For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ ವುಡ್ ನಲ್ಲಿ ಈ ವರ್ಷ ಮದುವೆ ಸಂಭ್ರಮ ಬಲು ಜೋರು

  |

  ಹೊಸ ಹೊಸ ಸಿನಿಮಾಗಳು, ವಿವಾದಗಳು, ಟ್ರೋಲ್, ಕಲೆಕ್ಷನ್ ಫ್ಲಾಪ್, ಪೈರಸಿ, ಸ್ಟಾರ್ ವಾರ್ ಹೀಗೆ ಸಾಕಷ್ಟು ವಿಚಾರಗಳಲ್ಲಿ ಸದ್ದು ಮಾಡಿರುವ ಸ್ಯಾಂಡಲ್ ವುಡ್ ನಲ್ಲಿ ಈ ವರ್ಷ ಮದುವೆಯ ಸಂಭ್ರಮ ಕೂಡ ಜೋರಾಗಿತ್ತು.

  ಕಿರುತೆರೆ ಮತ್ತು ಸ್ಯಾಂಡಲ್ ವುಡ್ ಸ್ಟಾರ್ ಸಾಕಷ್ಟು ಮಂದಿ ಈ ವರ್ಷ ಸಪ್ತಪದಿ ತುಳಿಸಿದ್ದಾರೆ. ಈ ವರ್ಷದ ಮದುವೆ ಸಮಾರಂಭದ ಫ್ಲ್ಯಾಶ್ ಬ್ಯಾಕ್ ನೋಡಿದರೆ ಕಿರುತೆರೆ ಕಲಾವಿದರೆ ಹೆಚ್ಚಾಗಿ ಕಾಣಿಸುತ್ತಾರೆ. ಸ್ಯಾಂಡಲ್ ವುಡ್ ನಲ್ಲಿ ನಟರಾದ ರಿಷಿ ಮತ್ತು ಧ್ರುವ ಸರ್ಜಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರೆ, ಕಿರುತೆರೆಯಲ್ಲಿ ಸಾಕಷ್ಟು ಜೋಡಿ ಹೊಸ ಜೀವನ ಪ್ರಾರಂಭಿಸಿದ್ದಾರೆ. ಈ ವರ್ಷ ಯಾರೆಲ್ಲಾ ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು ಅಂತ ಒಮ್ಮೆ ಫ್ಲ್ಯಾಶ್ ಬ್ಯಾಕ್ ಗೆ ಹೋಗಿ ಬರೋಣ...

  ಬಿಗ್ ಬಾಸ್ ಅಯ್ಯಪ್ಪ-ನಟಿ ಅನು

  ಬಿಗ್ ಬಾಸ್ ಅಯ್ಯಪ್ಪ-ನಟಿ ಅನು

  ಕ್ರಿಕೆಟ್ ಆಟಗಾರ ಹಾಗೂ ಬಿಗ್ ಬಾಸ್ ಕನ್ನಡದ ಸ್ಪರ್ಧಿ ಅಯ್ಯಪ್ಪ ವಿವಾಹ ನಟಿ ಅನು ಜೊತೆ ಜನವರಿ ತಿಂಗಳಲ್ಲಿ ಹಸೆಮಣೆ ಏರಿದ್ದಾರೆ. ಕೊಡಗಿನ ವಿರಾಜಪೇಟೆಯಲ್ಲಿ ಅಯ್ಯಪ್ಪ ಹಾಗೂ ಅನು ಪೂವಮ್ಮ ಕಲ್ಯಾಣೋತ್ಸವ ನಡೆದಿದೆ. ಅಯ್ಯಪ್ಪ ಹಾಗೂ ಅನು ವಿವಾಹ ಕೊಡವ ಸಂಪ್ರದಾಯದಂತೆ ಜರುಗಿದೆ. ಅನು ಸ್ಯಾಂಡಲ್ ವುಡ್ ನಲ್ಲಿ ಕೆಲವು ಸಿನಿಮಾಗಳನ್ನು ಮಾಡಿದ್ದಾರೆ. ಕಥಾ ವಿಚಿತ್ರ, ಕರ್ವ, ಪಾನಿಪೂರಿ, ಲೈಫ್ ಸೂಪರ್ ಹೀಗೆ ಕೆಲವು ಚಿತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

