For Quick Alerts
  ALLOW NOTIFICATIONS  
  For Daily Alerts

  20 ವರ್ಷ ಹೋದ್ರು ಯಶ್ ನಟನೆಯ ಈ ಆರು ಪಾತ್ರಗಳು ಆಲ್‌ಟೈಂ ಫೇವರಿಟ್

  |

  ರಾಕಿಂಗ್ ಸ್ಟಾರ್ ಸಿನಿಮಾ ಇಂಡಸ್ಟ್ರಿಯಲ್ಲಿ ವೃತ್ತಿ ಆರಂಭಿಸಿ 13 ವರ್ಷಕ್ಕಿಂತ ಹೆಚ್ಚಾಗಿದೆ. 20ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ಕೆಲವು ಸಿನಿಮಾಗಳಲ್ಲಿ ಅತಿಥಿ ಪಾತ್ರ ನಿರ್ವಹಿಸಿದ್ದಾರೆ. ಲವರ್ ಬಾಯ್ ಇಮೇಜ್‌ಗಳಲ್ಲಿ ನಟಿಸಿ ಯಶಸ್ಸು ಕಂಡಿದ್ದ ಯಶ್, ನೋಡು ನೋಡುತ್ತಿದ್ದಂತೆ ಮಾಸ್ ಮಹಾರಾಜ ಆಗಿ ಬೆಳೆದು ನಿಂತರು.

  ಸ್ಯಾಂಡಲ್‌ವುಡ್ ಬಾಕ್ಸ್‌ಆಫೀಸ್‌ನಲ್ಲಿ ತಮ್ಮ ಸಿನಿಮಾಗಳಿಗೂ ಮಾರ್ಕೆಟ್ ಸೃಷ್ಟಿಸಿಕೊಂಡರು. ಕೆಜಿಎಫ್ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಮಟ್ಟಕ್ಕೆ ಕಾಲಿಟ್ಟ ರಾಕಿ ಭಾಯ್ ಈಗ ಯೂನಿವರ್ಸಲ್ ಬಾಸ್ ಆಗಲು ಹೊರಟಿದ್ದಾರೆ. ಕೆಜಿಎಫ್ ಚಾಪ್ಟರ್ 2 ಬಿಡುಗಡೆ ಆದ್ಮೇಲೆ ಯಶ್ ಅವರ ಇಮೇಜ್ ಬೇರೆನೇ ಲೆವೆಲ್‌ಗೆ ಹೋಗಲಿದೆ ಎಂದು ಅನೇಕರ ಭವಿಷ್ಯ ನುಡಿಯುತ್ತಿದ್ದಾರೆ. ಇಷ್ಟೆಲ್ಲ ಸಕ್ಸಸ್ ಕಂಡರೂ ಯಶ್ ತಮ್ಮ ವೃತ್ತಿ ಜೀವನದಲ್ಲಿ ನಿರ್ವಹಿಸಿದ ಕೆಲವು ಪಾತ್ರಗಳನ್ನು ಮಾತ್ರ ಎಂದಿಗೂ ಮರೆಯಲು ಸಾಧ್ಯವಿಲ್ಲ. ಯಾವುದು ಆ ಪಾತ್ರಗಳು? ಮುಂದೆ ಓದಿ...

  ನಂದೀಶ್ (ಗೂಳಿ)

  ನಂದೀಶ್ (ಗೂಳಿ)

  ಕಿರಾತಕ ಸಿನಿಮಾ ಬರುವವರೆಗೂ ಯಶ್ ಅಷ್ಟು ದೊಡ್ಡ ಸಕ್ಸಸ್ ಕಂಡಿರಲಿಲ್ಲ. ಮೊಗ್ಗಿನ ಮನಸು, ರಾಕಿ, ಮೊದಲ ಸಲಾ, ರಾಜಧಾನಿ ಸಿನಿಮಾಗಳಲ್ಲಿ ಗಮನ ಸೆಳೆದಿದ್ದರು. ಯಶ್‌ಗೆ ನಿಜವಾಗಲೂ ಸ್ಟಾರ್ ಇಮೇಜ್ ಎನ್ನುವುದು ಸಿಕ್ಕಿದ್ದೇ ಕಿರಾತಕ ಚಿತ್ರದ ಆದ್ಮೇಲೆ. ನಂದೀಶ್/ಗೂಳಿ ಪಾತ್ರದಲ್ಲಿ ಮಂಡ್ಯದ ಹಳ್ಳಿ ಹುಡುಗನಾಗಿ ರಂಜಿಸಿದ್ದರು. ಕಿರಾತಕ ಚಿತ್ರದಲ್ಲಿ ಯಶ್ ಅವರ ನಟನೆಯನ್ನು ಈಗಲೂ ಕೂತು ನೋಡಬಹುದು. ರಾಕಿಂಗ್ ಸ್ಟಾರ್‌ಗೆ ಕಿರಾತಕ ಬಹಳ ಪ್ರಮುಖವಾದ ಚಿತ್ರ ಎನ್ನಬಹುದು.

