ಒಂದು ರಾತ್ರಿಯ ಸುಖಕ್ಕಾಗಿ ಟಬುಗೆ ಕೈ ಕೊಟ್ಟ ಅನಿಲ್ ಕಪೂರ್ ಸಹೋದರ? ಮಹೀಪ್ ಎಂಟ್ರಿಯಿಂದ ಮದುವೆ ಕನಸು ನುಚ್ಚುನೂರು

ಪ್ರೀತಿ ಎಂಬ ಎರಡಕ್ಷರವನ್ನು ನಿರೂಪಿಸುವುದು ತುಂಬಾ ಕಷ್ಟ. ಯಾಕೆಂದರೆ.. ಪ್ರೀತಿಯನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯ ಇಲ್ಲ. ಅದನ್ನು ಅನುಭವಿಸಿಯೇ ತೀರಬೇಕು. ಇನ್ನೂ ನಿಜವಾದ ಪ್ರೀತಿ ಅಂದರೆ ಅದು ಹೃದಯದ ಬಡಿತ ಅಲ್ಲ. ನನ್ನ ಹೃದಯದ ಬಡಿತ ನಿನ್ನದೇ ಹೆಸರು ಹೇಳುತ್ತಿದೆ ಅಂದರೆ ಅದು ನಿಜವೂ ಅಲ್ಲ. ಯಾಕೆಂದರೆ ನಿಜವಾದ ಪ್ರೀತಿ ಎನ್ನುವುದು ಪರಿಪೂರ್ಣ ಪ್ರಣಯ.

ಆದರೆ ಅದನ್ನು ಗುರುತಿಸುವುದು ಸುಲಭ ಅಲ್ಲ. ಯಾಕೆಂದರೆ ಕೆಲವರ ಪಾಲಿಗೆ ಪ್ರೀತಿ ಅನ್ನೋದು ಶೋಕಿ. ಲವ್ ಹೆಸರಿನಲ್ಲಿ ಮಾಡಬಾರದ ಅನಾಚಾರವನ್ನೆಲ್ಲಾ ಮಾಡುತ್ತಾರೆ. ನಂಬಿಸಿ ಕತ್ತು ಕುಯ್ಯುತ್ತಾರೆ. ಬೆನ್ನ ಹಿಂದೆ ಬೇರೆಯವರ ಜೊತೆ ಸರಸ ಸಲ್ಲಾಪವನ್ನು ಮಾಡುತ್ತಾರೆ. ಅನಿಲ್ ಕಪೂರ್ ಸಹೋದರ ಸಂಜಯ್ ಕಪೂರ್ ಮತ್ತು ಬಾಲಿವುಡ್‌ನ ಚಿರ ಯೌವ್ವನೆ ಟಬು ಅವರ ಪ್ರೇಮಕತೆಯಲ್ಲಿ ಇದೇ ಆಗಿದ್ದು.

he-was-seeing-her-even-then-sanjay-kapoor-s-one-night-stand-with-maheep-shattered-bond-with-tabu

ಹೌದು, ಅದು 1995ರ ಸಮಯ. ಅನಿಲ್ ಕಪೂರ್ ಹೆಜ್ಜೆಯ ಜಾಡು ಹಿಡಿದು ಸಂಜಯ್ ಕಪೂರ್ ಚಿತ್ರರಂಗಕ್ಕೆ ಬಂದಿದ್ದರು. ''ಪ್ರೇಮ್'' ಚಿತ್ರದ ಮೂಲಕ ವೃತ್ತಿ ಬದುಕಿಗೆ ಮುನ್ನುಡಿಯನ್ನು ಬರೆದಿದ್ದರು. ಈ ಚಿತ್ರಕ್ಕೆ ನಾಯಕಿಯಾಗಿದ್ದವರು ಟಬು. ಚಿತ್ರದ ಚಿತ್ರೀಕರಣ ನಡೆಯುವ ಸಮಯದಲ್ಲಿ ಸಂಜಯ್ ಕಪೂರ್ ಮತ್ತು ಟಬು ನಡುವೆ ಪ್ರೇಮಾಂಕುರವಾಗಿತ್ತು.

ಆದರೆ.. ಈ ಪ್ರೇಮಸಂಬಂಧವನ್ನು ಟಬು ಗಂಭೀರವಾಗಿ ಪರಿಗಣಿಸಿದ್ದರು, ಸಂಪೂರ್ಣವಾಗಿ ನಂಬಿದ್ದರೆ ಹೊರತು ಸಂಜಯ್ ಕಪೂರ್ ಅಲ್ಲ. ಸಂಜಯ್ ಕಪೂರ್ ಪಾಲಿಗೆ ಇದು ಕೇವಲ ಟೈಮ್ ಪಾಸ್ ಲವ್ ಆಗಿತ್ತಷ್ಟೇ.

