For Quick Alerts
  ALLOW NOTIFICATIONS  
  For Daily Alerts

  ಬ್ರಿಟೀಷರಿಗಾಗಿ ಅಡುಗೆ ಮಾಡುತ್ತಿದ್ದ ವ್ಯಕ್ತಿ ದಿಲೀಪ್‌ ಕುಮಾರ್ ಆದ ವಿಸ್ಮಯಕಾರಿ ಪಯಣ

  |

  ಭಾರತೀಯ ಸಿನಿಮಾರಂಗವನ್ನು ಕಟ್ಟಿ-ಬೆಳೆಸಿದ ಮಹನೀಯರಲ್ಲಿ ಒಬ್ಬರಾದ ಅಪ್ರತಿಮ ನಟ ದಿಲೀಪ್ ಕುಮಾರ್ ಇಂದು ಮುಂಬೈನಲ್ಲಿ ನಿಧನ ಹೊಂದಿದ್ದಾರೆ. ದಿಲೀಪ್ ಕುಮಾರ್ ಅವರಿಗೆ 98 ವರ್ಷ ವಯಸ್ಸಾಗಿತ್ತು. ಭಾರತ ಸಿನಿಮಾರಂಗ ಕಂಡ ಅಪ್ರತಿಮ ನಟ ದಿಲೀಪ್ ಕುಮಾರ್ ಜೀವನದ ಕಿರು ಪರಿಚಯ ಇಲ್ಲಿದೆ.

  ದಿಲೀಪ್ ಕುಮಾರ್ ಹುಟ್ಟಿದ್ದು 1922, ಡಿಸೆಂಬರ್ 06 ರಂದು ಈಗಿನ ಪಾಕಿಸ್ತಾನದ ಪೇಶಾವರದಲ್ಲಿ. ದಿಲೀಪ್ ಕುಮಾರ್ ಮೂಲ ಹೆಸರು ಮೊಹಮ್ಮದ್ ಯೂಸಫ್ ಖಾನ್. ಹಣ್ಣಿನ ವ್ಯಾಪಾರಿ ಆಗಿದ್ದ ದಿಲೀಪ್ ಕುಮಾರ್ ತಂದೆ ಪೇಶಾವರ ಭಾಗದಿಂದ ಮಹಾರಾಷ್ಟ್ರಕ್ಕೆ ವಲಸೆ ಬಂದರು. ದಿಲೀಪ್ ಕುಮಾರ್ ವಿದ್ಯಾಭ್ಯಾಸ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಆಯಿತು. ಅಲ್ಲಿ ಹಿಂದಿ ಸಿನಿಮಾ ರಂಗದ ಮತ್ತೊಬ್ಬ ದಂತಕತೆ ರಾಜ್ ಕಪೂರ್ ಇವರ ನರೆ-ಹೊರೆಯೇ ಆಗಿದ್ದರು. 1940ರ ಸಮಯ, ಇನ್ನೂ ಹದಿವಯಸ್ಸಿನಲ್ಲಿದ್ದ ದಿಲೀಪ್ ಕುಮಾರ್ ತಂದೆಯೊಂದಿಗೆ ಜಗಳ ಮಾಡಿಕೊಂಡು ಪುಣೆಗೆ ಓಡಿಹೋದರು. ಅಲ್ಲಿ ಬ್ರಿಟೀಷರ ಕ್ಯಾಂಟೀನೊಂದರಲ್ಲಿ ಕೆಲಸಕ್ಕೆ ಇದ್ದರು. ನಂತರ ಆಂಗ್ಲರೇ ಇದ್ದ ಸೇನಾ ಕಾಲೊನಿಯೊಂದರಲ್ಲಿ ಸ್ಯಾಂಡ್‌ವಿಚ್‌ ಅಂಗಡಿಯೊಂದನ್ನು ತೆರೆದು ಕೆಲವೇ ವರ್ಷದಲ್ಲಿ ದೊಡ್ಡ ಮೊತ್ತದ ಹಣವನ್ನೇ ಸಂಪಾದಿಸಿ ಕುಟುಂಬದೊಂದಿಗೆ ಇರಲೆಂದು ಮುಂಬೈಗೆ ವಾಪಸ್ಸಾದರು.