  ಕೆಜಿಎಫ್ 2 ಟೀಸರ್ ಸಕ್ಸಸ್ ಹಿಂದಿದೆ ಮಾಸ್ಟರ್ ಪ್ಲಾನ್, ಆ ಕಾರಣದಿಂದಲೇ ಈ ದಾಖಲೆ ಆಗಿದ್ದು!

  'ಡ್ರಾಮಾ' ಟಿಕೆ ವೆಂಕಟೇಶ್

  'ಡ್ರಾಮಾ' ಟಿಕೆ ವೆಂಕಟೇಶ್

  ಕಾಮಿಡಿ, ಲವ್, ಆಕ್ಷನ್ ಹೀಗೆ ಎಲ್ಲದರಲ್ಲೂ ಸೈ ಎನಿಸಿಕೊಂಡ ಯಶ್‌ ನಿರ್ದೇಶಕ ಯೋಗರಾಜ್ ಭಟ್ ಜೊತೆ ಡ್ರಾಮಾ ಎಂಬ ಸಿನಿಮಾ ಮಾಡಿದರು. ಸತೀಶ್ ನೀನಾಸಂ ಹಾಗೂ ಯಶ್ ಅವರ ಜುಗಲ್ ಬಂಧಿ ಸಖತ್ ಹಿಟ್ ಆಗಿತ್ತು. ಕ್ವಾಟ್ಲೆ ಸತೀಶ್ (ಸತೀಶ್ ನೀನಾಸಂ) ಹಾಗೂ ಟಿಕೆ ವೆಂಕಟೇಶ್ (ಯಶ್) ಕಾಮಿಡಿ ನೋಡುವುದೇ ಮಜಾ. ಈ ಪಾತ್ರವನ್ನು ಸಹ ಯಶ್ ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ.

  'ಗೂಗ್ಲಿ' ಶರತ್

  'ಗೂಗ್ಲಿ' ಶರತ್

  'ಗೂಗ್ಲಿ' ಸಿನಿಮಾದಲ್ಲಿ ಲವರ್ ಬಾಯ್ ಶರತ್ ಪಾತ್ರವನ್ನು ರಾಕಿ ಫ್ಯಾನ್ಸ್ ಎಂದೆಂದೂ ಮರೆಯಲು ಸಾಧ್ಯವಿಲ್ಲ. ಪ್ರೇಮಿಗಳ ಪಾಲಿಗೆ ಶರತ್ ಫೆವರೀಟ್ ಆಗಿಬಿಡ್ತಾರೆ. ಅಷ್ಟರ ಮಟ್ಟಿಗೆ ಯಶ್ ಈ ಚಿತ್ರದಲ್ಲಿ ಇಷ್ಟ ಆಗ್ತಾರೆ. ಕೃತಿ ಕರಬಂಧ ಮತ್ತು ಯಶ್ ಕಾಂಬಿನೇಷನ್ ಸಿಕ್ಕಾಪಟ್ಟೆ ಇಷ್ಟ ಆಗುತ್ತೆ. ಯಶ್ ಸಿನಿ ಜೀವನದಲ್ಲಿ ಗೂಗ್ಲಿ ಬಹಳ ವಿಶೇಷ ಅಂತಾನೇ ಹೇಳಬಹುದು.

  ಕೆಜಿಎಫ್ ಟೀಸರ್ ಸೂಪರ್: ಆದ್ರೂ ಆ ವಿಚಾರಕ್ಕೆ ಬೇಸರಗೊಂಡ ಅಭಿಮಾನಿಗಳು!

  'ರಾಜಾಹುಲಿ' ಆರ್ಭಟ

  'ರಾಜಾಹುಲಿ' ಆರ್ಭಟ

  ಸ್ಯಾಂಡಲ್‌ವುಡ್‌ನಲ್ಲಿ ಯಶ್ ಆರ್ಭಟಕ್ಕೆ ಅಡಿಗಲ್ಲು ಹಾಕಿದ್ದೇ ರಾಜಾಹುಲಿ. ತಮಿಳಿನ ರೀಮೇಕ್ ಆಗಿದ್ದರೂ ರಾಜಾಹುಲಿ ಪಾತ್ರದಲ್ಲಿ ಯಶ್ ಘರ್ಜಿಸಿದ್ದರು. ಸ್ನೇಹ, ಪ್ರೀತಿ ಕಾದಾಟದ ನಡುವೆ ರಾಜಾಹುಲಿಯ ನಿಯತ್ತಿಗೆ ಎಲ್ಲರೂ ಫಿದಾ ಆಗ್ಬಿಟ್ಟರು. ರಾಜಾಹುಲಿ ಒಂದೊಂದು ಡೈಲಾಗ್‌ಗಳು ಯಶ್ ಅವರ ಭವಿಷ್ಯ ನಿರ್ಧರಿಸಿತು.