ಇದಕ್ಕೆ ಕೈಗನ್ನಡಿ ಎಂಬಂತೆ ''ಬಾಲಿವುಡ್ ಹಂಗಾಮಾ'' ಇಬ್ಬರು ಮದುವೆಯಾಗುತ್ತಾರೆ ಎಂದು ವರದಿಯನ್ನು ಮಾಡಿತ್ತು. ಆದರೆ.. ಪ್ರೇಮ್ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಅರಳಿದ್ದ ಇವರ ಪ್ರೀತಿ ಚಿತ್ರದ ಚಿತ್ರೀಕರಣ ಮುಗಿಯುವ ಸಮಯಕ್ಕೆ ಕಮರಿಹೋಗಿತ್ತು. ಈ ಹಿಂದೆ ''E TIMES''ಗೆ ನೀಡಿದ್ದ ಸಂದರ್ಶನದಲ್ಲಿ ಖುದ್ದು ಸಂಜಯ್ ಕಪೂರ್ ಈ ಮಾತನ್ನು ಒಪ್ಪಿಕೊಂಡಿದ್ದರು ಕೂಡ. ಅದಕ್ಕೆ ಕಾರಣ ಮಹೀಪ್ ಕಪೂರ್.

ಹೌದು.. ಮಹೀಪ್ ಕಪೂರ್ .. ಸಂಜಯ್ ಕಪೂರ್ ಅವರ ಧರ್ಮ ಪತ್ನಿ. ಸರಿ ಸುಮಾರು 30 ವರ್ಷದ ಹಿಂದೆ ಸಂಜಯ್ ಕಪೂರ್ ಜೊತೆ ಸಪ್ತಪದಿಯನ್ನು ತುಳಿದ ಮಹೀಪ್, ಸಂಜಯ್ ಕಪೂರ್‌ಗೆ ಪರಿಚಯವಾಗಿದ್ದು ಇದೇ ಸಮಯದಲ್ಲಿ. ಪಕ್ಕದಲ್ಲಿ ಟಬು ಇದ್ದರೂ ಕೂಡ ಸಂಜಯ್ ಕಪೂರ್, ಮಹೀಪ್ ಜೊತೆ ಸಂಬಂಧದಲ್ಲಿದ್ದರು. ಟಬು ಜೊತೆ ಪ್ರೀತಿಯ ನಾಟಕವಾಡುತ್ತಲೇ ಮಹೀಪ್ ಜೊತೆ ಪ್ರಣಯದಾಟವನ್ನು ಸಂಜಯ್ ಕಪೂರ್ ಆಡುತ್ತಿದ್ದರು.

he-was-seeing-her-even-then-sanjay-kapoor-s-one-night-stand-with-maheep-shattered-bond-with-tabu

ಈ ಕಹಿ ಸತ್ಯ ಟಬುಗೆ ಅರ್ಥವಾಗಲು ಹೆಚ್ಚು ದಿನ ಹಿಡಿಯಲಿಲ್ಲ. ಹೀಗಾಗಿಯೇ ಸಂಜಯ್ ಕಪೂರ್ ಜೊತೆಗಿನ ತಮ್ಮ ಸಂಬಂಧವನ್ನು ಮುರಿದುಕೊಂಡು ಟಬು ಎದ್ದು ಹೊರ ಬಂದಿದ್ದರು. ನಾವು ಜೊತೆಯಲ್ಲಿದ್ದಾಗಲೂ ಅವರು ಮಹೀಪ್ ಜೊತೆ ಡೇಟಿಂಗ್ ಮಾಡುತ್ತಿದ್ದರು ಎಂದು ಈ ಹಿಂದೆ ನೀಡಿದ್ದ ಸಂದರ್ಶನವೊಂದರಲ್ಲಿ ಒಪ್ಪಿಕೊಂಡಿದ್ದರು.

ಸದ್ಯ ಟಬು ಮತ್ತು ಸಂಜಯ್ ಕಪೂರ್ ಅವರ ಈ ಲವ್ ಮತ್ತು ದೋಖಾ ಕತೆ ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಅದರಲ್ಲಿಯೂ ''ರೆಡ್ಡಿಟ್‌''ನಲ್ಲಿ ಈ ಕುರಿತು ವ್ಯಾಪಕವಾದ ಚರ್ಚೆ ನಡೆಯುತ್ತಿದೆ.