  ನಟಿ ಅನು ಜೊತೆಗೆ 'ಬಿಗ್ ಬಾಸ್' ಅಯ್ಯಪ್ಪ ವಿವಾಹ

  ಅಗ್ನಿಸಾಕ್ಷಿ ವಿಜಯ್- ಚೈತ್ರಾ

  ಅಗ್ನಿಸಾಕ್ಷಿ ವಿಜಯ್- ಚೈತ್ರಾ

  ಪ್ರೇಮಿಗಳ ದಿನದಂದೇ ಅಂದರೆ ಫೆಬ್ರವರಿ 14ರಂದೆ ಡಿಂಪಲ್ ಹುಡುಗ ವಿಜಯ್ ಸೂರ್ಯ ವಿವಾಹ ಮಾಡಿಕೊಂಡಿದ್ದಾರೆ. ಅವರದ್ದು ಲವ್ ಮ್ಯಾರೇಜ್ ಅಲ್ಲ. ಕುಟುಂಬದವರು ನೋಡಿದ ಹೆಣ್ಣನ್ನೇ ವಿಜಯ್ ಸೂರ್ಯ ಕೈಹಿಡಿದಿದ್ದಾರೆ. ದೂರದ ಸಂಬಂಧಿ ಚೈತ್ರಾ ಎಂಬುವರ ಜೊತೆಗೆ ವಿಜಯ್ ಸೂರ್ಯ ಸಪ್ತಪದಿ ತುಳಿದಿದ್ದಾರೆ. ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಚೈತ್ರಾ ಮತ್ತು ವಿಜಯ್ ಸೂರ್ಯ ಫ್ಯಾಮಿಲಿ ನಡುವೆ 9 ವರ್ಷಗಳಿಂದ ಪರಿಚಯ ಇದೆ.

  ಚಿತ್ರಗಳು: ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಅಗ್ನಿ ಸಾಕ್ಷಿ' ನಟ ವಿಜಯ್ ಸೂರ್ಯ

  ಸಿಸಿಎಲ್ ಆಟಗಾರ ರಾಜೀವ್-ರೇಷ್ಮಾ

  ಸಿಸಿಎಲ್ ಆಟಗಾರ ರಾಜೀವ್-ರೇಷ್ಮಾ

  ನಟ ಹಾಗೂ ಸಿಸಿಎಲ್ ಆಟಗಾರ ರಾಜೀವ್ ಗೆಳತೆ ರೇಷ್ಮಾ ಜೊತೆ ಫೆಬ್ರವರಿಯಲ್ಲಿ ಹಸೆಮಣೆ ಏರಿದ್ದಾರೆ. ರಾಜೀವ್ ಸಿನಿಮಾಗಿಂತ ಹೆಚ್ಚಾಗಿ ಸಿಸಿಎಲ್ ಮೂಲಕ ಹೆಚ್ಚು ಗುರುತಿಸಿಕೊಂಡಿದ್ದಾರೆ. ಕಿಚ್ಚ ಸುದೀಪ್ ಗೆಳೆಯರ ಬಳಗದಲ್ಲಿ ಗುರುತಿಸಿಕೊಂಡಿರುವ ನಟ ರಾಜೀವ್. ಇವರ ಮದುವೆಗೆ ಸುದೀಪ್ ದಂಪತಿ ಹಾಜರಾಗಿ ಆಶೀರ್ವಾದ ಮಾಡಿ ಹಾರೈಸಿದ್ದರು.

