ರಕ್ಷಿತ್ ಶೆಟ್ಟಿಗೆ ಬೇರೆಯವರು ಅವಕಾಶ ಕೊಡ್ತಿಲ್ವಾ? ಸಾಧಕರ ಸೀಟ್‌ನಲ್ಲಿ ಕೂರಿಸಿದ್ದಕ್ಕೂ ಚಕಾರ!
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು, ಆಪ್ತರು ಸೋಶಿಯಲ್ ಮೀಡಿಯಾದಲ್ಲಿ ನೆಚ್ಚಿನ ನಟನಿಗೆ ಶುಭಾಶಯ ಕೋರುತ್ತಿದ್ದಾರೆ. ಚಿತ್ರರಂಗಕ್ಕೆ ಬಂದ ಈ 12 ವರ್ಷಗಳಲ್ಲಿ ರಕ್ಷಿತ್ ಶೆಟ್ಟಿ ಕೇವಲ ಬೆರಳೆಣಿಕೆ ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ. ಕೆಲ ಸಿನಿಮಾಗಳಲ್ಲಿ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ. ಆದರೆ ನಿರ್ದೇಶಕರಾಗಿಯೂ ಸಿಂಪಲ್ ಸ್ಟಾರ್ ಕನ್ನಡ ಪ್ರೇಕ್ಷಕರ ಮನಗೆದ್ದಿದ್ದಾರೆ.
'ಸಪ್ತಸಾಗರದಾಚೆ ಎಲ್ಲೋ' ಸಿನಿಮಾ ಚಿತ್ರೀಕರಣ ಮುಗಿಸಿರುವ ರಕ್ಷಿತ್ ಶೆಟ್ಟಿ ಸದ್ಯ 'ರಿಚರ್ಡ್ ಆಂಟನಿ' ಸಿನಿಮಾ ಸ್ಟ್ರಿಪ್ಟ್ ವರ್ಕ್‌ನಲ್ಲಿ ಬ್ಯುಸಿಯಾಗಿದ್ದಾರೆ. ಮೇ 10ರಂದು ಮತ ಚಲಾಯಿಸಿ ಆ ಸಿನಿಮಾಗಳ ಕೆಲಸದ ನಿಮಿತ್ತ ವಿದೇಶಕ್ಕೆ ತೆರಳುತ್ತಿರುವುದಾಗಿ ಅವರು ಹೇಳಿದ್ದರು. ರಕ್ಷಿತ್ ಶೆಟ್ಟಿ 'ಉಳಿದವರು ಕಂಡಂತೆ' ಚಿತ್ರಕ್ಕೆ ಆಕ್ಷನ್ ಕಟ್ ಕೂಡ ಹೇಳಿದ್ದರು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದರೂ ಒಂದು ವರ್ಗದ ಪ್ರೇಕ್ಷಕರ ಮನಗೆದ್ದು ಕಲ್ಟ್ ಸಿನಿಮಾ ಅನ್ನಿಸಿಕೊಂಡಿದ್ದು ಸುಳ್ಳಲ್ಲ.

ನಟನಾಗಿ ನಿರ್ದೇಶಕನಾಗಿ ಮಾತ್ರವಲ್ಲದೇ ತಮ್ಮದೇ ಪರಂವ ಸ್ಟುಡಿಯೋ ಬ್ಯಾನರ್‌ನಲ್ಲಿ ರಕ್ಷಿತ್ ಶೆಟ್ಟಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ. ಕಳೆದ ವರ್ಷ '777 ಚಾರ್ಲಿ' ಸಿನಿಮಾದಲ್ಲಿ ನಟಿಸಿ ರಕ್ಷಿತ್ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿದ್ದರು. ಹೇಮಂತ್ ಕುಮಾರ್ ನಿರ್ದೇಶನದ 'ಸಪ್ತಸಾಗರದಾಚೆ ಎಲ್ಲೋ' ಸಿನಿಮಾ ಸಹ ಬಹಳ ನಿರೀಕ್ಷೆ ಮೂಡಿಸಿದೆ. ಇನ್ನು 'ರಿಚರ್ಡ್ ಆಂಟನಿ'ಯನ್ನು ತೆರೆಮೇಲೆ ನೋಡೊಕೆ ಅಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾಯ್ತಿದ್ದಾರೆ.
ಬೆರಳೆಣಿಯ ಸಿನಿಮಾಗಳಲ್ಲಿ ನಟನೆ
ಸಿಂಪಲ್ ಸ್ಟಾರ್ ಸಿನಿಕರಿಯರ್ ಗಮನಿಸಿದರೆ ರಕ್ಷತ್ ಶೆಟ್ಟಿಗೆ ಹೆಚ್ಚು ಅವಕಾಶಗಳು ಸಿಗಲಿಲ್ಲ ಅನ್ನೋದು ಗೊತ್ತಾಗುತ್ತದೆ. ಒಳ್ಳೆ ನಟ, ಪ್ರತಿಭಾನ್ವಿತ ಫಿಲ್ಮ್ ಮೇಕರ್ ಎನಿಸಿಕೊಂಡರೂ ಈ 12 ವರ್ಷಗಳಲ್ಲಿ ಕೇವಲ 10 ಸಿನಿಮಾಗಳಲ್ಲಿ ಮಾತ್ರ ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. ಅದರಲ್ಲಿ 'ಸಿಂಪಲ್ಲಾಗ್ ಒಂದ್ ಲವ್‌ಸ್ಟೋರಿ', 'ಗೋಧಿಬಣ್ಣ ಸಾಧಾರಣ ಮೈಕಟ್ಟು', 'ಕಿರಿಕ್ ಪಾರ್ಟಿ', '777 ಚಾರ್ಲಿ' ಸಿನಿಮಾಗಳು ಮಾತ್ರ ಹಿಟ್ ಆಗಿವೆ.

