ನಿಶ್ಚಿತಾರ್ಥ ಮುರಿದುಕೊಂಡು ಆ ಕಾಲದಲ್ಲೇ ಈ ಚೆಲುವೆಯ ಜೊತೆ ಮದ್ವೆಯಾಗಲು ಮುಂದಾಗಿದ್ದ ಗೋವಿಂದ..!

ಒಬ್ಬರನ್ನೊಬ್ಬರು ಎಷ್ಟೇ ಪ್ರೀತಿ ಮಾಡಿದರು, ಗೌರವಿಸಿದರೂ ಕೂಡ ಮದುವೆಯ ನಂತರ ಕೆಲವೊಮ್ಮೆ ಪರಿಸ್ಥಿತಿ ಬಿಗಡಾಯಿಸಿ ಬಿಡುತ್ತದೆ. ಇದಕ್ಕೆ ಕಾರಣ ಪ್ರತಿಯೊಬ್ಬರ ಮನಸಿನಲ್ಲಿಯೂ ವೈವಾಹಿಕ ಜೀವನದ ಬಗ್ಗೆ ವಿಭಿನ್ನವಾದ ಸಿದ್ದ ಮಾದರಿಯ ಟೆಂಪ್ಲೇಟ್ ಕೂತಿರುವುದು.

ಹೀಗಾಗಿ ವೈವಾಹಿಕ ಸಂಬಂಧಗಳ ತಂತಿಗಳು ಬಹಳ ಸೂಕ್ಷ್ಮ, ನಿರ್ವಹಿಸುವುದು ತುಂಬಾ ಕಷ್ಟ ಎಂದುಕೊಂಡು ಅನೇಕರು ಸಂಬಂಧಗಳನ್ನು ಕಡೆದುಕೊಳ್ಳುತ್ತಾರೆ. ವಿಚ್ಛೇದನ ಪಡೆದು ಅವರ ಅವರ ಬದುಕು ಬದುಕಲು ಶುರು ಮಾಡುತ್ತಾರೆ. ಗಂಡ-ಹೆಂಡ್ತಿಯ ಈ ಸಂಬಂಧ ಮದ್ವೆಯಾಗಿ ಒಂದೇ ವರ್ಷಕ್ಕೆ ಮುರಿದು ಬೀಳಬಹುದು, ಐದು ವರ್ಷಕ್ಕೂ ಮುರಿದು ಬೀಳಬಹುದು, ಹತ್ತು, ಇಪ್ಪತ್ತು, ಮೂವತ್ತು ವರ್ಷ ಆದ ಮೇಲೆ ಕೂಡ ಮುರಿದು ಬೀಳಬಹುದು. ಇದಕ್ಕೆ ಗೋವಿಂದ ಮತ್ತು ಸುನಿತಾ ದಾಂಪತ್ಯ ಬದುಕು ಮತ್ತೊಂದು ಉದಾಹರಣೆ.

Govinda once called off his engagement with Sunita Ahuja to marry Neelam Kothari

ಹೌದು, ತಮ್ಮ 37 ವರ್ಷದ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಲು ಬಾಲಿವುಡ್‌ನ ಅಂದಕಾಲತ್ತಿಲ್‌ನ ಸ್ಟಾರ್ ಗೋವಿಂದ ಮುಂದಾಗಿದ್ದಾರೆ ಎನ್ನುವ ಸುದ್ದಿ ನಿನ್ನೆಯಿಂದ ಹಬ್ಬಿದೆ. ಗೋವಿಂದ ಮತ್ತು ಸುನಿತಾ ಸಾಂಸಾರಿಕ ಜೀವನ ಚರ್ಚೆಯಲ್ಲಿದೆ. ನಿಜಾ. ಗೋವಿಂದ ಅವರ ಮ್ಯಾನೇಜರ್ ಶಶಿ ಸಿನ್ಹಾ ವಿಚ್ಛೇದನದ ವದಂತಿಯನ್ನು ತಳ್ಳಿ ಹಾಕಿದ್ದಾರೆ.

ಆದರೆ, ಬೆಂಕಿ ಇರದೆ ಹೊಗೆಯಾಡಲ್ಲ. ಇನ್ನು ಕಳೆದ ಕೆಲ ದಿನಗಳ ಹಿಂದೆ ಗೋವಿಂದ ಪತ್ನಿ ಸುನಿತಾ ನೀಡಿದ ಸಂದರ್ಶನಗಳನ್ನು ನೋಡಿದರೆ ಇಬ್ಬರ ನಡುವೆ ಬಿರುಕು ಮೂಡಿದೆ ಎನ್ನುವ ಅನುಮಾನ ಎಂಥವರಿಗಾದರೂ ಬಾರದೇ ಇರದು. ಹೀಗಾಗಿಯೇ ಬಾಲಿವುಡ್‌ನಲ್ಲಿ ಈಗ ಅನೇಕರು ಗೋವಿಂದ ಮತ್ತು ಸುನಿತಾ ದೂರವಾಗುತ್ತಿರುವುದು ನಿಜಾ ಎಂದೇ ಅಂದುಕೊಂಡಿದ್ದಾರೆ. ಇಷ್ಟೊಂದು ವರ್ಷ ಸಂಸಾರ ಮಾಡಿ ಸೋಲು ಗೆಲುವಲ್ಲಿ ಒಬ್ಬರ ಜೊತೆ ಒಬ್ಬರಿದ್ದು ಈಗ ಈ ವಯಸ್ಸಿನಲ್ಲಿ ಬೇರೆ ಬೇರೆ ಆಗುವುದು ಬೇಕಿತ್ತಾ ಎನ್ನುತ್ತಿದ್ದಾರೆ. ಸುನಿತಾ ಬಗ್ಗೆ ಅನುಕಂಪ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಕೆಲವರು 37 ವರ್ಷದ ಹಿಂದೆಯೇ ಗೋವಿಂದ ತಮ್ಮ ಜೊತೆ ಸಂಬಂಧ ಕಡಿದುಕೊಂಡಾಗಲೇ ಸುನಿತಾ ಎಚ್ಚೆತ್ತುಕೊಳ್ಳಬೇಕಿತ್ತು ಎಂದು ಕೂಡ ಹೇಳುತ್ತಿದ್ದಾರೆ.

