ಕನ್ನಡ ಚಿತ್ರರಂಗದಿಂದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಬ್ಯಾನ್ ಆಗಿದ್ದಾರಾ?

ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಈಗ ನ್ಯಾಷನಲ್ ಕ್ರಶ್ ಆಗಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಬಾಲಿವುಡ್ ಅಂಗಳದಲ್ಲಿ ಕೂಡ ಮಿಂಚುತ್ತಿದ್ದಾರೆ. ಆಲಿಯಾ ಭಟ್, ಕತ್ರೀನಾ ಕೈಫ್, ದೀಪಿಕಾ ಪಡುಕೋಣೆ ರೀತಿಯ ಬಿಟೌನ್ ಬೆಡಗಿಯರಿಗೂ ಪೈಪೋಟಿ ಕೊಡುತ್ತಿದ್ದಾರೆ.

'ಪೊಗರು' ಚಿತ್ರದ ಬಳಿಕ ರಶ್ಮಿಕಾ ಕನ್ನಡ ಯಾವುದೇ ಚಿತ್ರದಲ್ಲಿ ನಟಿಸಲಿಲ್ಲ. ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ರೋಶ್ ಪದೇ ಪದೇ ಕನ್ನಡ ಸಿನಿರಸಿಕರು ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಏನೋ ಹೇಳಲು ಹೋಗಿ ಅದು ಮತ್ತೇನೋ ಆಗಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. ಅದೇ ಕಾರಣಕ್ಕೆ ಕೆಲವರು ಆಕೆಯ ವಿನಾ ಕಾರಣ ಆಕ್ರೋಶ ವ್ಯಕ್ತಪಡಿಸುತ್ತಿರುತ್ತಾರೆ.

Has Rashmika Mandanna been banned from Kannada film industry Here s The Truth

'ಕಾಂತಾರ' ಸಿನಿಮಾ ನೋಡಿದ್ರಾ? ಎಂದು ಕೇಳಿದ್ದಕ್ಕೆ ಆಕೆ ನೀಡಿದ ಉತ್ತರ ಕೆಲವರ ಆಕ್ರೋಶಕ್ಕೆ ಕಾರಣವಾಗಿತ್ತು. 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ಅವಕಾಶ ಸಿಕ್ಕ ಬಗ್ಗೆ ಮಾಡಿದ ಕಾಮೆಂಟ್ ವೈರಲ್ ಆಗಿ ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ಉಂಟಾಗಿತ್ತು.

ಅಂದಹಾಗೆ ರಶ್ಮಿಕಾ ಮಂದಣ್ಣ ಕನ್ನಡ ಚಿತ್ರರಂಗದಿಂದಲೇ ಬ್ಯಾನ್ ಆಗಿದ್ದಾರೆ ಎನ್ನುವ ಚರ್ಚೆ ಕೆಲ ದಿನಗಳ ಹಿಂದೆ ಭಾರೀ ಸುದ್ದಿ ಆಗಿತ್ತು. ಕೆಲವರು ಇವತ್ತಿಗೂ ಇದನ್ನು ನಿಜ ಎಂದೇ ನಂಬಿದ್ದಾರೆ. 'ಪೊಗರು' ಸಿನಿಮಾ ಬಳಿಕ ಆಕೆ ಕನ್ನಡ ಸಿನಿಮಾಗಳಲ್ಲಿ ನಟಿಸಿಲ್ಲ ನಿಜ. ಆದರೆ ಹಾಗಂತ ಆಕೆಯನ್ನು ಯಾರು ಕೂಡ ಬ್ಯಾನ್ ಮಾಡಿಲ್ಲ. ಆಕೆಗೆ ಅವಕಾಶ ಕೊಡಲ್ಲ ಎಂದು ಕೂಡ ಯಾರು ಹೇಳಿಲ್ಲ.

ಹಿಂದಿ, ತೆಲುಗು, ತಮಿಳು ಸಿನಿಮಾಗಳಲ್ಲಿ ಬ್ಯುಸಿ ಆಗಿರುವುದರಿಂದ ಕನ್ನಡ ಸಿನಿಮಾಗಳಿಗೆ ಕಾಲ್‌ಶೀಟ್ ಕೊಡುತ್ತಿಲ್ಲ. ಒಂದರ್ಥದಲ್ಲಿ ಕನ್ನಡ ಚಿತ್ರಗಳಲ್ಲಿ ನಟಿಸಲು ಸಮಯ ಇಲ್ಲದಷ್ಟು ಬ್ಯುಸಿ ಆಗಿದ್ದಾರೆ. ಅದೇ ಕಾರಣಕ್ಕೆ ಇತ್ತೀಚೆಗೆ ಯಾವುದೇ ಕನ್ನಡ ಸಿನಿಮಾದಲ್ಲಿ ಬಣ್ಣ ಹಚ್ಚಲಿಲ್ಲ. ರಶ್ಮಿಕಾ ನೀಡಿದ ಕೆಲ ಹೇಳಿಕೆಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಆಕೆಯನ್ನು ಸ್ಯಾಂಡಲ್‌ವುಡ್‌ನಿಂದ ಬ್ಯಾನ್ ಮಾಡಿ ಎನ್ನುವ ಮೀಮ್, ಪೋಸ್ಟ್‌ಗಳು ವೈರಲ್ ಆಗಿತ್ತು ಅಷ್ಟೆ. ಇದನ್ನು ನೋಡಿ ಕೆಲ ತೆಲುಗು ವೆಬ್‌ಸೈಟ್‌ಗಳಲ್ಲಿ ಆಕೆಯನ್ನು ಬ್ಯಾನ್ ಮಾಡಿದ್ದಾರೆ ಎಂದು ವರದಿ ಮಾಡಲಾಗಿತ್ತು.

