twitter
    For Quick Alerts
    ALLOW NOTIFICATIONS  
    For Daily Alerts

    2022 ರಲ್ಲಿ ಅತಿ ಹೆಚ್ಚು ಹಣ ಗಳಿಸಿದ ಟಾಪ್ ಹತ್ತು ಸಿನಿಮಾಗಳಿವು

    |

    ಕೋವಿಡ್‌ನಿಂದ 2020, 2021 ರಲ್ಲಿ ಮುದುಡಿ ಕೂತಿದ್ದ ಭಾರತೀಯ ಚಿತ್ರರಂಗ 2022 ರಲ್ಲಿ ಮೈಕೊಡವಿ ಎದ್ದು ನಿಂತಿದೆ. ಈ ವರ್ಷದ ಆರಂಭದಿಂದಲೂ ಒಂದರ ಹಿಂದೆ ಒಂದು ಬಿಗ್ ಬಜೆಟ್ ಸ್ಟಾರ್ ಸಿನಿಮಾಗಳು ಬಿಡುಗಡೆ ಆಗುತ್ತಿವೆ.

    ಹೀಗೆ ಬಿಡುಗಡೆ ಆಗುತ್ತಿರುವ ಸಿನಿಮಾಗಳು ಒಂದರ ಹಿಂದೊಂದು ಸೂಪರ್ ಹಿಟ್ ಆಗುತ್ತಿವೆ. ಕೋಟ್ಯಂತರ ಹಣ ಬಾಚುತ್ತಿವೆ. ಇದೀಗ ಜೂನ್ ತಿಂಗಳು ಮುಗಿದು ಅರ್ಧ ವರ್ಷ ಕಳೆದಿದ್ದು, ಈ ಅರ್ಧ ವರ್ಷದಲ್ಲಿ ಚಿತ್ರರಂಗದ ಏರಿಳಿತಗಳನ್ನು ಲೆಕ್ಕ ಹಾಕಲಾಗುತ್ತಿದೆ.

    ವರ್ಷದ ಮೊದಲಾರ್ಧದಲ್ಲಿ ಬಿಡುಗಡೆ ಆದ ಸಿನಿಮಾಗಳ ಪೈಕಿ ಯಾವ ಸಿನಿಮಾ ಹೆಚ್ಚು ಹಣ ಗಳಿಸಿತು. ಯಾವ ಸಿನಿಮಾ ಟಾಪ್. ಟಾಪ್ ಹತ್ತರ ಪಟ್ಟಿಯಲ್ಲಿ ಯಾವ ಭಾಷೆಯ ಸಿನಿಮಾಗಳು ಹೆಚ್ಚಿವೆ ಎಂಬೆಲ್ಲದರ ಮಾಹಿತಿ ಇಲ್ಲಿದೆ.

    ಟಾಪ್ ಹತ್ತರ ಪಟ್ಟಿಯಲ್ಲಿ ಮೂರು ತೆಲುಗು ಸಿನಿಮಾಗಳಿವೆ, ಎರಡು ತಮಿಳು ಸಿನಿಮಾ ಇದೆ. ಮೂರು ಹಿಂದಿ ಸಿನಿಮಾ ಇದೆ. ಎರಡು ತಮಿಳು ಸಿನಿಮಾ ಇದೆ. ಒಂದು ಇಂಗ್ಲೀಷ್ ಸಿನಿಮಾ, ಒಂದೇ ಒಂದು ಕನ್ನಡ ಸಿನಿಮಾ ಇದೆ.

    ಪವನ್ ಕಲ್ಯಾಣ್ ನಟನೆಯ 'ಭಿಮ್ಲಾ ನಾಯಕ್'

    ಪವನ್ ಕಲ್ಯಾಣ್ ನಟನೆಯ 'ಭಿಮ್ಲಾ ನಾಯಕ್'

    ಈ ವರ್ಷ ಈವರೆಗೆ ಬಾಕ್ಸ್ ಆಫೀಸ್‌ನಲ್ಲಿ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾಗಳ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದೆ ಪವನ್ ಕಲ್ಯಾಣ್ ನಟನೆಯ 'ಭೀಮ್ಲಾ ನಾಯಕ್'. ಮಲಯಾಳಂನ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದ ರೀಮೇಕ್ ಆಗಿರುವ ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ 133 ಕೋಟಿ ರುಪಾಯಿ ಗಳಿಸಿದೆ. ಸಿನಿಮಾದಲ್ಲಿ ಪವನ್ ಜೊತೆಗೆ ರಾಣಾ ದಗ್ಗುಬಾಟಿ ಸಹ ನಟಿಸಿದ್ದಾರೆ.