  1943 ರಲ್ಲಿ ಮುಂಬೈನ ಪ್ರಸಿದ್ಧ ಬಾಂಬೆ ಟಾಕೀಸ್‌ನಲ್ಲಿ ದೊಡ್ಡ ಸಂಬಳದ ಕೆಲಸಕ್ಕೆ ಸೇರಿಕೊಂಡರು. ಪುಣೆಯ ಆಂಗ್ಲರ ಕಾಲೊನಿಯಿಂದಾಗಿ ಒಳ್ಳೆಯ ಇಂಗ್ಲೀಷ್ ಸಹ ಕಲಿತಿದ್ದರು. ಬಾಂಬೆ ಟಾಕೀಸ್‌ನಲ್ಲಿಯೇ ನಟಿ ದೇವಿಕಾ ರಾಣಿ, ನಟ ಅಶೋಕ್ ಕುಮಾರ್, ಇನ್ನೂ ಕೆಲವು ನಿರ್ದೇಶಕರು, ನಿರ್ಮಾಪಕರು ಪರಿಚಯವಾದರು, ದಿಲೀಪ್‌ಗೆ ಒಳ್ಳೆಯ ಉರ್ದು ಸಹ ಬರುತ್ತಿದ್ದ ಕಾರಣ ಕೆಲವು ನಿರ್ದೇಶಕರೊಟ್ಟಿಗೆ ಕತೆ, ಚಿತ್ರಕತೆ ಬರೆಯುವುದರಲ್ಲಿ ಸಹಾಯ ಮಾಡುತ್ತಿದ್ದರು. ದಿಲೀಪ್‌ ಕುಮಾರ್‌ಗೆ ಸಿನಿಮಾದೊಂದಿಗೆ ಸಂಬಂಧ ಆರಂಭವಾಗಿದ್ದು ಹೀಗೆ.

  ಮೊದಲ ಸಿನಿಮಾದಲ್ಲಿ ನಟಿಸಿದ್ದು 1944 ರಲ್ಲಿ

  ಮೊದಲ ಸಿನಿಮಾದಲ್ಲಿ ನಟಿಸಿದ್ದು 1944 ರಲ್ಲಿ

  ದಿಲೀಪ್ ಕುಮಾರ್ ಮೊದಲಿಗೆ ಸಿನಿಮಾದಲ್ಲಿ ನಟಿಸಿದ್ದು 1944 ರಲ್ಲಿ. ಸಿನಿಮಾದ ಹೆಸರು 'ಜ್ವರ ಬಾಟಾ'. ಆ ಸಿನಿಮಾ ದೊಡ್ಡದಾಗಿ ಹೆಸರು ಮಾಡಲಿಲ್ಲ. ನಂತರ ಕೆಲವು ಸಿನಿಮಾಗಳಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದರಾದರೂ ಅದ್ಯಾವುವೂ ಹಿಟ್ ಆಗಲಿಲ್ಲ. ಆದರೆ ದಿಲೀಪ್‌ಗೆ ದೊಡ್ಡ ಹೆಸರು ತಂದುಕೊಟ್ಟಿದ್ದು, 'ಜುಗ್ನು' ಈ ಸಿನಿಮಾ ಬಿಡುಗಡೆ ಆಗಿದ್ದು 1947ರಲ್ಲಿ. ನಂತರ 1949 ರಲ್ಲಿ ಬಂದ 'ಅಂದಾಜ್' ಸಹ ಭಾರಿ ದೊಡ್ಡ ಹಿಟ್ ಆಯಿತು. ಆ ಸಿನಿಮಾದಲ್ಲಿ ರಾಜ್ ಕಪೂರ್ ಸಹ ನಟಿಸಿದ್ದರು. ಭಾರತದ ಮೊದಲ ಸಿನಿಮಾ ಬಿಡುಗಡೆ ಆಗಿದ್ದು 1913 ರಲ್ಲಿ ಆದರೂ. ಭಾರತದಲ್ಲಿ ನಿಜವಾಗಿಯೂ ಸಿನಿಮಾ ಉದ್ಯಮ ಪ್ರಾರಂಭವಾಗಿದ್ದು 1940 ರ ದಶಕದಲ್ಲಿ ರಾಜ್ ಕಪೂರ್, ದಿಲೀಪ್ ಕುಮಾರ್, ಅಶೋಕ್ ಕುಮಾರ್ ಹಾಗೂ ಇನ್ನಿತರ ಕೆಲವು ನಟರಿಂದಾಗಿ.