ಅಂದ್ಹಾಗೇ 2024ರಲ್ಲಿ ''ರೌನಕ್ ರಜನಿ''ಗೆ ಮಹೀಪ್ ಕಪೂರ್ ಸಂದರ್ಶನವನ್ನು ನೀಡಿದ್ದರು. ಆ ಸಂದರ್ಶನದಲ್ಲಿ ಮಹೀಪ್ ನಮ್ಮ ಸಂಬಂಧ ಶುರುವಾಗಿದ್ದೇ ''ಒನ್ ನೈಟ್ ಸ್ಟ್ಯಾಂಡ್'' ಮೂಲಕ ಎಂದು ಹೇಳಿದ್ದರು. ಅದೊಂದು ದಿನ ಸಂಜಯ್ ಕಪೂರ್ ಮನೆಯಲ್ಲಿ ಪಾರ್ಟಿ ಇತ್ತು. ಆದರೆ ನನಗೆ ಆಹ್ವಾನ ಇರಲಿಲ್ಲ. ಆದರೂ ಕೂಡ ನಾನು ಆ ಜಗಮಗಿಸುವ ಪಾರ್ಟಿಗೆ ತೆರಳಿದ್ದೆ ಕಂಠಪೂರ್ತಿ ಕುಡಿದಿದ್ದೇ ಎಂದಿದ್ದ ಮಹೀಪ್ ಕುಡಿದ ಮತ್ತಿನಲ್ಲಿಯೇ ನಾನು ಸಂಜಯ್ ಕಪೂರ್ ಅವರ ಸಂಪೂರ್ಣ ಕುಟುಂಬವನ್ನು ಭೇಟಿಯಾದೆ, ಅನಿಲ್ ಕಪೂರ್, ಸುನಿತಾ, ಶ್ರೀದೇವಿ ಹೀಗೆ ಎಲ್ಲರನ್ನು ಮಾತನಾಡಿಸಿದೆ ಎಂದು ಹೇಳಿದ್ದರು. ಆ ನಂತರ ನಡೆಯಬಾರದ್ದು ನಡೆಯಿತು, ನಮ್ಮ ನಡುವೆ ದೈಹಿಕ ಸಂಪರ್ಕ ಬೆಳೆಯಿತು ಎಂದು ಹೇಳಿದ್ದರು.

ಇದಕ್ಕೂ ಮುನ್ನ ನೀಡಿದ್ದ ಸಂದರ್ಶನವೊಂದರಲ್ಲಿ ನನ್ನ ಗಂಡ ಅನೇಕ ಯುವತಿಯರ ಜೊತೆ ಅನೈತಿಕ ಸಂಬಂಧ ಹೊಂದಿದ್ದರು, ಆದರೂ ನಾನು ಎಲ್ಲವೂ ಗೊತ್ತಿದ್ದು ಸುಮ್ಮನಾದೆ ಅಂದಿದ್ದರು ಮಹೀಪ್. ಬದುಕಿನ ಅನಿವಾರ್ಯತೆ ಎಲ್ಲವನ್ನೂ ಕಲಿಸುತ್ತೆ ಎಂದಿದ್ದ ಮಹೀಪ್, ಸಂಜಯ್ ಕಪೂರ್ ಅವರ ಈ ಕಾಮದಾಹದ ಕಥೆ ಗೊತ್ತಾದಾಗ ಎಲ್ಲರಂತೆ ನಾನು ವಿಚ್ಛೇದನ ಪಡೆಯಲು ನಿರ್ಧಾರ ಮಾಡಿದ್ದೆ, ಮಗಳು ಶನಾಯಾ ಜೊತೆ ಮನೆಯಾಚೆ ಹೋಗಬೇಕೆಂದುಕೊಂಡಿದ್ದೇ ಆದರೆ ಆಗಷ್ಟೇ ಮಗ ಜಹಾನ್ ಕಪೂರ್ ಜನಿಸಿದ್ದ. ಈ ಕಾರಣಕ್ಕೆ ಹೆಣ್ಣಾಗಿ.. ತಾಯಿಯಾಗಿ.. ನನ್ನ ಕಷ್ಟ ಮತ್ತು ದು:ಖಗಳನ್ನ ಮರೆಯಬೇಕಾಯಿತು ಎಂದಿದ್ದರು. ಮಕ್ಕಳಿಂದ ತಂದೆಯ ಪ್ರೀತಿಯನ್ನ ಕಸಿದುಕೊಳ್ಳುವ ಬದಲು ನೋವನ್ನ ನುಂಗಿ ಅವರ ಜೊತೆಯಲ್ಲಿ ಇರುವ ನಿರ್ಧಾರವನ್ನ ಮಾಡಿದೆ ಎಂದು ಮಹೀಪ್ ಕಪೂರ್ ಹೇಳಿದ್ದರು.

Sanjay Kapoor and Tabu story
byu/Red99it inBollyBlindsNGossip

More from Filmibeat

English summary
Discover the truth behind the Sanjay Kapoor-Tabu split. From secret trysts to a life-altering encounter with Maheep Kapoor, here is the real story of their fallout.
Read more about: tabu breakup bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X