Has Rashmika Mandanna been banned from Kannada film industry Here s The Truth

ನಿಮ್ಮನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಿದ್ದಾರಾ? ಎನ್ನುವ ಪ್ರಶ್ನೆಗೆ ಖುದ್ದು ರಶ್ಮಿಕಾ ಮಂದಣ್ಣ ಸಂದರ್ಶನವೊಂದರಲ್ಲಿ ಉತ್ತರಿಸಿದ್ದರು. ನನ್ನನ್ನು ಯಾರೂ ಕೂಡ ಬ್ಯಾನ್ ಮಾಡಿಲ್ಲ, ನನ್ನ ಬಳಿ ಈ ಬಗ್ಗೆ ಅಧಿಕೃತವಾಗಿ ಯಾರು ಚರ್ಚಿಸಿಲ್ಲ ಎಂದಿದ್ದರು. 'ಕಾಂತಾರ' ಸಿನಿಮಾ ನೋಡಿ ನಾನು ರಿಷಬ್ ಶೆಟ್ಟಿಗೆ ಮೆಸೇಜ್ ಮಾಡಿ ಅಭಿನಂದನೆ ತಿಳಿಸಿದ್ದೆ ಎಂದು ವಿವರಿಸಿದ್ದರು.

"ಕಾಂತಾರ' ಸಿನಿಮಾ ಬಿಡುಗಡೆಯಾಗಿ 2 ದಿನಕ್ಕೆ ಸಿನಿಮಾ ನೋಡಿದ್ರಾ? ಎಂದು ಹೇಳಿದ್ದರು. ಆಗ ನಾನಿನ್ನು ನೋಡಿರಲಿಲ್ಲ. ನಂತರ ಸಿನಿಮಾ ನೋಡಿ ರಿಷಬ್ ಸರ್‌ಗೆ ಮೆಸೇಜ್ ಮಾಡಿದ್ದೆ. ಅದಕ್ಕೆ ಅವ್ರು ಥ್ಯಾಂಕ್ಯೂ ಎಂದು ರಿಪ್ಲೇ ಮಾಡಿದ್ದರು. ಜನರಿಗೆ ನಾವು ಹೇಗಿದ್ದೇವೆ ಎನ್ನುವುದು ಗೊತ್ತಿಲ್ಲ" ಎಂದು ಸ್ಪಷ್ಟನೆ ನೀಡಿದ್ದರು.

ಕಾಲೇಜು ದಿನಗಳಲ್ಲೇ ರಶ್ಮಿಕಾ ಮಂದಣ್ಣಗೆ 'ಕಿರಿಕ್ ಪಾರ್ಟಿ' ಸಿನಿಮಾ ಅವಕಾಶ ಸಿಕ್ಕಿತ್ತು. ಆಕೆಯ ಸಿನಿ ಕರಿಯರ್‌ಗೆ ಭದ್ರ ಬುನಾದಿ ಹಾಕಿದ ಸಿನಿಮಾ ಇದು. ಆ ಚಿತ್ರವನ್ನು ರಕ್ಷಿತ್ ಶೆಟ್ಟಿ ತಮ್ಮ ಪರಂವಃ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ನಿರ್ಮಿಸಿದ್ದರು. ಆದರೆ ಸಂದರ್ಶನವೊಂದರಲ್ಲಿ ಬ್ಯಾನರ್ ಹೆಸರು ಹೇಳುವ ಆಕೆ ಆಟಿಟ್ಯೂಡ್ ತೋರಿಸಿದ್ದರು. ಈ ಬಗ್ಗೆ ಕೂಡ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಸಂದರ್ಶನದಲ್ಲಿ ತಾವು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಬಗ್ಗೆ ಮಾತನಾಡಿದ್ದರು. ಮಾಡೆಲ್ ಆಗಿ ಇದ್ದಿದ್ದು ಬಳಿಕ ರಿಷಬ್ ಶೆಟ್ಟಿ ನಿರ್ದೇಶನದ 'ಕಿರಿಕ್ ಪಾರ್ಟಿ' ಚಿತ್ರಕ್ಕೆ ಆಯ್ಕೆ ಆಗಿದ್ದರ ಬಗ್ಗೆ ಹೇಳಿದ್ದರು. ಈ ವೇಳೆ ಪರಂವಃ ಸ್ಟುಡಿಯೋಸ್ ಬ್ಯಾನರ್ ಹೆಸರು ಹೇಳದೇ ಕೋಟ್ ಎನ್ನುವ ಅರ್ಥದಲ್ಲಿ ಕೈ ಸನ್ನೆ ಮಾಡಿದ್ದರು. ಆಕೆಯ ಈ ಆಟಿಟ್ಯೂಡ್ ಕೆಲವರ ಅಸಮಾಧಾನಕ್ಕೆ ಕಾರಣವಾಗಿತ್ತು. ಸದ್ಯ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಶ್ಮಿಕಾಗೆ ಆಪ್ತರು, ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.

More from Filmibeat

English summary
Is Rashmika mandanna banned from Kannada cinema?;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X