  ಅತಿ ಹೆಚ್ಚು ಸಂಭಾವನೆ ಪಡೆದ ಮೊದಲ ನಟ ದಿಲೀಪ್ ಕುಮಾರ್

  ಅತಿ ಹೆಚ್ಚು ಸಂಭಾವನೆ ಪಡೆದ ಮೊದಲ ನಟ ದಿಲೀಪ್ ಕುಮಾರ್

  1950ರಲ್ಲಿ ದಿಲೀಪ್ ಕುಮಾರ್ ಓಡುವ ಕುದುರೆ ಆಗಿದ್ದರು. ಒಂದರ ಹಿಂದೆ ಒಂದರಂತೆ ಹಿಟ್ ಸಿನಿಮಾಗಳನ್ನು ದಿಲೀಪ್ ಕುಮಾರ್ 50 ರ ದಶಕದಲ್ಲಿ ನೀಡಿದರು. 'ಯಹೂದಿ, ದೇವ್ ಆನಂದ್ ಜೊತೆಗೆ 'ದೇವದಾಸ್', 'ಮಧುಮತಿ', 'ಆಜಾದ್', 'ಕೊಹಿನೂರ್', 'ಉರನ್ ಕೋತ್ಲಾ' ಇನ್ನೂ ಹಲವು ಸಿನಿಮಾಗಳು ಸೂಪರ್ ಹಿಟ್ ಆದವು. 'ಟ್ರ್ಯಾಜಿಡಿ ಕಿಂಗ್' ಎಂಬ ಉಪನಾಮೆ ದಿಲೀಪ್ ಕುಮಾರ್‌ಗೆ ಸೇರಿಕೊಂಡಿತು. 1950ರಲ್ಲಿ ದಿಲೀಪ್ ಕುಮಾರ್ ಎಷ್ಟು ಹಿಟ್ ಸಿನಿಮಾಗಳನ್ನು ನೀಡಿದರೆಂದರೆ ಅವರ ಸಂಭಾವನೆ ಒಮ್ಮೆಲೇ ಏರಿಕೆಯಾಯಿತು. ಮೊದಲ ಬಾರಿಗೆ 1 ಲಕ್ಷ ಸಂಭಾವನೆ ಪಡೆದ ಭಾರತೀಯ ನಟ ದಿಲೀಪ್ ಕುಮಾರ್. ಶೋ ಮ್ಯಾನ್ ಎಂದೇ ಖ್ಯಾತರಾಗಿದ್ದ ರಾಜ್ ಕಪೂರ್ ಸಹ ಅಷ್ಟೋಂದು ಸಂಭಾವನೆಯನ್ನು ಆಗ ಪಡೆದಿರಲಿಲ್ಲ.

  'ಮುಘಲ್-ಎ-ಆಜಮ್' ಎಂಬ ಎಂದೂ ಮರೆಯಲಾಗದ ಸಿನಿಮಾ

  'ಮುಘಲ್-ಎ-ಆಜಮ್' ಎಂಬ ಎಂದೂ ಮರೆಯಲಾಗದ ಸಿನಿಮಾ

  1960 ರಲ್ಲಿ ಸಹ ದಿಲೀಪ್ ಕುಮಾರ್ ಟಾಪ್‌ನಲ್ಲಿಯೇ ಇದ್ದರು. ಭಾರತ ಚಿತ್ರರಂಗ ಎಂದೂ ಮರೆಯಲಾಗದ ಸಿನಿಮಾ 'ಮುಘಲ-ಎ-ಆಜಮ್' ಬಿಡುಗಡೆ ಆಗಿದ್ದು ಸಹ ಅದೇ ಕಾಲದಲ್ಲಿ. 'ಮುಘಲ್-ಎ-ಆಜಮ್' ನಲ್ಲಿ ದಿಲೀಪ್ ಕುಮಾರ್ ಸಲೀಂ ಪಾತ್ರದಲ್ಲಿ ನಟಿಸಿದ್ದರು. ಪೃಥ್ವಿ ರಾಜ್‌ಕಪೂರ್ ಅಕ್ಬರ್‌ನಾಗಿ, ಮಧುಬಾಲಾ ಅನಾರ್ಕಲಿಯಾಗಿ ನಟಿಸಿದ್ದರು. ಆ ಸಿನಿಮಾ ಆಗಿನ ಕಾಲಕ್ಕೆ ದೊಡ್ಡ ಹಿಟ್. ಆ ಸಿನಿಮಾ ಗಳಿಸಿದ ಹಣ 2011 ರ ಹಣದ ಮೌಲ್ಯದ ಪ್ರಕಾರ 1000 ಕೋಟಿಗೂ ಹೆಚ್ಚು. ಸಲೀಂ ಆಗಿ ದಿಲೀಪ್ ಕುಮಾರ್ ನಟನೆ ಎಂದೂ ಮರೆಯಲಾಗದು.

