ಬ್ರಹ್ಮ ಕುಮಾರಿ ವಿಶ್ವವಿದ್ಯಾಲಯ ಸೇರಿದ ಈ ಖ್ಯಾತ ನಾಯಕಿ ಯಾರು ? ಕನ್ನಡದಲ್ಲಿಯೂ ಅಭಿನಯಿಸಿದ್ದರು ಈ ಚೆಲುವೆ..!

ಜೀವನದಲ್ಲಿ ನಿರಾಸೆಯನ್ನು ಹೊಂದಿ, ಕೆಲವರು ದುಶ್ಚಟಗಳಿಗೆ ಬಲಿಯಾಗುತ್ತಾರೆ. ಇನ್ನು ಕೆಲವರು ನಂಬಿ ಬಂದವರ ರಕ್ಷಣೆಯನ್ನು ನೆನೆಯದೆ ಲೌಕಿಕ ಬದುಕನ್ನು ತೊರೆಯುವ ಪ್ರಯತ್ನ ಮಾಡುತ್ತಾರೆ. ಕತ್ತಲು-ಬೆಳಕು ಎಂಬ ಜೋಡೆತ್ತುಗಳನ್ನು ಎಳೆಯಲು ಸಾಧ್ಯವಾಗದೇ ಬದುಕಿಗೆ ಇತಿಶ್ರೀ ಹಾಡುತ್ತಾರೆ. ಮತ್ತೂ ಕೆಲವರು ಆಧ್ಯಾತ್ಮದ ಹಾದಿಯಲ್ಲಿ ಸಾರ್ಥಕ ಬದುಕನ್ನು ಕಂಡಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ ..

ಬದುಕಿನ ಅಂತರಾಳ ತೆರೆದಿಡುವ ಪ್ರಸಿದ್ಧ ಕವಿತೆಯ ಈ ಸಾಲುಗಳಿಗೆ ಗ್ರೇಸಿ ಸಿಂಗ್ ಸದ್ಯದ ತಾಜಾ ಉದಾಹರಣೆ. ಹೌದು, ಗ್ರೇಸಿ ಸಿಂಗ್.. ಒಂದ್ಕಾಲದಲ್ಲಿ ಬಾಲಿವುಡ್‌ನಲ್ಲಿ ಮೆರೆದ ನಾಯಕಿ. ನೋಡಲು ಸುಂದರವಾಗಿದ್ದ ಗ್ರೇಸಿ ಸಿಂಗ್ ಅವರದ್ದು ಅಭಿನಯದಲ್ಲಿ ಕೂಡ ಎತ್ತಿದ ಕೈ.

Gracy Singh s Journey From Lagaan Star to Brahma Kumaris amp amp Her Unmarried Life

1997ರಲ್ಲಿ'ಅಮಾನತ್' ಧಾರಾವಾಹಿಯ ಮೂಲಕ ಕಿರುತೆರೆಯನ್ನು ಪ್ರವೇಶಿಸಿದ ಗ್ರೇಸಿ ಸಿಂಗ್, ನಾನಾ ಪಾಟೇಕರ್, ಸುನೀಲ್ ಶೆಟ್ಟಿ, ಟಬು ಅಭಿನಯದ 'ಹು ತು ತು' ಚಿತ್ರದಲ್ಲಿ ಪಾತ್ರವೊಂದನ್ನು ನಿರ್ವಹಿಸಿದ್ದರು. 'ಹಮ್ ಆಪ್ಕೇ ದಿಲ್ ಮೇ ರೆಹ್ತೇ ಹೈ' ಚಿತ್ರದಲ್ಲಿ ಎರಡನೇ ನಾಯಕಿಯಾದರು.

ಆ ನಂತರ 2001ರಲ್ಲಿ ಬಂದ 'ಲಗಾನ್' ಇವರ ಬದುಕಿನ ದಿಕ್ಕು ಬದಲಿಸಿತ್ತು. ಲಗಾನ್ ಚಿತ್ರದ ಮೂಲಕ ಅಭಿಮಾನಿ ಬಳಗವನ್ನು ಸಂಪಾದಿಸಿದ ಗ್ರೇಸಿ ಸಿಂಗ್ ಆ ನಂತರ ಸಂಜಯ್ ದತ್ ಜೊತೆ 'ಮುನ್ನಾಭಾಯಿ ಎಂಬಿಬಿಎಸ್' ಮತ್ತು ಅಜಯ್ ದೇವಗನ್ ಅವರ ಜೊತೆ 'ಗಂಗಾಜಲ್' ಚಿತ್ರವನ್ನು ಮಾಡಿದರು. ವಿಶೇಷ ಅಂದರೆ ಈ ಮೂರು ಚಿತ್ರಗಳು ಬ್ಲಾಕ್ ಬಸ್ಟರ್ ಆಗಿ ಹೊರ ಹೊಮ್ಮಿದ್ದವು. ಗ್ರೇಸಿ ಸಿಂಗ್ ಅವರ ಕೀರ್ತಿಯನ್ನು ಕೂಡ ಈ ಮೂರು ಚಿತ್ರಗಳು ಹೆಚ್ಚಿಸಿದವು.

