'ಕೆಜಿಎಫ್ 2' ನಟಿಯ ಮಳೆ ಹಾಡಿಗೆ ಸೀರೆಯುಟ್ಟು ಹೆಜ್ಜೆ ಹಾಕಿದ ಯುವತಿ; ಹುಡುಗರ ಹೃದಯದಲ್ಲಿ ಚಿಟ್ಟೆ ಹಾರಾಟ
'ಕೆಜಿಎಫ್ 2' ಸಿನಿಮಾ ಮೂಲಕ ಮತ್ತೆ ಸದ್ದು ಮಾಡಿದ್ದ ನಟಿ ರವೀನಾ ಟಂಡನ್. ರಾಕಿಂಗ್ ಸ್ಟಾರ್ ಸಿನಿಮಾದಲ್ಲಿ ಪ್ರಧಾನಿ ರಮಿಕಾ ಸೇನ್ ಪಾತ್ರದಲ್ಲಿ ನಟಿಸಿ ಮಿಂಚಿದ್ದರು. ಇಲ್ಲಿಂದ ಮತ್ತೆ ರವೀನಾ ಟಂಡನ್ ಮತ್ತೆ ಸಿನಿಮಾ, ವೆಬ್ ಸೀರಿಸ್‌ಗಳಲ್ಲಿ ನಟಿಸುತ್ತಿದ್ದಾರೆ. ಆದರೆ, ಈ ನಟಿ ನಾಯಕಿಯಾಗಿ ನಟಿಸಿದ್ದ ಹಲವು ಬಾಲಿವುಡ್ ಸಿನಿಮಾಗಳಿಗೆ ಇಂದಿಗೂ ಅತೀ ದೊಡ್ಡ ಫ್ಯಾನ್ ಫಾಲೋವಿಂಗ್ ಇದೆ.
ಅದರಲ್ಲೂ ರವೀನಾ ಟಂಡನ್ ಹಾಗೂ ಅಕ್ಷಯ್ ಕುಮಾರ್ ಜೊತೆಯಾಗಿ ನಟಿಸಿದ ಸಿನಿಮಾಗಳು ಬಾಲಿವುಡ್‌ನಲ್ಲಿ ಎವರ್‌ಗ್ರೀನ್ ಸಿನಿಮಾ ಪಟ್ಟಿಯಲ್ಲಿವೆ. ಈಗಿನ ಸೋಶಿಯಲ್ ಮೀಡಿಯಾ ಜಮಾನದಲ್ಲಿ ಮತ್ತೆ ರವೀನಾ ಟಂಡನ್ ಹಾಡುಗಳಿಗೆ ಯುವತಿಯರು ಹೆಜ್ಜೆ ಹಾಕಿ ರೀಲ್ಸ್ ಮಾಡುತ್ತಿದ್ದಾರೆ. ಅಂತಹದ್ದೇ ಒಂದು ವಿಡಿಯೋ ಈಗ ವೈರಲ್ ಆಗುತ್ತಿದೆ.

ಅಕ್ಷಯ್ ಕುಮಾರ್ ಹಾಗೂ ರವೀನಾ ಟಂಡನ್ ಕಾಂಬಿನೇಷನ್‌ನಲ್ಲಿ ಬಂದಿದ್ದ ಸೂಪರ್ ಹಿಟ್ ಸಿನಿಮಾ 'ಮೊಹ್ರಾ'. ಇದೇ ಸಿನಿಮಾದ ರೊಮ್ಯಾಂಟಿಕ್ ಸಾಂಗ್ "ಟಿಪ್ ಟಿಪ್ ಬರ್ಸಾ ಪಾನಿ.." ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಇಂದಿಗೂ ಈ ಹಾಡು ಬಾಲಿವುಡ್ ಸಿನಿಮಾ ಪ್ರಿಯರ ಬಾಯಲ್ಲಿ ಹರಿದಾಡುತ್ತಲೇ ಇರುತ್ತೆ. ಈಗ ಯುವತಿಯೊಬ್ಬಳು ಇದೇ ಹಾಡಿಗೆ ಸೀರೆಯುಟ್ಟು ಹೆಜ್ಜೆ ಹಾಕಿದ್ದಾಳೆ. ಆ ವಿಡಿಯೋ ನೋಡಿ ಯುವಕರ ಹೃದಯ ಝಲ್ ಎಂದಿದೆ.
