ರಕ್ಷಿತ್ ಶೆಟ್ಟಿ ಬಹುವಾಗಿ ಮೆಚ್ಚುವ ಐದು ಸಿನಿಮಾ ನಿರ್ದೇಶಕರಿವರು

ಕನ್ನಡದಲ್ಲಿ ನಟ ಹಾಗೂ ನಿರ್ದೇಶನ ಎರಡೂ ಮಾಡಿ ಯಶಸ್ವಿಯಾದವರ ಪರಂಪರೆ ಇದೆ. ಕನ್ನಡ ಸಿನಿಮಾ ಆರಂಭದ ದಿನಗಳಿಂದಲೂ ಈ ಪರಂಪರೆ ಮುಂದುವರೆಯುತ್ತಲೇ ಬಂದಿದೆ.

ನಟನೆ-ನಿರ್ದೇಶನ ಎರಡನ್ನೂ ಮಾಡಿ ಗೆದ್ದವರ ಸಂಖ್ಯೆ ಕಡಿಮೆಯಾದರೂ ದಶಕಕ್ಕೆ ಒಬ್ಬರಾದರೂ ಅಂಥಹಾ ಪ್ರತಿಭಾವಂತರು ಬಂದು ಮಿನುಗುತ್ತಾರೆ. ಅಂಥಹವರಲ್ಲಿ ಪ್ರಮುಖರು ಶಂಕರ್‌ ನಾಗ್, ರವಿಚಂದ್ರನ್, ಉಪೇಂದ್ರ, ಸುದೀಪ್. ನಟ ರಕ್ಷಿತ್ ಶೆಟ್ಟಿ ಸಹ ಈ ಪಟ್ಟಿಗೆ ಸೇರಿದ್ದಾರೆ.

ರಕ್ಷಿತ್ ಶೆಟ್ಟಿ ಈವರೆಗೆ ನಿರ್ದೇಶಿಸಿರುವುದು ಒಂದೇ ಕನ್ನಡ ಸಿನಿಮಾ ಆದರೂ, ಆ ಒಂದೇ ಸಿನಿಮಾ ಮೂಲಕ ತಾವೊಬ್ಬ ಪ್ರತಿಭಾವಂತ ನಿರ್ದೇಶಕ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇದೀಗ ತಮ್ಮ ಎರಡನೇ ಸಿನಿಮಾದ ನಿರ್ದೇಶನಕ್ಕೆ ಕೈ ಹಾಕುವುದರಲ್ಲಿದ್ದಾರೆ. ಈ ನಡುವೆ ಪ್ರತಿಭಾವಂತ ನಿರ್ದೇಶಕ, ತಾನು ಮೆಚ್ಚುವ ನಿರ್ದೇಶಕರ ಯಾರು ಎಂಬುದನ್ನು ಹೇಳಿಕೊಂಡಿರುವ ಯೂಟ್ಯೂಬ್ ವಿಡಿಯೋ ವೈರಲ್ ಆಗಿದೆ.

ನೆಚ್ಚಿನ ನಿರ್ದೇಶಕ ಕ್ವಿಂಟೆನ್ ಟೆರಂಟೀನೊ

ನೆಚ್ಚಿನ ನಿರ್ದೇಶಕ ಕ್ವಿಂಟೆನ್ ಟೆರಂಟೀನೊ

'ಫಿಲಂ ಕಂಪ್ಯಾನಿಯನ್ ಸೌಥ್'ಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ನೆಚ್ಚಿನ ನಿರ್ದೇಶಕರನ್ನು ಹೆಸರಿಸಿರುವ ರಕ್ಷಿತ್ ಶೆಟ್ಟಿ, ತಮಗೆ ಅಮೆರಿಕದ ಸಿನಿಮಾ ನಿರ್ದೇಶಕ ಕ್ವಿಂಟೆನ್ ಟೆರಂಟೀನೊ ಬಹಳ ಇಷ್ಟವೆಂದು ಹೇಳಿದ್ದಾರೆ. ತಮ್ಮ ಅನುಭವಕ್ಕೆ ಬಂದ ಘಟನೆಗಳನ್ನು ಸಿನಿಮಾ ಮಾಡುವ ರೀತಿ ನನಗೆ ಇಷ್ಟ. ನಾನೂ ಸಹ ನನ್ನ ಅನುಭವಕ್ಕೆ ಬಂದ, ನಾನು ಕಂಡ ವಿಷಯಗಳನ್ನು ಸಿನಿಮಾ ಮಾಡುತ್ತೇನೆ. ಟೆರಂಟೀನೊ ಒಬ್ಬ ಅದ್ಭುತ ನಿರ್ದೇಶಕ, ಸಾಂಪ್ರದಾಯಿಕ ಸಿನಿಮಾ ಕತೆ ಹೇಳುವ ವಿಧಾನವನ್ನು ಮುರಿದು ಮತ್ತೆ ಕಟ್ಟಿದವರವರು ಎಂದಿದ್ದಾರೆ. 'ಪಲ್ಪ್ ಫಿಕ್ಷನ್', 'ಕಿಲ್ ಬಿಲ್', ಡಿಜಾಂಗೊ ಅನ್‌ಚೈನ್ಡ್' ಇನ್ನೂ ಹಲವು ಅತ್ಯುತ್ತಮ ಸಿನಿಮಾಗಳನ್ನು ನೀಡಿದ್ದಾರೆ.

