2023 Roundup: ಈ ವರ್ಷ ಹಿಟ್ ಲಿಸ್ಟ್ ಸೇರಿದ ಟಾಪ್ 5 ಕನ್ನಡ ಸಿನಿಮಾಗಳು

ಕಳೆದ ವರ್ಷ 'KGF- 2' ಹಾಗೂ 'ಕಾಂತಾರ' ಸಿನಿಮಾಗಳಿಂದ ಕನ್ನಡ ಚಿತ್ರರಂಗ ಭಾರೀ ಸದ್ದು ಮಾಡಿತ್ತು. ಅಕ್ಕಪಕ್ಕದ ಇಂಡಸ್ಟ್ರಿ ಮಂದಿ ಕೂಡ ಇತ್ತ ತಿರುಗಿ ನೋಡಿದ್ದರು. ಆದರೆ ಈ ವರ್ಷ ಕನ್ನಡ ಸಿನಿಮಾಗಳ ಪರ್ಫಾರ್ಮನ್ಸ್ ಅಷ್ಟಕ್ಕಷ್ಟೆ. ಒಂದರ್ಥದಲ್ಲಿ ಬಾಕ್ಸಾಫೀಸ್‌ನಲ್ಲಿ ಸಿನಿಮಾಗಳ ಸಾಧನೆ ಆವರೇಜ್ ಆಗಿತ್ತು ಎಂದೇ ಹೇಳಬೇಕು.

200ಕ್ಕೂ ಅಧಿಕ ಕನ್ನಡ ಸಿನಿಮಾಗಳು ಈ ವರ್ಷ ತೆರೆ ಕಂಡಿವೆ. ಈ ಶುಕ್ರವಾರ 'ಕಾಟೇರ' ಸಿನಿಮಾ ಕೂಡ ಆ ಲಿಸ್ಟ್ ಸೇರಿಕೊಳ್ಳಲಿದೆ. ಆದರೆ ದೊಡ್ಡಮಟ್ಟದ ಹಿಟ್ ಎನ್ನುವ ಸಿನಿಮಾ ಯಾವುದೇ ಕಾಣಲಿಲ್ಲ. ನಿರೀಕ್ಷೆ ಮೂಡಿಸಿದ್ದ ಕೆಲ ಸಿನಿಮಾಗಳು ಮುಗ್ಗರಿಸಿದರೆ ಕೆಲವರು ಮುಂದಿನ ವರ್ಷಕ್ಕೆ ಪೋಸ್ಟ್‌ಪೋನ್ ಆಗಿವೆ.

Ghost to Kranti: Highest-Grossing kannada Movies Of 2023

ಇನ್ನು ರಾಕಿಂಗ್ ಸ್ಟಾರ್ ಯಶ್, ಕಿಚ್ಚ ಸುದೀಪ್, ರಿಷಬ್ ಶೆಟ್ಟಿ, ದುನಿಯಾ ವಿಜಯ್, ಶ್ರೀಮುರಳಿ ರೀತಿಯ ಸ್ಟಾರ್ ನಟರು ಈ ವರ್ಷ ಪ್ರೇಕ್ಷಕರ ಮುಂದೆ ಬರಲೇಯಿಲ್ಲ. ಅಂದ್ರೆ ಇವರು ನಟಿಸಿದ ಯಾವುದೇ ಸಿನಿಮಾ ರಿಲೀಸ್ ಆಗಲಿಲ್ಲ. ಇನ್ನು ಈ ವರ್ಷದ ಟಾಪ್-5 ಸಿನಿಮಾಗಳ ಲಿಸ್ಟ್ ಇಲ್ಲಿದೆ.

1. ಸಪ್ತಸಾಗರದಾಚೆ ಎಲ್ಲೋ ಸೈಡ್- A

ಹೇಮಂತ್‌ ರಾವ್ ನಿರ್ದೇಶನದಲ್ಲಿ ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ನಟನೆಯ 'ಸಪ್ತಸಾಗರದಾಚೆ ಎಲ್ಲೋ ಸೈಡ್- A' ಸಿನಿಮಾ ಈ ವರ್ಷ ಹಿಟ್ ಲಿಸ್ಟ್ ಸೇರಿತ್ತು. ಪ್ರಿಯಾ- ಮನು ಪ್ರೇಮಕಥೆಗೆ ಪ್ರೇಕ್ಷಕರು ಫಿದಾ ಆಗಿದ್ದರು. ಪೇಯ್ಡ್ ಪ್ರೀಮಿಯರ್‌ ಶೋಗಳಿಂದಲೇ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಸಿನಿಮಾ 20 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದ ಅಂದಾಜಿದೆ. ತೆಲುಗಿಗೂ ಸಿನಿಮಾ ಡಬ್ ಆಗಿ ರಿಲೀಸ್ ಆಗಿತ್ತು. ಆದರೆ ಸೀಕ್ವೆಲ್ ಅಷ್ಟಾಗಿ ಸದ್ದು ಮಾಡಲಿಲ್ಲ.