ಇಂದಿನ ಡಿಜಿಟಲ್ ಜಮಾನದಲ್ಲಿ ಜನರು ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಇನ್‌ಸ್ಟಾಗ್ರಾಂ ಹಾಗೂ ಯೂಟ್ಯೂಬ್‌ಗಳಲ್ಲಿ ಮತ್ತದೇ ಜನಪ್ರಿಯರ ಹಾಡುಗಳಿಗೆ ರೀಲ್ಸ್ ಮಾಡಿ ಹಾಕುತ್ತಿದ್ದಾರೆ. ಹೇಮು ಥಪ್ಲಿಯಲ್ ಅನ್ನುವ ಅಕೌಂಟ್‌ನಲ್ಲಿ ಯುವತಿಯೊಬ್ಬಳು ಸೀರೆಯುಟ್ಟು 'ಮೊಹ್ರಾ' ಸಿನಿಮಾದ "ಟಿಪ್ ಟಿಪ್ ಬರ್ಸಾ ಪಾನಿ.." ಹಾಡಿಗೆ ಹೆಜ್ಜೆ ಹಾಕಿದ್ದೇ ತಡ ವೈರಲ್ ಆಗಿದೆ. ಆಕೆ ಬೋಲ್ಡ್ ಸ್ಟೆಪ್ಸ್‌ಗೆ ಯುವಕ ಕಳೆದು ಹೋಗಿದ್ದಾರೆ.
ಹೇಮು ಥಪ್ಲಿಯಲ್ ಡ್ಯಾನ್ಸ್‌ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. 'ಮೊಹ್ರಾ' ಸಿನಿಮಾದಲ್ಲಿ ರವೀನಾ ಟಂಡನ್ ಹಳದಿ ಸೀರೆಯುಟ್ಟು ಮಳೆಯಲ್ಲಿ ಹೆಜ್ಜೆ ಹಾಕಿದರೆ, ಇಲ್ಲಿ ಯುವತಿ ಬೂದು ಬಣ್ಣದ ಮಿಣ ಮಿಣ ಮಿಂಚುವ ಸೀರೆಯುಟ್ಟು ಮನೆಯೊಳಗೆ ಕುಣಿದಿದ್ದಾರೆ. ಹೀಗಾಗಿ ರೀಲ್ಸ್ ಜೊತೆಗೆ ಮತ್ತೆ ಈ ರೊಮ್ಯಾಂಟಿಕ್ ಸಾಂಗ್ ವೈರಲ್ ಆಗುತ್ತಿದೆ. ನೆಟ್ಟಿಗರಿಗಂತೂ ಹೇಮು ಥಪ್ಲಿಯಲ್ ಮೂವ್ಮೆಂಟ್ಸ್ ಸಖತ್ ಇಷ್ಟ ಆಗಿದೆ.
ಕೆಲವು ತಿಂಗಳ ಹಿಂದೆ ಪೋಸ್ಟ್ ಹೇಮು ಥಪ್ಲಿಯಲ್ ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ಅದೀಗ ವೈರಲ್ ಆಗಿದ್ದು, ಸುಮಾರು 85 ಲಕ್ಕೂ ಅಧಿಕ ಮಂದಿ ಈಕೆಯ ಸ್ಟೆಪ್ಸ್ ನೋಡಿ ಮೆಚ್ಚಿಕೊಂಡಿದ್ದಾರೆ. ಹಾಗೇ ಆರಂಭದಲ್ಲಿ ಈ ರೀಲ್ಸ್‌ಗೆ ಪಾಸಿಟಿವ್ ಕಾಮೆಂಟ್‌ಗಳನ್ನು ಮಾಡಿದ್ದರು.
ಕೆಲವರು ಹೇಮು ಥಪ್ಲಿಯಲ್ ಅವರ ರೊಮ್ಯಾಂಟಿಕ್ ಮೂವ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವು ಆಕೆಯ ಟ್ಯಾಲೆಂಟ್ ಅನ್ನು ಮೆಚ್ಚಿಕೊಂಡಿದ್ದಾರೆ. ಯುವಕರನ್ನು 'ಕ್ಯೂಟ್', 'ಹಾಟ್ ಗರ್ಲ್' ಅಂತೆಲ್ಲ ಕಾಮೆಂಟ್‌ಗಳನ್ನು ಮಾಡಿದ್ದರು. ಈ ರೀಲ್ಸ್ ವೈರಲ್ ಆಗುತ್ತಿದ್ದಂತೆ ಮತ್ತೆ ರವೀನಾ ಟಂಡನ್ ನಟಿಸಿದ 'ಮೊಹ್ರಾ' ಸಿನಿಮಾದ "ಟಿಪ್ ಟಿಪ್ ಬರ್ಸಾ ಪಾನಿ" ಸಾಂಗ್ ಕೂಡ ಸದ್ದು ಮಾಡುವುದಕ್ಕೆ ಶುರು ಮಾಡಿದೆ.


Click it and Unblock the Notifications











