2022ರ ಫೆಬ್ರವರಿಯಲ್ಲಿ ಯಾವೆಲ್ಲಾ ಚಿತ್ರಗಳು ರಿಲೀಸ್: ಇಲ್ಲಿದೆ ಮಾಹಿತಿ

ಸದ್ಯಕ್ಕೆ ಕೊರೊನಾ ಪ್ರಕರಣಗಳಲ್ಲಿ ಇಳಿಮುಖ ಕಾಣುತ್ತಿರುವ ಕಾರಣಕ್ಕೆ, ಜನರೆಲ್ಲಾ ನಿಟ್ಟುಸಿರು ಬಿಡುವಂತೆ ಆಗಿದೆ. ಅದರಲ್ಲೂ ಸಿನಿಮಾ ಮಂದಿ ಹಬ್ಬ ಮಾಡುತ್ತಿದ್ದಾರೆ. ಇನ್ನೇನು ಮತ್ತೇ ಲಾಕ್‌ಡೌನ್‌ ಹೇರಿಕೆ ಆಗುತ್ತದೆ. ಮತ್ತೆ ಸಿನಿಮಾದ ಕೆಲಸಗಳು ನಿಂತು ಹೋಗುತ್ತವೆ ಎನ್ನುವ ಆತಂಕ ಮೂಡುತ್ತಲೇ ಲಾಕ್‌ಡೌನ್‌ ನಿಯಮಗಳಿಂದ ರಿಲೀಫ್ ಸಿಕ್ಕಿದೆ. ಹಾಗಾಗಿ ಈಗ ಸಿನಿಮಾಗಳು ರಿಲೀಸ್‌ಗೆ ರೆಡಿ ಆಗುತ್ತಿವೆ.

ಅದರಲ್ಲೂ ಈಗ RRR ಸಿನಿಮಾದ ರಿಲೀಸ್ ದಿನಾಂಕ ಬೇರೆ ಪ್ರಕಟ ಆಗಿದೆ. ಹಾಗಾಗಿ ಫೆಬ್ರವರಿಯಲ್ಲಿ ಬಹುತೇಕ ಸಿನಿಮಾಗಳು ತೆರೆಗೆ ಬರುವುದಕ್ಕೆ ರೆಡಿಯಾಗಿವೆ. ಕನ್ನಡದ ಸಿನಿಮಾಗಳು ಮಾತ್ರವೇ ಅಲ್ಲ. ಹಿಂದಿ, ತೆಲುಗು, ತಮಿಳು ಚಿತ್ರಗಳು ಕೂಡ ಫೆಬ್ರವರಿಯಲ್ಲಿ ರಿಲೀಸ್ ದಿನಾಂಕವನ್ನು ಪ್ರಕಟ ಮಾಡುತ್ತಿವೆ.

ಇನ್ನು ಸಿನಿಮಾ ಮಂದಿರದಲ್ಲಿ ರಿಲೀಸ್ ಆಗುವ ಚಿತ್ರಗಳ ಸಂಖ್ಯೆಗಳು ಕೂಡ ಈಗ ಓಟಿಟಿಯಲ್ಲಿ ಸಾಲು ಸಾಲಾಗಿ ರಿಲೀಸ್‌ ಆಗಲು ತಯಾರಾಗಿವೆ. ಈ ಸಾಲಿನಲ್ಲಿ ಅಕ್ಷಯ್‌ ಕುಮಾರ್‌ ಸಿನಿಮಾ ಕೂಡ ಇದೆ.

ಫೆಬ್ರವರಿ 3ಕ್ಕೆ ಅಮೆಜಾನ್‌ನಲ್ಲಿ ದಾನಿಶ್ ಸೇಠ್‌ ಅವರ 1ಕಟ್, 2ಕಟ್!

ಫೆಬ್ರವರಿ 3ಕ್ಕೆ ಅಮೆಜಾನ್‌ನಲ್ಲಿ ದಾನಿಶ್ ಸೇಠ್‌ ಅವರ 1ಕಟ್, 2ಕಟ್!