    'ಗಂಗೂಬಾಯಿ ಕಾಠಿಯಾವಾಡಿ'

    'ಗಂಗೂಬಾಯಿ ಕಾಠಿಯಾವಾಡಿ'

    ಆಲಿಯಾ ಭಟ್ ನಟನೆಯ ಹಿಂದಿ ಸಿನಿಮಾ 'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾ 151.80 ಕೋಟಿ ಹಣವನ್ನು ಬಾಕ್ಸ್‌ ಆಫೀಸ್‌ನಲ್ಲಿ ಗಳಿಸಿ ಈವರೆಗೆ ಅತಿ ಹೆಚ್ಚು ಹಣ ಗಳಿಸಿದ ಒಂಬತ್ತನೇ ಸಿನಿಮಾ ಎನಿಸಿಕೊಂಡಿದೆ. ಆಲಿಯಾ ಭಟ್ ನಟಿಸಿರುವ ಈ ಸಿನಿಮಾವನ್ನು ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿದ್ದಾರೆ. ನಿಜ ಘಟನೆ ಆಧರಿಸಿದ ಸಿನಿಮಾ ಇದಾಗಿದೆ.

    ಮಹೇಶ್ ಬಾಬು ನಟನೆಯ ಸಿನಿಮಾ

    ಮಹೇಶ್ ಬಾಬು ನಟನೆಯ ಸಿನಿಮಾ

    ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಟ' ಸಿನಿಮಾ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಪಕ್ಕಾ ಕಾಮಿಡಿ ಆಕ್ಷನ್ ಸಿನಿಮಾ ಆಗಿರುವ 'ಸರ್ಕಾರು ವಾರಿ ಪಾಟ' ಮೇ 12 ರಂದು ಬಿಡುಗಡೆ ಆಗಿತ್ತು. ಕಿರ್ತಿ ಸುರೇಶ್ ನಾಯಕಿಯಾಗಿ ನಟಿಸಿರುವ ಈ ಸಿನಿಮಾ ಚಿತ್ರಮಂದಿರಗಳಲ್ಲಿ 155.60 ಕೋಟಿ ರುಪಾಯಿ ಹಣ ಗಳಿಸಿತ್ತು. ಪ್ರಸ್ತುತ ಅಮೆಜಾನ್ ಪ್ರೈಂನಲ್ಲಿ ಈ ಸಿನಿಮಾ ಲಭ್ಯವಿದೆ.

    ಏಳನೇ ಸ್ಥಾನದಲ್ಲಿ ಹಾಲಿವುಡ್ ಸಿನಿಮಾ

    ಏಳನೇ ಸ್ಥಾನದಲ್ಲಿ ಹಾಲಿವುಡ್ ಸಿನಿಮಾ

    ಅತಿ ಹೆಚ್ಚು ಹಣ ಗಳಿಸಿದ ಸಿನಿಮಾದಲ್ಲಿ ಹಾಲಿವುಡ್ ಸಿನಿಮಾ ಸಹ ಇರುವುದು ಆಶ್ಚರ್ಯಕರ. 'ಡಾಕ್ಟರ್ ಸ್ಟ್ರೇಂಜ್; ಮಲ್ಟಿವರ್ಸ್‌ ಆಫ್‌ ಮ್ಯಾಡ್‌ನೆಸ್' ಸಿನಿಮಾವು ಭಾರತದಲ್ಲಿ 161 ಕೋಟಿ ರುಪಾಯಿ ಹಣ ಗಳಿಸಿತು. ವಿಶ್ವದಾದ್ಯಂತ ಸೂಪರ್ ಹಿಟ್ ಆದ ಈ ಸಿನಿಮಾ ಭಾರತದಲ್ಲಿಯೂ ಸೂಪರ್ ಹಿಟ್ ಆಯಿತು.

