ್ತಿದ್ದಾರೆ. ಈಗಾಗಲೇ 'ಕ್ಯಾಪ್ಟನ್ ಮಿಲ್ಲರ್' ಎನ್ನುವ ಮತ್ತೊಂದು ತಮಿಳು ಚಿತ್ರದಲ್ಲೂ ಶಿವಣ್ಣ ನಟಿಸಿದ್ದಾರೆ. ಇತ್ತೀಚೆಗೆ ತೆಲುಗಿನ 'ಕಣ್ಣಪ್ಪ' ಚಿತ್ರದಲ್ಲಿ ನಟಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಮೆಟ್ರೊಸಾಗ ಯೂಟ್ಯೂಬ್ ಸಂದರ್ಶನದಲ್ಲಿ ಪರಭಾಷಾ ಪ್ರೇಕ್ಷಕರು ತಮ್ಮ ಯಾವ ಸಿನಿಮಾಗಳನ್ನು ನೋಡಬೇಕು ಎಂದು ಶಿವಣ್ಣ ಸೂಚಿಸಿದ್ದಾರೆ. 'ಓಂ', 'ಜೋಗಿ' ಬೇರೆ ಯಾವ 5 ಸಿನಿಮಾಗಳನ್ನು ಪರಭಾಷಿಕರಿಗೆ ನೋಡಲು ಸೂಚಿಸುತ್ತೀರಾ ಎನ್ನುವ ಪ್ರಶ್ನೆಗೆ ಶಿವಣ್ಣ, 'ಚಿಗುರಿದ ಕನಸು', 'ತವರಿಗೆ ಬಾ ತಂಗಿ', 'ಗಡಿಬಿಡಿ ಅಳಿಯ', 'ಕಡ್ಡಿಪುಡಿ', 'ದೊರೆ' ಸಿನಿಮಾಗಳನ್ನು ಶಿವಣ್ಣ ಪಟ್ಟಿ ಮಾಡಿದ್ದಾರೆ.

ಶಿವರಾಜ್‌ಕುಮಾರ್ ಈಗಾಗಲೇ 125ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮ ಸಿನಿಮಾಗಳಲ್ಲಿ ಆಲ್‌ಟೈಮ್ ಫೇವರಿಟ್ ಯಾವುದು ಎನ್ನುವ ಪ್ರಶ್ನೆಗೆ ಶಿವಣ್ಣ, "ನನಗೆ ಯಾವುದು ಆಲ್‌ಟೈಮ್ ಫೇವರಿಟ್ ಸಿನಿಮಾ ಅಂತ ಇಲ್ಲ. ಅಪ್ಪಾಜಿ ನಟಿಸಿಸ ಸಾಕಷ್ಟು ಸಿನಿಮಾಗಳು ಇಷ್ಟ. ಅದರಲ್ಲೂ 'ಕಸ್ತೂರಿ ನಿವಾಸ' ಬಹಳ ಇಷ್ಟ ಎಂದಿದ್ದಾರೆ. ನನ್ನ ಸಿನಿಮಾಗಳು ಅಂತ ಬಂದ್ರೆ 'ಚಿಗುರಿದ ಕನಸು' ಎಂದು ಉತ್ತರ ಕೊಟ್ಟಿದ್ದಾರೆ. ಅದಕ್ಕೆ ಕಾರಣ ಸಹ ವಿವರಿಸಿದ್ದಾರೆ.

"ಚಿಗುರಿದ ಕನಸು ಸಿನಿಮಾ ಪದೇ ಪದೇ ಕಾಡುತ್ತದೆ. ನನಗೆ ನಮ್ಮ ಕುಟುಂಬದಲ್ಲಿ ಅಪ್ಪನ ಕಡೆಯವರು ಅಮ್ಮನ ಕಡೆಯವರು ಎಲ್ಲರನ್ನು ಬಹಳ ಹಚ್ಚಿಕೊಂಡಿದ್ದೆ. ನನಗೆ ಅಪ್ಪಾಜಿ ಹಳೇ ಕಾಲದ ನೆಂಟರು ಗೊತ್ತು. ನನಗೆ ನಮ್ಮ ಮೂಲವನ್ನು ಹುಡುಕುವುದು ಬಹಳ ಇಷ್ಟ. ಅದೆಲ್ಲ ನನಗೆ ಆಸಕ್ತಿ ಹೆಚ್ಚು. ಚಿಗುರಿದ ಕನಸು ಚಿತ್ರದಲ್ಲಿ ಅಂತಹ ಅವಕಾಶ ಸಿಕ್ತು. ಹಾಗಾಗಿ ಆ ಸಿನಿಮಾ ನನಗೆ ಬಹಳ ಆಪ್ತ" ಎಂದಿದ್ದಾರೆ.

'ಘೋಸ್ಟ್' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹಳ ಅದ್ಧೂರಿಯಾಗಿ ರಿಲೀಸ್ ಆಗುತ್ತಿದೆ. ದಸರಾ ಹಬ್ಬಕ್ಕೆ ತಮಿಳಿನ 'ಲಿಯೋ' ಹಾಗೂ ತೆಲುಗಿನ 'ಭಗವಂತ್ ಕೇಸರಿ', 'ಟೈಗರ್ ನಾಗೇಶ್ವರರಾವ್' ಸಿನಿಮಾಗಳು ಬರ್ತಿವೆ. ಹಾಗಾಗಿ ಬಾಕ್ಸಾಫೀಸ್‌ನಲ್ಲಿ ಭಾರೀ ಪೈಪೋಟಿ ಏರ್ಪಡುವ ಸುಳಿವು ಸಿಗುತ್ತಿದೆ. ಇನ್ನು ಕರ್ನಾಟಕದಲ್ಲಿ ಅಕ್ಟೋಬರ್ 17ರ ಮಧ್ಯರಾತ್ರಿಯಿಂದಲೇ 'ಘೋಸ್ಟ್' ಶಿವಣ್ಣನ ಆರ್ಭಟ ಶುರುವಾಗಲಿದೆ.

More from Filmibeat

English summary
Shivarajkumar suggests his 5 movies to watch other language audience.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X