ಬೇರೆ ಸಿನಿಮಾ ಆಫರ್ ಬಂದಿಲ್ಲ
ಇನ್ನು ರಕ್ಷಿತ್ ಶೆಟ್ಟಿ ಬಹುತೇಕ ತಮ್ಮದೇ ಸರ್ಕಲ್‌ನಲ್ಲಿ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಕೆಲವೊಮ್ಮೆ ತಾವೇ ತಮ್ಮ ಸಿನಿಮಾಗಳನ್ನು ನಿರ್ಮಾಣ ಮಾಡಿಕೊಂಡಿದ್ದು ಇದೆ. ಕೆಲ ದಿನಗಳ ಹಿಂದೆ ಪರೋಕ್ಷವಾಗಿ ನನಗೆ ಬೇರೆ ಯಾರೂ ಸಿನಿಮಾ ಆಫರ್ ಕೊಡುತ್ತಿಲ್ಲ ಎಂದು ಅವರು ಹೇಳಿಕೊಂಡಿದ್ದರು. ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ್ದ ರಕ್ಷಿತ್ "ನನಗೆ ಬೇರೆ ಸಿನಿಮಾ ಆಫರ್ ಬಂದಿಲ್ಲ. ನನ್ನ ಸಿನಿಮಾ ನಾನೇ ಮಾಡಬೇಕು" ಎಂದಿದ್ದರು. ಇದೀಗ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ 'ರಿಚರ್ಡ್ ಆಂಟನಿ' ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ.
ವೀಕೆಂಡ್‌ಗೆ ಶೋಗೆ ಬಂದಿದ್ದಕ್ಕೆ ಚಕಾರ
ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ಸೀಸನ್ 3ರಲ್ಲಿ ರಕ್ಷಿತ್ ಶೆಟ್ಟಿ ಸಾಧಕರ ಸೀಟ್‌ನಲ್ಲಿ ಕೂತಿದ್ದರು. ಆದರೆ ಸಿಂಪಲ್ ಸ್ಟಾರ್‌ನ ಕಾರ್ಯಕ್ರಮಕ್ಕೆ ಕರೆಸಿದ್ದರ ಬಗ್ಗೆ ಕೆಲವರ ಚಕಾರ ಎತ್ತಿದ್ದರು. ಏಳೆಂಟು ಸಿನಿಮಾಗಳಲ್ಲಿ ನಟಿಸಿರುವ ನಟನನ್ನು ಸಾಧಕರ ಸೀಟ್‌ನಲ್ಲಿ ಕೂರಿಸಿರುವುದು ಎಷ್ಟು ಸರಿ ಎಂದು ವೀಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ- ವಿರೋಧ ಚರ್ಚೆ ನಡೆದಿತ್ತು.

ರಕ್ಷಿತ್ ಎಪಿಸೋಡ್‌ಗೆ ಹೆಚ್ಚು ಟಿಆರ್‌ಪಿ
ಸಾಧಕರ ಸೀಟ್‌ನಲ್ಲಿ ರಕ್ಷಿತ್ ಶೆಟ್ಟಿ ಕೂತಿದ್ದಕ್ಕೆ ಅಷ್ಟೆಲ್ಲಾ ಚರ್ಚೆ ನಡೆದಿತ್ತು. ಆದರೆ ಆ ಸೀಸನ್‌ನಲ್ಲಿ ರಕ್ಷಿತ್ ಶೆಟ್ಟಿ ಎಪಿಸೋಡ್ ಹೆಚ್ಚು ಟಿಆರ್‌ಪಿ ಬಂದಿದ್ದಾಗಿ ಜೀ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ತಿಳಿಸಿದ್ದರು. ರಕ್ಷಿತ್ ಶೆಟ್ಟಿ ಬೆರಳೆಣಿಕೆಯ ಸಿನಿಮಾಗಳಲ್ಲಿ ನಟಿಸಿದ್ದರೂ ಅಭಿಮಾನಿಗಳ ಮನಗೆದ್ದಿದ್ದಾರೆ. ತಮ್ಮ ಪ್ರತಿಭೆ ಏನು ಎನ್ನುವುದನ್ನು ಈಗಾಗಲೇ


Click it and Unblock the Notifications