  1970ರ ದಶಕದಲ್ಲಿ ದಿಲೀಪ್ ಕುಮಾರ್ ಖ್ಯಾತಿ ಕುಸಿದು ಬಿತ್ತು

  1970ರ ದಶಕದಲ್ಲಿ ದಿಲೀಪ್ ಕುಮಾರ್ ಖ್ಯಾತಿ ಕುಸಿದು ಬಿತ್ತು

  1960ರ ದಶಕ ಸಹ ದಿಲೀಪ್ ಕುಮಾರ್ ಪಾಲಿಗೆ ಸುವರ್ಣ ದಶಕವೇ ಆಗಿತ್ತು. ಆದರೆ 1970 ರಲ್ಲಿ ದಿಲೀಪ್ ಖ್ಯಾತಿ ನಿಧಾನಕ್ಕೆ ಕಡಿಮೆ ಆಗುತ್ತಾ ಬಂತು. ಆ ವೇಳೆಗಾಗಲೆ ರಾಜೇಶ್ ಖನ್ನಾ, ಸಂಜೀವ್ ಕಪೂರ್, ಶಶಿ ಕಪೂರ್, ಶಮ್ಮಿ ಕಪೂರ್ ಗಳು ಬಾಲಿವುಡ್‌ಗೆ ಕಾಲಿಟ್ಟಿದ್ದರಾದ್ದರಿಂದ ದಿಲೀಪ್ ಕುಮಾರ್ ಮೂಲೆಗೆ ಸರಿಯಲೇ ಬೇಕಾಯಿತು. ದಿಲೀಪ್ ಕುಮಾರ್ ಅದೆಷ್ಟು ಖಾಲಿ ಕೈ ಆದರೆಂದರೆ 1976 ರಿಂದ 81 ರ ವರೆಗೆ ಅವರಿಗೆ ಒಂದೂ ಸಿನಿಮಾ ಸಿಗಲಿಲ್ಲ. 1981 ರಲ್ಲಿ ಮರಳಿ ಬಂದ ದಿಲೀಪ್ ಕುಮಾರ್, ಆಗಿನ ಟಾಪ್ ಹೀರೋಗಳ ಸಿನಿಮಾದಲ್ಲಿ ಮುಖ್ಯ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದರು. 1998 ರಲ್ಲಿ 'ಖಿಲಾ' ದಿಲೀಪ್ ನಟನೆಯ ಕೊನೆಯ ಸಿನಿಮಾ.