  CCL ಆಟಗಾರ ರಾಜೀವ್ ಮದುವೆಯಲ್ಲಿ ಸುದೀಪ್ ದಂಪತಿ ಭಾಗಿ

  ಅನನ್ಯ ಕಾಸರವಳ್ಳಿ-ಸಂತೋಷ್

  ಅನನ್ಯ ಕಾಸರವಳ್ಳಿ-ಸಂತೋಷ್

  ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ಪುತ್ರಿ ಅನನ್ಯ ಕಾಸರವಳ್ಳಿ ಫಬ್ರವರಿ ತಿಂಗಳಲ್ಲಿ ಹಸೆಮಣೆ ಏರಿದ್ದಾರೆ. ಸಂತೋಷ ಅವರೊಂದಿಗೆ ಅನನ್ಯ ಕಾಸರವಳ್ಳಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅನನ್ಯ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಿರ್ದೇಶಕಿ ಮತ್ತು ನಟಿ. ರ್ದೇಶಿಸುವುದರಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ. 'ಬೆಳದಿ ಹರಿಶ್ಚಂದ್ರ' ಇವರ ನಿರ್ದೇಶಿಸಿದ ಮೊದಲ ಚಿತ್ರ. ನಂತರ ಯಕ್ಷಗಾನ ಕುರಿತಾದ 'ಹರಿಕಥಾ ಪ್ರಸಂಗ' ಚಿತ್ರವನ್ನು ಚಿತ್ರವನ್ನು ನಿರ್ದೇಶಿಸಿದ್ದಾರೆ. 'ಕಪ್ಪು ಕಲ್ಲಿನ ಸೈತಾನ' ಎಂಬ ಡಾಕುಮೆಂಟರಿಯನ್ನು ಕೂಡ ಮಾಡಿದ್ದಾರೆ.

  ಹಸೆಮಣೆ ಏರಿದ ಗಿರೀಶ್ ಕಾಸರವಳ್ಳಿ ಪುತ್ರಿ ಅನನ್ಯ ಕಾಸರವಳ್ಳಿ

  ಕಿರುತೆರೆ ನಟಿ ವಚನಾ-ರಘು

  ಕಿರುತೆರೆ ನಟಿ ವಚನಾ-ರಘು

  ಕುಲವಧು ಧಾರಾವಾಹಿ ವಚನಾ ಖ್ಯಾತಿಯ ನಟಿ ಅಮೃತಾ ಇದೆ ವರ್ಷ ಹಸೆಮಣೆ ಏರಿದ್ದಾರೆ. ಕಿರುತೆರೆ ನಟ ರಘು ಜೊತೆ ಅಮೃತಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಿಸ್ಟರ್ ಅಂಡ್ ಮಿಸಸ್ ರಂಗೇಗೌಡ' ಧಾರಾವಾಹಿಯಲ್ಲಿ ಒಟ್ಟಿಗೆ ಅಭಿನಯಿಸಿದ್ದ ರಘು ಮತ್ತು ಅಮೃತಾ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಇಬ್ಬರ ಪ್ರೀತಿಗೆ ಕುಟುಂಬದವರು ಒಪ್ಪಿಗೆ ಪಡೆದು ಹಸೆಮಣೆ ಏರಿದ್ದಾರೆ.

  ಕಿರುತೆರೆ ನಟಿ 'ಕುಲವಧು' ವಚನಾಗೆ ಕಂಕಣ ಬಲ ಕೂಡಿ ಬಂದಿದೆ.!

  ಯುವರಾಜ್ ಕುಮಾರ್- ಶ್ರೀದೇವಿ

  ಯುವರಾಜ್ ಕುಮಾರ್- ಶ್ರೀದೇವಿ

  ಡಾ.ರಾಜ್ ಕುಮಾರ್ ಮೊಮ್ಮಗ ಯುವರಾಜ್ ಕುಮಾರ್ ಮತ್ತು ಶ್ರೀದೇವಿ ಇದೆ ವರ್ಷ ಹಸೆಮಣೆ ಏರಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಎರಡನೆ ಪುತ್ರ ಯುವ ಗೆಳತಿ ಶ್ರೀದೇವಿ ಭೈರಪ್ಪ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರು ಮೂಲದವರಾದ ಶ್ರೀದೇವಿ ಭೈರಪ್ಪ ಡಾ.ರಾಜ್ ಮನೆಯ ಸೊಸೆಯಾಗಿದ್ದಾರೆ. ಯುವ ರಾಜ್ ಕುಮಾರ್ ಚಿತ್ರಕ್ಕೆ ಎಂಟ್ರಿ ಕೊಡಲು ಸಜ್ಜಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