ದಿ ಫೇಮಸ್‌ ಹಂಬಲ್ ಪೊಲಿಟಿಷಿಯನ್ ನೋಗರಾಜ್ ಈಗ 'ಒನ್ ಕಟ್ ಟು ಕಟ್‌' ಎನ್ನುತ್ತಿದ್ದಾರೆ. ಈ ಒನ್ ಕಟ್ ಟು ಕಟ್ ಸಿನಿಮಾವನ್ನು ಪಿಆರ್‌ಕೆ ಬ್ಯಾನರ್‌ ಅಡಿಯಲ್ಲಿ ಪುನೀತ್‌ ರಾಜ್‌ಕುಮಾರ್‌ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಸಂಪೂರ್ಣ ಸಾರಥ್ಯ ವಹಿಸಿಕೊಂಡಿದ್ದಾರೆ ನಟ ದಾನಿಶ್ ಸೇಠ್‌. ಈಗಾಗಲೇ ಒಂದು ವೆಬ್ ಸರಣಿಯ ಮೂಲಕ ಓಟಿಟಿಯಲ್ಲಿ ಕ್ಲಿಕ್ ಆಗಿರುವ ದಾನಿಶ್ ಸೇಠ್‌ ಅವರಿಗೆ 1 ಕಟ್ 2 ಕಟ್ ಚಿತ್ರ ಕೂಡ ಉತ್ತಮ ರೆಸ್ಪಾನ್ಸ್ ಪಡೆಯುತ್ತದೆ ಎನ್ನುವ ನಿರೀಕ್ಷೆಯಲ್ಲಿ ಇದ್ದಾರೆ. ಈ ಚಿತ್ರ ಫೆಬ್ರವರಿ 3 ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ರಿಲೀಸ್‌ ಆಗಿದೆ.

ಫೆಬ್ರವರಿ 11ಕ್ಕೆ ಕನ್ನಡದ 'ಓಲ್ಡ್ ಮಾಂಕ್'!

ಫೆಬ್ರವರಿ 11ಕ್ಕೆ ಕನ್ನಡದ 'ಓಲ್ಡ್ ಮಾಂಕ್'!

ನಟಿ ಅದಿತಿ ಪ್ರಭುದೇವ ಮತ್ತು ನಟ ಶ್ರೀನಿವಾಸ್ ಅಭಿನಯದ ಕನ್ನಡದ 'ಓಲ್ಡ್ ಮಾಂಕ್' ಚಿತ್ರ ಕೂಡ ಫೆಬ್ರವರಿಯಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಫೆಬ್ರವರಿ 11ಕ್ಕೆ ಚಿತ್ರದ ರಿಲೀಸ್ ದಿನಾಂಕ ಫಿಕ್ಸ್ ಆಗಿದೆ. ಆದರೆ ಈ ಚಿತ್ರದ ರಿಲೀಸ್‌ಗೆ ಚಿತ್ರ ತಂಡದ್ದೇ ಆದ ಕೆಲವು ಕಂಡಿಷನ್‌ಗಳು ಇವೆ. ಅದನ್ನು ಚಿತ್ರ ತಂಡ ಪೋಸ್ಟರ್ ಮೂಲಕ ಹೇಳಿಕೊಂಡಿದೆ. ಅಂದರೆ ಒಂದು ವೇಳೆ ಕೊರೊನಾ ಕಡಿಮೆ ಆದರೆ ಚಿತ್ರ ಫೆಬ್ರವರಿ 11 ರಿಲೀಸ್ ಆಗಲಿದೆಯಂತೆ. ವಿಕ್ರಾಂತ್ ರೋಣ ಸಿನಿಮಾ ಪೋಸ್ಟ್‌ ಪೋನ್‌ ಆದರೆ ಫೆಬ್ರವರಿ 24, RRR ಪೋಸ್ಟ್‌ ಪೋನ್‌ ಆದರೆ ಫೆಬ್ರವರಿ 24 ಇದ್ಯಾವುದೂ ಸಾಧ್ಯ ಆಗದೇ ಹೋದರೆ ಮೇ ತಿಂಗಳಲ್ಲಿ ಸಿನಿಮಾ ರಿಲೀಸ್‌ ಮಾಡುವುದಾಗಿ ಪ್ರಕಟ ಮಾಡಿದೆ ಚಿತ್ರ ತಂಡ.

ಫೆಬ್ರವರಿ 24ಕ್ಕೆ ವಿಕ್ರಾಂತ್ ರೋಣ!

ಫೆಬ್ರವರಿ 24ಕ್ಕೆ ವಿಕ್ರಾಂತ್ ರೋಣ!

ಇನ್ನು ಕಿಚ್ಚ ಸುದೀಪ್‌ ಅವರ 'ವಿಕ್ರಾಂತ್ ರೋಣ' ಸಿನಿಮಾ ಫೆಬ್ರವರಿ 24ಕ್ಕೆ ರಿಲೀಸ್ ದಿನಾಂಕವನ್ನು ಫಿಕ್ಸ್ ಮಾಡಿ ಕೊಂಡಿದೆ. ಆದರೆ ಕೊರೊನಾ ಹೆಚ್ಚಾದ ಕಾರಣಕ್ಕೆ ಸಿನಿಮಾ ರಿಲೀಸ್ ಬಹುತೇಕ ಅನುಮಾನ ಎಂದು ಹೇಳಲಾಗಿತ್ತು. ಆದರೆ ಈಗ ಕೊರೊನಾ ಹಾವಳಿ ಕಡಿಮೆ ಆಗಿದ್ದು, ಸಿನಿಮಾ ಮಂದಿರಗಳ ಬಾಗಿಲು ತೆರೆದಿದೆ. ಹಾಗಾಗಿ ಸಿನಿಮಾ ತಂಡ 'ವಿಕ್ರಾಂತ್ ರೋಣ' ಸಿನಿಮಾವನ್ನು ಫೆಬ್ರವರಿ 24ಕ್ಕೆ ರಿಲೀಸ್ ಮಾಡುವ ಯೋಜನೆಯಲ್ಲಿದೆ.