ಹೌದು, ಅಸಲಿಗೆ 90ರ ದಶಕದ ಆಸು ಪಾಸು ಭಾರತದ ಅತ್ಯಂತ ಬೇಡಿಕೆಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು ಗೋವಿಂದ. ಏಕಕಾಲಕ್ಕೆ 75 ಚಿತ್ರಗಳನ್ನು ಒಪ್ಪಿಕೊಂಡು ದಾಖಲೆಯನ್ನು ಕೂಡ ಬರೆದಿದ್ದರು. ಬಾಲಿವುಡ್‌ನಲ್ಲಿ ಅನೇಕರ ಹುಬ್ಬೇರಿಸಿದ್ದರು. ಇಂಥಾ ಗೋವಿಂದ ಆ ಕಾಲದಲ್ಲಿ ಸುನಿತಾ ಅವರ ಜೊತೆ ನಿಶ್ಚಿತಾರ್ಥವನ್ನು ಮಾಡಿಕೊಂಡ ನಂತರ ಆ ಕಾಲದ ಖ್ಯಾತ ನಾಯಕಿ ನೀಲಂ ಕೊಠಾರಿಗೆ ಮನ ಸೋತಿದ್ದರು. ಪ್ರೇಕ್ಷಕರು ಕೂಡ ಗೋವಿಂದ ಮತ್ತು ನೀಲಂ ಜೋಡಿಯನ್ನು ಮೆಚ್ಚಿಕೊಂಡಿದ್ದರು. ಇದಕ್ಕೆ ಕೈಗನ್ನಡಿ ಎನ್ನುವಂತೆ ನೀಲಂ ಜೊತೆ ಗೋವಿಂದ ಒಂದಲ್ಲ, ಎರಡಲ್ಲ, ಹದಿನಾಲ್ಕು ಚಿತ್ರಗಳನ್ನು ಒಂದಾದ ಮೇಲೊಂದರಂತೆ ಮಾಡಿದ್ದರು.

ಹೀಗೆ ಚಿತ್ರಗಳನ್ನು ಮಾಡುತ್ತಾ ನೀಲಂಗೆ ಗೋವಿಂದ ಮನ ಸೋತಿದ್ದರು. ಖುದ್ದು ಗೋವಿಂದ ಈ ವಿಚಾರವನ್ನು ಹೇಳಿದ್ದರು ಕೂಡ. 1990ರಲ್ಲಿ ಸ್ಟಾರ್ ಡಸ್ಟ್‌ಗೆ ನೀಡಿದ್ದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿದ್ದ ಗೋವಿಂದ ನನ್ನ ಮೇಲೆ ನೀಲಂ ತುಂಬಾನೇ ಪ್ರಭಾವ ಬೀರಿದ್ದರು ಎಂದು ಹೇಳಿದ್ದರು. ಒಂದು ಹಂತದಲ್ಲಿ ನೀಲಂಗಾಗಿ ನಾನು ಸುನಿತಾ ಜೊತೆ ನನ್ನ ನಿಶ್ಚಿತಾರ್ಥವನ್ನು ಕೂಡ ಮುರಿದುಕೊಂಡಿದ್ದೆ ಎಂದು ಕೂಡ ಗೋವಿಂದ ಹೇಳಿದ್ದರು. ಸುನಿತಾ ಜೊತೆ ಜಗಳ ಮಾಡಿ ನಾನು ನಿಶ್ಚಿತಾರ್ಥ ಮುರಿದುಕೊಂಡು ಹೊರ ಬಂದಿದ್ದೆ, ಆದರೆ ಇದೆಲ್ಲ ಆಗಿ 5 ದಿನಗಳ ನಂತರ ನನಗೆ ಕರೆ ಮಾಡಿ ಸುನಿತಾ ಮಾತನಾಡಿದಳು, ನನ್ನ ಮನವೊಲಿಸಿದಳು, ಅವತ್ತು ಸುನಿತಾ ನನಗೆ ಕರೆ ಮಾಡದೇ ಇದ್ದಿದ್ದರೆ ಬಹುಶಃ ನಾನು ಇವತ್ತು ನೀಲಂ ಅವರನ್ನು ಮದ್ವೆಯಾಗಿರುತ್ತಿದ್ದೆ ಎಂದು ಹೇಳಿದ್ದರು ಗೋವಿಂದ. ಸದ್ಯ ಗೋವಿಂದ ಅವತ್ತು ನೀಡಿದ್ದ ಈ ಸಂದರ್ಶನದ ತುಣುಕುಗಳು ವೈರಲ್ ಆಗುತ್ತಿವೆ.

More from Filmibeat

Read more about: govinda divorce bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X