  ಹಸೆಮಣೆ ಏರಿದ ಯುವರಾಜ್ ಕುಮಾರ್ - ಶ್ರೀದೇವಿ

  ಕಿರುತೆರೆ ನಟಿ ಐಶ್ವರ್ಯ-ಹರಿವಿನಯ್

  ಕಿರುತೆರೆ ನಟಿ ಐಶ್ವರ್ಯ-ಹರಿವಿನಯ್

  'ಸರ್ವಮಂಗಳ ಮಾಂಗಲ್ಯೇ' ಖ್ಯಾತಿಯ ನಟಿ ಐಶ್ವರ್ಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ದೀರ್ಘಕಾಲದ ಗೆಳೆಯ ಹರಿವಿನಯ್ ಜೊತೆ ಐಶ್ವರ್ಯ ಸಪ್ತಪದಿ ತುಳಿಸಿದ್ದಾರೆ. ಖಾಸಗಿಯಾಗಿ ನಡೆದ ಅದ್ಧೂರಿ ಮದುವೆ ಕಾರ್ಯಕ್ರಮದಲ್ಲಿ ಐಶ್ವರ್ಯ ಮತ್ತು ಹರಿವಿನಯ್ ಸತಿ-ಪತಿಯರಾಗಿದ್ದಾರೆ. ಇವರ ವಿವಾಹ ಸಮಾರಂಭಕ್ಕೆ ಕುಟುಂಬದವರು, ಸ್ನೇಹಿತರು ಮತ್ತು ಕಿರುತೆರೆಯ ಗಣ್ಯರು ಆಗಮಿಸಿ ನವ ವಧುವರರಿಗೆ ಶುಭ ಹಾರೈಸಿದ್ದಾರೆ.

  ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಸರ್ವಮಂಗಳ ಮಾಂಗಲ್ಯೇ' ಧಾರಾವಾಹಿ ನಟಿ ಐಶ್ವರ್ಯಾ

  ಕ್ರೇಜಿ ಸ್ಟಾರ್ ಪುತ್ರಿಯ ಮದುವೆ

  ಕ್ರೇಜಿ ಸ್ಟಾರ್ ಪುತ್ರಿಯ ಮದುವೆ

  ರವಿಚಂದ್ರನ್ ಪುತ್ರಿ ಗೀತಾಂಜಲಿ ಹಾಗೂ ಅಜಯ್ ವಿವಾಹ ಮೇ ತಿಂಗಳಲ್ಲಿ ನೆರವೇರಿದೆ. ಬೆಂಗಳೂರಿನ ಅರಮನೆ ಮೈದಾನದ ವೈಟ್ ಪೆಟಲ್ಸ್ ನಲ್ಲಿ ನಡೆದ ಅದ್ದೂರಿ ಮದುವೆಗೆ ಇಡೀ ಸ್ಯಾಂಡಲ್ ವುಡು ಸಾಕ್ಷಿಯಾಗಿತ್ತು. ಆರತಕ್ಷತೆ ಕಾರ್ಯಕ್ರಮಕ್ಕೆ ರಜನಿಕಾಂತ್, ಚಿರಂಜೀವಿ, ಪ್ರಭು, ಅನಂತ್ ನಾಗ್, ಉಪೇಂದ್ರ, ಯಶ್, ರಮೇಶ್ ಅರವಿಂದ್, ಶಿವರಾಜ್ ಕುಮಾರ್, ಶ್ರುತಿ, ಸುಧಾರಾಣಿ, ಗಣೇಶ್, ಪ್ರಿಯಾಂಕ ಉಪೇಂದ್ರ ಸೇರಿದಂತೆ ಚಿತ್ರರಂಗದ ಸಾಕಷ್ಟು ದಿಗ್ಗಜರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

  ಪುಟ್ಟಗೌರಿ ಖ್ಯಾತಿಯ ಮಹೇಶ್- ಅನುಷಾ

  ಪುಟ್ಟಗೌರಿ ಖ್ಯಾತಿಯ ಮಹೇಶ್- ಅನುಷಾ

  ಪುಟ್ಟಗೌರಿ' ಧಾರಾವಾಹಿಯ ಮೂಲಕವೆ ಮನೆಮಾತಾಗಿದ್ದ ಮಹೇಶ್ ಅಲಿಯಾಸ್ ರಕ್ಷ್ ಈ ವರ್ಷ ಮದುವೆಯಾದವರ ಪಟ್ಟಿಯಲ್ಲಿ ಇದ್ದಾರೆ. ಬಹುಕಾಲದ ಗೆಳತಿ ಅನುಷಾ ಜೊತೆ ಹಸೆಮಣೆ ಏರುತ್ತಿದ್ದಾರೆ. ರಕ್ಷ್ ಹಾಗೂ ಅನುಷಾ ಮದುವೆ ಬೆಂಗಳೂರಿನ ಅರಮನೆ ಮೈದಾನದ ಶೇಶ್ ಮಹಲ್ ನಲ್ಲಿ ಅದ್ದೂರಿಯಾಗಿ ನಡೆಯಲಿದೆ. ಸದ್ಯ ರಕ್ಷ್ ಗಟ್ಟಿಮೇಳ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.

