ಇಲ್ಲಿವೆ ಕನ್ನಡ ಚಿತ್ರರಂಗದ ಕೆಲವು ಮೊದಲುಗಳು

By ಫಿಲ್ಮಿಬೀಟ್ ಡೆಸ್ಕ್

ಕನ್ನಡ ಚಿತ್ರರಂಗದ ಸುವರ್ಣಯುಗ ಮತ್ತೆ ಬಂದಿದೆ. ಒಂದರ ಹಿಂದೊಂದು ಸಿನಿಮಾಗಳು ಹಿಟ್ ಆಗುತ್ತಿವೆ, ಸೂಪರ್ ಹಿಟ್ ಆಗುತ್ತಿವೆ. ರಾಷ್ಟ್ರ ಮಾತ್ರವಲ್ಲ ವಿದೇಶಗಳಲ್ಲಿಯೂ ಗಮನ ಸೆಳೆಯುತ್ತಿವೆ. ಹಲವು ದಾಖಲೆಗಳನ್ನು ಕನ್ನಡ ಸಿನಿಮಾಗಳು ಸೃಷ್ಟಿಮಾಡುತ್ತಿವೆ.

ಕನ್ನಡ ಚಿತ್ರರಂಗದಲ್ಲಿ ದಾಖಲೆಗಳಿಗೆ ಮೊದಲುಗಳಿಗೆ ಕಡಿಮೆಯಿಲ್ಲ. ಹಲವು ದಾಖಲೆಗಳನ್ನು ಕನ್ನಡ ಚಿತ್ರರಂಗ ಮಾಡಿದೆ. ಮಾಡುತ್ತಲೇ ಇದೆ.

ಕನ್ನಡ ಚಿತ್ರರಂಗದ ಕೆಲವು ಮೊದಲುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ನಿಮಗೆ ತಿಳಿದ ಇನ್ನಷ್ಟು ಮೊದಲುಗಳನ್ನು ನೀವು ಕಮೆಂಟ್‌ ಸೆಕ್ಷನ್‌ನಲ್ಲಿ ಸೇರಿಸಬಹುದು.

Here Is Some Firsts Of Kannada Movie Industry

ಕನ್ನಡ ಚಿತ್ರರಂಗದ ಪ್ರಥಮಗಳು

ಕನ್ನಡ ಚಿತ್ರರಂಗದ ಮೊದಲ ನಾಯಕ ನಟ ಸುಬ್ಬಯ್ಯ ನಾಯ್ಡು

ಮೊದಲ ಟಾಕಿ ಸಿನಿಮಾ ಸತಿ ಸುಲೋಚನಾ

ಮೊದಲ ರೀಮೇಕ್ ಸಿನಿಮಾ 'ಬೆಟ್ಟದ ಕಳ್ಳ' ಕಲ್ಯಾಣ್ ಕುಮಾರ್ ನಾಯಕ

ಮೊದಲು ರಾಷ್ಟ್ರಪ್ರಶಸ್ತಿ ಪಡೆದ ಸಿನಿಮಾ 'ಬೇಡರ ಕಣ್ಣಪ್ಪ'

ಮೊದಲ ಕಲರ್ ಸಿನಿಮಾ 'ಅಮರಶಿಲ್ಪಿ ಜಕಣಾಚಾರಿ'

ಮೊದಲ ಆರ್ಟ್‌ ಸಿನಿಮಾ ಅಥವಾ ಪರ್ಯಾಯ ಸಿನಿಮಾ 'ಮಚ್ಛಕಟಿಕ'

ಮೊದಲ ಕಾದಂಬರಿ ಆಧರಿತ ಸಿನಿಮಾ 'ಕಾಡು'

ಕರ್ನಾಟಕದ ಮೊದಲ ಚಿತ್ರಮಂದಿರ 'ಪ್ಯಾರಾ ಮೌಂಟ್' ನಿರ್ಮಾಣ 1920

1951 ರಲ್ಲಿ ಬಿಡುಗಡೆ ಆದ 'ಜಗನ್ಮೋಹಿನಿ' ಮೊದಲ ಶತದಿನ ಆಚರಿಸಿಕೊಂಡ ಕನ್ನಡ ಸಿನಿಮಾ

ಮೊದಲ ಆಕ್ಷನ್ ಅಥವಾ ಬಾಂಡ್ ಮಾದರಿ ಸಿನಿಮಾ 'ಜೇಡರ ಬಲೆ'

ಮೊದಲ ಸಿನಿಮಾ ಸ್ಕೋಪ್ ಸಿನಿಮಾ 'ಸೊಸೆ ತಂದ ಸೌಭಾಗ್ಯ'

ಮೊದಲ ಅರಣ್ಯ ಸಂರಕ್ಷಣಾ ಸಂದೇಶವುಳ್ಳ ಸಿನಿಮಾ 'ಗಂಧದ ಗುಡಿ'

ಮೊದಲು ವಿದೇಶದಲ್ಲಿ ಚಿತ್ರೀಕರಣಗೊಂಡ ಕನ್ನಡ ಸಿನಿಮಾ 'ಸಿಂಗಾಪುರದಲ್ಲಿ ರಾಜ-ಕುಳ್ಳ'

ಮೊದಲ ಸ್ಲೋಮೋಷನ್ ಹಾಡು 'ನಾಗರಹಾವು' ಸಿನಿಮಾದ 'ಬಾರೆ-ಬಾರೆ'

ಮೊದಲ ಬಾರಿ ನೀರಿನಾಳದಲ್ಲಿ ಚಿತ್ರೀಕರಣ ನಡೆಸಿದ ಸಿನಿಮಾ 'ಒಂದು ಮುತ್ತಿನ ಕತೆ'

ಮೊದಲ ಈಸ್ಟ್‌ಮನ್ ಕಲರ್ ಸಿನಿಮಾ 'ಗಂಧದ ಗುಡಿ'

ಕನ್ನಡದ ಮೊದಲ 3ಡಿ ಸಿನಿಮಾ 'ಕಠಾರಿವೀರ ಸುರಸುಂದರಾಂಗಿ'

ಅತಿ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಸಿನಿಮಾ 'ಕೆಜಿಎಫ್ 2'

ಅತಿ ಹೆಚ್ಚು ಬಾರಿ ಬಿಡುಗಡೆ ಆದ ಕನ್ನಡ ಸಿನಿಮಾ 'ಓಂ'

ಮಲ್ಟಿಪ್ಲೆಕ್ಸ್‌ನಲ್ಲಿ ಒಂದು ವರ್ಷ ಓಡಿದ ಮೊದಲ ಕನ್ನಡ ಸಿನಿಮಾ 'ಮಿಲನ'

ಹಲವು ಭಾಷೆಗಳಲ್ಲಿ ಡಬ್ ಆದ ಮೊದಲ ಕನ್ನಡ ಸಿನಿಮಾ 'ಮಹಿಷಾಸುರ ಮರ್ದಿನಿ' ಎಂಟು ಭಾಷೆಗಳಿಗೆ ಡಬ್ ಆಗಿತ್ತು.

More from Filmibeat

English summary
Here is some firsts of Kannada movie industry. Many firsts have created in Kannada movie industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X