ಕ್ರಿಸ್ಟೊಫರ್ ನೋಲನ್ ನೆಚ್ಚಿನ ನಿರ್ದೇಶಕ

ಕ್ರಿಸ್ಟೊಫರ್ ನೋಲನ್ ನೆಚ್ಚಿನ ನಿರ್ದೇಶಕ

ಪ್ರಸ್ತುತ ಕಾಲದ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರಾದ ಕ್ರಿಸ್ಟೊಫರ್ ನೋಲನ್, ರಕ್ಷಿತ್ ಶೆಟ್ಟಿಗೂ ಬಹಳ ಇಷ್ಟವಂತೆ. ಕ್ರಿಸ್ಟೋಫರ್ ನೋಲನ್ ಮಾದರಿಯ ಇನ್ನೊಬ್ಬ ನಿರ್ದೇಶಕ ಇಲ್ಲ. ಕದಿಯಲೇ ಆಗದ ಮಾದರಿ ಅವರದ್ದು. ಕತೆಯೊಂದನ್ನು ಎಷ್ಟು ಮಜಲುಗಳಲ್ಲಿ ಹೇಳಬಹುದು ಎಂದು ಆಶ್ಚರ್ಯವಾಗುವಂತೆ ಚಿತ್ರಕತೆ ಕಟ್ಟುತ್ತಾರೆ ಮತ್ತು ಪ್ರೇಕ್ಷಕ ಅವಾಕ್ಕಾಗುವಂತೆ ಅದನ್ನು ತೆರೆಗೆ ತರುತ್ತಾರೆ. 'ದಿ ಡಾರ್ಕ್‌ ನೈಟ್', 'ಮುಮೆಂಟೊ', 'ಇನ್‌ಸೆಪ್ಷನ್', 'ಇಂಟರ್‌ಸ್ಟೆಲ್ಲರ್', 'ಡಂಕಿರ್ಕ್' ಮತ್ತು ಇತ್ತೀಚಿನ ಹಿಟ್ 'ಟೆನೆಟ್' ಸಿನಿಮಾ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

ಅನುರಾಗ್ ಕಶ್ಯಪ್ ಸಿನಿಮಾಗಳು ಇಷ್ಟ

ಅನುರಾಗ್ ಕಶ್ಯಪ್ ಸಿನಿಮಾಗಳು ಇಷ್ಟ

ಭಾರತೀಯ ಚಿತ್ರರಂಗಕ್ಕೆ ಭಿನ್ನ ಮಾದರಿಯ ಪರ್ಯಾಯ ಸಿನಿಮಾಗಳನ್ನು ನೀಡಿದ ಕೀರ್ತಿ ಸಲ್ಲುವುದು ಅನುರಾಗ್ ಕಶ್ಯಪ್‌ಗೆ. ಇದೇ ಕಾರಣಕ್ಕೆ ರಕ್ಷಿತ್ ಶೆಟ್ಟಿಗೆ ಈ ನಿರ್ದೇಶಕ ಅಚ್ಚು-ಮೆಚ್ಚು. ಜೀವನವನ್ನು ಸಾಧ್ಯಂತರ ಹಸಿ-ಹಸಿಯಾಗಿ ಸಿನಿಮಾದ ತೆರೆಯ ಮೇಲೆ ಕತೆಯ ಚೌಕಟ್ಟಿನಲ್ಲಿಟ್ಟು ಕಟ್ಟಕೊಟ್ಟವರು ಅನುರಾಗ್ ಕಶ್ಯಪ್. ಭಾರತದ ವಿಭಿನ್ನ ಹಾಗೂ ಅತ್ಯುತ್ತಮ ಸಿನಿಮಾ ನಿರ್ದೇಶಕ ಅನುರಾಗ್ ಕಶ್ಯಪ್. 'ಗ್ಯಾಂಗ್ಸ್‌ ಆಫ್ ವಾಸೇಂಪುರ್', 'ಬ್ಲಾಕ್ ಫ್ರೈಡೇ', 'ನೋ ಸ್ಮೋಕಿಂಗ್', 'ದೇವ್ ಡಿ' ಇನ್ನೂ ಹಲವು ಸಿನಿಮಾಗಳನ್ನು ಅನುರಾಗ್ ಕಶ್ಯಪ್ ನೀಡಿದ್ದಾರೆ.