  ಕಿರುತೆರೆ ನಟ ಜಗನ್- ರಕ್ಷಿತಾ

  ಕಿರುತೆರೆ ನಟ ಜಗನ್- ರಕ್ಷಿತಾ

  ಕಿರುತೆರೆ ಮತ್ತು ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದ ಜಗನ್ನಾಥ್ ಚಂದ್ರಶೇಖರ್ ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜಗನ್ ಬಹುಕಾಲದ ಗೆಳತಿ ರಕ್ಷಿತಾ ಮುನಿಯಪ್ಪ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜಗನ್ ಮತ್ತು ರಕ್ಷಿತಾ ಇಬ್ಬರು ಸುಮಾರು ಮೂರು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಈ ಪ್ರೀತಿ ಈಗ ಇಬ್ಬರನ್ನು ಪತಿ ಪತ್ನಿಯರನ್ನಾಗಿ ಮಾಡಿದೆ. ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರೋಡ್ ನಲ್ಲಿರುವ ಕನ್ವೆಂಷನ್ ಹಾಲ್ ನಲ್ಲಿ ಈ ಜೋಡಿ ಹಸೆಮಣೆ ಏರಿದೆ.

  ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ 'ಪುಟ್ಟಗೌರಿ' ಖ್ಯಾತಿಯ ಮಹೇಶ್

  ಯಜ್ಞ ಶೆಟ್ಟಿ-ಸಂದೀಪ್ ಶೆಟ್ಟಿ

  ಯಜ್ಞ ಶೆಟ್ಟಿ-ಸಂದೀಪ್ ಶೆಟ್ಟಿ

  ಕರಾವಳಿ ಕುವರಿ, ನಟಿ ಯಜ್ಞ ಶೆಟ್ಟಿ ಈ ವರ್ಷ ಹಸೆಮಣೆ ಏರಿದ್ದಾರೆ. ಸದ್ದಿಲ್ಲದೆ ಸಂದೀಪ್ ಶೆಟ್ಟಿ ಎಂಬುವವರ ಜೊತೆಗೆ ಯಜ್ಞ ಶೆಟ್ಟಿ ದಾಂಪತ್ಯ ಕಾಲಿಟ್ಟಿದ್ದಾರೆ. ಕುಟುಂಬ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಮದುವೆ ಮಾಡಿಕೊಂಡಿದ್ದಾರೆ. ಮಂಗಳೂರಿನಲ್ಲಿ ಮದುವೆ ಕಾರ್ಯಕ್ರಮ ನಡೆದಿದೆ. ನಟ ರಕ್ಷಿತ್ ಶೆಟ್ಟಿ, ಪ್ರಮೋದ್ ಶೆಟ್ಟಿ, ನಿರ್ದೇಶಕ ರಿಷಬ್ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಅಂದಹಾಗೆ, ಯಜ್ಞ ಶೆಟ್ಟಿ ಹುಟ್ಟಿದ್ದು, ಕುದುರೆಮುಖದಲ್ಲಿ. ನಂತರ 'ಒಂದು ಪ್ರೀತಿಯ ಕಥೆ' ಸಿನಿಮಾದ ಮೂಲಕ 2007ರಲ್ಲಿ ಚಿತ್ರರಂಗಕ್ಕೆ ಬಂದರು. ನಂತರ 'ಎದ್ದೇಳು ಮಂಜುನಾಥ', 'ಸುಗ್ರೀವ' 'ಲವ್ ಗುರು', 'ಕಳ್ಳ ಮಳ್ಳ ಸುಳ್ಳ', 'ಉಳಿದವರು ಕಂಡಂತೆ', 'ಕಿಲ್ಲಿಂಗ್ ವೀರಪ್ಪನ್' ಸಿನಿಮಾಗಳಲ್ಲಿ ನಟಿಸಿದ್ದಾರೆ.