    ಆರನೇ ಸ್ಥಾನದಲ್ಲಿ ಫ್ಲಾಪ್ ಸಿನಿಮಾ

    ಆರನೇ ಸ್ಥಾನದಲ್ಲಿ ಫ್ಲಾಪ್ ಸಿನಿಮಾ

    ತಮಿಳಿನ 'ಬೀಸ್ಟ್' ಸಿನಿಮಾ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾಗಳ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಅಸಲಿಗೆ 'ಬೀಸ್ಟ್' ಸಿನಿಮಾ ಫ್ಲಾಪ್ ಸಿನಿಮಾ ಎಂದು ಹೇಳಲಾಗಿತ್ತು. ಸಿನಿಮಾ ಚೆನ್ನಾಗಿಲ್ಲವೆಂದು, ಮಹಾ ಬೋರೆಂದು ವಿಜಯ್ ಅಭಿಮಾನಿಗಳೇ ಹೇಳಿಕೊಂಡರು ಆದರೂ ಈ ಸಿನಿಮಾ ಚಿತ್ರಮಂದಿರಗಳಲ್ಲಿ 169.40 ಕೋಟಿ ಹಣ ಗಳಿಸಿತು. ಸಿನಿಮಾ ಚೆನ್ನಾಗಿಲ್ಲವೆಂದರೂ ಈ ಸಿನಿಮಾ ಇಷ್ಟು ದೊಡ್ಡ ಮೊತ್ತದ ಹಣ ಗಳಿಸಿರುವುದು ವಿಜಯ್‌ರ ಜನಪ್ರಿಯತೆಯನ್ನು ಸಾರಿ ಹೇಳುತ್ತಿದೆ.

    ಹಿಂದಿ ಸಿನಿಮಾ 'ಭೂಲ್ ಭುಲಯ್ಯ 2'

    ಹಿಂದಿ ಸಿನಿಮಾ 'ಭೂಲ್ ಭುಲಯ್ಯ 2'

    ಅತಿ ಹೆಚ್ಚು ಹಣ ಗಳಿಸಿದ ಪಟ್ಟಿಯಲ್ಲಿ ಕೆಲವೇ ಹಿಂದಿ ಸಿನಿಮಾಗಳಿವೆ ಅವುಗಳಲ್ಲಿ 'ಭೂಲ್ ಭುಲಯ್ಯ 2' ಸಹ ಒಂದು. ಕಾಮಿಡಿ ಹಾರರ್ ಸಿನಿಮಾ ಆದ 'ಭೂಲ್ ಭುಲಯ್ಯ 2' ಮುಳುಗುತ್ತಿದ್ದ ಬಾಲಿವುಡ್‌ಗೆ ಆಸರೆ ನೀಡಿದ ಸಿನಿಮಾ. ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆದ ಈ ಸಿನಿಮಾ 217.19 ಕೋಟಿ ಹಣ ಗಳಿಸಿತು. ಕಾರ್ತಿಕ್ ಆರ್ಯನ್, ಕಿಯಾರಾ ಅಡ್ವಾಣಿ, ಟಬು, ರಾಜ್‌ ಪಾಲ್ ಯಾದವ್ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ.

    ವಿವಾದಾತ್ಮಕ ಸಿನಿಮಾ ನಾಲ್ಕನೇ ಸ್ಥಾನದಲ್ಲಿ

    ವಿವಾದಾತ್ಮಕ ಸಿನಿಮಾ ನಾಲ್ಕನೇ ಸ್ಥಾನದಲ್ಲಿ

    ಅತಿ ಕಡಿಮೆ ಬಜೆಟ್‌ನಲ್ಲಿ ನಿರ್ಮಿಸಿದ್ದರೂ ಸಹ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಭಾರಿ ಮೊತ್ತದ ಹಣವನ್ನು ಗಳಿಸಿದೆ. ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ 280 ಕೋಟಿ ರುಪಾಯಿಗೂ ಹೆಚ್ಚು ಹಣ ಗಳಿಸಿದೆ. ಕಾಶ್ಮೀರದಲ್ಲಿ ಹಿಂದು ಪಂಡಿತರ ಮೇಲೆ ಆದ ಹಿಂಸೆಯ ಕಥನವನ್ನು ಈ ಸಿನಿಮಾ ಒಳಗೊಂಡಿದೆ. ಈ ಸಿನಿಮಾ ಎರಡು ಧರ್ಮಗಳ ಮಧ್ಯೆ ಕಂದಕ ಹೆಚ್ಚಿಸುತ್ತಿದೆ ಎಂಬ ಆರೋಪಗಳು ಕೇಳಿಬಂದವು. ಕೆಲವು ರಾಷ್ಟ್ರಗಳಲ್ಲಿ ಈ ಸಿನಿಮಾದ ಪ್ರದರ್ಶನ ನಿರಾಕರಿಸಲಾಯ್ತು. ಆದರೆ ಭಾರತದಲ್ಲಿ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ-ಆರ್‌ಎಸ್‌ಎಸ್‌ನ ಪೂರ್ಣ ಬೆಂಬಲ ಈ ಸಿನಿಮಾಕ್ಕೆ ದೊರಕಿತು.