ಆ ನಂತರ 'ಮುಸ್ಕಾನ್', 'ಯೇ ಹೈ ಜಿಂದಗಿ', 'ವಜ್ಹ್', ಹೀಗೆ ಒಂದಾದ ಮೇಲೊಂದು ಚಿತ್ರಗಳನ್ನು ಮಾಡಿದ್ದ ಗ್ರೇಸಿ ಸಿಂಗ್ ಆ ನಂತರ ದಕ್ಷಿಣ ಭಾರತದ ಕಡೆ ಕೂಡ ಬಂದಿದ್ದರು. ಕನ್ನಡದಲ್ಲಿ ಡಾ.ವಿ. ನಾಗೇಂದ್ರ ಪ್ರಸಾದ್ ನಿರ್ದೇಶನದ 'ಮೇಘವೇ ಮೇಘವೇ' ಚಿತ್ರದಲ್ಲಿ ಕೂಡ ನಾಯಕಿಯಾಗಿ ಕಾಣಿಸಿಕೊಂಡರು. 'ಸಂತೋಷಂ' ಇವರು ಅಭಿನಯಿಸಿದ ತೆಲುಗು ಚಿತ್ರ. 'ಲೌಡ್ ಸ್ಪೀಕರ್' ಮಲಯಾಳಂ ಸಿನಿಮಾ. ಇಷ್ಟೇ ಅಲ್ಲ ಪಂಜಾಬಿ, ಬೆಂಗಾಲಿ ಮತ್ತು ಮರಾಠಿ ಚಿತ್ರಗಳಲ್ಲಿ ಕೂಡ ಗ್ರೇಸಿ ಸಿಂಗ್ ಅಭಿನಯಿಸಿದ್ದಾರೆ.

ಇಂಥಾ ಗ್ರೇಸಿ ಸಿಂಗ್ ಸದ್ಯ ಚಿತ್ರರಂಗದಿಂದ ಅಂತರವನ್ನು ಕಾಪಾಡಿಕೊಂಡಿದ್ದಾರೆ. ಆಧ್ಯಾತ್ಮದ ಹಾದಿಯಲ್ಲಿ ಸಾಗುತ್ತಿದ್ದಾರೆ. ಹೌದು, ಅಸಲಿಗೆ ಒಂದಾದ ಮೇಲೊಂದು ಅವಕಾಶ ಸಿಗುತ್ತಿದ್ದ ಸಮಯದಲ್ಲಿ ಗ್ರೇಸಿ ಸಿಂಗ್ ಅವರ ಮ್ಯಾನೇಜರ್ ನಿಧನರಾದರು. ಇಲ್ಲಿಂದಾಚೆ ಗ್ರೇಸಿ ಸಿಂಗ್ ಬಾಲಿವುಡ್‌ನಲ್ಲಿ ಅವಕಾಶಗಳ ಬರವನ್ನು ಎದುರಿಸಿದರು. ಅಷ್ಟರಲ್ಲಿ ಗ್ರೇಸಿ ಸಿಂಗ್ ಸ್ಥಾನವನ್ನು ಹೊಸಬರು ಆಕ್ರಮಿಸಿಕೊಂಡಿದ್ದರು.

ಹೀಗಾಗಿ ಚಿತ್ರರಂಗದಿಂದ ದೂರ ಸರಿದ ಗ್ರೇಸಿ ಸಿಂಗ್ ಸಂದರ್ಶನದಲ್ಲಿ ನಟನೆ ನನ್ನ ಜೀವನದ ಗುರಿಯಲ್ಲ ಎಂದು ಹೇಳಿದ್ದರು. ಆ ನಂತರ 2013ರಲ್ಲಿ ಸಂಪೂರ್ಣವಾದ ಆಧ್ಯಾತ್ಮದ ವಾಲಿದ ಗ್ರೇಸಿ ಸಿಂಗ್ ಬ್ರಹ್ಮಕುಮಾರಿ ಆಶ್ರಮವನ್ನು ಸೇರಿಕೊಂಡರು. ಸದ್ಯ ಗ್ರೇಸಿ ಸಿಂಗ್ ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವ ವಿದ್ಯಾಲಯದಲ್ಲಿ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಬದುಕಿನ ಅರ್ಥ ಹುಡುಕುತ್ತಿದ್ದಾರೆ.

ಅಂದ್ಹಾಗೇ ಗ್ರೇಸಿ ಸಿಂಗ್‌ಗೆ ಈ 44ರ ಹರೆಯ. ಹಣ-ಅಂತಸ್ತು-ಕೀರ್ತಿ ಎಲ್ಲವನ್ನು ಸಂಪಾದಿಸಿದ ಗ್ರೇಸಿ ಸಿಂಗ್ ಇನ್ನೂ ಮದುವೆಯಾಗಿಲ್ಲ. ಏಕಾಂಗಿಯಾಗಿಯೇ ಬದುಕನ್ನು ಮುನ್ನಡೆಸುತ್ತಿದ್ದಾರೆ. 2020ರಲ್ಲಿ ETimes ಗೆ ನೀಡಿದ್ದ ಸಂದರ್ಶನದಲ್ಲಿ ತಮ್ಮ ಮದುವೆ ಕುರಿತು ಮಾತನಾಡಿದ್ದ ಗ್ರೇಸಿ ಸಿಂಗ್ ನನಗೆ ಮದುವೆಯಾಗುವ ಆಲೋಚನೆ ಸದ್ಯಕ್ಕೆ ಇಲ್ಲ ಎಂದು ಹೇಳಿದ್ದರು. ಮುಂದೆ ಮದುವೆಯಾಗ್ತೀನಾ ಇಲ್ವಾ ಎನ್ನುವುದು ಸದ್ಯಕ್ಕೆ ನನಗೆ ಗೊತ್ತಿಲ್ಲ ಎಂದು ಗ್ರೇಸಿ ಸಿಂಗ್ ಹೇಳಿದ್ದರು.

More from Filmibeat

English summary
Gracy Singh's story from Bollywood fame (Lagaan) to her dedicated life with Brahma Kumaris. Uncover why the actress remains single at 44 in this insightful profile.
Read more about: actress feature bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X