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕರಾವಳಿ ಕುವರಿ, ನಟಿ ಯಜ್ಞ ಶೆಟ್ಟಿ

  ರಿಷಿ- ಸ್ವಾತಿ

  ರಿಷಿ- ಸ್ವಾತಿ

  'ಆಪರೇಶನ್ ಅಲಮೇಲಮ್ಮ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ನಟ ರಿಷಿ ಗೆಳತಿ ಸ್ವಾತಿ ಜೊತೆ ಹಸೆಮಣೆ ಏರಿದ್ದಾರೆ. ಚೆನ್ನೈನಲ್ಲಿ ಹಸೆಮಣೆ ಏರಿದ ರಿಷಿ-ಸ್ವಾತಿ ಜೋಡಿ ಬೆಂಗಳೂರಿನಲ್ಲಿ ಅದ್ದೂರಿ ಆರತಕ್ಷತೆ ಮಾಡಿಕೊಂಡಿದ್ದರು. ಇಬ್ಬರ ಆರತಕ್ಷತೆ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ಗಣ್ಯರು, ಸ್ನೇಹಿತರು ಭಾಗಿಯಾಗಿದ್ದರು.

  ರ್ಯಾಪರ್ ಅಲೋಕ್ ಕುಮಾರ್-ನಿಶಾ

  ರ್ಯಾಪರ್ ಅಲೋಕ್ ಕುಮಾರ್-ನಿಶಾ

  ನಾನ್ ಕನ್ನಡಿಗ', 'ಡೋಂಟ್ ವರಿ', 'ಯಾಕಿಂಗೆ' ಸೇರಿದಂತೆ ಕನ್ನಡದಲ್ಲಿ ಹಲವು ಹಿಟ್ ರಾಪ್ ಹಾಡುಗಳನ್ನು ನೀಡಿರುವ ಅಲೋಕ್ ಬಾಬು ಅಲಿಯಾಸ್ ಆಲ್ ಓಕೆ ಅವರು ನಿಶಾ ನಟರಾಜನ್ ಜೊತೆಗೆ ಹಸೆಮಣೆ ಏರಿದ್ದಾರೆ. ಬ್ರಾಹ್ಮಣ ಮತ್ತು ತಮಿಳು ಅಯ್ಯರ್ ಸಂಪ್ರದಾಯದಂತೆ ವಿವಾಹ ಮಹೋತ್ಸವ ನವೆಂಬರ್ ನಲ್ಲಿ ಜರುಗಿದೆ. ಅಲೋಕ್ ಮತ್ತು ನಿಶಾರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಅಲೋಕ್ ಮತ್ತು ನಿಶಾ ನಟರಾಜನ್ ಈಗ ಹೊಸ ಜೀವನ ಆರಂಭಿಸಿದ್ದಾರೆ. ಎನ್.ಜಿ.ಓ ಒಂದರಲ್ಲಿ ನಿಶಾ ಕಾರ್ಯ ನಿರ್ವಹಿಸುತ್ತಿದ್ದಾರೆ.

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡ ರಾಪರ್ ಅಲೋಕ್

  ಕಿರುತೆರೆ ನಟಿ ದೀಪಿಕಾ-ಆಕರ್ಷ್

  ಕಿರುತೆರೆ ನಟಿ ದೀಪಿಕಾ-ಆಕರ್ಷ್

  ನಟಿ ದೀಪಿಕಾ ಬಹುಕಾಲದ ಗೆಳೆಯ ಆಕರ್ಷ್ ಜೊತೆ ಜೂನ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ದೀಪಿಕಾ, ನವೆಂಬರ್ ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಕರ್ಷ್ ಕಿರುತೆರೆ ಜೊತೆಗೆ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇನ್ನು ದೀಪಿಕಾ 'ಕುಲವಧು' ಎನ್ನುವ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದರು. ಕಿರುತೆರೆ ಮಾತ್ರವಲ್ಲದೆ ಬೆಳ್ಳೆ ಪರದೆ ಮೇಲು ದೀಪಿಕಾ ಮಿಂಚಿದ್ದಾರೆ. 'ನನ್ ಮಗಳೆ ಹೀರೋಯಿನ್' ಸಿನಿಮಾದಲ್ಲಿ ಬಣ್ಣಹಚ್ಚುವ ಮೂಲಕ ದೊಡ್ಡ ಪರದೆಯಲ್ಲು ಕಾಣಿಸಿಕೊಂಡಿದ್ದಾರೆ.

