2020 ಗೂಗಲ್ ಸರ್ಚ್: ಅಮಿತಾಭ್, ಕಂಗನಾ, ರಿಯಾ ಚಕ್ರವರ್ತಿ ಹೆಸರು

2020ನೇ ವರ್ಷದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿ ಯಾರು ಎಂಬ ಪ್ರಶ್ನೆ ಮೂಡುವುದು ಸಹಜ. ಅದಕ್ಕೆ ಗೂಗಲ್ ಇಂಡಿಯಾ ಉತ್ತರ ನೀಡಿದೆ. ಈ ಪಟ್ಟಿಯಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್, ಕನಿಕಾ ಕಪೂರ್, ಕಂಗನಾ ರಣಾವತ್ ಅಂತವರ ಹೆಸರಿದೆ.

ಸರ್ಚ್ ಇಂಜಿನ್ ಗೂಗಲ್ ಬುಧವಾರ ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮೊದಲ ಸ್ಥಾನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೆಡನ್ ಸ್ಥಾನ ಪಡೆದುಕೊಂಡಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳ ಪೈಕಿ ಸ್ಟಾರ್ ಕಲಾವಿದರ ಹಿಂದಿಕ್ಕಿರುವ ಕನಿಕಾ ಕಪೂರ್ ಟಾಪ್‌ನಲ್ಲಿದ್ದಾರೆ. ಮುಂದೆ ಓದಿ...

ಕನಿಕಾ ಕಪೂರ್ ಟಾಪ್

ಕನಿಕಾ ಕಪೂರ್ ಟಾಪ್

ಬಾಲಿವುಡ್ ಗಾಯಕಿ ಕನಿಕಾ ಕಪೂರ್‌ಗೆ ಕೊರೊನಾ ಸೋಂಕು ತಗುಲಿತ್ತು. ಅದಕ್ಕೂ ಮುಂಚೆ ಆಕೆಯ ರಾಜಕಾರಣಿಗಳು ಆಯೋಜಿಸಿದ್ದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ವಿದೇಶದಿಂದ ಬಂದಿದ್ದ ಕನಿಕಾ ಕ್ವಾರಂಟೈನ್ ಆಗದೇ ಪಾರ್ಟಿ ಮಾಡಿದ್ದರು ಎಂಬ ಆರೋಪಕ್ಕೆ ಎಫ್ ಐ ಆರ್ ಸಹ ದಾಖಲಾಗಿತ್ತು. ಸುಮಾರು ಒಂದು ತಿಂಗಳ ಕಾಲ ಕನಿಕಾ ಕಪೂರ್ ಬಹಳ ಚರ್ಚೆಯಲ್ಲಿದ್ದರು. ಇದೀಗ, ಗೂಗಲ್ ಸರ್ಚ್‌ನಲ್ಲಿ ಅಮೆರಿಕಾ ಅಧ್ಯಕ್ಷ ಜೋ ಬೆಡನ್, ಪತ್ರಕರ್ತ ಅರ್ನಬ್ ನಂತರ ಮೂರನೇ ಸ್ಥಾನದಲ್ಲಿದ್ದಾರೆ.