  ದಿಲೀಪ್ ಕುಮಾರ್ ಅವರದ್ದು ವರ್ಣರಂಜಿತ ಖಾಸಗಿ ಜೀವನ

  ದಿಲೀಪ್ ಕುಮಾರ್ ಅವರದ್ದು ವರ್ಣರಂಜಿತ ಖಾಸಗಿ ಜೀವನ

  ದಿಲೀಪ್ ಕುಮಾರ್ ಅವರ ಖಾಸಗಿ ಜೀವನ ಸಹ ಅವರ ಸಿನಿಮಾ ಜೀವನದಂತೆ ವರ್ಣಮಯ. 1950ರ ಸಮಯದಲ್ಲಿ ದಿಲೀಪ್ ಕುಮಾರ್ ತಮ್ಮ ಸಹನಟಿ ಮಧುಬಾಲಾ ಜೊತೆಗೆ ಪ್ರೇಮದಲ್ಲಿದ್ದರು. ಏಳು ವರ್ಷ ಇವರಿಬ್ಬರೂ ಒಟ್ಟಿಗೆ ಇದ್ದರು. ಇಬ್ಬರೂ ಮದುವೆ ಆಗುತ್ತಾರೆ ಎಂದೂ ಸಹ ಹೇಳಲಾಗಿತ್ತು. ಆದರೆ 'ನಯಾ ದೌರ್' ಎಂಬ ಸಿನಿಮಾದಿಂದಾಗಿ ಎಲ್ಲವೂ ಬದಲಾಯ್ತು. 'ನಯಾ ದೌರ್' ಸಿನಿಮಾಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ದಿಲೀಪ್ ಕುಮಾರ್, ಮಧುಬಾಲಾ ಹಾಗೂ ಅವರ ತಂದೆಯ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದರು. ಆಗಿನಿಂದ ಇಬ್ಬರೂ ಬೇರೆಯಾದರು. 'ಮುಘಲ್ ಎ- ಅಜಮ್' ಸಿನಿಮಾದ ಬಳಿಕ ಇಬ್ಬರೂ ಒಟ್ಟಿ ನಟಿಸಲೇ ಇಲ್ಲ. ದಿಲೀಪ್ ಕುಮಾರ್‌ ಜೊತೆಗೆ ಅತಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ವೈಜಯಂತಿಮಾಲಾ ಜೊತೆಗೂ ದಿಲೀಪ್ ಕುಮಾರ್ ಹೆಸರು ಕೇಳಿಬಂದಿತ್ತು. ವೈಜಯಂತಿಮಾಲಾ ಅನ್ನು ದಿಲೀಪ್ ಕುಮಾರ್ ವಿವಾಹ ಆಗುತ್ತಾರೆ ಎನ್ನಲಾಗಿತ್ತು. ಆದರೆ ಅದೂ ಸಹ ಆಗಲಿಲ್ಲ. ಕೊನೆಗೆ 1966 ರಲ್ಲಿ ತಮ್ಮ ಸಹ ನಟಿ ಸಾಯಿರಾ ಬಾನು ಅನ್ನು ದಿಲೀಪ್ ಕುಮಾರ್ ವಿವಾಹವಾದರು. ದಿಲೀಪ್ ಕುಮಾರ್‌ಗಿಂತಲೂ 22 ವರ್ಷದ ಚಿಕ್ಕವರಾಗಿದ್ದರು ಸಾಯಿರಾ ಬಾನು. ನಂತರ 1981 ರಲ್ಲಿ ಅಸ್ಮಾ ಶಬೀನಾ ಎಂಬುವರನ್ನು ಎರಡನೇ ಪತ್ನಿಯಾಗಿ ಸ್ವೀಕರಿಸಿದರು. ಆದರೆ ಆ ಮದುವೆ ಎರಡೇ ವರ್ಷಗಳಲ್ಲಿ ಮುರಿದು ಬಿತ್ತು. ಆದರೆ ದಿಲೀಪ್ ಕುಮಾರ್ ಹಾಗೂ ಸಾಯಿರಾ ಬಾನು ದಾಂಪತ್ಯಕ್ಕೆ ಯಾವ ಅಡ್ಡಿಯೂ ಆಗಿರಲಿಲ್ಲ. ಕೊನೆಯ ವರೆಗೂ ಇವರಿಬ್ಬರು ಒಟ್ಟಿಗೆ ಇದ್ದರು. ಸಾಯಿರಾ ಬಾನು, ದಿಲೀಪ್ ಕುಮಾರ್‌ಗೆ ಮಕ್ಕಳಿಲ್ಲ.

  ಅತಿ ಹೆಚ್ಚು ಪ್ರಶಸ್ತಿ ಪಡೆದ ನಟ ದಿಲೀಪ್ ಕುಮಾರ್

  ಅತಿ ಹೆಚ್ಚು ಪ್ರಶಸ್ತಿ ಪಡೆದ ನಟ ದಿಲೀಪ್ ಕುಮಾರ್

  ಅಪ್ರತಿಮ ನಟ ದಿಲೀಪ್ ಕುಮಾರ್‌ಗೆ ಹಲವಾರು ಪ್ರಶಸ್ತಿಗಳು, ಬಿರುದುಗಳು ಅರಸಿ ಬಂದಿವೆ. ಭಾರತದಲ್ಲಿಯೇ ಅತಿ ಹೆಚ್ಚು ಪ್ರಶಸ್ತಿ ಪಡೆದ ನಟ ಎಂಬ ಖ್ಯಾತಿ ದಿಲೀಪ್ ಕುಮಾರ್ ಅವರದ್ದು. ಪದ್ಮ ಭೂಷಣ, ಪದ್ಮವಿಭೂಷಣ, ದಾದಾ ಸಾಹೇಬ್ ಪಾಲ್ಕೆ, ಪ್ರಶಸ್ತಿ ಪಡೆದಿದ್ದಾರೆ. ಹಲವು ಫಿಲಂಫೇರ್ ಪ್ರಶಸ್ತಿ, ಕೆಲವು ಅಂತರಾಷ್ಟ್ರೀಯ ಪ್ರಶಸ್ತಿಗಳು ಸಹ ದಿಲೀಪ್ ಕುಮಾರ್ ಹೆಸರಿಗಿವೆ. ಕಾಂಗ್ರೆಸ್‌ ಪಕ್ಷವು ದಿಲೀಪ್ ಕುಮಾರ್ ಅವರನ್ನು ಗೌರವ ಪೂರ್ವಕವಾಗಿ ರಾಜ್ಯಸಭೆ ಸದಸ್ಯರನ್ನಾಗಿ ನೇಮಕ ಮಾಡಿತ್ತು. 2000-2006 ರ ವರೆಗೆ ರಾಜ್ಯಸಭೆ ಸದಸ್ಯರಾಗಿ ಕಾರ್ಯನಿರ್ವಹಿಸಿದರು.

  English summary
  India's one of the greatest actor Dilip Kumar passed away today. Here is the information about his life journey.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X