ಶಂಕರ್ ನಾಗ್ ಬಗ್ಗೆ ಬಹಳ ಗೌರವ

ಶಂಕರ್ ನಾಗ್ ಬಗ್ಗೆ ಬಹಳ ಗೌರವ

ಕನ್ನಡದ ಶಂಕರ್ ನಾಗ್, ರಕ್ಷಿತ್ ಶೆಟ್ಟಿಯ ಮೆಚ್ಚಿನ ನಿರ್ದೇಶಕರಲ್ಲಿ ಒಬ್ಬರು. ತಾವೂ ಒಬ್ಬ ನಟ, ನಿರ್ದೇಶಕ ಆಗಿದ್ದು, ಶಂಕರ್ ನಾಗ್ ಸಹ ನಟ ಹಾಗೂ ನಿರ್ದೇಶಕ ಆಗಿರುವುದರಿಂದ ರಕ್ಷಿತ್‌ಗೆ ಶಂಕರ್‌ ನಾಗ್ ಬಗ್ಗೆ ವಿಶೇಷ ಗೌರವ. ಅವರು ಅತಿ ಕಡಿಮೆ ವಯಸ್ಸಿನಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದರು ಮತ್ತು ಹಲವು ಅತ್ಯುತ್ತಮ ಸಿನಿಮಾಗಳನ್ನು ನಿರ್ದೇಶನ ಮಾಡಿದರು ಮತ್ತು ಪ್ರತಿ ಸಿನಿಮಾದಲ್ಲಿಯೂ ಹೊಸದನ್ನು ನೀಡುವ ಯತ್ನ ಮಾಡಿದರು. ಹಾಗೂ ಮಾಲ್ಗುಡಿ ಡೇಸ್ ಎಂಬ ಅತ್ಯುತ್ತಮ ಧಾರಾವಾಹಿನ್ನು ನೀಡಿದರು. ಅಷ್ಟು ಕಡಿಮೆ ವಯಸ್ಸಿನಲ್ಲಿ, ಬದುಕಿದ್ದ ಕಡಿಮೆ ಅವಧಿಯಲ್ಲಿ ಅಷ್ಟನ್ನೆಲ್ಲ ಅವರು ಮಾಡಿ ಹೋದದ್ದು ನಮಗೆ ಸ್ಪೂರ್ತಿ ಎಂದಿದ್ದಾರೆ ರಕ್ಷಿತ್ ಶೆಟ್ಟಿ.

ಉಪೇಂದ್ರ ಸಿನಿಮಾಗಳ ಅಭಿಮಾನಿ ರಕ್ಷಿತ್ ಶೆಟ್ಟಿ

ಉಪೇಂದ್ರ ಸಿನಿಮಾಗಳ ಅಭಿಮಾನಿ ರಕ್ಷಿತ್ ಶೆಟ್ಟಿ

ಉಪೇಂದ್ರರ ನಿರ್ದೇಶನ ರಕ್ಷಿತ್ ಶೆಟ್ಟಿಗೆ ಬಹಳ ಇಷ್ಟ. ಕನ್ನಡ ಚಿತ್ರರಂಗದಲ್ಲಿ ಕತೆಗಳನ್ನು ಹೇಳುವ ವಿಧಾನವನ್ನು ಮುರಿದವರು ಉಪೇಂದ್ರ. ಮಾಸ್ ಪ್ರೇಕ್ಷಕರನ್ನು ರಂಜಿಸಿದ ಉಪೇಂದ್ರ, ನನ್ನಂಥಹಾ ವಿದೇಶಿ ಸಿನಿಮಾಗಳನ್ನೂ ನೋಡುವ ಪ್ರೇಕ್ಷಕನನ್ನೂ ಏಕಕಾಲದಲ್ಲಿ ಸೆಳೆದಿದ್ದಾರೆ. ಅವರು ಕತೆ ಹೇಳುವ ಮಾದರಿ ಭಿನ್ನವಾದುದು ಅವರ ಸಿನಿಮಾಗಳಿಗೆ ನಾನು ಮೊದಲಿನಿಂದಲೂ ಅಭಿಮಾನಿ ಎಂದಿದ್ದಾರೆ ರಕ್ಷಿತ್ ಶೆಟ್ಟಿ. ಅವರು ನಟಿಸಿರುವ 'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ಉಪೇಂದ್ರ ಸಿನಿಮಾಗಳ ಬಗ್ಗೆಯೇ ಒಂದು ದೃಶ್ಯ ಸಹ ಇದೆ.

More from Filmibeat

English summary
Here is Rakshit Shetty's most favorite five movie directors. He watch world cinema and Indian cinema both. So named Indian and international directors.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X