ಐದನೇ ಸ್ಥಾನದಲ್ಲಿ ಅಮಿತಾಭ್ ಬಚ್ಚನ್

ಐದನೇ ಸ್ಥಾನದಲ್ಲಿ ಅಮಿತಾಭ್ ಬಚ್ಚನ್

ಗೂಗಲ್ ಸರ್ಚ್‌ನಲ್ಲಿ ಅಮಿತಾಭ್ ಬಚ್ಚನ್ ಐದನೇ ಸ್ಥಾನದಲ್ಲಿದೆ. ಬಿಗ್ ಬಿಗೆ ಕೊರೊನಾ ಸೋಂಕು ತಗುಲಿತ್ತು. ಅಮಿತಾಭ್, ಅಭಿಷೇಕ್, ಐಶ್ವರ್ಯ ರೈ, ಆರಾಧ್ಯ ಬಚ್ಚನ್‌ಗೂ ಸೋಂಕು ತಗುಲಿತ್ತು. ಈ ಕಾರಣದಿಂದ ಬಿಗ್ ಬಿ ಭಾರಿ ಸುದ್ದಿಯಲ್ಲಿದ್ದರು. ಅಮಿತಾಭ್ ನಟನೆಯ ಗುಲಾಬೋ ಸಿತಾಬೋ ಸಿನಿಮಾ ಸಹ ಇದೇ ವರ್ಷ ಅಮೇಜಾನ್ ಪ್ರೈಂನಲ್ಲಿ ಬಿಡುಗಡೆಯಾಗಿತ್ತು.

ರಿಯಾ ಚಕ್ರವರ್ತಿ ಹೆಸರು

ರಿಯಾ ಚಕ್ರವರ್ತಿ ಹೆಸರು

ಸುಶಾಂತ್ ಸಿಂಗ್ ರಜಪೂರ್ ಸಾವಿನ ಬಳಿಕ ರಿಯಾ ಚಕ್ರವರ್ತಿ ದೇಶದ ಪ್ರಮುಖ ಚರ್ಚಾ ವಿಷಯವಾಗಿದ್ದರು. ಸುಶಾಂತ್ ಜೊತೆ ಲವ್ವಲ್ಲಿ ಇದ್ದ ಕಾರಣ ಆಕೆಗೂ ಈ ಸಾವಿಗೂ ನಂಟಿದೆ ಎಂಬ ವಿಚಾರದಲ್ಲಿ ಹೆಚ್ಚು ಚರ್ಚೆಯಾದರು. ಬಳಿಕ ಡ್ರಗ್ಸ್ ಪ್ರಕರಣದಲ್ಲಿ ರಿಯಾ ಬಂಧನ ಸಹ ಆಯಿತು. ಗೂಗಲ್ ಸರ್ಚ್‌ನಲ್ಲಿ ಏಳನೇ ಸ್ಥಾನದಲ್ಲಿ ರಿಯಾ ಇದ್ದಾರೆ.

Recommended Video

ನನ್ನನ್ನ ಹಾಗೆ ತೋರಿಸ್ಬೇಕು ಅನ್ನೋದು ನಿರ್ದೇಶಕರ ಕನಸು | Shruti | Veeram | Filmibeat Kannada
ಅಂಕಿತಾ ಲೋಖಂಡೆ & ಕಂಗನಾ

ಅಂಕಿತಾ ಲೋಖಂಡೆ & ಕಂಗನಾ

ಈ ವರ್ಷ ಹೆಚ್ಚು ಸರ್ಚ್ ಆದ ಸೆಲೆಬ್ರಿಟಿಗಳ ಪೈಕಿ ಒಂಬತ್ತನೇ ಸ್ಥಾನದಲ್ಲಿ ಅಂಕಿತಾ ಲೋಖಂಡೆ ಹಾಗೂ ಹತ್ತನೇ ಸ್ಥಾನದಲ್ಲಿ ಕಂಗನಾ ರಣಾವತ್ ಇದ್ದಾರೆ. ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಹೆಚ್ಚು ಚರ್ಚೆಯಾದರು. ಸುಶಾಂತ್ ಸಾವು, ಮುಂಬೈ ಪೊಲೀಸರ ವಿರೋಧ, ಬಾಲಿವುಡ್ ನೆಪೋಟಿಸಂ, ರೈತರ ಪ್ರತಿಭಟನೆಗೆ ಟೀಕೆ ಹೀಗೆ ಹಲವು ವಿವಾದದಲ್ಲಿ ಕಂಗನಾ ಹೆಸರು ತಳುಕು ಹಾಕಿಕೊಂಡಿತ್ತು.

More from Filmibeat

English summary
Google Year In Search 2020: India's top searched Personalities.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X