  ಧ್ರುವ ಸರ್ಜಾ-ಪ್ರೇರಣಾ

  ಧ್ರುವ ಸರ್ಜಾ-ಪ್ರೇರಣಾ

  ಸ್ಯಾಂಡಲ್ ವುಡ್ ನ ಖ್ಯಾತ ನಟ ಧ್ರುವ ಸರ್ಜಾ ಮದುವೆ ನವೆಂಬರ್ ನಲ್ಲಿ ಬೆಂಗಳೂರಿನ ಜೆ.ಪಿ.ನಗರದಲ್ಲಿ ಇರುವ ಸಂಸ್ಕೃತಿ ಬೃಂದಾವನ ಕನ್ಷೆನ್ಸನ್ ಹಾಲ್ ನಲ್ಲಿ ಅದ್ಧೂರಿಯಾಗಿ ನಡೆಯಿತು. ಧ್ರುವ ಬಹುಕಾಲದ ಗೆಳತಿ ಪ್ರೇರಣ ಶಂಕರ್ ಜೊತೆ ಧ್ರುವ ಸಪ್ತಪದಿ ತುಳಿದಿದ್ದಾರೆ. ಧ್ರುವ-ಪ್ರೇರಣ ಮದುವೆಗೆ ಇಡೀ ಸ್ಯಾಂಡಲ್ ವುಡ್ ಸಾಕ್ಷಿಯಾಗಿತ್ತು. ಧ್ರುವ ಸದ್ಯ ಪೊಗರು ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

  ಹಿತಾ-ಕಿರಣ್

  ಹಿತಾ-ಕಿರಣ್

  ಬಹುಕಾಲದ ಸ್ನೇಹಿತರು ಹಿತಾ ಚಂದ್ರಶೇಖರ್ ಮತ್ತು ಕಿರಣ್ ಶ್ರೀನಿವಾಸ್ ಈ ವರ್ಷ ದಂಪತಿಗಳಾಗಿ ಹೊಸ ಜೀವನ ಆರಂಭಿಸಿದ್ದಾರೆ. ಡಿಸೆಂಬರ್ 1 ರಂದು ಬೆಂಗಳೂರಿನ ಪಂಚವಟಿ, ದಿ ಪೆವಿಲಿಯನ್ ನಲ್ಲಿ ಹಿತಾ ಚಂದ್ರಶೇಖರ್ ಮತ್ತು ಕಿರಣ್ ಶ್ರೀನಿವಾಸ್ ವಿವಾಹ ಮಹೋತ್ಸವ ಸಾಂಪ್ರದಾಯಿಕವಾಗಿ ನಡೆಯಿತು.

  ನಿತ್ಯಾ ರಾಮ್-ಗೌತಮ್

  ನಿತ್ಯಾ ರಾಮ್-ಗೌತಮ್

  ಡಿಂಪಲ್ ಕ್ವೀನ್ ರಚಿತಾ ರಾಮ್ ಸಹೋದರಿ ನಿತ್ಯ ರಾಮ್ ಕಲ್ಯಾಣ ಇತ್ತೀಚಿಗಷ್ಟೆ ಅದ್ಧೂರಿಯಾಗಿ ಜರುಗಿದೆ. ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ನಿತ್ಯ ರಾಮ್ ಮತ್ತು ಗೌತಮ್ ಸಪ್ತಪದಿ ತುಳಿದಿದ್ದಾರೆ. ಚಿತ್ರರಂಗದ ಕೆಲವು ಗಣ್ಯರು ಮತ್ತು ಕಿರುತೆರೆ ಕಲಾವಿದರು ಭಾಗಿಯಾಗಿ ನಿತ್ಯಾ-ಗೌತಮ್ ಜೋಡಿಗೆ ಶುಭ ಹಾರೈಸಿದ್ದಾರೆ. ಅಂದ್ಹಾಗೆ, ನಿತ್ಯ ರಾಮ್ ಮತ್ತು ಗೌತಮ್ ರದ್ದು ಅಪ್ಪಟ ಅರೇಂಜ್ಡ್ ಮ್ಯಾರೇಜ್. ನಿತ್ಯ ರಾಮ್ ತಾಯಿಯ ಸ್ನೇಹಿತರ ಮಗ ಈ ವರ ಗೌತಮ್. ಫ್ಯಾಮಿಲಿ ಮೂಲಕ ಪರಿಚಯ ಆದ ಗೌತಮ್ ರನ್ನೇ ಇಂದು ನಿತ್ಯ ರಾಮ್ ವರಿಸಿದ್ದಾರೆ.

  English summary
  Here is the detailed report of the Stars of Sandalwood who got marraied in 2019.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more