Ghost to Kranti: Highest-Grossing kannada Movies Of 2023

2. ಘೋಸ್ಟ್

ಶ್ರೀನಿ ನಿರ್ದೇಶನದ 'ಘೋಸ್ಟ್' ಸಿನಿಮಾ ಕೂಡ ಬಾಕ್ಸಾಫೀಸ್‌ ಶೇಕ್ ಮಾಡಿತ್ತು. ದಳವಾಯಿ ಶಿವಣ್ಣನ ಆರ್ಭಕ್ಕೆ ಸಿನಿರಸಿಕರು ಫಿದಾ ಆಗಿದ್ದರು. ತಮಿಳಿನ 'ಲಿಯೋ' ಸಿನಿಮಾ ಜೊತೆಗೆ ರಿಲೀಸ್ ಆಗಿದ್ದ ಸಿನಿಮಾ ಗೆಲುವಿನ ದಡ ಸೇರಿತ್ತು. ಚಿತ್ರದ ಸೀಕ್ವೆಲ್‌ಗೆ ಶ್ರೀನಿ ಪ್ಲ್ಯಾನ್ ಮಾಡ್ತಿದ್ದಾರೆ.

3. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ

ಯಾವುದೇ ನಿರೀಕ್ಷೆಯಿಲ್ಲದೇ ಬಂದ ಹೊಸಬರ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಕೂಡ ಗೆಲುವಿನ ದಡ ಸೇರಿಕೊಂಡಿತ್ತು. ಹಾಸ್ಟೆಲ್ ಹುಡುಗರ ಕ್ವಾಟ್ಲೆಗೆ ಸಿನಿರಸಿಕರು ಬಿದ್ದು ಬಿದ್ದು ನಕ್ಕಿದ್ದರು. ನಿತಿನ್ ಕೃಷ್ಣಮೂರ್ತಿ ನಿರ್ದೇಶನದ ಸಿನಿಮಾ ತೆಲುಗಿಗೂ ಡಬ್ ಆಗಿ ರಿಲೀಸ್ ಆಗಿತ್ತು.

4. ಕೌಸಲ್ಯ ಸುಪ್ರಜಾ ರಾಮ

ಶಶಾಂಕ್ ನಿರ್ದೇಶನದ 'ಕೌಸಲ್ಯ ಸುಪ್ರಜಾ ರಾಮ' ಸಿನಿಮಾ ಕೂಡ ಪ್ರೇಕ್ಷಕರ ಮನಗೆಲ್ಲುವಲ್ಲಿ ಸಕ್ಸಸ್ ಕಂಡಿತ್ತು. ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದರು. ಬಿ. ಸಿ ಪಾಟೀಲ್ ಜೊತೆ ಸೇರಿ ನಿರ್ದೇಶಕ ಶಶಾಂಕ್ ಸಿನಿಮಾ ನಿರ್ಮಿಸಿದ್ದರು.

5. ಕ್ರಾಂತಿ

ದರ್ಶನ್- ರಚಿತಾ ರಾಮ್ ನಟನೆಯ 'ಕ್ರಾಂತಿ' ಸಿನಿಮಾ ಕೂಡ ಗೆಲುವಿನ ನಗೆ ಬೀರಿತ್ತು. ಮೊದಲ ದಿನವೇ ಸಿನಿಮಾ ಭರ್ಜರಿ ಓಪನಿಂಗ್ ಪಡೆದುಕೊಂಡಿತ್ತು. ಬಳಿಕ ಸಿನಿಮಾ ಕಲೆಕ್ಷನ್ ಬಗ್ಗೆ ಚರ್ಚೆ ಶುರುವಾಗಿತ್ತು. ಆದರೆ ಚಿತ್ರತಂಡವೇ 109 ಕೋಟಿ ಎಂದು ಬರೆದ ಕೇಕ್ ಕಟ್ ಮಾಡಿ
ಸಂಭ್ರಮಾಚರಣೆ ಮಾಡಿತ್ತು. ಆದರೆ ಕಲೆಕ್ಷನ್ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿಲ್ಲ.

More from Filmibeat

English summary
Box Office Verdict 2023: best kannada movies 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X