    ಕಮಲ್ ಹಾಸನ್ ಸೂಪರ್ ಹಿಟ್ ಸಿನಿಮಾ

    ಕಮಲ್ ಹಾಸನ್ ಸೂಪರ್ ಹಿಟ್ ಸಿನಿಮಾ

    ನಾಲ್ಕು ವರ್ಷಗಳಿಂದ ಸಿನಿಮಾಗಳಿಂದ ದೂರವಿದ್ದ ಕಮಲ್ ಹಾಸನ್ 'ವಿಕ್ರಂ' ಸಿನಿಮಾ ಮೂಲಕ ಭರ್ಜರಿಯಾಗಿ ಎಂಟ್ರಿ ನೀಡಿದ್ದು, ಭಾರತದಲ್ಲಿ ಈವರೆಗೆ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾಗಳ ಪಟ್ಟಿಯಲ್ಲಿ ಕಮಲ್ ಹಾಸನ್‌ರ 'ವಿಕ್ರಂ' ಸಿನಿಮಾ ಮೂರನೇ ಸ್ಥಾನದಲ್ಲಿದೆ. ಇತ್ತೀಚೆಗಷ್ಟೆ ಬಿಡುಗಡೆ ಆದ 'ವಿಕ್ರಂ' ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ 307 ಕೋಟಿ ರುಪಾಯಿಗೂ ಹೆಚ್ಚು ಹಣ ಗಳಿಸಿತು. ಲೋಕೇಶ್ ಕನಕರಾಜ್ ನಿರ್ದೇಶನದ ಈ ಸಿನಿಮಾದ ಮುಂದಿನ ಭಾಗ ಸಹ ಬರಲಿದೆ.

    'RRR' ಸಿನಿಮಾ ಎರಡನೇ ಸ್ಥಾನದಲ್ಲಿ

    'RRR' ಸಿನಿಮಾ ಎರಡನೇ ಸ್ಥಾನದಲ್ಲಿ

    ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ RRR ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಜೂ ಎನ್‌ಟಿಆರ್-ರಾಮ್ ಚರಣ್ ತೇಜ ನಟನೆಯ ಈ ಸಿನಿಮಾ ಭಾರತದಲ್ಲಿ 902 ಕೋಟಿ ಗಳಿಕೆ ಮಾಡಿದೆ. ಈ ವರ್ಷದ ಈ ವರೆಗಿನ ಸೂಪರ್ ಡೂಪರ್‌ ಸಿನಿಮಾಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ RRR. ಆಲಿಯಾ ಭಟ್, ಅಜಯ್ ದೇವಗನ್ ಸಹ ನಟಿಸಿರುವ ಈ ಸಿನಿಮಾ ನೆಟ್‌ಫ್ಲಿಕ್ಸ್‌ ಮೂಲಕ ವಿಶ್ವದಾದ್ಯಂತ ಕೋಟ್ಯಂತರ ಪ್ರೇಕ್ಷಕರನ್ನು ತಲುಪಿದೆ.

    ಮೊದಲ ಸ್ಥಾನದಲ್ಲಿ ಕನ್ನಡದ ಹೆಮ್ಮೆಯ ಸಿನಿಮಾ 'ಕೆಜಿಎಫ್ 2'

    ಮೊದಲ ಸ್ಥಾನದಲ್ಲಿ ಕನ್ನಡದ ಹೆಮ್ಮೆಯ ಸಿನಿಮಾ 'ಕೆಜಿಎಫ್ 2'

    ಈ ಪಟ್ಟಿಯಲ್ಲಿ ಕನ್ನಡದ ಹೆಮ್ಮೆಯ ಸಿನಿಮಾ 'ಕೆಜಿಎಫ್ 2' ಮೊದಲ ಸ್ಥಾನದಲ್ಲಿದೆ. ಭಾರತದಲ್ಲಿ ಮಾತ್ರವೇ ಈ ಸಿನಿಮಾ ಸರಿ ಸುಮಾರು 1000 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಪ್ರಶಾಂತ್ ನೀಲ್ ನಿರ್ದೇಶಿಸಿ ಯಶ್ ನಟಿಸಿರುವ ಈ ಸಿನಿಮಾ ವಿಶ್ವಕ್ಕೆ ಸ್ಯಾಂಡಲ್‌ವುಡ್ ಹಾಗೂ ಭಾರತೀಯ ಚಿತ್ರರಂಗದ ಶಕ್ತಿಯನ್ನು ಪ್ರದರ್ಶಿಸಿದೆ. ಗಳಿಕೆಯಲ್ಲಿ ಹಲವು ದಾಖಲೆಗಳನ್ನು 'ಕೆಜಿಎಫ್ 2' ಸಿನಿಮಾ ನಿರ್ಮಿಸಿದೆ.

    English summary
    Here is the list of highest grossing movies of 2022. KGF 2 is in first place. South movies are tops in the list.
    Saturday, July 23, 2022, 21:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X