ಫೆಬ್ರವರಿ 25ಕ್ಕೆ 'ಭೀಮ್ಲಾ ನಾಯಕ್'!

ಫೆಬ್ರವರಿ 25ಕ್ಕೆ 'ಭೀಮ್ಲಾ ನಾಯಕ್'!

ನಟ ಪವನ್ ಕಲ್ಯಾಣ್ ಮತ್ತು ರಾಣಾ ದಗ್ಗುಬಾಟಿ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಭೀಮ್ಲಾ ನಾಯಕ್' ಸಿನಿಮಾ ಫೆಬ್ರವರಿ ಮೇಲೆ ಕಣ್ಣಿಟ್ಟಿದೆ. ಜನವರಿಯ್ಲೇ ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಅದು ಸಾಧ್ಯ ಆಗಿಲ್ಲ. ಈಗ ಸಿನಿಮಾ ಫೆಬ್ರವರಿ 25ಕ್ಕೆ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ. ಈ ಚಿತ್ರ ಮಲಯಾಳಂನ 'ಅಯ್ಯಪ್ಪನ್ ಕೋಶಿಯುಂ' ಚಿತ್ರದ ರಿಮೇಕ್. ಇತ್ತೀಚೆಗೆ ಚಿತ್ರದ ಬಗ್ಗೆ ಸಂಗೀತ ನಿರ್ದೇಶಕ ಮಾತನಾಡಿದ್ದಾರೆ. ಜೊತೆಗೆ ಈ ಚಿತ್ರ ಉತ್ತಮ ಸಿನಿಮಾ ಆಗಲಿದೆ ಎಂದಿದ್ದಾರೆ.

ಫೆಬ್ರವರಿ 11ಕ್ಕೆ ದೀಪಿಕಾ ಪಡುಕೋಣೆಯ ಗೆಹ್ರಾನಿಯಾ ರಿಲೀಸ್!

ಫೆಬ್ರವರಿ 11ಕ್ಕೆ ದೀಪಿಕಾ ಪಡುಕೋಣೆಯ ಗೆಹ್ರಾನಿಯಾ ರಿಲೀಸ್!

ನಟ ಅಕ್ಷಯ್ ಕುಮಾರ್‌ ಅಭಿನಯದ ಬಚ್ಚನ್ ಪಾಂಡೆ ಸಿನಿಮಾ ಚಿತ್ರ ಮಂದಿರದಲ್ಲಿ ರಿಲೀಸ್ ಆಗಲು ಸಿದ್ಧವಾಗಿತ್ತು. ಮಾರ್ಚ್ 18ಕ್ಕೆ ಸಿನಿಮಾ ತೆರೆಗೆ ಬರಲು ಸಜ್ಜಾಗಿತ್ತು. ಆದರೆ ಈಗ ಬಚ್ಚನ್ ಪಾಂಡೆ ಓಟಿಟಿಯಲ್ಲಿ ರಿಲೀಸ್ ಆಗಲಿದೆ ಎನ್ನುವ ಹೊಸ ಸುದ್ದಿ ಬಂದಿದೆ. ಹಾಗಾಗಿ ಫೆಬ್ರವರಿಯಲ್ಲಿಯೇ ಬಚ್ಚನ್ ಪಾಂಡೆ ಓಟಿಟಿಯಲ್ಲಿ ತೆರೆಗೆ ಬರಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇನ್ನು ದೀಪಿಕಾ ಪಡುಕೋಣೆ ಅಭಿನಯದ ಗೆಹ್ರಾನಿಯಾ ಫೆಬ್ರವರಿ 11ಕ್ಕೆ ತೆರೆಗೆ ಬರ್ತಿದೆ. ಅಮೇಜಾನ್ ಪ್ರೈಮ್‌ನಲ್ಲಿ ಚಿತ್ರ ರಿಲೀಸ್ ಆಗ್ತಿದೆ. ಈಗಾಗಲೇ ಈ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ದೀಪಿಕಾ ಹಾಟ್‌ ಲುಕ್ ಮೂಲಕ ಸದ್ದು ಮಾಡಿದ್ದಾರೆ.

More from Filmibeat

English summary
Here Is The 2022 February Release Movies List In Ott And Theater,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X