  ಚರಿತ್ರೆ ಸೃಷ್ಟಿಸಿಕೊಂಡ 'ರಾಮಾಚಾರಿ'

  ಚರಿತ್ರೆ ಸೃಷ್ಟಿಸಿಕೊಂಡ 'ರಾಮಾಚಾರಿ'

  ಕನ್ನಡದ ಬಾಕ್ಸ್ ಆಫೀಸ್‌ನಲ್ಲಿ ಯಶ್ ಅವರ ಚಿತ್ರಗಳಿಗೆ ಇಷ್ಟು ದೊಡ್ಡ ಮಾರ್ಕೆಟ್ ಇದೆ ಎಂದು ತೋರಿಸಿದ್ದು ರಾಮಾಚಾರಿ. ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸಿನಿಮಾದಿಂದ ರಾಕಿಂಗ್ ಸ್ಟಾರ್ ಇಮೇಜ್ ಇನ್ನೊಂದು ಲೆವೆಲ್‌ಗೆ ಹೋಯ್ತು. ಯಶ್ ಅವರ ಟಾರ್ಗೆಟ್ ಏನು ಎಂಬುದು ಈ ಚಿತ್ರದ ಮೂಲಕ ಸಿನಿಜಗತ್ತಿಗೆ ತಿಳಿಯಿತು. ಇಂಡಸ್ಟ್ರಿ ಅಂದು ಆ ರಾಮಾಚಾರಿ, ಇಂದು ಈ ರಾಮಾಚಾರಿ ಎನ್ನುವ ಮಟ್ಟಕ್ಕೆ ಯಶ್ ಸಕ್ಸಸ್ ನೋಡಿದರು. ಯಶ್-ರಾಧಿಕಾ ಕಾಂಬಿನೇಷನ್‌ ಸಹ ಸೂಪರ್ ಡೂಪರ್ ಹಿಟ್ ಆಯ್ತು.

  ರಾಕಿ ಭಾಯ್

  ರಾಕಿ ಭಾಯ್

  ಕನ್ನಡ ಇಂಡಸ್ಟ್ರಿಯನ್ನು ಇನ್ನೊಂದು ಲೆವೆಲ್‌ಗೆ ತೆಗೆದುಕೊಂಡು ಚಿತ್ರ ಕೆಜಿಎಫ್. ರಾಕಿ ಭಾಯ್ ಆಗಿ ಕನ್ನಡದ ಕೀರ್ತಿ ಪತಾಕೆಯನ್ನು ದೇಶಾದ್ಯಂತ ಹಾರಿಸಿದ ಯಶ್. ಭಾರತದ ಸಿನಿಮಾ ಉದ್ಯಮ ಕನ್ನಡ ಇಂಡಸ್ಟ್ರಿ ಕಡೆ ತಿರುಗಿ ನೋಡುವಂತೆ ಮಾಡಿದ ಚಿತ್ರ. ಇಡೀ ವೃತ್ತಿ ಜೀವನದಲ್ಲಿ ಕಾಣದ ಸಕ್ಸಸ್‌ನ್ನು ಈ ಒಂದೇ ಒಂದು ಚಿತ್ರದಲ್ಲಿ ನೋಡಿಬಿಟ್ಟರು. ಬಹುಶಃ ರಾಕಿ ಭಾಯ್ ಎನ್ನುವುದು ಇನ್ನು ಹತ್ತು-ಇಪ್ಪತ್ತು ವರ್ಷ ಹೋದರು ಸದ್ದು ಮಾಡ್ತಾನೆ ಇರುತ್ತೆ.

  ಬ್ಯಾಕ್ ಟು ಬ್ಯಾಕ್ Yash ಡೈಲಾಗ್ ಹೊಡೆದು ತನ್ನ ಆಸೆ ಹೇಳಿಕೊಂಡ ಅಭಿಮಾನಿ | Filmibeat Kannada
  English summary
  Happy Birthday Yash: All Time Favourite Roles of Rocking Star Yash in Sandalwood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X